news

ವಿಧಾನಪರಿಷತ್ತು ಚುನಾವಣೆ:ವಿಜಯಪುರದ ಕುಟುಂಬ ರಾಜಕಾರಣಕ್ಕೆ ಮೊಳೆ ಹೊಡೆಯುವುದು ಅನಿವಾರ್ಯ!

ದುಡ್ಡಿನಿಂದ ಎಲ್ಲವನ್ನು ಖರೀದಿ ಮಾಡಬಲ್ಲೆ ಎಂಬ ಮನೋಭಾವ ಬಂದರೇ ಪ್ರಜಾಪ್ರಭುತ್ವಕ್ಕೆ ಬೆಲೆನೇ ಇಲ್ಲ. ಪಕ್ಷಕ್ಕಾಗಿ ದುಡಿದವರು , ಹಿರಿತನ,ವಿಧಾನ ಪರಿಷತ್ತು ಪ್ರವೇಶ ಮಾಡಿ ಅದಕ್ಕೊಂದು ಗೌರವ ಕೊಡುವ ಕೆಲಸ ಮಾಡಬೇಕು ಎನ್ನುವ ಮನಸ್ಥಿತಿ ಇದ್ದಿದ್ದರೇ ಸ್ವತಃ ಕುಟುಂಬದವರನ್ನು ರಾಜಕಾರಣಕ್ಕೆ ತರುತ್ತಿರಲಿಲ್ಲ. ವಿಜಯಪುರದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿಯಿಂದ ಪೂಜಾರ ಅವರಿಗೆ ಟಿಕೆಟ್ ಕೊಟ್ಟಾಗಲೇ ಬಿಜೆಪಿ ಗೆದ್ದಿದೆ. ಕಾರಣ ಸುಮಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು. ಕಾಂಗ್ರೇಸ್ ಪಕ್ಷವು ಎಸ್ ಆರ್ ಪಾಟೀಲ್ ಅಥವಾ ಬೇರೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಘೋಷಣೆ ಮಾಡಿದ್ದರೇ ಪಕ್ಷಕ್ಕೆ ಅನಕೂಲವಾಗುವ ಲಕ್ಷಣಗಳು ಇದ್ದವು. ಆದರೆ ದುಡ್ಡಿದೆ , ದುಡ್ಡಿನಿಂದ ಜನರನ್ನು ಖರೀದಿ ಮಾಡುವ ತಾಕತ್ತು ಇದೆ ಎಂದು ಕುಟುಂಬದ ಜನರಿಗೆ ಟಿಕೆಟ್ ಕೊಟ್ಟರೇ ಜನ ಸುಮ್ಮನೆ ಕೂಡುವದಿಲ್ಲ ಎಂದು ಸಾರಿ ಸಾರಿ ಹೇಳುವ ಸಮಯ ಬಂದಿದೆ.

ಎಸ್ ಆರ್ ಪಾಟೀಲ್ ಹಿರಿಯ ರಾಜಕಾರಿಣಿ ಟಿಕೆಟ್ ಖಾತ್ರಿಯಾಗಿ ಪ್ರಚಾರದಲ್ಲಿ ತೊಡಗಿಕೊಂಡವರು. ಅಂಥಹ ಹಿರಿಯ ರಾಜಕಾರಿಣಿಗೆ ಟಿಕೆಟ್ ತಪ್ಪಿಸಿ ತಮ್ಮನಿಗೆ ಟಿಕೆಟ್ ಕೊಡುಸುತ್ತಾರೆ ಎಂದರೇ ದುಡ್ಡಿನ ತಾಕತ್ತು ಎಷ್ಟಿದೆ ಎಂದು ಊಹೆ ಮಾಡಿಕೊಳ್ಳಿ. ಒಂದು ಬಾರಿ ಸೋಲಿನ ರುಚಿ ತೋರಿಸಿದರೇ ಮೇಲಿನವರು ಟಿಕೆಟ್ ಕೊಡುವಾಗ ಕಾರ್ಯಕರ್ತರನ್ನು ನೋಡುತ್ತಾರೆ , ಇಲ್ಲವಾದರೆ ಮುಂದೆ ವಿಜಯಪುರದಲ್ಲಿ ಕುಟುಂಬದ ರಾಜಕಾರಣವನ್ನೇ ನೋಡಬಹುದು. ಮುಂದೊಂದು ದಿನ ಹಾಸನ ತರಹ ಕುಟುಂಬ ರಾಜಕಾರಣ ವಿಜಯಪುರದಲ್ಲಿ ತಲೆ ಎತ್ತಿ ನಿಲ್ಲುತ್ತದೆ. ಪಕ್ಷಕ್ಕಾಗಿ ದುಡಿದ ಅನೇಕ ವ್ಯಕ್ತಿಗಳು ಪಕ್ಷದಲ್ಲಿ ಇದ್ದಾರೆ. ಅವರಿಗೆ ಟಿಕೆಟ್ ಸಿಗಬೇಕಾದರೆ ಯೋಚನೆ ಮಾಡಿ ಮತ ಚಲಾಯಿಸುವ ಮನಸ್ಥಿತಿ ಇರಬೇಕು.

ಪಂಚಾಯತಿ ಸದಸ್ಯರು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ರಾಜಕಾರಣಕ್ಕೆ ಬಂದಿರುತ್ತಾರೆ, ಅವರು ಪಕ್ಷದ ಸದಸ್ಯರಾಗಿ ಕೆಲಸ ಮಾಡುತ್ತಿರುತ್ತಾರೆ. ಇಂಥಹ ಸಮಯದಲ್ಲಿ ಯಾರಿಗೆ ಮತ ಹಾಕಿದರೆ ಪಕ್ಷದ ಪ್ರಜಾಪ್ರಭುತ್ವ ಸರಿಯಾದ ದಿಕ್ಕಿನಲ್ಲಿ ಹೋಗುತ್ತದೆ ಎಂದು ತಿಳಿದುಕೊಳ್ಳಬೇಕು. ಅಣ್ಣ ಸಚಿವರಾಗಿ , ಶಾಸಕರಾಗಿ ಕೆಲಸ ಮಾಡುತ್ತಿದ್ದರೂ ಮತ್ತೆ ತಮ್ಮ ಮನೆಯಲ್ಲೇ ಇನ್ನೊಬ್ಬನಿಗೆ ಅವಕಾಶ ಕೊಡುವುದು ಪ್ರಜಾಪ್ರಭುತ್ವಕ್ಕೆ ಕೊಡಲಿಪೆಟ್ಟು ಕೊಟ್ಟಹಾಗೆ. ಇದರ ಅರ್ಥ ದುಡ್ಡಿದ್ದವರ ಕೈಯಲ್ಲಿ ಪ್ರಜಾಪ್ರಭುತ್ವ ಎಂದಾಗುತ್ತದೆ. ಇದು ಸಂವಿಧಾನ ಶಿಲ್ಪಿ ಯವರಿಗೆ ಕೊಡುತ್ತಿರುವ ಗೌರವನಾ?

ದ್ವಿಸದಸ್ಯರಿರುವ ವಿಜಯಪುರದಲ್ಲಿ ಎರಡು ಪಕ್ಷಗಳು ಒಬ್ಬೊಬ್ಬ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಅವಿರೋಧವಾಗಿ ಆಯ್ಕೆ ಮಾಡುವ ಯೋಚನೆಯಲ್ಲಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಟಿಕೆಟ್ ಕೇಳಿದ್ದರು. ಆದರೆ ಜನರ ದುಡ್ಡಿನ ಖಜಾನೆಯಿಂದ ಬೀಗುತ್ತಿರುವವರಿಗೆ ಪಕ್ಷ ಮಣೆಹಾಕಿತ್ತು. ಮುಂದಿನ ಬಾರಿ ನೋಡೋಣ ಎಂದು ಸಬೂಬು ಹೇಳಿತ್ತು. ಆದರೆ ಮತ್ತೆ ಅದೇ ಪುಟ ತಿರುಗುತ್ತಿದೆ ಅದಕ್ಕಾಗಿ ಅದನ್ನು ವಿರೋಧಮಾಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪಂಚಾಯತಿ ಸದಸ್ಯರು ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಒದಗಿಸಿದ್ದಾರೆ. ಅದರ ಜೊತೆ ಪಕ್ಷಗಳಿಗೆ ಒಂದು ಸಂದೇಶವನ್ನು ಸಾರಿದ್ದಾರೆ.

ತಂದೆಯ ಪ್ರಭಾವದಿಂದ ರಾಜಕೀಯಕ್ಕೆ ಬಂದು ಸೋಲು ಗೆಲುವುಗಳ ಮಧ್ಯೆ ರಾಜಕಾರಣ ಮಾಡುತ್ತಿರುವ ಪಾಟೀಲರು ಮಂತ್ರಿಯಾಗಿದ್ದಾಗ ತಮ್ಮ ಕ್ಷೇತ್ರದ ಜೊತೆ ವಿಜಯಪುರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅದಕ್ಕಾಗಿ ಅವರ ಮೇಲೆ ಅಭಿಮಾನದ ಜೊತೆ ಪ್ರೀತಿನೂ ಜಿಲ್ಲೆಯ ಜನರು ಇಟ್ಟುಕೊಂಡಿದ್ದಾರೆ. ತಮ್ಮ ಸಮುದಾಯ ಜನಸಂಖ್ಯೆ ಅತಿ ಕಡಿಮೆ ಆದರೂ ಜನರು ಅವರಿಗೆ ಆಶೀರ್ವಾದ ಮಾಡುತ್ತಾರೆ. ಅದಕ್ಕೆ ಋಣ ತೀರಿಸುವ ಕೆಲಸ ಮಾಡಬೇಕಾದವರು, ಬೇರೆ ಜಾತಿಯ ಜನರಿಗೆ ಟಿಕೆಟ್ ಕೊಡಿಸದೆ ತಮ್ಮ ಕುಟುಂಬದವರಿಗೆ ಕೊಡಿಸಿದ್ದು ಜನರು ಒಪ್ಪುವದಕ್ಕೆ ಖಂಡಿತ ಸಾಧ್ಯವಿಲ್ಲ. ಅತಿ ಸಣ್ಣ ಬೇರೆ ಸಮುದಾಯಾಕ್ಕೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರೇ ಜನ ನಿಮ್ಮನ್ನು ಇನ್ನಿಷ್ಟು ಅಭಿಮಾನದಿಂದ ನೋಡುತ್ತಿದ್ದರು. ಚುನಾವಣೆ ಬಂದಾಗ ಇಂಡಿಯಲ್ಲಿ ಯಶವಂತರಾಯ ಗೌಡರನ್ನು , ಬಾಗೇವಾಡಿಯಲ್ಲಿ ಶಿವಾನಂದ ಪಾಟೀಲರನ್ನು ಸೋಲಿಸಲು ಒಳಸಂಚು ಮಾಡಿಕೊಂಡು ಬಂದಿರುವ ರೂಡಿ ತಿರುಗು ಬಾಣಾಗುವ ಸಾಧ್ಯತೆ ಅಲ್ಲಗೆಳೆವಂತಿಲ್ಲ.

ಚಹಾ ಮಾರಿ, ಸಂಘವನ್ನು ಸೇರಿ ದೇಶದ ಸಲುವಾಗಿ ಕೆಲಸ ಮಾಡಲು ಕುಟುಂಬವನ್ನೇ ತೊರೆದ ಮೋದಿ ೧೨ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ, ೭ ವರ್ಷಗಳಿಂದ ಪ್ರಧಾನಮಂತ್ತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ . ಯಾವತ್ತೂ ಕುಟುಂಬ ರಾಜಕಾರಣ ಮಾಡುವ ಗೋಜಿಗೆ ಹೋಗಿಲ್ಲ. ಇತ್ತೀಚಿಕೆ ಕುಟುಂಬದ ರಾಜಕಾರಣದಲ್ಲಿ ಪಕ್ಷದ ಹಿಡಿತ ಇರಬಾರದು ಆದರೆ ಗೆಲ್ಲುವ ಸಾಮರ್ಥ್ಯವಿದ್ದವರು ರಾಜಕಾರಣಕ್ಕೆ ಬರಬಾರದು ಎಂದು ಹೇಳುತ್ತಿಲ್ಲ ಎಂದು ಹೇಳಿದ್ದರು. ಇಲ್ಲಿ ಸುನಿಲ ಪಾಟೀಲರಿಗೆ ಗೆಲ್ಲುವ ಸಾಮರ್ಥ್ಯ ಇದೆ ಎಂದು ಹೇಳುವ ಧೈರ್ಯ ಮಾಡಬೇಕಾದರೆ ದುಡ್ಡು ನೋಡಿ ಹೇಳಬೇಕೇ ವಿನಃ ಅವರ ಕೆಲಸದಿಂದಲ್ಲ.ಈಗಾಗಲೇ ಅವರು ಸದಸ್ಯರಾಗಿ ಆಯ್ಕೆಯಾಗಿದ್ದವರು ಆದರೆ ಎಷ್ಟಿದೆ ಅವರಿಗೆ ಜನ ಬೆಂಬಲ ಎಂಬ ಊಹೆ ನಿಮಗೆ ಬಿಡುತ್ತೇನೆ. ಇದರ ಅರ್ಥ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಅವನಿಗೆ ಶಕ್ತಿ ತುಂಬುವ ಕೆಲಸ ಪಕ್ಷದಿಂದ ಆಗಬೇಕಿತ್ತು.

ಬಂದಿದ್ದೆಲ್ಲವೂ ನನಗೆ ಇರಲಿ ಎಂಬ ಮನೋಭಾವ ತೊಲಗಬೇಕಾದರೆ ಮುಂಬರುವ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಮಾಡುವವರ ಯೋಚನೆಗಳಿಗೆ ತಿಲಾಂಜಲಿ ಇಡಬೇಕಾದರೆ ಕುಟುಂಬದವರನ್ನು ಸೋಲಿಸಿ ಮನೆಯಲ್ಲಿ ಕೂಡಿಸಬೇಕು. ಈಗಾದರೇ ಖಂಡಿತ ಪಕ್ಷಕ್ಕಾಗಿ ದುಡಿದವರಿಗೆ ಪಕ್ಷದಲ್ಲಿ ಗಣನೆಗೆ ತಗೆದುಕೊಳ್ಳುತ್ತಾರೆ. ಅದಕ್ಕೆ ಮುಂಬರುವ ಚುನಾವಣೆಯಲ್ಲಿ ಯೋಚನೆ ಮಾಡಿ ಮತ ಚಲಾಯಿಸಿ!

Categories: news

Tagged as: ,

Leave a Reply