news

ಗಾಣಿಗ ಅಭಿವೃದ್ಧಿ ನಿಗಮ ಮುಖ್ಯಮಂತ್ರಿ ಭೇಟಿ ಆದ ಮಾತ್ರಕ್ಕೆ ಆಗುವದಿಲ್ಲ. ಸಮುದಾಯ ಒಗ್ಗಟ್ಟಾದಾಗ ಮಾತ್ರ ಸರ್ಕಾರಕ್ಕೆ ಕಿವಿ ಕೇಳಿಸುತ್ತೆ!

ಸುಮಾರು ವರ್ಷಗಳ ಗಾಣಿಗರ ಕೂಗು ನಮಗೊಂದು ಅಭಿವೃದ್ಧಿ ನಿಗಮ ಮಾಡಿ. ಗಾಣಿಗ ಸಮುದಾಯದ ಅನೇಕ ಸ್ವಾಮೀಜಿಗಳು ಅದರಲ್ಲಿ ವನಶ್ರೀ ಸಂಸ್ಥಾನ ಮಠದ ಜಯದೇವ ಸ್ವಾಮಿಗಳು, ಇಂದಿನ ಜಯಬಸವ ಸ್ವಾಮೀಜಿಗಳು, ಕಲ್ಲಿನಾಥ್ ಸ್ವಾಮಿಗಳು ಅವರ ಅವಿರತ ಪ್ರಯತ್ನ ನಿರಂತರವಾಗಿ ಸಾಗಿದೆ. ಇದರ ಜೊತೆ ಸಮುದಾಯದ ಮಹನೀಯರು , ಸಾಮಾನ್ಯ ಜನರು ಯಡಿಯೂರಪ್ಪನವರ ಸರ್ಕಾರ ಬಂದಾಗ ಖಂಡಿತ ಆಗುತ್ತೆ ಎಂಬ ಕನಸು ಕಂಡಿದ್ದರು. ಕಷ್ಟಪಟ್ಟು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮಗೊಂದು ನಿಗಮ ಮಾಡಿ ಎಂದು ಅರ್ಜಿ ಕೊಟ್ಟರೂ ಇನ್ನು ನಿಗಮದ ಬಗ್ಗೆ ಒಂದು ಮಾತು ಸಹ ಆಡಿಲ್ಲ. ಕಾರಣ ಒಗ್ಗಟ್ಟಿನ ಕೊರೆತೆ.

ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ಮಾಡಿದಾಗ ಸರ್ಕಾರದ ಪ್ರತಿನಿಧಿ ಬಂದು ಮತ್ತೊಮ್ಮೆ ಅರ್ಜಿ ತಗೆದೆಕೊಂಡು ಹೋಗಿ ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ. ಆದರೆ ಸಮುದಾಯದ ಕೂಗು ಮಾತ್ರ ನಿಂತಿಲ್ಲ. ಸಮುದಾಯದ ಕೂಗು ಮತ್ತೊಮ್ಮೆ ಒಗ್ಗಟ್ಟಿನಿಂದ ಕೇಳಿಯೇ ಜಯಬಸವ ಸ್ವಾಮೀಜಿ ಮತ್ತು ಕಲ್ಲಿನಾಥ್ ಸ್ವಾಮೀಜಿಯವರ ನೇತೃತ್ವದಲ್ಲಿ ನಮ್ಮ ಜಮಖಂಡಿಯ ಯುವ ಶಾಸಕರಾದ ಆನಂದ ನ್ಯಾಮಗೌಡ ಮತ್ತು ರಮೇಶ್ ಭೂಸನೂರ್ ನಿಯೋಗದಲ್ಲಿ ಇದ್ದು ಮತ್ತೊಮ್ಮೆ ಅರ್ಜಿ ಕೊಟ್ಟು ಬಂದಿದ್ದಾರೆ. ಶಿವರಾಜ್ ಸಜ್ಜನ್, ಮಲ್ಲಿಕಾರ್ಜುನ ಲೋಣಿ ಮತ್ತು ಜಿ ಯಸ್ ನ್ಯಾಮಗೌಡ ಸಹ ನಿಯೋಗದಲ್ಲಿ ಇದ್ದು ಬೆಂಬಲ ವ್ಯಕ್ತಪಡಿಸಿದ್ದರು.

ಎಲ್ಲ ಸಮಾಜದ ಋಣವನ್ನು ಹೊತ್ತು ಎಲ್ಲ ಸಮುದಾಯಗಳ ಸಲುವಾಗಿ ದುಡಿಯುತ್ತಿರುವ ಜಮಖಂಡಿಯ ಯುವ ಶಾಸಕರಾದ ಆನಂದ ನ್ಯಾಮಗೌಡರು ಗಾಣಿಗ ನಿಗಮದ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿ ಸಮುದಾಯದ ಜನರಿಗೆ ಧ್ವನಿಯಾಗಿದ್ದಾರೆ. ಪ್ರತಿ ಅಧಿವೇಶದಲ್ಲಿ ಯುವ ಶಾಸಕರು ಅಭಿವೃದಿ ಬಗ್ಗೆ ಅನೇಕ ಪ್ರಶ್ನೆಗಳು ಕೇಳಿದ್ದಾರೆ ಮತ್ತು ಸರ್ಕಾರಕ್ಕೆ ನಿಮ್ಮ ಕೆಲಸ ನಿಧಾನಗತಿಯಲ್ಲಿ ಹೋಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಈ ಸಲ ಗಾಣಿಗ ಸಮುದಾಯಾದ ನೆನಗುದಗಿ ಬಿದ್ದಿರುವ ಅಭಿವೃದ್ಧಿ ನಿಗಮದ ಬಗ್ಗೆ ಪ್ರಶ್ನೆ ಮಾಡಿದಾಗ ಸರ್ಕಾರದಿಂದ ನಿರುತ್ಸಾಹದ ಉತ್ತರ ಕೇಳಿ ಸಮುದಾಯಕ್ಕೆ ನೋವಾಗಿದೆ. ಆದರೆ ಶಾಸಕರು ಪ್ರಶ್ನೆ ಕೇಳಿದ್ದಕ್ಕೆ ಸಮದಾಯದಲ್ಲಿ ಹರ್ಷ ಮೂಡಿದೆ ಇದಕ್ಕೆ ದಿನಕರ ಶೆಟ್ಟಿ ಧ್ವನಿ ಗುಡಿಸಿದ್ದು ಒಳ್ಳೆಯ ಬೆಳವಣಿಗೆ.

ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಮಂತ್ರಿಗಳಾದ ಕಾರಜೋಳ್ ಅವರು ಯಾವದೇ ನಿಗಮವನ್ನು ಘೋಷಣೆ ಮಾಡುವುದು ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದು ಬೇಸರ ಮೂಡಿಸಿದೆ. ಯಾಕೆ ಸರ್ಕಾರದ ಮುಂದೆ ಇಲ್ಲ ಎಂಬುದು ಹೇಳಬೇಕಾಗಿತ್ತು? ಇತ್ತೀಚಿಗೆ ೪ ನಿಗಮಗಳನ್ನು ಘೋಷಣೆ ಮಾಡಿದ್ದು ಯಾವ ಆಧಾರದ ಮೇಲೆ ಎಂಬುದು ಸದನಕ್ಕೆ ತಿಳಿಸಿಲ್ಲ. ಉಪಚುನಾವಣೆ ಸಂದರ್ಭದಲ್ಲಿ ಆಗಿದ್ದು ಎಂದು ಎಲ್ಲರಿಗೂ ತಿಳಿದ ವಿಷಯ. ಇದನ್ನು ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಇದರ ಅರ್ಥ ಸಮಾಜದ ಕೂಗನ್ನು ತಿರಸ್ಕಾರ ಮಾಡಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಸಮುದಾಯದಲ್ಲಿ ಇರದ ಒಗ್ಗಟ್ಟು. ಸುಮಾರು ೪೦ ಲಕ್ಷ್ಯ ಜನಸಂಖ್ಯೆ ಇರುವ ಸಮುದಾಯಕ್ಕೆ ಕ್ಯಾರೇ ಎನ್ನದ ಜನಪ್ರತಿನಿಧಿಗಳನ್ನು ಸಮುದಾಯ ಎಚ್ಚರಿಸಬೇಕು. ಎಚ್ಚರಿಸಬೇಕಾದರೆ ಒಗ್ಗಟ್ಟನ್ನು ಪ್ರದರ್ಶನ ಮಾಡಲೇಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಂಬಿ ಹಕ್ಕನ್ನು ಪ್ರತಿಪಾದಿಸಬೇಕು. ಇದನ್ನು ಪಕ್ಷಾತೀತವಾಗಿ ಎದುರಿಸಬೇಕು. ಒಗ್ಗಟ್ಟಿನ ಮಂತ್ರ ಪಠಿಸಿದಾಗ ಮಾತ್ರ ಪಕ್ಷಗಳು ಸಮುದಾಯಾದ ಸಮಸ್ಯೆಯನ್ನು ಕೇಳಿ ಪರಿಹರಿಸುತ್ತವೆ.

Categories: news

Tagged as:

Leave a Reply