news

ಸಿಂದಗಿ: ಅನುಕಂಪದಿಂದ ಕೈಬಿಟ್ಟ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ! ?

ಒಂದು ಕಡೆ ಸರ್ಕಾರ ಮತ್ತೊಂದು ಕಡೆ ವಿರೋಧ ಪಕ್ಷ ಕ್ಷೇತ್ರದಲ್ಲೇ ಮುಖಾಂ ಹೂಡಿ ಗೆಲ್ಲಲ್ಲಿಕ್ಕೆ ಎಲ್ಲ ಸರ್ಕಸ್ ಜಾರಿಯಲ್ಲಿ ಇವೆ. ಉಸ್ತುವಾರಿಗಳಾದ ಸೋಮಣ್ಣ,ಗೋವಿಂದ ಕಾರಜೋಳ್,ಕೆ ಶಿವರಾಂ, ಮಹೇಶ್, ಸಿ ಸಿ ಪಾಟೀಲ್, ಸವದಿ , ಬಸವನಗೌಡ ಪಾಟೀಲ್,ನಡಹಳ್ಳಿ ,ಬೈರತಿ ಬಸವರಾಜ್, ಈಶ್ವರೇಪ್ಪ, ಎಂಟಿಬಿ ನಾಗರಾಜ್, ವಿಜುಗೌಡ , ಜೊಲ್ಲೆ ಹೀಗೆ ಅನೇಕ ಘಟಾನುಘಟಿ ನಾಯಕರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಎಂ ಬಿ ಪಾಟೀಲ್ , ಆನಂದ ನ್ಯಾಮಗೌಡ, ಶಿವಾನಂದ ಪಾಟೀಲ್ ಹೀಗೆ ಅನೇಕರು ಕ್ಷೇತ್ರದಲ್ಲೇ ಬೀಡುಬಿಟ್ಟು ಗೆಲುವಿಗಾಗಿ ಹರಸಾಹಸ ಪಡುತ್ತಿದ್ದಾರೆ. ಎಲ್ಲ ದಾರಿಗಳನ್ನು ಉಪಯೋಗಿಸಿಕೊಂಡು ದಾಳಗಳನ್ನು ಹೂಡುತ್ತಿದ್ದಾರೆ. ಜಾತಿವಾರು ಸಭೆಗಳು, ರೋಡ್ ಶೋ, ಹೋಬಳಿ ಸಣ್ಣ ಸಣ್ಣ ಬಹಿರಂಗ ಸಭೆಗಳು, ದೊಡ್ಡ ದೊಡ್ಡ ಬಹಿರಂಗ ಸಭೆಗಳು ಇದಲ್ಲದೆ ದೊಡ್ಡ ನಾಯಕರ ಜೊತೆ ಜಾತಿವಾರು ನಾಯಕರ ಗುಪ್ತ ಸಭೆಗಳು. ಕೇವಲ ಒಂದು ದಿನ ಬಾಕಿ ಉಳಿದಿದೆ , ಇಷ್ಟೊತ್ತಿಗಾಗಲೇ ಪಕ್ಷದ ನಾಯಕರಿಗೆ ಫಲಿತಾಂಶದ ವಾಸನೆ ಬಡಿದಿರುತ್ತದೆ.

ಪ್ರಚಾರ ವೈಖರಿ ಚೆನ್ನಾಗಿಯೇ ಇದೆ , ಎರಡು ಪಕ್ಷಗಳು ಮಾಡುತ್ತಿದ್ದಾರೆ. ಆದರೆ ವಾಸ್ತವಾಂಶ ಹೇಗಿದೆ ಎಂದರೆ ಕಳೆದ ಬಾರಿ ಮನಗೂಳಿಯವರು ಸುಮಾರು ೯ ಸಾವಿರ ಮತಗಳಿಂದ ಜಯಭೇರಿ ಬಾರಿಸಿದ್ದರು. ಸತತವಾಗಿ ಎರಡು ಬಾರಿ ಗೆದಿದ್ದ ಭೂಸನೂರ್ ಗೆಲ್ಲುತ್ತಾರೆ ಎಂದು ಜನ ಹೇಳಿದರೂ ಕೊನೆಗೆ ಗೆದ್ದಿದ್ದು ಅನುಕಂಪದ ಅಲೆ. ಗೆದ್ದು ಬಂದ ಮೇಲೆ ಮನಗುಳಿಯವರ ಮಕ್ಕಳು ಕ್ಷೇತ್ರದಲ್ಲಿ ತಮ್ಮದೇ ಪಾರುಪತ್ಯ ಸ್ಥಾಪಿಸಿದರು. ಮನಗುಳಿಯವರ ಸೌಮ್ಯ ಸ್ವಭಾವ ಇವರಲ್ಲಿ ಕಾಣದೆ ಇರುವುದು ಸದ್ಯದ ಗೆಲುವಿಗೆ ಅಡತಡೆ ಆಗುತ್ತಿದೆ. ಅಶೋಕ್ ಅವರಿಗೆ ಮತ್ತೊಂದು ತೊಡಕೆಂದರೇ ಜೆಡಿಎಸ್, ದೇವೇಗೌಡ, ಕುಮಾರಸ್ವಾಮಿ, ಪ್ರಜ್ವಲ್ ಅಲ್ಲೇ ಬೀಡುಬಿಟ್ಟು ಪ್ರಚಾರದಲ್ಲಿ ತೊಡಗಿದ್ದಾರೆ. ಅಶೋಕ್ ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಮತ್ತು ಅವರದು ದಬ್ಬಾಳಿಕೆ ರಾಜಕೀಯ ಎಂದು ಹೇಳುತ್ತಿದ್ದಾರೆ. ಅಭಿವೃದ್ಧಿಗೆ ಅನುದಾನ ಬಂದಿದ್ದರು ಮೇಲ್ನೋಟಕ್ಕೆ ಅಭಿವೃದ್ಧಿ ಕಾಣಿಸುವದಿಲ್ಲ. ಸಿದ್ದು ಸರ್ ಸಿಂದಗಿಯಲ್ಲೂ ಗೆಲ್ಲುವದಕ್ಕೆ ಏನಲ್ಲ ಬೇಕು ಅದನ್ನು ಮಾಡುತ್ತಿದ್ದಾರೆ. ಆದರೆ ಸ್ಥಳೀಯ ಅಭ್ಯರ್ಥಿಯು ಅಷ್ಟೇ ಮುಖ್ಯ! ಸದ್ಯದ ಪರಸ್ಥಿತಿಯಲ್ಲಿ ಬಿಜೆಪಿಗೆ ಎಲ್ಲಿ ಹಿಂದುಳಿದವರ ಮತಗಳು ದೊಡ್ಡ ಮಟ್ಟದಲ್ಲಿ ಚುದುರಿದರೇ ಕಷ್ಟ ಎಂದು ಭರವಸೆಯ ಮಹಾಪುರ ಹರಿಯುತ್ತಿದೆ ಮತ್ತು ಅದು ಬಿಜೆಪಿ ಭರವಸೆ ಕೊಡುವದಕ್ಕೆ ಕಾರಣ ಸರ್ಕಾರ ಅವರದೇ ಇದೆ.

ಅಲ್ಪಸಂಖ್ಯಾತರ ಮತ್ತು ಹಿಂದುಳಿದವರ ಮತಗಳು ಅನಾಯಾಸವಾಗಿ ಸಿಗುತ್ತವೆ ಎಂದು ಜೆಡಿಎಸ್ ಪಕ್ಷದಿಂದ ಕಾಂಗ್ರೇಸ್ ಪಕ್ಷಕ್ಕೆ ಜಂಪ್ ಹೊಡೆದಿದ್ದಾರೆ. ಆದರೆ ಅದು ವರ್ಕ್ ಔಟ್ ಆಗುವ ಲಕ್ಷಣಗಳು ಕಡಿಮೆ. ಅಲ್ಪಸಂಖ್ಯಾತರ ಮತಗಳು ಕಾಂಗ್ರೇಸ್ ಪಕ್ಷಕ್ಕೆ ಹೋಗುತ್ತವೆ ಅದರಲ್ಲಿ ಸಂಶಯ ಬೇಡ ಆದರೆ ಒಂದು ಟ್ವಿಸ್ಟ್ ಇದೆ. ೧೦೦% ಅಲ್ಪಸಂಖ್ಯಾತರ ಮತಗಳು ಕಾಂಗ್ರೇಸ್ ಪಕ್ಷಕ್ಕೆ ಹೋಗುವದಿಲ್ಲ. ಕಾರಣ ರಮೇಶ್ ಅವರ ಜಾತ್ಯತೀತ ವ್ಯಕ್ತಿತ್ವಕ್ಕೆ ಅಲ್ಪಸಂಖ್ಯಾತರು ಬಿಜೆಪಿ ಮತ ಹಾಕುತ್ತಾರೆ. ಮತ್ತೆ ಹಿಂದುಳಿದವರ ಮತಗಳು ಬಿಜೆಪಿಗೆ ಲಾಭ ತಂದುಕೊಡುತ್ತವೆ. ಮೊದಲಿನಿಂದಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ, ಕೋಳಿ ಸಮಾಜ ಇವರೆಲ್ಲರೂ ಎರಡು ಪಕ್ಷದವರ ಜೊತೆ ಇದ್ದಾರೆ. ಗೋವಿಂದ ಕಾರಜೋಳ್, k ಶಿವರಾಂ, ಕೊಳ್ಳೇಗಾಲದ ಶಾಸಕರು ಮಹೇಶಯವರ ಪ್ರಚಾರ ಫಲ ಕೊಡುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಮತ್ತೊಂದು ಸ್ಟ್ರಾಟಜಿಕ್ ದಾಳವೆಂದರೇ ತಳವಾರ ಸಮಾಜಕ್ಕೆ ಎಸ್ಟಿ ಸರ್ಟಿಫಿಕೇಟ್! ಇದರ ಜೊತೆ ರಮೇಶ್ ಅವರ ವ್ಯಕ್ತಿತ್ವಕ್ಕೆ ಇವರೆಲ್ಲರೂ ಹೆಚ್ಚಿಕೆ ಬಿಜೆಪಿಗೆ ಮತ ನೀಡುವ ಸಂಭವ ಜಾಸ್ತಿ! ಕಳೆದ ಬಾರಿ ರಮೇಶ್ ಅವರಿಗೆ ತಮ್ಮವರೇ ಕೈಹಿಡಿಯದ ಕಾರಣ ಸೋಲಾಗಿದೆ ಎಂದು ಕ್ಷೇತ್ರದ ಜನರು ಘಂಟಾಘೋಶವಾಗಿ ಹೇಳುತ್ತಾರೆ. ಮತ್ತು ಸೋಲಿಸಿದ್ದು ತಪ್ಪು ನಿರ್ಧಾರ ಅದಕ್ಕೆ ಈ ಸಲ ನಾವು ಒಬ್ಬ ಒಳ್ಳೆಯ ವ್ಯಕ್ತಿ ಅನ್ನೋದಕ್ಕಿಂದ ಜಾತ್ಯತೀತ ವ್ಯಕ್ತಿಗೆ ಮತನೀಡುತ್ತೇವೆ ಎಂದು ಹೇಳುತ್ತಾರೆ.

ಇಬ್ಬರೂ ಲಿಂಗಾಯತ ಅಭ್ಯರ್ಥಿಗಳು, ಲಿಂಗಾಯತ ಮತಗಳು ಇಬ್ಬರಿಗೂ ಹಂಚಿಕೆ ಆಗುತ್ತವೆ. ಇದಲ್ಲೆವು ನಾಯಕರ ಗಮನಕ್ಕೆ ಬಂದಿದೆ ಅದಕ್ಕೆ ಸಮಯ ವ್ಯರ್ಥ ಮಾಡದೆ ಫೀಲ್ಡ್ ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಟ್ಟಾರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಬಿಜೆಪಿಗೆ ಅನುಕೂಲಕರ ವಾತಾವರಣ ಇದೆ. ಇದನ್ನೇ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು ಹೇಳಿದೆ. ಲಕ್ಷ್ಮಣ್ ಸವದಿಯವರ ಉಸ್ತುವಾರಿ ಇದ್ದರೂ ಇಲ್ಲಿ ಸಾಮೂಹಿಕ ನಾಯಕತ್ವ ಚೆನ್ನಾಗಿ ಕೆಲಸ ಮಾಡುತ್ತದೆ. ಎಲ್ಲ ನಾಯಕರು ನಿಯತ್ತಾಗಿ ಕೆಲಸ ಮಾಡುವದಕ್ಕೆ ಮುಖ್ಯ ಕಾರಣ ಭೂಸನೂರ್ ಅವರ ವ್ಯಕಿತ್ವ ಮತ್ತು ಕ್ಷೇತ್ರದ ಜನರ ಜೊತೆ ಬೆರೆಯುವ ಗುಣ! ದೂರದ ಬಸವಕಲ್ಯಾಣದ ಹೊಸ ಶಾಸಕ ಶರಣು ಸಲಗರ ಅವರ ಹುಮ್ಮಸ್ಸಿಗೆ ಒಂದು ಸಲಾಂ! ಸಿಂದಗಿಯಲ್ಲಿ ಬೀಡುಬಿಟ್ಟು ಪಕ್ಷದ ಸಲುವಾಗಿ ಕೆಲಸ ಮಾಡುತ್ತಿದ್ದಾರೆ. ಯುವಕರಿಗೆ ಇದೊಂದು ಒಳ್ಳೆಯ ಉಧಾಹರಣೆ! ಬೊಮ್ಮಾಯಿಯವರ , ವಿಜಯೇಂದ್ರ ರೋಡ್ ಶೋ ಜೊತೆ ಯಡಿಯೂರಪ್ಪನವರ ಎರಡು ದಿನದ ಕಾರ್ಯಕ್ರಮ ಬಿಜೆಪಿಗೆ ಲಾಭ ಕೊಡುತ್ತಿದೆ! ಅದಕ್ಕೆ ಅನುಕಂಪದ ಅಲೆಯಲ್ಲಿ ಸೊತ್ತಿದ್ದ ಬಿಜೆಪಿ ಇಂದು ಮತ್ತೆ ಗೆಲ್ಲುವ ಮುನ್ಸೂಚನೆ ಕೊಟ್ಟಿದೆ

Categories: news

Tagged as: , ,

1 reply »

  1. ಸಿಂದಗಿ ಉಪಚುನಾವಣೆ ಕಣದ ವಸ್ತುನಿಷ್ಠ ವರದಿ ಪ್ರಕಟಿಸಿದ್ದೀರಿ…

    Like

Leave a Reply