news

ವಿಜಯಪುರದಲ್ಲಿ ಹೈ ಕ್ಲಾಸ್ ಉದಯಶ್ರೀ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭ!

ಸ್ಪೋರ್ಟ್ಸ್ ಅಕಾಡೆಮಿ, ಡಾಮಿನೊಸ್ , ಪಿಜ್ಜಾ ಮತ್ತು ಕಾಪಿ ಕೆಫೆ ಡೇ ಬಗ್ಗೆ ನಾವು ಕೇಳಿದ್ದೇವೆ ಮತ್ತು ಅವೆಲ್ಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ವಿಜ್ಞಾನ ಯುಗದಲ್ಲಿ ಎಲ್ಲವೂ ಬದಲಾಗಿದೆ. ನೀವು ಇರುವಲ್ಲಿಯೇ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಮತ್ತು ಎಲ್ಲರಿಗೂ ಸಿಗಬೇಕು. ಎಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಕಲಿಕೆಗೆ ಕೋಚ್ ಇರಲ್ಲ , ಕೋಚ್ ಇದ್ದರೂ ಆಟದ ಮೈದಾನಗಳು ಇರುವದಿಲ್ಲ. ಸೌಲಭ್ಯಗಳು ಇರದೇ ಗ್ರಾಮೀಣ ಪ್ರತಿಭೆಗಳು ಕಮರಿದ್ದು ನಾವು ಕೇಳಿದ್ದೇವೆ. ಇತ್ತೀಚಿಕೆ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಅಂಗಡಿಗಳು ಇದು ಸಣ್ಣ ನಗರಗಳಿಗೆ ಪ್ರವೇಶ ಕೊಡುತ್ತಿವೆ ಅದರಲ್ಲಿ ದೈಹಿಕ ಫಿಟ್ನೆಸ್ಗೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಲು ಅಕಾಡೆಮಿಗಳ ಅವಶ್ಯಕತೆ ತುಂಬಾ ಇತ್ತು. ಅದಕ್ಕಾಗಿಯೇ ವಿಜಯಪುರದಲ್ಲಿ ಸುಸಜ್ಜಿತ ಸ್ಪೋರ್ಟ್ಸ್ ಅಕಾಡೆಮಿ ಒಂದು ತಲೆ ಎತ್ತಿ ನಿಂತಿದೆ. ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎನ್ನುವ ಯುವಕರಿಗೆ ಹೊಸ ದಿಕ್ಕನ್ನು ತೋರಿಸುವದಲ್ಲದೆ ಅವರ ಗುರಿ ಸಾಧನಗೆ ದಾರಿ ತೋರಿಸಬಲ್ಲದು.

ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ, ಟೆನಿಸ್ ಆಟಗಾರ್ತಿ ಸಾನಿಯಾ ಅವರೆಲ್ಲ ತಮ್ಮ ಸಾಧನೆ ಮಾಡಿದ್ದು ಸ್ಪೋರ್ಟ್ಸ್ ಅಕ್ಯಾಡೆಮಿಗಳಲ್ಲೇ. ಸದ್ಯಕ್ಕೆ ಸೈಕ್ಲಿಂಗ್ ಎಂದರೆ ನೆನಪಾಗುವುದು ಅವಳಿ ಜಿಲ್ಲೆಗಳಾದ ವಿಜಯಪುರ ಮತ್ತು ಬಾಗಲಕೋಟ! ಇದಕ್ಕೆ ಕಾರಣವಾಗಿದ್ದು ಇಲ್ಲಿನ ವ್ಯವಸ್ಥೆ! ವ್ಯವಸ್ಥೆ ಮತ್ತು ಸೌಲಭ್ಯ ಸರಿಯಾಗಿದ್ದರೆ ಖಂಡಿತ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದೆ. ಇಂದು ಪ್ರಾರಂಭವಾಗಿರುವ ಅಕಾಡೆಮಿ ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸುಸಜ್ಜಿತವಾದ ಅಕಾಡೆಮಿ ಪ್ರಾರಂಭಿಸಿದ್ದಾರೆ. ಖ್ಯಾತ ಆಟಗಾರರನ್ನು ಕರೆಯಿಸಿ ಮಕ್ಕಳಿಗೆ ತರಬೇತಿ ಕೊಡುವ ಯೋಜನೆ ಹಾಕಿಕೊಂಡಿದ್ದಾರೆ. ಇದರ ಜೊತೆ ದೈಹಿಕವಾಗಿ ಸದೃಢವಾಗಿರಲು ಉದಯಶ್ರೀ ಅಕಾಡೆಮಿ ಖಂಡಿತ ಸಹಾಯಮಾಡುತ್ತದೆ.

ಅಕಾಡೆಮಿ ಬಗ್ಗೆ ಹೆಚ್ಚಿಕೆ ತಿಳಿದುಕೊಳ್ಳಲುಕೆಳಿಗಿನ ವಿಡಿಯೋ ನೋಡಿ ಮತ್ತು ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಿ.

Udayshree Sports Academy, Solapur Road, Vijayapur, Mobile#7975627548

Categories: news

Tagged as: , ,

Leave a Reply