ಕೋರ್ಟ್ ಆದೇಶ ಸಂತೋಷ ಪಡುವ ವಿಚಾರವಲ್ಲ ಮತ್ತು ದುಃಖ ಪಡುವ ವಿಚಾರ ಅಲ್ಲವೇ ಅಲ್ಲ. ಶಾಲೆಗಳಲ್ಲಿ ಎಲ್ಲರೂ ಒಂದೇ ಭಾವನೆ ಇರಲಿ ಎಂದು ಕೊಟ್ಟ ಆದೇಶ. ನೀವು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೂಲಭೂತ ಹಕ್ಕನ್ನು ಪ್ರದರ್ಶನ ಮಾಡಬಹದು.
ನಮ್ಮೂರಲ್ಲಿ ಒಬ್ಬ ಸಾವಕಾರ ಇದ್ದ ಅವನಿಗೆ ೨೫ ಎಕರೆ ಜಮೀನಿತ್ತು. ಅವನು ಅದನ್ನು ಒಬ್ಬ ಆಳಿನ ಮೂಲಕ ಉತ್ತಿ ಬಿತ್ತಿಸುತಿದ್ದ. 10 ವರ್ಷಗಳ ಹಿಂದಿನ ಕರಾರಿನ ಪ್ರಕಾರ ಅವನಿಗೆ ೭೦% ಮತ್ತು ಮಾಲಿಕನಿಗೆ ೩೦% ಎಂದು ಅವರಲ್ಲೇ ಹೊಂದಾಣಿಕೆ ಆಗಿತ್ತು. ಕೆಲಯೊಮ್ಮೆ ಭೂಮಿ ಸರಿಯಾಗಿ ಬೆಳೆಯದೆ ಇದ್ದಾಗ ಸಾಹುಕಾರ ಅವನಿಗೆ ೫೦% ಕೊಡುತ್ತಿದ್ದ. ಆದರೆ ದುರದೃಷ್ಟ ಮಳೆ ಕೊರೆತೆಯಿಂದ ೨-೩ ವರ್ಷ ಮಳೆನೇ ಆಗಲಿಲ್ಲ ಸಾಹುಕಾರ ಅವನು ನಮ್ಮವನೇ ಎಂದು ೫೦% ಕೊಡುತ್ತ ಹೋದನು. ಮುಂದೆ ಚೆನ್ನಾಗಿ ಬೆಲೆ ಬೆಳೆದಾಗ ಸಾಹುಕಾರ ಈ ವರ್ಷ ೩೦% ಹಿಸಾಬ ತಗೆದುಕೊ ಎಂದರೇ ಆಸಾಮಿ ಅದು ಹೇಗೆ ಸಾಧ್ಯ! ನನಗೆ ೫೦% ಬೇಕೇ ಬೇಕು ಎಂದು ಹಠ ಹಿಡಿದನು.
ಕಾರಣ ಅವನಿಗೆ ತನ್ನ ಭೂಮಿಯ ಪಕ್ಕದ ನೆರೆಹೊರೆಯ ಬಿಡಬೇಡ ೫೦% ಕೇಳು ಕೊಡದೆ ಇದ್ದರೇ ನಾನು ಬಿಟ್ಟು ಹೋಗುತ್ತೇನೆ ಎಂದು ಹೇಳು ಅದಕ್ಕೂ ಬಗ್ಗದೆ ಹೋದರೆ ಪಂಚಾಯತಿ ಮಾಡು ಎಂದು ಹುರಿದುಂಬಿಸಿದನು. ಅದನ್ನೇ ಪಾಪ ಬಾಡಪಾಯಿ ನಂಬಿ ಸಂಘರ್ಷಕ್ಕೆ ಇಳಿದನು. ನ್ಯಾಯಯುತವಾದ ಸಂಘರ್ಷವಿದ್ದರೆ ಖಂಡಿತ ತಪ್ಪಲ್ಲ. ತುಳಿದಿದ್ದು ಅನ್ಯಾಯದ ಹಾದಿ! ಕಡೆಗೂ ಪಂಚಾಯಿತಿಗೆ ಹೋಗಿ ೭೦% ಮತ್ತು ೩೦% ಎಂದು ಊರಿನ ಹಿರಿಯರು ಹೇಳಿದರು ಮತ್ತು ಸಾಹುಕಾರ ನಾನು ನಂಬಿದವನೇ ಹೀಗೆ ಮಾಡಿದ ಎಂದು ಕಳೆದ ೨-೩ ವರ್ಷ ಹೆಚ್ಚಿಗೆ ಕೊಟ್ಟ ೨೦% ಮರಳಿ ಕೊಡಬೇಕು ಮತ್ತು ಇದೆ ಕ್ಷಣ ಮಾಲೀಕರ ಬಿಟ್ಟು ಹೋಗಬೇಕು! ಒಳ್ಳೆಯ ಸಂಬಂಧದಿಂದ ಇದ್ದ ಮಾಲೀಕ ಮತ್ತು ಆಳು ಬೇರೆಯವರ ಮಾತು ಕೇಳಿ ಒಳ್ಳೆಯ ಸಂಬಂಧಕ್ಕೆ ಕೊಳ್ಳೆ ಇಟ್ಟುಕೊಂಡ ಮನುಷ್ಯನಿಗೆ ಜ್ಞಾನೋದಯವಾದರೂ, ಕೇಳುವರು ಯಾರು ಸಂಬಂಧವೇ ಕಡಿದಾಗ!
ಇಲ್ಲೂ ಹಾಗೆ ಆಗಿದೆ ಎಷ್ಟೋ ಶಾಲೆಗಳಲ್ಲಿ ಕೆಲವರು ಹಿಜಾಬ್ ಧರಿಸಿ ಹೋಗುತ್ತಿದ್ದರು . ಇನ್ನು ಕೆಲವು ಕಡೆ ಹಿಜಾಬ್ ಧರಿಸದೇ ಹೋಗುತ್ತಿದ್ದರು. ಶಾಲೆಯಲ್ಲಿ ಒಳ್ಳೆಯ ವಾತಾವರಣ ಇತ್ತು. ಭೇದ ಭಾವ ಇಲ್ಲದೆ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ಯಾವಾಗ ಒಂದು ಸಂಘಟನೆ ಕೆಲವು ವಿದ್ಯಾರ್ಥಿಗಳ ತಲೆಗೆ ಹುಳ ಬಿಟ್ಟು ಆಟ ಶುರು ಇಟ್ಟಿಕೊಂಡರೋ ಇತ್ತ ಕಡೆ ಹಿಂದೂಗಳಿಗೂ ಇದೊಂದು ಆಟ ಎಂದು ತಿಳಿದಾಗ ಕೇಸರಿ ಶಾಲು ಬಂತು. ಯಾವ ಶಾಲೆಯಲ್ಲಿ ಹಿಜಾಬ್ ಸಮಸ್ಯೆ ಇತ್ತೋ ಅದೇ ಶಾಲೆಯಲ್ಲಿ ಅದೇ ವಿದ್ಯಾರ್ಥಿನಿಯರು ಯಾವತ್ತೂ ಹಿಜಾಬ್ ಧರಿಸಿ ಬರುತ್ತಿರಲಿಲ್ಲ. ಸಂಘಟನೆ ತುಷ್ಟಿಕರಣ ಮಾಡಬೇಕು ಎಂಬ ಉದ್ದೇಶಕ್ಕೆ ಮುಗ್ದ ಶಾಲೆಯ ಮಕ್ಕಳನ್ನು ಉಪಯೋಗಿಸಕೊಂಡು ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದರು. ರಾಜ್ಯಕ್ಕೆ ಸೀಮಿತವಾಗದೆ ಅಂತಾರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡು ಹೋಗಿ ದೇಶದ ಮಾನ ತಗೆದರು. ಸರ್ಕಾರ ಶಿಕ್ಷಣದಲ್ಲಿ ಧರ್ಮ ಬೇಡವೆಂದಾಗ ಕೋರ್ಟಿಗೆ ಹೋಗಿ ಅದರ ಫಲವನ್ನು ಪಡೆದರು. ಆದರೆ ಇಲ್ಲಿ ಒಳ್ಳೆಯ ಸಂಬಂಧದಿಂದ ಇದ್ದ ವಿದ್ಯಾರ್ಥಿಗಳ ಮನಸ್ಸುಗಳನ್ನು ಒಡೆದರು. ಮುಗ್ದ ವಿದ್ಯಾರ್ಥಿಗಳಿಗೆ ತಮ್ಮ ತಪ್ಪಿನ ಅರಿವು ಗೊತ್ತಾದರೂ ಏನೂ ಮಾಡದ ಸಂದರ್ಭ!
ಸುಪ್ರೀಂ ಕೋರ್ಟ್ಗೆ ಹೋಗುವ ಅವಕಾಶ ಇದೆ. ಆದರೆ ಅಲ್ಲಿಯ ವರೆಗೆ ಆದೇಶವನನು ಪಾಲಿಸಲೇಬೇಕು. ಮುಂದೆ ಇಂಥಹ ಘಟನೆಗಳನ್ನು ತಡೆಯುವುದು ದೇಶಪ್ರೇಮಿಗಳಿಗೆ ಮಾತ್ರ ಸಾಧ್ಯ!
Categories: news
