ಭಾರತ ಎಲ್ಲ ಧರ್ಮಗಳನ್ನು ಗೌರವಿಸುವ ದೇಶ ಎಂದರೆ ಜಾತ್ಯಾತೀತಿ ರಾಷ್ಟ್ರ. ಜಗತ್ತಿನ ಕೆಲವೇ ಕೆಲವು ದೇಶಗಳು ಮಾತ್ರ ಜಾತ್ಯತೀತವಾಗಿ ಗುರುತಿಸಿಕೊಂಡಿವೆ. ಭಾರತ ದೇಶ ಧರ್ಮದ ಆಧಾರದ ಮೇಲೆ ಅಖಂಡ ಭಾರತ ಹೋಳು ಮಾಡಿ ಭಾರತ ಮತ್ತು ಪಾಕಿಸ್ತಾನ ಎಂದಾದ ಮೇಲೆ ಭಾರತ ಹಿಂದೂ ರಾಷ್ಟ್ರ , ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದವು. ದೇಶ ವಿಭಜನೆ ಆದ ಮೇಲೆ ಇಲ್ಲಿನ ಇಸ್ಲಾಮೀಯರು ಪಾಕಿಸ್ತಾನಕ್ಕೆ ಹೋಗಬೇಕಿತ್ತು ಆದರೆ ನಾವು ಇಲ್ಲೇ ಇರುತ್ತೇವೆ ನಮಗೊಂದು ಅವಕಾಶ ಕೊಡಿ ಎಂದು ಆಯ್ಕೆಮಾಡಿಕೊಂಡ ದೇಶ ಭಾರತ. ಹೇಳಿಕೇಳಿ ಭಾರತ ಜಾತ್ಯತೀತ ರಾಷ್ಟ್ರವಾಗಿ ಗುರುತಿಸ್ಕೊಂಡ ಮೇಲೆ ಅವರಿಗೊಂದು ಸಾದವಾಕಾಶ ದೊರೆಯಿತು. ಅಂದಿನ ಅನೇಕರು ಮುಂದೊಂದು ದಿನ ಇದರ ದುಷ್ಪರಿಣಾಮದ ಬಗ್ಗೆ ಹೆಚ್ಚಿಗೆ ತಲೆಕೊಡಿಸಿಕೊಳ್ಳದ ಕಾರಣ ಮತ್ತೆ ಕೋಮು ಗಲಭೆಗೆ ನಾಂಧಿ ಹಾಡುತ್ತಿದೆ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆದ ಮೇಲೆ ಇಲ್ಲಿನ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿದ್ದರೇ ಇಂದು ಭಾರತ ಶಾಂತವಾಗಿ ಇರುತ್ತಿತ್ತೇನು? ಅಂದು ಇದ್ದವರು ಸಹೋದರ ಸಂಬಂಧದಿಂದ ಇರುವದರಿಂದ ಹೊಂದಿಕೊಳ್ಳಲು ಯಾವದೇ ಸಮಸ್ಸ್ಯೆ ಇರಲಿಲ್ಲ. ಅತ್ತ ಕಡೆ ಪಾಕಿಸ್ತಾನದಲ್ಲಿ ಹಿಂದೂಗಳ ಜೀವನ ಅಯೋಮಯವಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಕ್ಷೀಣಿಸಿದೆ. ಆದರೆ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಬೃಹದಾಕಾರವಾಗಿ ಬೆಳೆದಿದೆ. ಇದರ ಅರ್ಥ ಭಾರತದಲ್ಲಿ ಮುಸ್ಲಿಮರು ಉತ್ಕೃಷ್ಟ ಮಟ್ಟದ ಜೀವನ ಹೊಂದಿದ್ದಾರೆ.
ರಾಜ್ಯದಲ್ಲಿ ಹಿಜಾಬು ಸದ್ದು ಜೋರಾಗಿದೆ. ನ್ಯಾಯಾಲಯ ಮಧ್ಯಂತರ ಆದೇಶ ಕೊಟ್ಟರೂ ಪಾಲಿಸದ ಮನಸ್ಥಿತಿಯವರು ನಮ್ಮ ಜೊತೆ ಇದ್ದಾರೆ ಎಂದು ನಂಬುವುದು ಕಷ್ಟ. ಒಂದು ಅರ್ಥಮಾಡಿಕೊಳಬೇಕು ಕೆಲಯೊಂದು ಶಾಲೆಯಲ್ಲಿ ಹಿಜಾಬು ಹಾಕುತ್ತಿದ್ದರು,ಕೆಲಯೊಂದು ಶಾಲೆಗಳಲ್ಲಿ ಹಿಜಾಬು ಹಾಕದೆ ಶಾಲೆಗೇ ಬರುತ್ತಿದ್ದರು. ಆದರೆ ಇಂದು ಯಾವ ಶಾಲೆಯಲ್ಲಿ ಹಿಜಾಬು ಧರಿಸದೆ ಬರುತ್ತಿದ್ದವರು, ಯಾವದೋ ಕಾರಣಕ್ಕೆ ಹಿಜಾಬು ಧರಿಸಿ ಬರುವುದನ್ನು ನೋಡಿ ಇದರ ಹಿಂದಿನ ಶಕ್ತಿಗೆ ತಡೆಯೊಡ್ಡಲು ಮತ್ತೊಂದು ಶಕ್ತಿ ಅಡ್ಡವಾಗಿ ನಿಂತಿತು. ಸಣ್ಣವಾಗಿ ಪ್ರಾರಂಭವಾದ ಕಿಡಿ ಅಂತರಾಷ್ಟ್ರದ ಮಟ್ಟಿಗೆ ಸದ್ದು ಮಾಡುತ್ತಿದೆ. ಇದನ್ನು ಪೋಷಿಸಿ ಬೆಳೆಸುತ್ತಿರುವ ಶಕ್ತಿ ಯಾವುದು?
ಸಣ್ಣದಾಗಿ ಹೊತ್ತಿಕೊಂಡ ಕಿಡಿ ಹೈಕೋರ್ಟ್ ಪ್ರವೇಶ ಮಾಡಿ ಮಧ್ಯಂತರ ಆದೇಶ ಕೊಡುವ ಮಟ್ಟಿಗೆ ಹೋಗಿದೆ ಎಂದರೇ ಭಾರತ ದೇಶದಲ್ಲಿ ಒಂದು ಗುಂಪು ದೇಶದ ವಿರುದ್ಧವಾಗಿ ಹೋಗುತ್ತಿದೆ ಅನಿಸುತ್ತಿದೆ ಅಲ್ವಾ? ಮೊದಲು ಕೆಲವರು ಹಿಜಾಬು ಧರಿಸಿ ಶಾಲೆಗೆ ಹೋಗುತ್ತಿದ್ದರು, ಮತ್ತು ಕೆಲವರು ಹಿಜಾಬು ಹಾಕದೆ ಶಿಕ್ಷಣ ಪಡೆಯುತ್ತಿದ್ದರು. ಆದರೆ ಮತೀಯ ಜನರು ಬೇಕಂತಲೇ ಹುಟ್ಟಿಸಿದ ಕಿಚ್ಚು ಶಾಂತವಾಗಿದ್ದ ಮನಸ್ಸುಗಳಿಗೆ ಬೆಂಕಿ ಹಚ್ಚಿಸಿದೆ. ಯಾವಾಗಲೂ ಹಿಜಾಬು ದರಿಸುತ್ತಿದ್ದವರು ಇಂದು ಹಿಜಾಬು ಧರಿಸದೇ ಹೋಗಬೇಕು. ಕೋರ್ಟ್ ಆದೇಶ ಪಾಲಿಸಲೇಬೇಕು. ಮತ್ತೊಂದು ಕಡೆ ಹಿಂದೂಗಳ ಕುಂಕಮ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಹಿಂದುಸ್ತಾನದಲ್ಲಿ ಕುಂಕುಮದ ಬಗ್ಗೆ ಪ್ರಶ್ನೆ ಎತ್ತಿದ ಮೇಲೆ ಸುಮ್ನೆ ಕುಳಿತರೇ ಮುಂದೊಂದು ದಿನ ಮತ್ತೆ ಮತೀಯ ಜನರು ಧರ್ಮದ ಆಧಾರದ ಮೇಲೆ ಮತ್ತೊಂದು ದೇಶವೇ ಕೇಳುತ್ತಾರೆ ಎಂದು ಪ್ರತಾಪ ಸಿಂಹ ಟ್ವಿಟ್ ಮಾಡಿದ್ದರು.
ಮುಖ್ಯವಾದ ವಿಚಾರ ಹಿಜಾಬು ಶಾಲೆಯಲ್ಲಿ ಧರಿಸಬೇಡಿ ಎಂದು ಹೇಳಿದ್ದು. ದೇಶದಲ್ಲಿ ಹಿಜಾಬು ನಿಷೇದ ಮಾಡಿಲ್ಲ. ಇವತ್ತಿಗೂ ಭಾರತ ಜಾತ್ಯತೀತ ರಾಷ್ಟ್ರ ,ನಿಮಗೆ ಬೇಕಾದ ಬಟ್ಟೆಗಳನ್ನು ಹಾಕಿಕೊಳ್ಳಿಲಿಕ್ಕೆ ಯಾವದೇ ಅಭ್ಯಂತರವಿಲ್ಲ. ಶಿಕ್ಷಣಗಿಂತ ನಮಗೆ ಹಿಜಾಬು ಮುಖ್ಯ ಎನ್ನುವ ಜನರಿಗೆ ಕಡಿಮೆ ಏನಿಲ್ಲ. ಇದರ ಮಧ್ಯೆ ಎಷ್ಟೋ ಜನರು ಕೋರ್ಟ್ ಆದೇಶ ಪಾಲಿಸೋಣ ಎಂದು ತಿಳಿವಳಿಕೆ ಕೊಡುತ್ತಿದ್ದಾರೆ. ಮತ್ತು ಹಿಜಾಬು ಕೇವಲ ಶಾಲೆಯಲ್ಲಿ ಮಾತ್ರ ನಿಷೇದ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ವಿಚಾರಣೆ ನಡೆಯುತ್ತಿದೆ. ಆದರೆ ಹಿಜಾಬು ವಿಷಯ ಭಾರತೀಯರಲ್ಲಿ ಒಂದು ಸಂದೇಶ ರವಾನೆ ಮಾಡಿದೆ ಎಂದರೆ ತಪ್ಪಾಗಲಾರದು. ಹಿಂದೂಗಳಿದ್ದ ಭಾರತದಲ್ಲಿ ನಡೆಯುತ್ತಿರುವ ಇಂದಿನ ಬೆಳೆವಣಿಗೆ ಹಿಂದುಗಳನ್ನು ನಿದ್ದೆಯಿಂದ ಏಳುವಂತೆ ಮಾಡಿದೆ. ದೇಶದಲ್ಲಿ ಇದ್ದರೇ ಮಾತ್ರ ಸಾಲದು ದೇಶಾಭಿಮಾನ ಇರದೇ ಹೋದರೇ ದೇಶವನ್ನು ಸದೃಢವಾಗಿ ಕಟ್ಟುವುದು ಅಸಾಧ್ಯ ಎಂದು ಹಿಂದೂಗಳಿಗೆ ಅನಿಸುತ್ತಿದೆ ಎಂದು ಅನೇಕರು ಮಾಧ್ಯಮದಲ್ಲಿ ತಮ್ಮ ಅನಿಸಿಕೆಯನ್ನು ಹೇಳುತ್ತಿದ್ದಾರೆ.
೨೦೧೪ರ ನಂತರ ದೇಶದಲ್ಲಿ ಯಾವದೇ ಬಾಂಬ್ ಬ್ಲಾಸ್ಟ್ ಮಾಡಿದ ಉಧಾಹರಣೆ ಇಲ್ಲ. ಸೈನಿಕರ ಮೇಲೆ ಮಾಡಿದ ದಾಳಿಗೆ ಭಯಾನಕ ಪ್ರತಿದಾಳಿಗೆ ವೈರಿಗಳು ಮುಚ್ಚುಕೊಂಡು ಕುಳಿತಿವೆ. ಹೊರಗಿನಿಂದ ಆಕ್ರಮಣ ಮಾಡುವ ಸಾಮರ್ಥ್ಯ ಇಲ್ಲದೆ ಹೋದಾಗ ವೈರಿಗಳು ಒಳಗಿನ ವೈರಿಗಳನ್ನು ಗುರುತಿಸಿ ದೇಶದಲ್ಲಿ ಒಡಕು ಮೂಡಿಸಲು ನಡೆಯುತ್ತಿರುವ ಪ್ರಯತ್ನ. ಮುಗ್ದ ಜನರನ್ನು ಉಪಯೋಗಿಸಿಕೊಂಡು ಮನಸ್ಸನ್ನು ಹೊಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ. ಮುಗ್ದ ಜನರಿಗೆ ಇದರ ಅರಿವು ಬಾರದೆ ಹೋದರೆ ಆಗುವ ನಷ್ಟ ಯಾರಿಗೆ ಗೊತ್ತಾ? ೧೯೪೭ರಲ್ಲಿ ದೇಶ ವಿಭಜನೆವಾದಾಗ ಭಾರತದಲ್ಲೇ ಇರುತ್ತೇವೆ ಎಂದು ಆಯ್ಕೆ ಮಾಡಿಕೊಂಡು ಸಹೋದರತ್ವದಿಂದ ಜೀವನ ಮಾಡಿದ್ದವರು ಹಿರಿಯರು ಇವತ್ತು ಇಂದಿನ ಕೆಲವುರು ಜಿಹಾದಿಗಳ ಬ್ರೈನ್ ವಾಶಗೆ ಬಲಿಯಾಗಿ ದೇಶದಲ್ಲಿ ಕೋಮುಗಲಭೆಗೆ ನಾಂಧಿ ಹಾಡುತಿದ್ದಾರೆ. ಇದು ಸಾಮಾನ್ಯ ಜನ ಗಮನಿಸಬೇಕು. ಇವರ ದುರಾಲೋಚನೆ ಗ್ರಹಿಸಿ ಇದಕ್ಕೆ ಅಡೆತಡೆ ಹಾಕದೆ ಹೋದರೆ ಇನ್ನಷ್ಟು ಮನಸ್ಸುಗಳು ಒಡೆಯುವ ಭೀತಿ ಇದೆ.
Categories: Articles
