Articles

ಜನಪ್ರತಿನಿಧಿಗಳು ಅಧಿವೇಶನವನ್ನು ಅಭಿವೃದ್ಧಿಗೆ ವೇದಿಕೆಯಾಗಿ ಉಪಯೋಗಿಸಿಬೇಕು. ಸ್ಪೀಕರ್ ಇದಕ್ಕ್ಕೆ ಬೆಂಬಲ ಕೊಡಬೇಕು!

ದೇಶದ ಅಗ್ರಗಣ್ಯ ನಾಯಕರು ಯಾವತ್ತೂ ಅಧಿವೇಶನ ನಡೆಯುವಾಗ ಚಕರ್ ಹಾಕಿದ್ದು ತೀರಾ ವಿರಳ. ಯಾವದೋ ತುರ್ತಾದ ಕೆಲಸವಿದ್ದಾಗ ಮಾತ್ರ ಅವರ ಅನುಪಸ್ಥಿತಿ, ಇಲ್ಲವಾದರೆ ದೇಶದ ,ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಮ್ಮ ಅನುಭವವನ್ನು ಧಾರೆ ಎರೆವುದು ನಾವೆಲ್ಲ ಕೇಳಿದ್ದೇವೆ. ಸತತವಾಗಿ ೧೨ ವರ್ಷ ಮುಖ್ಯಮಂತ್ರಿಯಾಗಿ ೭ ವರ್ಷ ಪ್ರಧಾನ ಮಂತ್ರಿಯಾಗಿ ಒಂದೇ ಒಂದು ರಜೆ ಪಡೆಯದೇ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಇವರ ಹಾಗೆ ಅಡ್ವಾಣಿ, ವಾಜಪೇಯಿ , ಪ್ರನಾಬ್ ಮುಖರ್ಜಿ, ಖರ್ಗೆ, ದೇವೇಗೌಡ , ಯಡಿಯೂರಪ್ಪ ಅನೇಕ ನಾಯಕರು ರಾಜಕೀಯಕ್ಕೆ ಬಂದ ಮೇಲೆ ದೇಶ ಮತ್ತು ರಾಜ್ಯವೇ ತಮ್ಮ ಸಂಸಾರ ಎಂದು ದುಡಿದವರು.

ಇತ್ತೀಚಿಕೆ ಬೆಳಗಾವಿಯ ಸುವರ್ಣ ಸೌಧದ ಮೊಗಶಾಲೆಯಲ್ಲಿ ಕುಮಾರಸ್ವಾಮಿಯವರು ಯಡಿಯೂರಪ್ಪನವರನ್ನು ಮಾತನಾಡಿಸಿ ನಿಮ್ಮ ತಾಳ್ಮೆ ಮೆಚ್ಚುವಂತದ್ದು ಕಾರಣ ಒಂದೇ ಒಂದು ದಿವಸ ತಪ್ಪದೆ ಅಧಿವೇಶನಕ್ಕೆ ಹಾಜರಾಗಿ ಎಲ್ಲರ ಮಾತುಗಳನ್ನು ಕೇಳುತ್ತೀರಿ ಎಂದಾಗ ಅಲ್ಲೇ ಇದ್ದ ರೇವಣ್ಣ ಇದು ಸಾಧ್ಯವಾಗುವುದು ಇಂದಿನ ಕಾಲದಲ್ಲಿ ನಿಮಗೆ ಮತ್ತು ತಂದೆಯವರಾದ ದೇವೇಗೌಡರಿಗೆ!

ಅಧಿವೇಶನ ನಡೆಯುವಾಗ ಒಂದನ್ನು ಗಮನಿಸಿ ಮುಂದೆ ಕುಳಿತ ಘಟಾನುಘಟಿ ನಾಯಕರು ಮಾತಿಗೆ ಇಳಿದರೆ ತಾವೊಬ್ಬ ಉತ್ತಮ ಸಂಸದೀಯ ಪಟು ಎಂದು ತಿಳಿಯುದಕ್ಕೆ ಸಮಯವೇ ಬೇಕಾಗಿಲ್ಲ. ಇಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತಿಗೆ ಇಳಿದರೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತಾರೆ. ರಮೇಶ್ ಕುಮಾರ ಅವರ ಮಾತುಗಳು ಕೇಳಿದರೆ ಹೋಗಿ ನಾವು ಉತ್ತಮ ಪುಸ್ತಕಗಳನ್ನು ಓದಲೇಬೇಕು ಎಂದು ಅನಿಸದೇ ಇರದು. ೧೯೭೦ರ ಇತಿಹಾಸವನ್ನು ಹೇಳುತ್ತಾ ಇಂದಿನ ರಾಜಕಾರಣಿಗಳು ಮತ್ತು ಹಿಂದಿನ ರಾಜಕಾರಣಿಗಳ ವ್ಯತ್ಯಾಸವನ್ನು ತಿಳಿಸುತ್ತ ಯುವ ಶಾಸಕರಿಗೆ ಮಾದರಿಯಾಗುತ್ತಾರೆ. ಹಾಗೆ ಮಾಧುಸ್ವಾಮಿ, ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿಸಿದ ಸರ್ಕಾರವನ್ನು ಅನೇಕ ಬಾರಿ ಪಾರು ಮಾಡಿದ ಉಧಾಹರಣೆ ಇದೆ. ಅಧಿವೇಶನ ಇರುವುದು ಇಕ್ಕಟ್ಟಿಕೆ ಸಿಲುಕಿಸುವುದು ಮತ್ತು ಅದಕ್ಕೆ ವಿರೋಧ ಮಾಡುವುದಕ್ಕೆ ಅಧಿವೇಶನವಾ? ಖಂಡಿತ ಇಲ್ಲ .

ಅಧಿವೇಶನ ಮಾಡುವುದು ಸರ್ಕಾರಕ್ಕೆ ಬೇಕಾಗುವ ಯೋಜೆನೆಗಳಿಗೆ ಅನುಮೋದನೆ ಪಡೆಯುವುದು ಮತ್ತು ಎಲ್ಲಾ ಶಾಸಕರು ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಪಡೆದೊಕೊಳ್ಳುವುದು. ಆದರೆ ಎಲ್ಲಾ ಶಾಸಕರಿಗೆ ತಮಗೆ ಬೇಕಾದ ಯೋಜನೆಗಳು ಪಡೆಯುದಕ್ಕೆ ಬಿಡಿ, ಸಮಸ್ಯೆಯ ಬಗ್ಗೆ ಹೇಳುವುದಕ್ಕೂ ಸ್ಪೀಕರ್ ಅವರಿಂದ ಅಡ್ಡಿಯಾಗುತ್ತಿದೆ. ಇತ್ತೀಚಿಕೆ ಮೊದಲ ಬಾರಿ ಆಯ್ಕೆಯಾದ ಶಾಸಕರು ಮಾತನಾಡುವಾಗ ಸ್ಪೀಕರ್ ಅವರು ಅವರಿಗೆ ಕೊಡುವ ಅವಕಾಶಕ್ಕಿಂತ ಅವರಿಗೆ ತಡೆದದ್ದೇ ಜಾಸ್ತಿ!

ಮುಂದಿನ ಸಾಲಿನ ನಾಯಕರು ವಿಸ್ಕಿ ಬಗ್ಗೆ ಮಾತನಾಡುವುದು, ರೇಪ್ ಬಗ್ಗೆ ಮಾತನಾಡಿ ಪೇಚಿಕೆ ಸಿಲಿಕಿದ್ದು, ಯಾರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಹರಟೆ ಹೊಡೆಯುವುದು ನಾವು ನೋಡಿದ್ದೇವೆ. ಒಂದೊಂದು ಬಾರಿ ಘಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತದೆ. ಇಂಥಹ ಸಂದರ್ಭದಲ್ಲಿ ಇವರನ್ನು ತಡೆಯದೆ ಅವರು ನಗುವಿನಲ್ಲಿ ತೇಲಿಹೋಗುತ್ತಾರೆ. ಆದರೆ ಯುವ ಶಾಸಕರು ಏನಾದರೂ ಹೇಳಲಿಕ್ಕೆ ಹೊರಟರೆ ಅವರನ್ನು ಹುರಿದುಂಬಿಸುವುದು ಬಿಟ್ಟು ಅಲ್ಲೇ ತಡೆದರೆ ಅವರಿಗೆ ಅನುಭವವಾಗುವುದು ಯಾವಾಗ? ಇಲ್ಲಿ ಮುಂದಿನ ಸಾಲಿನ ನಾಯಕರು ವಾರ ಪೂರ್ತಿ ಮಾತನಾಡುವುದನ್ನು ಬಿಟ್ಟು ಹೊಸ ಶಾಸಕರಿಗೆ ಸಮಯಕೊಟ್ಟರೆ ಖಂಡಿತ ಯುವ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ.

ಯುವ ಶಾಸಕರಲ್ಲಿ ಕೃಷ್ಣ ಬೈರೇಗೌಡ, ದಿನೇಶ್,ಪ್ರಿಯಾಂಕಾ ಖರ್ಗೆ ಇವರಿಗೆ ತಕ್ಕ ಮಟ್ಟಿಗೆ ಅವಕಾಶ ಸಿಕ್ಕಿದೆ. ಕಾರಣ ಇವರೆಲ್ಲ ದೊಡ್ಡ ದೊಡ್ಡ ನಾಯಕರ ಮಕ್ಕಳು. ಇದು ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ಯುವ ಶಾಸಕರಾದ ಜಮಖಂಡಿಯ ಆನಂದ ನ್ಯಾಮಗೌಡ, ಪಿ ರಾಜೀವ್, ಇತ್ತೀಚಿಕೆ ಆಯ್ಕೆಯಾಗಿ ಬಂದ ಶರಣು ಸಲಗರ್ ಅತ್ಯಂತ ಕ್ರಿಯಾಶೀಲ ಶಾಸಕರು. ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಕೆಲಸ ಮಾಡುವ ತವಕ ಅದಕ್ಕೆ ಅಧಿವೇಶನದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಇವರುಗಳಿಗೆ ಸರಿಯಾದ ಸಮಯ ನಮ್ಮ ಸ್ಪೀಕರ್ ಕೊಡದೆ ಇರುವುದು ನಮ್ಮ ದುರ್ದೈವ!

ವಿಧಾನಸೌಧ ಅಥವಾ ಲೋಕಸಭೆ ಪಕ್ಷಾತೀತವಾದದ್ದು. ರಾಜ್ಯದ ಅಥವಾ ದೇಶದ ಸಲುವಾಗಿ ಯಾರೇ ಉತ್ತಮ ಕೆಲಸ ಮಾಡಿದ್ದರೇ ಅವರ ಕೆಲಸ ಮೆಚ್ಚುಗೆ ವ್ಯಕ್ತಪಡಿಸುವುದು ಉತ್ತಮ ಸಂಸದೀಯ ಪಟುವಾಗಿರುತ್ತಾನೆ. ಪಾಕಿಸ್ತಾನವನ್ನು ಒಡೆದು ಬಾಂಗ್ಲಾ ವಿಮೋಚನೆ ಮಾಡಿದ್ದು ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧೀಜಿಯವರು. ಇದನ್ನು ನಮ್ಮ ವಾಜಪೇಯಿಯವರು ಇಂದಿರೆಯನ್ನು ಮಾ ದುರ್ಗಾ ಎಂದು ಲೋಕಸಭೆಯಲ್ಲಿ ಹೊಗಳಿದ್ದರು. ಇದರ ಅರ್ಥ ಚುನಾವಣೆ,ಕಿರಿಯ ಸದಸ್ಯ ,ಹಿರಿಯ ಸದಸ್ಯ ಮತ್ತು ಪಕ್ಷ ಅಭಿವೃದ್ಧಿಗೆ ಅಡ್ಡಿಯಾಗಬಾರದು.

ಇತ್ತೀಚಿಕೆ ವಿಧಾನ ಪರಿಷತನಲ್ಲಿ ಲಕ್ಷ್ಮಣ್ ಸವದಿ ಮತ್ತು ನಡಹಳ್ಳಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದು ಜನರಿಗೆ ತುಂಬಾ ಇಷ್ಟವಾಗಿತ್ತು. ನಡಹಳ್ಳಿಯವರು ದಕ್ಷಿಣ ಕರ್ನಾಟಕದ ಚಾಮರಾಜನಗರ ಮತ್ತು ಉತ್ತರ ಕರ್ನಾಕಟದ ಬಹು ಭಾಗ ಅಂಕಿ ಅಂಶಗಳ ಮೂಲಕ ಅಭಿವೃದ್ಧಿ ಹೊಂದಿಲ್ಲ ಎಂದು ಎಲ್ಲಿ ಬೇಕಾದರೂ ಸಾಭೀತುಪಡಿಸುತ್ತೇನೆ ಎಂದು ಸವಾಲ್ ಹಾಕಿದ್ದು ರಾಜ್ಯದ ಎಲ್ಲ ಭಾಗಗಳ ಅಭಿವೃದ್ಧಿಯ ತಾರತಮ್ಯ ಎತ್ತಿ ತೋರಿಸಿತ್ತು. ನಡಹಳ್ಳಿಯವರು ಹಿರಿಯ ಸದಸ್ಯ ಅದಕ್ಕೆ ಸ್ವಲ್ಪ ಸಮಯ ಸಿಕ್ಕಿತ್ತು ಅದಕ್ಕೆ ನೈಜವಾದ ಸಮಸ್ಯೆಗಳನ್ನು ಜನತೆ ಮುಂದಿಟ್ಟಿದ್ದರು. ಸ್ಪೀಕರ್ ಅವರು ಅಧಿವೇಶನ ನಡೆಸುವಾಗ ನಾಮ್ಕಾವಾಸ್ತೆ ಅಧಿವೇಶನ ಆಗುವುದಕ್ಕೆ ಬಿಡದೇ ಸಮಸ್ಯೆ ಬಗ್ಗೆ ವಿಸ್ಕೃತ ಚರ್ಚೆಗೆ ಅವಕಾಶ ಕೊಟ್ಟು ಅದನ್ನು ಕಾರ್ಯರೂಪಕ್ಕೆ ಬರುವ ಹಾಗೆ ಒಂದು ಸಮಿತಿ ಮಾಡುವ ಎಲ್ಲ ಹಕ್ಕು ನಮ್ಮ ಅಧ್ಯಕ್ಷರಿಗೆ ಇದೆ. ಅಧ್ಯಕ್ಷರು ಅನೇಕ ಒಳ್ಳೆಯ ಚರ್ಚೆಗಳನ್ನು ಮಾಡಿದ್ದಾರೆ ವಿಶೇಷವಾಗಿ ಸಂವಿಧಾನ ಬಗ್ಗೆ ಮತ್ತು ಒಂದು ದೇಶ , ಒಂದು ಚುನಾವಣೆ.

ಸದ್ಯದ ಪರಿಸ್ಥಿತಿಯಲ್ಲಿ ಒಳ್ಳೆಯ ವಿದ್ಯಾವಂತರು ಕರ್ನಾಟಕದ ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ. ಅಧಿವೇಶನ ನಡೆಸುವಾಗ ರಾಜ್ಯದ ಹಿತಾಶಕ್ತಿ ಮನಸ್ಸಿನಲ್ಲಿ ಇಟ್ಟೊಕೊಂಡು ಹಿರಿಯ ಸದಸ್ಯರಿಗೆ ಸಮಯ ನಿಗದಿ , ಕಿರಿಯ ಸದಸ್ಯರಿಗೆ ಸಮಯ ನಿಗದಿ(ಸಾಧ್ಯವಾದಷ್ಟು ಯುವ ಶಾಸಕರಿಗೆ ಹೆಚ್ಚಿನ ಸಮಯ ನಿಗದಿ ಮಾಡಲೇಬೇಕು) ಮತ್ತು ಚರ್ಚೆ ಆಗಬೇಕಾದ ವಿಷಯಗಳು ಮತ್ತು ಅವುಗಳಿಗೆ ಕಾರ್ಯರೂಪಕ್ಕೆ ತರುವುದನ್ನು ಅಜೆಂಡಾದಲ್ಲಿ ಹಾಕಿಕೊಂಡರೆ ಅಧಿವೇಶನಕ್ಕೆ ಒಂದು ಘನತೆ ಬರುತ್ತದೆ.

ವಿರೋಧ ಪಕ್ಷದ ನಾಯಕ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಿದಾಗ ತಿದ್ದುವ ಕಡೆ ಗಮನ ಇರಬೇಕೆ ಹೊರೆತು ಮೊಂಡುವಾದಕ್ಕೆ ಹೋಗಲೇಬಾರದು. ಕಾರಣ ಅಧಿವೇಶನ ಇರುವುದು ರಾಜಕೀಯ ಮಾಡುವದಕ್ಕೆ ಅಲ್ಲವೇ ಅಲ್ಲ. ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸವುದು ವಿರೋಧ ಪಕ್ಷದ ಕೆಲಸವಾಗಬೇಕು. ಅಧಿವೇಶನದಲ್ಲಿ ಮೊಂಡುವಾದ ಮಾಡಿದರೆ, ಸುಳನ್ನು ಸತ್ಯ ಮಾಡಿದರೆ ಜನ ಮತ್ತೆ ನಿಮ್ಮನ್ನೇ ಆಯ್ಕೆಮಾಡುತ್ತಾರೆ ಎನ್ನುವ ಭ್ರಮೆಬೇಡ!

ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಎಷ್ಟು ಶಾಸಕರು ಬರುತ್ತಾರೆ ಮತ್ತು ಸಮಸ್ಯೆಯ ಬಗ್ಗೆ ಚರ್ಚೆ ಮಾಡುವಾಗ ಅವೆರೆಲ್ಲಿರುತ್ತಾರೆ ಎಂಬ ದೂರು ಇದೆ. ಶಾಸಕರು ಕೇವಲ ಟಿ ಎ ಮತ್ತು ಡಿ ಎ ಸಲುವಾಗಿ ಆಗಮಿಸಿ ಸಹಿ ಹಾಕಿ ತಮ್ಮ ಸ್ವಂತ ಕೆಲಸಕ್ಕೆ ಹೊರಗಡೆ ಹೋಗುತ್ತಾರೆ. ಅಧಿವೇಶನ ಇರುವಾಗ ತುರ್ತಾದ ಕೆಲಸವಿಲ್ಲದೆ ಹೋದರೆ ಎಲ್ಲರೂ ಭಾಗಿಯಾಗುವ ಹಾಗೆ ಮಾಡುವುದಕ್ಕೆ ಕಾನೂನವಿಲ್ಲದೆ ಹೋದರೆ ಕಾನೂನ ತರಲೇಬೇಕು. ವಿದ್ಯಾರ್ಥಿಗಳ ಹಾಜರಾತಿ ಇಲ್ಲದೇ ಹೋದರೇ ಪರೀಕ್ಷೆ ಬರೆಯುದಕ್ಕೆ ಅವಕಾಶವಿರುವದಿಲ್ಲ. ಹಾಗೆಯೇ ಶಾಸಕರು ೮೦% ಹಾಜರಾತಿ ಇರದೇ ಹೋದರೇ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶಕೊಡಬಾರದು.

ಅಧಿವೇಶನ ರಾಜ್ಯದ ಮತ್ತು ಜನರ ಅಭಿವೃದ್ಧಿಗೆ ನಾಂದಿಹಾಡಬೇಕು ಎಂಬುದು ನಮ್ಮ ಆಶಯ

Categories: Articles

Tagged as: ,

Leave a Reply