Articles

ಐ ಸಿ ಎಸ್ ನಂಥ ಪ್ರತಿಷ್ಠಿತ ಪದವಿಯನ್ನು ನಿರಾಕರಿಸಿದ ಭಾರತೀಯ ಸೇನಾನಿ.

ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. ತಂದೆ ಸರ್ಕಾರಿ ವಕೀಲ ವೃತ್ತಿ ಮಾಡಿ ಮುಂದೆ ಬಂಗಾಳದ ವಿಧಾನ ಪರಿಷತ್ತು ಸದಸ್ಯರಾಗಿದ್ದರು. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಪ್ರಬಾವಕ್ಕೆ ಒಳಗಾದವರು. ವಿವೇಕಾನಂದ ಅವರ ಪುಸ್ತಕಗಳು ಮತ್ತು ಪತ್ರಗಳು ಓದುತ್ತಿದ್ದರು. ಹದಿನೈದನೆಯ ವರ್ಷಕ್ಕೆ ಪಡೆದಿದ್ದ ವಿವೇಕಾನಂದರ ಸ್ಫೂರ್ತಿ ಕಡೆಯವರೆಗೆ ಇತ್ತು. ಎಂಥಹ ಕೆಲಸದಲ್ಲಿ ನಿರತರಾಗಿದ್ದರೂ ಸಂಜೆ ಆದ ಕೂಡಲೇ ಯಾವುದಾದರೂ ಮಠಕ್ಕೆ ಹೋಗಿ ಧ್ಯಾನಸ್ಥರಾಗುತ್ತಿದ್ದರು. ಇಂದು ಆತ್ಮನಿರ್ಭರ ಎಂದು ಮೋದಿ ಹೇಳುತ್ತಿದ್ದಾರೆ ಆದರೆ ಆವಾಗಲೇ ಕ್ರಾಂತಿಕಾರಿ ಸುಭಾಷ ಸ್ವದೇಶ ಮತ್ತು ಸ್ವ ಸಂಸ್ಕೃತಿ ಬಗ್ಗೆ ನಿಷ್ಠೆಯನ್ನು ಹೊಂದಿದ್ದವರು. ಯೋಗಾಭ್ಯಾಸ ಮತ್ತು ಏಕಾಗ್ರತೆ ಮೈಗೂಡಿಸಿಕೊಂಡಿದ್ದರು. ೧೯೧೨ರಲ್ಲಿ ಮೆರ್ಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಎರಡೆನೆಯ ಸ್ಥಾನ ಪಡೆದಿದ್ದರು. ಇಂದಿನ ವಿದ್ಯಾರ್ಥಿಗಳಿಗೆ ಧ್ಯಾನ,ಏಕಾಗ್ರತೆ ಅಧ್ಯಾತ್ಮ ಅರಿಯದ ವಿಷಯ!

ಅರವಿಂದ ಅವರ ಒಂದು ಮಾತು ಸುಭಾಷಚಂದ್ರರ ಮೇಲೆ ಭಾರಿ ಪರಿಣಾಮ ಬೀರಿತ್ತು . ಅದುವೇ ಭಾರತವನ್ನು ವಿಶ್ವಗುರಿವಿನ ಸ್ಥಾನದಲ್ಲಿ ಪ್ರತಿಷ್ಟಾಪಿಸುವುದು ಪ್ರತಿಯೊಬ್ಬ ಭಾರತೀಯನ ಗುರಿಯಾಗಿರಬೇಕು! ತಮ್ಮ ೧೭ ವಯಸ್ಸಿನಲ್ಲಿ ಮನೆಯಲ್ಲಿ ಹೇಳದೆ ತೀರ್ಥಯಾತ್ರೆಗೆ ಹೋಗಿದ್ದಾಗ ಸುಭಾಷರವರಿಗೆ ಭಾರತದ ಸಮಾಜದ ನೈಜ ಸ್ಥಿತಿ ಅರವಿಗೆ ಬಂದಿತ್ತು. ಬೋದ ಗಯೆದ ಮಠದಲ್ಲಿ ಊಟದ ಸಮಯದಲ್ಲಿ ಬೇರೆ ಬೇರೆ ಜಾತಿಯವರಿಗೆ ಬೇರೆ ಊಟದ ಪಂಕ್ತಿ ಇದ್ದವು. ಮತ್ತೆ ಬೆಳಿಗ್ಗೆ ಸ್ನಾನಕ್ಕೆ ಬಾವಿಗಿಳಿದಾಗ ಅಚ್ಚರಿ ಆಗಿತ್ತು. ಬ್ರಾಹ್ಮಣರು ಮಾತ್ರ ನೀರನ್ನು ಸೇದಿಕೊಳ್ಳಬೇಕು. ಅದೃಷ್ಟವಶಾತ ಒಬ್ಬ ಗೆಳಯ ಬ್ರಾಹ್ಮಣನಾಗಿದ್ದ! ಜನಿವಾರವೇ ಸಹಾಯಕ್ಕೆ ಬಂದಿತ್ತು. ತಮ್ಮ ಚಿಕ್ಕವಯಸ್ಸಿನಲ್ಲೇ ಸಾಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಬಡವರಿಗಾಗಿ ಚೀಲ ಹಿಡಿದು ದಾನ್ಯ ಮತ್ತು ಹಣಕ್ಕಾಗಿ ಮನೆ ಮನೆಗೆ ಹೋಗುತ್ತಿದ್ದರು. ಕೇವಲ ನಾನು ಮಾತ್ರ ಭೋಗದ ಜೀವನ ಮಾಡಿದರೆ ಮನಸ್ಸಿಗೆ ಖೇದ ಎಂದು ಮನೆಯಲ್ಲಿ ಕಾಲೇಜಿಗೆ ಹೋಗಲು ಕೊಟ್ಟ ದುಡ್ಡನ್ನು ಭಿಕ್ಷುಕರಿಗೆ ಹಾಕಿ ನಡೆದುಕೊಂಡು ಕಾಲೇಜಿಗೆ ಹೋಗುತ್ತಿದ್ದರು. ಇದು ಅಲ್ವೇ ಸರ್ವರಿಗೂ ಸಮಪಾಲು ಮತ್ತು ಸರ್ವರಿಗೆ ಸಮಬಾಳು ಕಲ್ಪನೆ! ಬಿಟಿಷರ ಆಡಳಿತ ಇರುವ ಕಾಲ ಭಾರತೀಯರಿಗೆ ಸ್ವಾತಂತ್ರ್ಯ ಅನ್ನುವುದು ಮರೀಚಿಕೆ ಆಗಿತ್ತು. ಆದರೆ ಕ್ರಾಂತಿಕಾರಿ ಸುಭಾಷ ಮಾತ್ರ ಭಾರತವನ್ನು ಮುಕ್ತಿಗೊಳಿಸಲೇಬೇಕು ಎನ್ನುವುದು ಹಠ. ಕಾಲೇಜು ಕಲಿಯುವಾಗ ತುಂಬಾ ಕ್ರಾಂತಿಕಾರಿ ಎಂದರೆ ತಪ್ಪಾಗಲಾರದು , ಓಟನ್ ಎಂಬ ಪ್ರಾಧ್ಯಾಪಕ ಹಲುವು ವಿದ್ಯಾರ್ಥಿಗಳ ಮೇಲೆ ಕೈ ಮಾಡಿದ ಎಂದು ಪ್ರಿನ್ಸಿಪಾಲರಿಗೆ ಕಂಪ್ಲೇಂಟ್ ಕೊಟ್ಟಿದ್ದರು. ಅದು ನಿರಾಶಾದಾಯಕ ಎಂದು ಗೊತ್ತಾತ ಮೇಲೆ ಉಗ್ರ ಪ್ರತಿಭಟನೆ ಮಾಡಿದ್ದವರು.

ಪ್ರತಿಭಟನೆ ಇವರ ನೇತೃತ್ವದಲ್ಲಿ ನಡೆಯಿತು ಮತ್ತು ಓಟನ್ ಮೇಲೆ ಯಾರೋ ಕೈ ಮಾಡಿದ್ದರು. ಅದು ಇವರ ತಲೆ ಮೇಲೆ ಹಾಕಿಬಿಟ್ಟರು. ಇದರಿಂದ ಸಿಕ್ಕ ಬಹುಮಾನ ಕಾಲೇಜುನಿಂದ ಹೊರಗೆ ಹಾಕಲಾಯಿತು. ಸುಭಾಷರ ಎಲ್ಲ ನಡೆಯನ್ನು ಗಮನಿಸದ ತಂದೆ ಜಾನಕೀನಾಥ್ ಕ್ಲಿಷ್ಟ ರಾಜಕೀಯದಿಂದ ಮಗನನ್ನು ದೂರ ಇಡುವ ಸಲುವಾಗಿ ಐ ಸಿ ಎಸ್ ಓದುವದಕ್ಕೆ ಕಳಿಸಲು ಮುಂದಾದರು. ಪ್ರಥಮ ಶ್ರೇಣಿಯಲ್ಲಿ ಪಾಸಾದ ಸುಭಾಷರು ಹಿಂದೇಟು ಹಾಕಿದಾಗ ತಂದೆ ಇವನಿಗೆ ಪಾಸ ಆಗುವ ಸಂದೇಹ ಇದೆ ಎಂದಾಗ ಬೋಸರು ಇಲ್ಲ ನನಗೆ ಸರ್ಕಾರಿ ನೌಕರಿ ಮಾಡಬಾರದೆಂದು ಹಿಂದೇನೆ ನಿರ್ದಾರ ಮಾಡಿದ್ದೇನೆ ಎಂದರು. ಆದರೂ ತಂದೆ ಇದೆ ವರ್ಷ ನಿನ್ನ ವಯಸ್ಸು ಮಿರುತ್ತೆ ಎಂದು ಹೇಳಿ ಕಳಿಸಲು ಮುಂದಾದಾಗ ಬೋಸರು ಹೇಳಿದ ಮಾತು “ಐ ಸಿ ಏಸ್ ಪರೀಕ್ಷೆ ತೇರ್ಗಡೆ ಆಗುತ್ತೇನೆ ಆದರೆ ವಿದೇಶಿ ನೌಕರಿ ಮಾತ್ರ ಸೇರಲಾರೆ ಎಂದಿದ್ದರು. ತಂದೆಯ ಮಾತಿಗೆ ಓಗೊಟ್ಟು ಇಂಗ್ಲೆಂಡಿಗೆ ಹೊರಟರು. ಕೇವಲ ಎಂಟು ತಿಂಗಳ ಸಮಯ ಆದರೆ ಓದುವುದು ತುಂಬಾ ಇತ್ತು. ಆದರೂ ಹಠ ಬಿಡದೆ ಪಾಸಾಗಬೇಕಂಬ ನಿಲುವಿನಿಂದ ಕಠಿಣ ಪರಿಶ್ರಮದಿಂದ ಓದಿ ಪರೀಕ್ಷೆ ಕೊಟ್ಟಿದ್ದರು. ತಾವು ಪರೀಕ್ಷೆ ಬರೆದಾಗಿದೆ ಆದರೆ ಫಲಿತಾಂಶ ಧನಾತ್ಮಕವಾಗಿ ಬರುತ್ತೆ ಎನ್ನುವ ಆಶೆ ನನ್ನಲ್ಲಿ ಇಲ್ಲಾ, ಕಾರಣ ಇಲ್ಲಿ ಹಲವಾರು ವರ್ಷಗಳಿಂದ ಓದಿದ ಯುವಕರು ಇದ್ದಾರೆ ಎಂದು ಬಂದುಗಳಿಗೆ ಪತ್ರ ಬರೆದಿದ್ದರು.

ಇಂಗ್ಲೆಂಡಿಗೆ ಹೋಗಿ ಕೇಂಬ್ರಿಡ್ಜ್ ಯಲ್ಲಿ ಪ್ರವೇಶ ಪಡೆದು ತಕ್ಕ ಮಟ್ಟಿಗೆ ಓದಿದ್ದರು. ೧೯೨೦ರಲ್ಲಿ ಫಲಿತಾಂಶ ಬಂದಾಗ ಅದನ್ನು ನೋಡಿ ಸುಭಾಷರಗೆ ಶಾಕ್ ಆಗಿತ್ತು. ತಾವು ಪಾಸಾಗುದಷ್ಟೇ ಅಲ್ಲಾ ನಾಲ್ಕನೆಯ ಸ್ಥಾನ ಪಡೆದಿದ್ದರು. ಪಾಸಾದ ನಂತರ ಅವರಿಗೆ ಕಾಡಿದ್ದು ಸರ್ಕಾರಿ ನೌಕರಿ ಸೇರಬೇಕೇ? ಸ್ವತಂತ್ರವಾಗಿ ಇದ್ದು ದೇಶಸೇವೆ ಮಾಡಬೇಕೆ? ೨೩ನೇ ವಯಸ್ಸಿನಲ್ಲಿ ಪಾಸಾಗಿ ಸೇವೆ ಸೇರಿದ ಬೋಸರಿಗೆ ದೇಶಸೇವೆಯ ತುಡಿತ ಹೆಚ್ಚೇ ಇತ್ತು. ಯಾರೇ ಎಷ್ಟೇ ಹೇಳಿದರು ೧೯೨೧ರಲ್ಲಿ ನೌಕರಿಗೆ ಗುಡ್ ಬೈ ಹೇಳಿದರು. ಅಂದಿನ ಯುವಕರಿಗೆ ಐ ಸಿ ಎಸ್ ಪಾಸಾಗೋದು ಒಂದು ಅತಿ ದೊಡ್ಡ ಕನಸಾಗಿತ್ತು ಆದರೆ ಬೋಸರಿಗೆ ದೇಶಸೇವೆ ಹೆಚ್ಚಾಗಿತ್ತು. ತನ್ನ ಜೀವನ ದೇಶಸೇವೆಗೆ ಎಂದು ನಿರೂಪಿಸಿದ್ದ ಪರಾಕ್ರಮಿ.

ಕೆಲಸಕ್ಕೆ ಕಷ್ಟಪಟ್ಟು ರಾಜೀನಾಮೆ ಕೊಟ್ಟು ಮುಂಬೈಗೆ ಆಗಮಿಸಿ ಗಾಂಧಿಯವರನ್ನು ಭೇಟಿಯಾಗಿ ಸ್ವಾತಂತ್ರ್ಯ ಪಡೆಯುವ ಬಗ್ಗೆ ದೀರ್ಘವಾಗಿ ಸಮಾಲೋಚನೆ ಮಾಡಿದರು. ಅವರ ಸಮಾಲೋಚನೆಯಲ್ಲಿ ಸಿಕ್ಕ ಉತ್ತರ ನಾವು ತ್ವರಿತವಾಗಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡುತ್ತಿಲ್ಲ. ಇಲ್ಲಿ ಗಮನಿಸಬೇಕು ಗಾಂಧಿ ಅತ್ಯಂತ ಜನಪ್ರಿಯ ವ್ಯಕ್ತಿ ಮತ್ತು ಪ್ರತಿ ಭಾರತೀಯನಿಗೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡಿದ ಮಹಾತ್ಮಾ. ಆದರೆ ಅವರದು ಕ್ಷಿಪ್ರ ಹೋರಾಟವಾಗಿರಲಿಲ್ಲ. ಬೋಸ್ ಅವರದು ಅತಿ ಬೇಗ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕು ಎನ್ನುವ ಮನೋಭಾವ. ಗಾಂಧಿ,ಚಿತ್ತರಂಜನದಾಸ ,ನೆಹರು ಹೀಗೆ ಅನೇಕ ನಾಯಕರ ಜೊತೆಗೂಡಿ ಕಾಂಗ್ರೆಸ್ಸನಲ್ಲಿ ಮತ್ತು ಸ್ವರಾಜ್ಯ ಚುಳುವಳಿಯಲ್ಲಿ ಭಾಗವಹಿಸಿದ್ದರು. ಇವರ ಭಾಷಣ ಬಹಳ ಪ್ರಖರತೆ ಮತ್ತು ಜನರನ್ನು ಆಕರ್ಷಿಸುವಂತದ್ದು ಇತ್ತು .

೧೯೨೧ ರಿಂದ ೧೯೪೦ ಅವಧಿಯಲ್ಲಿ ಸುಮಾರು ೧೧ ಬಾರಿ ಬ್ರಿಟಿಷರು ಸುಭಾಷರನ್ನು ಬಂಧಿಸಿದ್ದರು. ೧೯೪೦ರ ಸಮಯ ಚರ್ಚಿಲ್ ಅಳುವ ಸಮಯದಲ್ಲಿ ಹಿಟ್ಲರ್ ಬೆಲ್ಜಿಯಂ ,ಫ್ರಾನ್ಸಗೆ ಮೇಲೆ ಮತ್ತೊಂದು ಮುಸಲೋನಿಯ ಕಣಕ್ಕೆ ಇಳಿದಿದ್ದ. ಇದೆ ಸಮಯದಲ್ಲಿ ಭಾರತೀಯರು ಕ್ಷಿಪ್ರ ಪ್ರಯತ್ನ ನಡೆಸಿ ದೇಶವನ್ನು ಸ್ವಾತಂತ್ರ್ಯ ಮಾಡಲು ಬೋಸರು ಪ್ರಖರವಾಗಿ ಸಾರಿದರು. ಆದರೆ ಗಾಂಧಿ ನನ್ನ ಅಂತರಂಗ ಹೇಳುತ್ತಿದೆ “ಇನ್ನು ಸ್ವಲ್ಪ ದಿನ ಕಾಯಬೇಕು ಎಂದು” . ಸೇವಾಗ್ರಾಮದಲ್ಲಿ ಕಡೆಯ ಗಾಂಧಿ ಮತ್ತು ಬೋಸರ ಭೇಟಿ. ಮುಂದೆ ೧೯೪೨ ರಲ್ಲಿ ವೀರ ದಾಮೋಧರ ಸಾವರ್ಕರ ಅವರನ್ನು ಭೇಟಿಯಾದರು. ಇಬ್ಬರು ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಗುರುವಿನ ಸ್ಥಾನದಲ್ಲಿ ಇಟ್ಟಿದ್ದರು. ಸಾವರ್ಕರ್ ಯಾವಾಗಲೂ ಹಿಂದೂ ಯುವಕರಿಗೆ ಭಾರತೀಯ ಸೈನ್ಯ ಸೇರಲು ಹುರಿದುಂಬಿಸುತ್ತಿದ್ದರು. ಮುಂದೆ ಅವರೇ ನಮಗೆ ಉಪಯೋಗಕ್ಕೆ ಬರುತ್ತಾರೆ ಎನ್ನುವ ಮುಂದಾಲೋಚನೆಯಿಂದ. ಇವರಿಬ್ಬರ ಮಾತುಕತೆ ತುಂಬಾ ನಿಖರವಾಗಿತ್ತು. ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತ ಕುಸಿದಿರುವಾಗ ನಿಮ್ಮಂಥ ಮೇಧಾವಿ ದೇಶದಲ್ಲಿ ಸಣ್ಣ ಪುಟ್ಟ ವಿರೋಧ ಮಾಡಿ ಬ್ರಿಟಿಷರ ಜೈಲಿಗೆ ಹೋಗುವ ಬದಲು ಇಟಲಿ ಮತ್ತು ಜರ್ಮನಿಯಲ್ಲಿ ಕೈದಿಗಳಾಗಿ ಬಂಧಿತರಾಗಿರುವ ಭಾರತೀಯರನ್ನು ಹುರುದುಂಬಿಸಿ ನಾಯಕತ್ವ ನೀಡಿ ಬರ್ಮಾ ಗಡಿಯಿಂದಲೋ ,ಬಂಗಾಲಕೊಲ್ಲಿಯಿಂದಲೋ ಭಾರತದ ಮೇಲೆ ಆಕ್ರಮಣ ಮಾಡದೆ ಭಾರತ ಮುಕ್ತವಾಗಲಾರದು ಎಂದಿದ್ದರು. ಹೇಗೂ ನಿಮಗೆ ಜಪಾನ ಮತ್ತು ಜರ್ಮನ್ ಸರಕಾರಗಳು ಬೆಂಬಲಿಸುತ್ತವೆ. ಮುಂದೆ ದೇಶದ ಹೊರಗಡೆ ಇದ್ದು ಅಜಾದ ಹಿಂದ ಪೌಜ ಸೈನ್ಯ ಕಟ್ಟಿದರು. ಅನೇಕ ದೇಶಗಳ ಸರ್ಕಾರದ ನೆರವು ಯೆತೆಚ್ಚವಾಗಿ ಸಿಕ್ಕಿತ್ತು. ೧೯೪೨ರಲ್ಲಿ ಅಡಾಲ್ಫ್ ಹಿಟ್ಲರ್ ಭೇಟಿಯನ್ನು ಮಾಡಿ ಜಗತ್ತಿಗೆ ಸಂದೇಶವನ್ನು ಕೊಟ್ಟಿದ್ದು ಮಾತ್ರ ಸುಳ್ಳಲ್ಲ. ಹೀಗೆ ಹತ್ತು ಹಲವಾರು ಕೆಲಸಗಳು ದೇಶದ ಹೊರಗಡೆ ಇದ್ದು ಇಂಗ್ಲೆಂಡಿಗೆ ಬೆದರಿಸಿದ್ದು ಇದೆ ಕ್ಷಿಪ್ರ ಕ್ರಾಂತಿಯ ಭಾರತೀಯ ಸೇನಾನಿ . ಇದಕ್ಕಾಗಿಯೇ ಸುಭಾಷರು ಅಪ್ರತಿಮ ಪರಾಕ್ರಮಿ ಎಂಬದು ಜಗತ್ತಿನ ಇತಿಹಾಸದಲ್ಲಿ ಬರೆಯಲ್ಪಟ್ಟಿದೆ.

Leave a Reply