Articles

ರಾಜ್ಯದ ವಿಧಾನಸಭೆ ಚುನಾವಣೆಯ ದಿಕ್ಕು ಉಲ್ಟಾ ಪಲ್ಟಾ! ಬಿಜೆಪಿ ಮೇಲುಗೈ ಸಾಧಿಸುತ್ತಿದೆಯಾ?

ಸಂಕಿಪ್ತ ವರದಿ:
ಕರೋನ ಮತ್ತು ಒಳಜಗಳಗಳಿಂದ ನಲುಗಿದ್ದ ಬಿಜೆಪಿ. ಇದರ ಲಾಭ ಕಾಂಗ್ರೇಸ್ ಪಡೆದಿತ್ತು. ಐದು ರಾಜ್ಯಗಳ ಚುನಾವಣೆ ಮತ್ತು ಭಾವನಾತ್ಮಕ ವಿಷಯದ ಜೊತೆ ಸಿದ್ದರಾಮಯ್ಯನವರ ಹೇಳಿಕೆಗಳು ಬಿಜೆಪಿಗೆ ಹೇರಳವಾದ ಆಮ್ಲಜನಕ ಕೊಟ್ಟಿದೆ.
ಸಂಪುಟದಲ್ಲಿ ವಿಜಯೇಂದ್ರ ಮತ್ತು ಬಿಜೆಪಿಯ ಯುವ ಶಾಸಕರಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಬಲ್ಲರು.

ಯೋಗಿಯ ಚಮತ್ಕಾರ – ೩೭ ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಎರಡೆನೆಯ ಬಾರಿ ಮತ್ತೆ ಸರ್ಕಾರ ರಚನೆ ಮಾಡಿದ್ದು ಇತಿಹಾಸ! ಬುಲ್ಡೋಜರ್ ಬಾಬಾ ಎಂದು ಮರುನಾಮಕರಣಗೊಂಡ ಯೋಗಿಯ ಗೆಲುವು ದೇಶದಲ್ಲಿ ಬಿಜೆಪಿಗೆ ಆಮ್ಲಜನಿಕ ದೊರಕಿದೆ. ಕೆಲಯೊಂದು ರಾಜ್ಯಗಳಲ್ಲಿ ಸ್ಥಳೀಯ ನಾಯಕರ ಎಡವಟ್ಟಿನಿಂದ ಪಾತಾಳಕ್ಕೆ ಕುಸಿಯುತ್ತಿರುವ ಬಿಜೆಪಿಯನ್ನು ಉತ್ತರ ಪ್ರದೇಶದ ಗೆಲುವು ಮತ್ತೊಂದು ಅವಕಾಶ ಕೊಟ್ಟಿದೆ. ನಾಥ್ ಪಂಥದ ಸ್ವಾಮಿಗಳಾದ ಯೋಗಿಯವರು ಪ್ರಖರ ಹಿಂದುತ್ವವಾದಿ ಮತ್ತು ಪ್ರಾಮಾಣಿಕ ರಾಜಕಾರಣಿ. ಯೋಗಿ ಹೇಗೆ ಎಂದರೇ ಹಿಂದೊಮ್ಮೆ ಗೋವಾದಲ್ಲಿ ಮೋದಿಯವರು ನೋಟ ಬ್ಯಾನ ಆದ ನಂತರ ಹೇಗೆ ದೊಡ್ಡ ದೊಡ್ಡ ಕಳ್ಳರು ನನ್ನ ಹಿಂದೆ ಬಿದ್ದಿದ್ದಾರೆ ಎಂದರೆ ನನ್ನ ಜೀವವನ್ನೇ ಪಡೆಯುಲು ಹೇಸದ ಗಿರಾಕಿಗಳು. ಅದಕ್ಕೆಲ್ಲ ಹೆದರುವ ಮನುಷ್ಯ ನಾನಲ್ಲ. ನಾನು ಪಕೀರ್ ಎರಡು ಜೊತೆ ಬಟ್ಟೆ ತಗೊಂಡು ಹೋಗ್ತಾ ಇರೋದೇ ಅಷ್ಟೇ!

ಯೋಗಿಯವರ ರಾಜಕಾರಣವು ಹೀಗೆ ಇದೆ. ಯೋಗಿಯವರ ಅಭಿವೃದ್ಧಿ ಕೆಲಸಗಳು, ರಾಜ್ಯದಲ್ಲಿ ಇದ್ದ ಗುಂಡಾಗಿರಿ ಮತ್ತು ಹಿಂದುತ್ವ ಅದರ ಜೊತೆಗೆ ಕೇಂದ್ರ ಕೊಟ್ಟ ಯೋಜನೆಗಳು ಮತ್ತೊಮ್ಮೆ ಅಧಿಕಾರ ಹಿಡಿಯಲು ಕಾರಣವಾಗಿದ್ದು. ಉತ್ತರ ಪ್ರದೇಶದ ಗೆಲುವು ನಮ್ಮ ರಾಜ್ಯದ ಮೇಲೆ ಎಷ್ಟು ಪರಿಣಾಮ ಬೀರಬಲ್ಲದು? ಖಂಡಿತ ತಕ್ಕ ಮಟ್ಟಿಗೆ ಪರಿಣಾಮ ಬೀರಬಲ್ಲದು ಕಾರಣ ಎರಡು ರಾಜ್ಯದ ಕೆಮಿಸ್ಟ್ರಿ ಸೇಮ್ ಟು ಸೇಮ್

ಸಿದ್ದರಾಮಯ್ಯನವರ ಹೇಳಿಕೆಗಳು.

ಮೊನ್ನೆ ಮೈಸೂರಲ್ಲಿ ಸಿದ್ದರಾಮನಗುಂಡಿಯಲ್ಲಿ ಭರ್ಜರಿ ದೇವರ ಹರಕೆಯ ಕುಣಿತದಲ್ಲಿ ಭಾಗವಹಸಿ ಸಿದ್ದರಾಮಯ್ಯನವರು ಆಡಿದ ಮಾತು ಕೇಳಿ ಎಲ್ಲ ಸ್ವಾಮೀಜಿಗಳು ಸಿದ್ದುವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಜಾಬವನ್ನು ಸ್ವಾಮೀಜಿಗಳ ತಲೆಯ ಮೇಲಿನ ಬಟ್ಟೆಗೆ ಹೋಲಿಸಿ ಮತ್ತೆ ಮತ್ತೆ ತಮ್ಮ ಅಪ್ರಬುದ್ಧ ಮಾತುಗಳಿಂದ ಕಾಂಗ್ರೇಸ್ ನೆಲಕಚ್ಚುವಂತೆ ಮಾಡುತ್ತಿದ್ದಾರೆ. ಇದು ಒಂದೇ ಅಲ್ಲ ಸುಮಾರು ಬಾರಿ ಬಾಲಿಶ ಹೇಳಿಕೆ ಕೊಟ್ಟು ತಮ್ಮ ರಾಜಕೀಯ ಅನುಭವಕ್ಕೆ ತಾವೇ ವೈರಿಯಾಗಿದ್ದಾರೆ.

ಇತಿಹಾಸದಲ್ಲಿ ಹಿರಣ್ಯಕಶಪು ಸಾಕ್ಷಾತ ಬ್ರಹ್ಮನ ಆಶೀರ್ವಾದ ಹೊಂದಿದ್ದ ಅವನು ಜಗತ್ತಿನಲ್ಲೇ ನಾನೇ ಶ್ರೇಷ್ಟ ಮತ್ತು ನನ್ನಷ್ಟು ಶೂರ, ಧೀರ ಯಾರು ಇಲ್ಲವೆಂದು ಹರನಿಂದ ನಾಶವಾಗಿದ್ದು ನಾವು ಕೇಳಿದ್ದೇವೆ. ಅಂತಹದೇ ಒಂದು ಸ್ವಾರಸ್ಯಕರವಾದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ಕನ್ನಡ ವ್ಯಾಕರಣ ಬಗ್ಗೆ ಸಿದ್ದರಾಮಯ್ಯನವರು ಮಾತನಾಡುತ್ತ ಈ ಸಭೆಯಲ್ಲಿ ನನ್ನಷ್ಟು ಕನ್ನಡ ಜ್ಞಾನ ಯಾರು ಹೊಂದಿಲ್ಲ ಮತ್ತು ನನ್ನ ಹಾಗೆ ಯಾರಿಗೂ ಮಾತನಾಡುವದಕ್ಕೆ ಬರುವದಿಲ್ಲ ಎಂದು ಸ್ವಯಂ ಘೋಷಿಸಿಕೊಂಡಿದ್ದು, ಸಿದ್ದರಾಮಯ್ಯನವರು ಮೊದಲಿನ ಸಿದ್ದರಾಮಯ್ಯ ಆಗಿ ಉಳಿದಿಲ್ಲ. ಇಂತಹ ಮಾತುಗಳು ಜನರಿಗೆ ಹಿಡಿಸುತ್ತಿವೆಯಾ? ಸಿದ್ದು ಸರ್ ಅಂಕೆ ಸಂಖ್ಯೆಗಳ ಮೂಲಕ ಎಲ್ಲರ ಗಮನ ಸೆಳೆಯುವ ಸಂಸದ ಪಟು. ಇತ್ತೀಚಿನ ಅವರ ಮಾತುಗಳನ್ನು ವಿರೋಧಿಗಳು ಹಿಡಿದು ಹಿಸುಕಿ ಹಾಕಿ ಅವರನ್ನು ಸಪ್ಪೆ ಮಾಡುತ್ತಿದ್ದಾರೆ.

ಭರದಲ್ಲಿ ಇವೆ ಭಾವನಾತ್ಮಕ ವಿಷಯಗಳು.

ರಾಜಕೀಯ ಪಂಡಿತರು ಲೆಕ್ಕದ ಪ್ರಕಾರ ಕಾಂಗ್ರೇಸ್ ಮೇಕೆದಾಟು ಪಾದಯಾತ್ರೆ ಮಾಡಬೇಕು ಮತ್ತು ಅದು ನಿಮಗೆ ಮುಂದಿನ ಚುನಾವಣೆಯಲ್ಲಿ ಕೈಹಿಡಿಯುತ್ತೆ ಎಂದು ಹೇಳಿದ್ದರು. ಡಿಕೆ ಸುರೇಶ ಅವರ ನೇತೃತ್ವದಲ್ಲಿ ಎರಡು ಬಾರಿ ಮಾಡಿ ಒಂದಿಷ್ಟು ಮೈಲೇಜ್ ತಗೆದುಕೊಳ್ಳಲು ಪ್ರಪ್ರಯತ್ನ ಮಾಡಿ ಒಂದಿಷ್ಟು ಸಫಲರಾಗಿದ್ದರು. ಸಂಪೂರ್ಣ ಲಾಭ ಪಡೆಯಲು ಕರೋನ ಮತ್ತು ಜೆಡಿಸ್ ಪಕ್ಷ ಅಡಚಣೆ ಮಾಡಿತು. ಇದನ್ನು ಹಿಂದಿಕ್ಕಿ ಮತ್ತೆ ಪುಟಿದೇಳಲು ಮಾಡಿದ್ದ ಯೋಜನಗೆಳು ನೆಲಕಚ್ಚಲು ಕಾರಣವಾಗಿದ್ದು ಹಿಜಾಬ್ , ಐದು ರಾಜ್ಯಗಳ ಚುನಾವಣೆ! ಉಡುಪಿಯಲ್ಲಿ ಮುಸ್ಲಿಂ ಸಂಘಟನೆ ಮಾಡಿದ ಒಂದು ಪ್ರಮಾದ ಬಿಜೆಪಿಗೆ ವರಧಾನವಾಗಿದೆ ಮತ್ತು ಕಾಂಗ್ರೇಸ್ ಪಕ್ಷವು ಸರಿಯಾದ ನಿರ್ಧಾರ ತಗೆದುಕೊಳ್ಳದೆ ಸಂಕಷ್ಟಕ್ಕೆ ಸಿಲುಕಿದೆ.

ಕೆಲವು ತಿಂಗಳ ಹಿಂದೆ ಕರೋನ ಹೊಡೆತ ಮತ್ತು ಒಳಜಗಳಗಳಿಂದ ನಲುಗಿ ಹೋಗಿದ್ದ ಬಿಜೆಪಿಗೆ ಹುಮ್ಮಸ್ಸು ಬಂದಿದೆ. ಭಾವನಾತ್ಮಕ ಸಂಘರ್ಷಗಳು ಜನರನ್ನುಮತ್ತೆ ಬಿಜೆಪಿಗೆ ಒಲವು ತೋರುವಂತೆ ಮಾಡಿದೆ. ಅದರಲ್ಲಿ ೨೦೧೯ ರ ಚುನಾವಣೆಗಿಂತ ಮುಂಚೆ ಬಿಡುಗಡೆಗೊಂಡ ಸರ್ಜಿಕಲ್ ಸ್ಟ್ರೈಕ್ ಚಿತ್ರ ಯುವಕರನನ್ನು ಸೆಳೆದು ದೇಶದ ಬಗ್ಗೆ ಅಭಿಮಾನ ಬರುವಂತೆ ಮಾಡಿ ಮೋದಿಯವರಿಗೆ ಮತ್ತೊಮ್ಮೆ ಮತಹಾಕಲು ಪ್ರೇರೇಪಿಸಿದ್ದು ಸತ್ಯ! ಹಾಗೆ ೧೯೯೦ರಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರ ಪಂಡಿತ ಅವರ ಮೇಲೆ ನಡೆದ ಅನ್ಯಾಯವನ್ನು “ಕಾಶ್ಮೀರ ಫೈಲ್ಸ್” ಚಿತ್ರದ ಮೂಲಕ ತೋರಿಸಿದ್ದಾರೆ . ಇದನ್ನು ನೋಡಿದ ಜನ ಕಾಂಗ್ರೇಸ್ ಮೇಲೆ ಕೋಪಗೊಂಡಿದ್ದಾರೆ. ಖುರ್ಚಿಗಾಗಿ ತಮ್ಮ ಜನರನ್ನು ಕೊಲ್ಲುವುದಕ್ಕೆ ಹೇಸುವದಿಲ್ಲ ಎಂದು ಮನವರಿಕೆ ಆಗಿದೆ. ಮತ್ತೊಂದು ಕಡೆ ಸಿ ಟಿ ರವಿಯವರು ಎಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ ಅಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಆದರೆ ಎಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿ ಇದೆ ಅಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ. ಹೀಗೆ ಅನೇಕ ಭಾವನಾತ್ಮಕ ವಿಷಯಗಳು ಹಿಂದುಗಳನ್ನು ಒಟ್ಟಾಗಿಸಿದೆ.

ವಿಜಯೇಂದ್ರ ಮತ್ತು ಯುವಕರು ಸಂಪುಟಕ್ಕೆ

ರಾಜ್ಯದಲ್ಲಿ ನಿಷ್ಕ್ರಿಯ ಮಂತ್ರಿಗಳನ್ನು ಕೈಬಿಟ್ಟು ಯುವಕರನ್ನು ಸಂಪುಟಕ್ಕೆ ಸೇರಿಸಿಕೊಂಡು ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗೆ ವೇಗ ಕೊಡಬೇಕು ಎಂದು ಕೇಂದ್ರ ಹೈಕಮಾಂಡ್ ಮನಸ್ಸು ಮಾಡುತ್ತಿದೆ. ರಾಜ್ಯದಲ್ಲಿ ಮಾಸ್ ಲೀಡರ್ ಯಡಿಯೂರಪ್ಪನವರ ಇಮೇಜ್ ಮತ್ತು ಜನಪ್ರಿಯತೆಯನ್ನು ಪಕ್ಷಕ್ಕೆ ಸಿಗಬೇಕಾದರೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂಬ ಕೆಲವರ ವಾದ. ಇದರ ಜೊತೆಗೆ ಇನ್ನು ಅನೇಕ ಯುವಕರು ಪಕ್ಷದಲ್ಲಿ ಇದ್ದಾರೆ ಅವರಿಗೆ ಅಧಿಕಾರ ಕೊಟ್ಟು ಪಕ್ಷಕ್ಕಾಗಿ ದುಡಿಸಿಕೊಳ್ಳುವ ವಿಚಾರ ನಡೆಯುತ್ತಿದೆ. ಪಕ್ಷಕ್ಕೆ ಯಾರಿಂದ ಅನುಕೂಲವಾಗುತ್ತೆ ಎಂದು ಬೇಗ ನಿರ್ಧಾರಮಾಡಿ ಯುವಕರನ್ನು ಮುಂದೆ ಬಿಟ್ಟರೇ ಖಂಡಿತ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗುವುದು ಎಂದು ಬಿಜೆಪಿಯ ಒಳಗಿನ ಮಾತು. ಬಿಜೆಪಿ ಪಕ್ಷದಲ್ಲೂ ಸಹಿತ ಗುಂಪುಗಳು ಇವೆ. ಒಂದು ಗುಂಪು ವಿಜಯೇಂದ್ರ ಅವರಿಗೆ ಮಂತ್ರಿ ಕೊಟ್ಟರೆ ಅವರ ನಾಯಕತ್ವ ಪ್ರಬಲವಾಗಿ ಬೆಳೆದರೆ ನಾವು ಯಾವತ್ತೂ ಮುಖ್ಯಮಂತ್ರಿ ಆಗುವದಿಲ್ಲ ಎಂಬ ರಾಜಕೀಯ ಲೆಕ್ಕಾಚಾರ ಇಟ್ಟುಕೊಂಡು ವಿರೋಧ ಮಾಡುತ್ತಿದ್ದಾರೆ.

ಕಾಂಗ್ರೇಸ್ ಸುಮ್ಮನೆ ಕುಳಿತಿಲ್ಲ, ಭಾವನಾತ್ಮಕ ವಿಷಯ, ಸಿದ್ದರಾಮಯ್ಯನವರ ಹೇಳಿಕೆಗಳು, ಸಿದ್ದು ಮತ್ತು ಡಿಕೆ ಗುಂಪು ಹೀಗೆ ಅನೇಕ ವಿಷಯಗಳನ್ನು ಕಾಂಗ್ರೇಸ್ ಬೈಠಕ್ ಮೂಲಕ ಬಿಜೆಪಿಗೆ ಕೌಂಟರ್ ಕೊಡಲು ಸಜ್ಜಾಗುತ್ತಿದೆ. ಆದರೆ ಸದ್ಯದ ವಾತಾವರಣ ಬಿಜೆಪಿಗೆ ಪೂರಕವಾಗಿದೆ ಆದರೆ ಯುಡಿಯೂರಪ್ಪನವರ ರಾಜಕೀಯ ದಾಳಗಳು ಹೇಗೆ ಮತ್ತು ಯಾರಿಗೆ ಲಾಭ ತಂದುಕೊಡುವು ಎಂದು ಕಾದು ನೋಡಬೇಕು. ೬ ತಿಂಗಳ ಹಿಂದೆ ಇದ್ದ ಕಾಂಗ್ರೇಸ್ ಗಾಳಿ ಇಂದು ಬಿಜೆಪಿ ಗಾಳಿಯಾಗಿದೆ. ಉಲ್ಟಾ ಪಲ್ಟಾ ಆಗಿದೆ. ಇನ್ನೂ ಒಂದು ವರ್ಷ ಇದೆ. ಮತ್ತೆ ಅದಲು ಬದಲಾದರೂ ಆಶ್ಚರ್ಯವಿಲ್ಲ.

Categories: Articles

Tagged as: ,

Leave a Reply