By Bhimashankar Teli
ಸೌತ್ ಇಂಡಿಯನ್ ಫಿಲಂ ಚೇಂಬರ್ ಅವರ ಪ್ರಕಾರ ೨೧% ಪ್ರೇಕ್ಷಕರು ಆಂದ್ರಪ್ರದೇಶದಲ್ಲಿ , ೧೭-೧೮% ತಮಿಳು ಜನ ನೋಡಿದರೆ ಕರ್ನಾಟಕದಲ್ಲಿ ಕೇವಲ ೭% ಜನ ಮಾತ್ರ ಕನ್ನಡದ ಸಿನಿಮಾಗಳನ್ನು ನೋಡುತ್ತಾರೆ. ಇವಾಗ ಊಹಿಸಿ ಕನ್ನಡದ ನಿರ್ಮಾಕಪರ ಗುಂಡಿಗೆ ಎಂತಹದ್ದು! ಕೇವಲ ೫೦-೬೦ ಲಕ್ಷ ಜನರು ಮಾತ್ರ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ. ಇಲ್ಲೇ ಗಮನಿಸಿ ಹೆಚ್ಚು ಬಜೆಟ್ ಹಾಕಿ ಮೂವಿ ಮಾಡುವ ಧೈರ್ಯ ಬಿಡಿ ಲಾಜಿಕಲ್ ಆಗಿ ನೋಡಿದರೆ ಮಾಡುವುದು ಪೆದ್ದತನ ಎನ್ನುವುದು ಸತ್ಯ! ಆದರೂ ಇತ್ತೀಚಿಕೆ ಸ್ವಲ್ಪ ಮಾರ್ಕೆಟ್ ಜಾಸ್ತಿ ಆಗಿರುವದರಿಂದ ಜಾಸ್ತಿ ಬಜೆಟ್ ಮೂವಿಗಳು ಬರುತ್ತಿವೆ ಮತ್ತು ತಕ್ಕ ಮಟ್ಟಿಕ್ಕೆ ಯಶಸ್ವಿಯಾಗುತ್ತಿವೆ.
ಬಜೆಟ್ ವಿಷಯ ಒಂದು ಕಡೆ ಆದರೆ ಇನ್ನೊಂದು ಕಡೆ ಕನ್ನಡಿಗರು ಚೆನ್ನಾಗಿ ಇರುವ ಚಿತ್ರಗಳನ್ನೇ ನೋಡದೆ ಬೇರೆ ಪರಭಾಷೆಯ ಚಿತ್ರಗಳಿಗೆ ಹೊಗಳಿ ನಮ್ಮ ತನವನ್ನು ನಾವೇ ಕೀಳಾಗಿ ತೋರಿಸುತ್ತೇವೆ. ಕೆಲಯೊಂದು ಚಿತ್ರಗಳ ಮೇಕಿಂಗ್ ತೀರಾ ಕೆಳಮಟ್ಟದ್ದು ಎಂದು ಒಪ್ಪಿದರೂ ಒಳ್ಳೆಯ ಚಿತ್ರಗಳಿಗೆ ಬೆಂಬಲ ಕೊಟ್ಟಿದ್ದಾರೆ ಆದರೆ ಕೊಟ್ಟ ಬೆಂಬಲ ಸಾಕಾಗುವದಿಲ್ಲ. ಆದರೆ ಇತ್ತೀಚಿಕೆ ಒಂದು ಆಶಾ ಬೆಳವಣಿಗೆ ಆಗಿದೆ! ನಮ್ಮ ಅದೃಷ್ಟ ಕನ್ನಡದಲ್ಲಿ ಒಳ್ಳೊಳ್ಳೆ ಚಿತ್ರಗಳು ಬರುತ್ತಿವೆ ಮತ್ತು ಅದಕ್ಕೆ ತಕ್ಕಂತೆ ಕನ್ನಡಿಗರೂ ಅಲ್ಲದೆ ಪರಭಾಷೆಯವರು ನಮ್ಮ ಚಿತ್ರಗಳನ್ನು ನೋಡುತ್ತಿದ್ದಾರೆ. ಇದು ಒಳ್ಳೆಯ ಸುದ್ದಿ ನಿರ್ಮಾಪಕರಿಗೆ ,ನಟರಿಗೆ, ತಂತ್ರಜ್ಞರಿಗೆ ಮತ್ತು ಅನೇಕ ಜನ ಕೆಲಸ ಮಾಡುವ ಮನಸ್ಸುಗಳಿಗೆ. ಮೊದಲು ಹಾಕಿದ ಬಜೆಟ್ ಬರುವುದಕ್ಕೆ ಕಷ್ಟಪಡುತ್ತಿರುವಾಗ ಇಂದು ಚೆನ್ನಾಗಿ ಲಾಭ ಬರುತ್ತಿದೆ. ಅದಕ್ಕೆ ಇಂದು ಅನೇಕ ಚಿತ್ರಗಳು ದೊಡ್ಡ ದೊಡ್ಡ ಬಜೆಟ್ನಲ್ಲಿ ಬರುತ್ತಿವೆ.
ಹಿಂದಿ ಮತ್ತು ಪ್ರಾದೇಶಿಕ ಚಿತ್ರೋದ್ಯಮಗಳನ್ನು ಹೋಲಿಸಿದಾಗ ಪ್ರಾದೇಶಿಕ ಚಿತ್ರೋದ್ಯಮದಲ್ಲಿ ನಟರಿಗೆ ಅಭಿಮಾನಿಗಳ ಸಂಘಗಳು ಹುಟ್ಟಿಕೊಂಡಿವೆ. ಈ ಸಂಘಗಳು ಕೆಲಯೊಮ್ಮೆ ಒಳ್ಳೆಯದು ಮಾಡಿದರೆ ಕೆಲಯೊಂದು ಬಾರಿ ಸ್ಟಾರ್ ವಾರ್ ಆಗಲು ಕಾರಣೀಭೂತರಾಗುತ್ತಾರೆ. ಅಭಿಮಾನಿಗಳ ಪ್ರೀತಿ ಎಷ್ಟು ಅತಿರೇಕಕ್ಕೆ ಹೋಗುತ್ತದೆ ಎಂದರೇ ಎದುರಿನ ನಟನ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಚಿತ್ರಕ್ಕೆ ನಷ್ಟ ಆಗುವ ರೀತಿ ಮಾಡಿದ ಉಧಾಹರಣೆ ನಮ್ಮ ಮುಂದಿದೆ. ಅದಕ್ಕೆ ತಕ್ಕ ರೀತಿ ಶಿಕ್ಷೆ ಆಗಿದ್ದು ಇದೆ. ಆದರೆ ಇಲ್ಲಿ ಗಮನಿಸಿಬೇಕು ಒಂದು ಕನ್ನಡ ಚಿತ್ರಕ್ಕೆ ಕನ್ನಡಿಗರಿಂದಲೇ ಮೋಸ ಆಗುತ್ತಿದೆ ಎಂದರೇ ಇದೆಂಥಾ ದುರ್ದೈವ! ಕೇವಲ ನನ್ನ ನಟ ಶ್ರೇಷ್ಠ ಎನ್ನುವ ಹುಚ್ಚಭಿಮಾನದಿಂದ ಮತ್ತೊಬ್ಬ ನಟನ ಚಿತ್ರಕ್ಕೆ ಪೈರಸಿ ಮಾಡಿದರೆ ನಟನಿಗೆ ಆಗುವ ನಷ್ಟಕ್ಕಿಂತ ನಿರ್ಮಾಪಕರಿಗೆ ಎಷ್ಟು ನಷ್ಟ ಎಂಬುದು ಇವರಿಗೆ ತಿಳಿಯದೆ?
ಪ್ರತಿ ಶುಕ್ರವಾರ ಮೂವಿ ಬಿಡುಗಡೆ ಆಗುವಾಗ ದೊಡ್ಡ ಇಬ್ಬರ ನಟರ ಚಿತ್ರಗಳು ಬಿಡುಗಡೆ ಆಗದ ರೀತಿ ನೋಡಿಕೊಂಡರೆ ನಿರ್ಮಾಪಕರಿಗೆ ಆಗುವ ನಷ್ಟವನ್ನು ತಪ್ಪಿಸಬಹುದು. ಇದು ವಿತರಕರ, ನಿರ್ಮಾಪಕರ ಮಧ್ಯೆ ಹೊಂದಾಣಿಕೆ ಇದ್ದರೇ ಖಂಡಿತ ಸಾಧ್ಯ! ಆದ್ರೂ ಕೆಲಯೊಮ್ಮೆ ದೊಡ್ಡ ನಂತರ ಚಿತ್ರಗಳು ಬಿಡುಗಡೆ ಆದರೂ ಪರವಾಗಿಲ್ಲ ಹೇಗೋ ಕನ್ನಡಿಗರೂ ಚೆನ್ನಾಗಿರುವ ಚಿತ್ರವನ್ನು ನೋಡಿ ಹಾರೈಸುತ್ತಾರೆ. ಮೊದ ಮೊದಲು ಜನರಿಗೆ ಗೊತ್ತಿರಲಿಲ್ಲ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಿರ್ಮಾಪಕರೇ/ವಿತರಕರೇ ನಿರ್ಮಾಪಕರನ್ನು ಮುಳುಗಿಸಿ ನಟನ ವಿರುದ್ಧ ದ್ವೇಷ ಸಾಧಿಸುತ್ತಾರೆ ಎಂದು. ಒಳ್ಳೆಯ ರೀತಿಯಲ್ಲಿ ಒಬ್ಬರಿಗೊಬ್ಬರು ಸ್ಪರ್ಧೆ ಮಾಡಿ ಕನ್ನಡರಿಗೆ ಒಳ್ಳೆಯ ಚಿತ್ರಗಳನ್ನು ಕೊಡುತ್ತಾರೆ ಮತ್ತು ಕೆಲಯೊಮ್ಮೆ ಅದು ವ್ಯಯಕ್ತಕಿವಾಗಿ ಇಬ್ಬರ ನಡುವೆ ಇರುತ್ತೆ ಎಂದು ತಿಳಿದುಕೊಂಡಿದ್ದರು. ಅದರಿಂದ ಚಿತ್ರಗಳಿಗೆ ಮತ್ತು ನಿರ್ಮಾಪಕರಿಗೆ ನಷ್ಟವಿರಲಿಲ್ಲ. ಆದರೆ ಅಕ್ಟೋಬರ್ ೧೪ರಂದು ನಡೆದ ಘಟನೆ ನೋಡಿದರೆ ತೀರಾ ಅಸಹ್ಯವಾದದದ್ದು.

ಕರೋನ ಕಡಿಮೆ ಆದ ನಂತರ ಸರ್ಕಾರ ೧೦೦% ಭರ್ತಿ ಮಾಡುವುದಕ್ಕೆ ಅವಕಾಶ ಕೊಟ್ಟಾಗ ಕಳೆದ ಒಂದರಿಂದ ವಂದೂವರೆ ವರ್ಷದಿಂದ ಸಿನಿಮಾ ಮಾಡಿ ಬಿಡುಗಡೆ ಮಾಡದೆ ಕುಳಿತ ನಿರ್ಮಾಕರಿಗೆ ಜೀವ ಬಂದಂಗಾಗಿದೆ. ಅದಕ್ಕೆ ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಿ ಮಾಡಿದ ಸಾಲವನ್ನು ತೀರಿಸುವ ಹಂಬಲ. ಯುವರತ್ನ ಬಿಡುಗಡೆ ಆಗಿ ಎರಡೇ ದಿನಕ್ಕೆ ಕರೋನ ಕಾರಣಕ್ಕೆ ಸರ್ಕಾರ ಸಿನಿಮಾ ಮಂದಿರದಲ್ಲಿ ೧೦೦% ಭರ್ತಿ ಮಾಡಕೂಡದು ಎಂದು ಹೇಳಿದಾಗ ಯುವರತ್ನ ನಿರ್ಮಾಪಕರಿಗೆ ನಷ್ಟವೇ ತಾನೇ? ಇದೆಲ್ಲವನ್ನು ಕಣ್ಣಾರೆ ನೋಡಿದ ನಿರ್ಮಾಪಕರಿಗೆ ತಮ್ಮ ಚಿತ್ರ ಆದಷ್ಟು ಬೇಗ್ ಬಿಡುಗಡೆ ಆಗಲಿ ಎಂಬ ಆಶೆ. ಅದು ತಪ್ಪಲ್ಲ. ಎರಡು ದೊಡ್ಡ ಚಿತ್ರಗಳು ಬಿಡುಗಡೆ ಸಿದ್ಧತೆ ಮಾಡಿಕೊಂಡು ಬರುವಾಗ ಇಬ್ಬರು ನಾಯಕರು ಮತ್ತು ನಿರ್ಮಾಪಕರು ಒಬ್ಬರಿಗೊಬ್ಬರು ಮಾತಾಡಿಕೊಂಡು ಎರಡು ಚಿತ್ರಗಳಿಗೆ ಒಳ್ಳೆಯದು ಆಗಲಿ ಎಂದು ಹಾರೈಸಿದ್ದರು. ಇದರ ಜೊತೆ ಶಿವಣ್ಣ, ಉಪ್ಪಿ, ಅಪ್ಪು ಹೀಗೆ ಅನೇಕ ನಟರು ಸಲಗ ಮತ್ತು ಕೋಟಿಗೊಬ್ಬ ೩ ಚಿತ್ರಗಳಿಗೆ ಒಳ್ಳೆಯದು ಆಗಲಿ ಎಂದು ಹಾರೈಸಿದ್ದರು. ಕನ್ನಡಿಗರು ಎರಡನ್ನು ಎತ್ತಿ ಹಿಡಿಯುವ ಭರವಸೆ ಕೊಟ್ಟಿದ್ದರು ಮತ್ತು ಖಂಡಿತ ಕನ್ನಡ ಚಿತ್ರಗಳನ್ನು ಎತ್ತಿ ಹಿಡಿಯುತ್ತಾರೆ.
ಅಕ್ಟೋಬರ್ ೧೪ಕ್ಕೆ ಕೋಟಿಗೊಬ್ಬ ೩ ಸಿನಿಮಾ ಬಿಡುಗಡೆ ಎಂದು ಸುದೀಪ್ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಸಿನಿಮಾ ಮಂದಿರಕ್ಕೆ ಬಂದಿದ್ದರು. ತಮ್ಮ ನಟನ ಚಿತ್ರವನ್ನು ನೋಡಲು ಬಂದವರಿಗೆ ಶಾಕ್ ಕಾದಿತ್ತು. ಯಾವ ಷೋಗಳು ನಡೆಯದೆ ಅಭಿಮಾನಿಗಳ ಅಲ್ಲ ಅಲ್ಲ ಕನ್ನಡಿಗರ ಮನಸ್ಸನ್ನು ನೋಯಿಸಿದರು. ಇದಕ್ಕೆಲ್ಲ ಕಾರಣವಾಗಿದ್ದು ಇಬ್ಬರು ವಿತರಕರು ಮತ್ತು ಇದರ ಹಿಂದೆ ಇರುವ ಕೆಟ್ಟ ಕುಳಗಳು. ಇದನ್ನು ಸವಿಸ್ತಾರವಾಗಿ ಜಾಕ್ ಮಂಜು ಹೇಳಿದ್ದಾರೆ. ಮೊದಲೇ ಪ್ರೇಕ್ಷರಿಲ್ಲದ ಸ್ಯಾಂಡಲ್ ವುಡ್ ಇಂತಹ ನೀಚ ಕೆಲಸಕ್ಕೆ ಮುಂದಾದರೆ ಹಿಂದಿರುವ ಕೆಟ್ಟ ಕುಳಗಳಿಗೆ ಒಳ್ಳೆಯದು ಆಗುವದಕ್ಕೆ ಸಾಧ್ಯವೇ?
ಆಗುವದೆಲ್ಲ ಒಳ್ಳೆಯದಕ್ಕೆ ಎನ್ನುವ ಹಾಗೆ ಒಂದು ದಿನ ಒಂದು ದೊಡ್ಡ ಚಿತ್ರವನ್ನು ತಡೆಹಿಡಿದು ಇನ್ನು ಹೆಚ್ಚಿನ ಆಸಕ್ತಿಯನ್ನು ಹುಟ್ಟು ಹಾಕಿದ್ದೀರಾ ಅದಕ್ಕೆ ಕಿಚ್ಚನ ಅಭಿಮಾನಿಗಳ ಜೊತೆ ಕನ್ನಡಿಗರು ಮತ್ತು ವಿಶೇಷವಾಗಿ ವಿಷ್ಣು ಸರ್ ಪದೇ ಖಂಡಿತ ಕೊಟ್ಟಿಗೊಬ್ಬ ೩ ಜೊತೆ ಸಲಗ ಚಿತ್ರವ್ನನು ತಮ್ಮ ಭುಜದ ಮೇಲೆ ಹೊತ್ತಿಕೊಳ್ಳುವದರಲ್ಲಿ ಸಂಶಯವಿಲ್ಲ. ಎಲ್ಲ ಕನ್ನಡದ ಚಿತ್ರಗಳಿಗೆ ಒಳ್ಳೆಯದು ಆಗಲಿ ಮತ್ತು ಕೆಟ್ಟ ಕುಳಗಳಿಗೆ ಶಿಕ್ಷೆ ಆಗದೆ ಮುಂದೆ ಒಳ್ಳೆಯ ಬುದ್ದಿ ಬರಲಿ. ಶಿಕ್ಷೆ ಆದರೆ ಅವರ ಹೆಂಡತಿ ಮತ್ತು ಮಕ್ಕಳಿಗೆ ಕಷ್ಟ! ಅದಕ್ಕೆ ಅವರಿಗೆ ಯಾವದೇ ಶಿಕ್ಷೆ ಕೊಡದೆ ಒಳ್ಳೆಯ ಬುದ್ದಿ ಬರಲಿ ಸಾಕು!
Categories: Articles
