news

ಬಳ್ಳೊಳ್ಳಿಯಲ್ಲಿ ದಿನಬಳಕೆಯ ನೀರಿಗಾಗಿ ಹಾಹಾಕಾರ! ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಪತ್ರ ಚಳುವಳಿ?

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ದಿನ ಬಳಕೆಯ ನೀರಿಗಾಗಿ ಹೋರಾಟ! ಸಚಿವರಾದ ಈಶ್ವರಪ್ಪ ವಿಧಾನಸಭೆಯಲ್ಲಿ ತಮ್ಮ ಇಲಾಖೆಯ ಸಾಧನೆಯನ್ನು ಹೇಳಿಕೊಳ್ಳುತ್ತಾರೆ. ಅವರು ತಮ್ಮ ಇಲಾಖೆಯಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಕೆಳಹಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ದಿನ ನಿತ್ಯದ ಕೆಲಸಗಳಿಗೆ ನೀರೇ ಸಿಗುವದಿಲ್ಲ ಎಂದರೆ ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬ ಪ್ರಶ್ನೆ ಬರದೇ ಇರದು.

ಬಳ್ಳೊಳ್ಳಿಯ ಜನರು ಇಂದು ಪಂಚಾಯತಿಗೆ ಹೋಗಿ ತಮ್ಮ ಸಮಸ್ಯೆ ಹೇಳಬೇಕಂದರೆ ಕಚೇರಿಯಲ್ಲಿ ಯಾವದೇ ಅಧಿಕಾರಿ ಇಲ್ಲ!

ನೀರಿನ ಒತ್ತಡ ಹೇಗಿದೆ ನೋಡಿ?ಇಡೀ ದಿವಸ ಒಂದು ಕೊಡ ಬರಲ್ಲ!

ರೈತರು, ದಿನಗೂಲಿ ಮಾಡುವವರು ಮತ್ತು ಕೆಲವೇ ಕೆಲವು ಶ್ರೀಮಂತರು ಇರುವ ಹಳ್ಳಿಯಲ್ಲಿ ಶ್ರೀಮಂತರು ಹೇಗೋ ದುಡ್ಡಿನಿಂದ ನೀರನ್ನು ತಂದುಕೊಳ್ಳುತ್ತಾರೆ. ಆದರೆ ಬಡವರು ಮತ್ತು ರೈತರ ಪಾಡು ಹೇಳುವವರ್ಯಾರು? ಎರಡು ಕೊಡಕ್ಕೆ ೨ ಘಂಟೆ ನಿಲ್ಲಬೇಕು ಎಂದರೆ ಅವರ ಕಷ್ಟ ಅರ್ಥಮಾಡಿಕೊಳ್ಳಿ.

ಬಳ್ಳೊಳ್ಳಿಯ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಸುಮಾರು ಮೂವತ್ತು ವರ್ಷಗಳ ಹಿಂದೆ ಒಂದು ಇಂಚಿನ ಪೈಪಿನ ಮೂಲಕ ಮಿನಿಮಂ ಚಾರ್ಜ್ ಮೂಲಕ ಕೆಲವೇ ಕೆಲವು ಜನರಿಗೆ ನಲ್ಲಿಯ ಕನೆಕ್ಷನ್ ಕೊಟ್ಟಿದ್ದರು. ಅಂದು ಪ್ರತಿದಿವಸ ನೀರು ಬಿಡುತ್ತಿದ್ದರು. ಆದರೆ ಇಂದು ಊರೆಲ್ಲ ನಲ್ಲಿಯ ಕನೆಕ್ಷನ್ ತಗೆದ್ಕೊಂಡಿದ್ದಾರೆ ಆದರೆ ನೀರು ಬರುವ ಪೈಪ ಮಾತ್ರ ಬದಲಾವಣೆ ಆಗಿಲ್ಲ.

ಒಂದು ಇಂಚಿನ ಪೈಪಿನ ಮೂಲಕ ಕಿರು ಬೆರಳಿನ ರೀತಿ ನೀರು ಬರುತ್ತದೆ. ನೀರಿನ ಒತ್ತಡ ಕಡಿಮೆ ಇರುವದರಿಂದ ಜನರು ದುಡ್ಡು ಖರ್ಚು ಮಾಡಿ ಮೋಟಾರ್ ತಗೆದುಕೊಂಡು ಅದಕ್ಕೆ ವಿದ್ಯುತ್ ಬಿಲ್ ಕಟ್ಟಿ ಒಂದಿಷ್ಟು ನೀರನ್ನು ಪಡೆಯಬೇಕು. ನೀರಿನ ಒತ್ತಡ ಸರಿ ಇದ್ದರೇ ಯಾರು ಮೋಟಾರ್ ಹಚ್ಚುವ ಅವಷ್ಯಕತೆ ಇಲ್ಲವೇ ಇಲ್ಲ. ಮೊದಲು ಬರುವ ನೀರು ಸರಿಯಾಗಿ ಪ್ರತಿದಿವಸ ಮತ್ತು ಹೆಚ್ಚಿನೆ ಪೈಪು ಅಳವಡಿಸಿದರೆ ಜನರ ನೀರಿನ ಸಮಸ್ಯೆ ಬಗೆಹರಿಯುತ್ತೆ.

ಕಳೆದ ವರ್ಷ ಪಚಾಯತಿ ಅಧಿಕಾರಿಯಾಗಿದ್ದ ಬಿರಾದಾರ ಮತ್ತು ಇಒ ಆಗಿದ್ದ ಅಜೂರ್ ಅವರ ಗಮನಕ್ಕೆ ತಂದು ನಾಲ್ಕು ದಿವಸಕ್ಕೊಮ್ಮೆ ನೀರಿನ ವ್ಯವಸ್ಥೆ ಆಗಿತ್ತು. ಅದು ರಾಜ್ಯದ ಮುಖ್ಯಮಂತ್ರಿಗಳ ಕಚೇರಿ ಮೂಲಕ ಫೋನಾಯಿಸಿದ ಮೇಲೆ ಸರಿಹೋಗಿತ್ತು. ಮತ್ತೆ ಅದೇ ಸಮಸ್ಯೆ ಜನರಿಗೆ ಕಾಡುತ್ತಿದೆ. ಪಂಚಾಯತಿ ಅಧ್ಯಕ್ಷರು ಮತ್ತು ಆಯ್ಕೆಯಾಗಿ ಬಂದ ಸದಸ್ಯರು ಏನು ಮಾಡುತ್ತಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆ? ಇವರು ಹೀಗೆ ಕಣ್ಣು ಮುಚ್ಚಿ ಕುಳಿತರೆ ಜನರು ಇವರಿಗೆ ಪಾಠ ಕಲಿಸುತ್ತಾರೆ ಎಂಬ ಸತ್ಯ ಇವರ ಅರಿವಿಗೆ ಬರಬೇಕು.

ಇಂದು ಇಂಡಿಯ ಇಒ ಸುನಿಲ ಮದ್ದಿನ ಅವರಿಗೆ ಫೋನ್ ಮಾಡಿ ಸಮಸ್ಯೆಯ ಬಗ್ಗೆ ಹೇಳಿದಾಗ ಇದು ನನ್ನ ಗಮನಕ್ಕೂ ಬಂದಿದೆ ನಾಳೆ ಎಂದರೆ ದಿನಾಂಕ 25 ಮಾರ್ಚ್ 2022ಕ್ಕೆ ಸ್ವತಃ ನಾನೇ ಇಂಜಿನಿಯರ್ ಜೊತೆ ಬಳ್ಳೊಳ್ಳಿಗೆ ಹೋಗಿ ಸಮಸ್ಯೆಗೆ ಪರಿಹಾರ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕಿಂತ ಮುಂಚೆ ಊರಿನ ಸದಸ್ಯರಾದ ಮಹಾದೇವ ಹಿರೇಕುರಬೂರ ಮತ್ತು ಗಜಕೋಶ ಅವರ ಗಮನಕ್ಕೂ ತಂದಿದೆ.

ಒಂದೆರಡು ದಿವಸ ಇಂಡಿಯ ಇಒ ಸುನಿಲ್ ಮದ್ದಿನ ಅವರಿಗೆ ಕಾಯೋಣ. ಅವರು ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆ ಎಂದು ಅಲ್ಲಿನ ಜನರ ಅಭಿಪ್ರಾಯ.

ಒಂದು ವೇಳೆ ಪರಸ್ಥಿತಿ ಹೀಗೆ ಮುಂದೆವರೆದರೇ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರದ ಮೂಲಕ ನಮ್ಮ ಸಮಸ್ಯೆ ಹೇಳುತ್ತೇವೆ ಎಂದರು. ಇದಕ್ಕೂ ಬಗ್ಗದೆ ಹೋದರೆ ನಮ್ಮ ಮೇಲೆ ಕೇಸ್ ಆದರೂ ಪರವಾಗಿಲ್ಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ಗಮನ ಸೆಳೆಯೋಣ!

Categories: news

Leave a Reply