
ದೆಹಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ:-
ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯ ಚರ್ಚೆಯಲ್ಲಿ ನಾನು ಸ್ವತಃ ದೆಹಲಿಗೆ ಹೋಗಿದ್ದೆ. ಅಲ್ಲಿನ ಶಾಲೆಗಳ ಸ್ಥಿತಿ ನೋಡಿ ತುಂಬಾ ಸಂತೋಷ ಪಟ್ಟೆ. ಕೇಜ್ರಿವಾಲ್ ಸರ್ಕಾರ ತಗೆದುಕೊಂಡ ದಿಟ್ಟ ನಿರ್ಧಾರಗಳಿಂದ ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡ, ಪ್ರಯೋಗ ಶಾಲೆಗಳು ಅತ್ಯುನ್ನತ ಮಟ್ಟದಲ್ಲಿ ಇವೆ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಇದ್ದರೇ ಖಂಡಿತ ನಾವು ನಮ್ಮ ರಾಜ್ಯದಲ್ಲೂ ಸಾಧಿಸಬಹುದು ಎಂದು ಹೇಳಿದ್ದರು.

ಸದ್ಯ ನಾವು ಬಜೆಟದಲ್ಲಿ ಸುಮಾರು ೨೫ ಸಾವಿರ ಕೋಟಿ ಪ್ರಾಥಮಿಕ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದೇವೆ. ಅದರ ಫಲಿತಾಂಶ ಮಾತ್ರ ಶೂನ್ಯ! ಕೇವಲ ಬಡವರ ಮಕ್ಕಳು ಮಾತ್ರ ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದುತಿದ್ದಾರೆ. ಅಲ್ಲಿಯೂ ಸರಿಯಾದ ಸ್ತಿತಿವಿಲ್ಲ. ನಾವ್ಯಾಕೆ ದೆಹಲಿ ಸರ್ಕಾರ ಕೈಗೊಂಡ ದಿಟ್ಟ ಹೆಜ್ಜೆಗಳನ್ನು ಇಟ್ಟು ಇನ್ನೊಂದಿಷ್ಟು ಖರ್ಚು ಆದರೂ ಸರಿ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟದ ಯೋಚನೆ ಮಾಡಬಹುದು ಎಂದಿದ್ದರು. ಇದಕ್ಕೆ ಧ್ವನಿಗೂಡಿಸಿದ ಶಿಕ್ಷಣ ಮಂತ್ರಿ ನಾಗೇಶ್ ಅವರು ನಮಗೂ ಅದರ ಕಾಳಜಿ ಇದೆ ಮತ್ತು ಈಗಾಗಲೇ ಅನೇಕ ಮಾಡೆಲ್ ಶಾಲೆಗಳು ನಮ್ಮಲ್ಲೂ ಇವೆ ಮತ್ತು ಇನ್ನೂಳಿದ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿವ ಯೋಜನೆ ನಮ್ಮ ಮುಂದಿದೆ .
ಶಿಕ್ಷಣ ಖಾತೆ ಯಾರಿಗೂ ಬೇಡ :-
ಮಂತ್ರಿ ಮಂಡಲ ರಚಿಸುವಾಗ ಎಲ್ಲರೂ ಕೇಳುವುದು ಹಣಕಾಸು, ಇಂಧನ, ಕಂದಾಯ ಮತ್ತು ಲೋಕೋಪಯೋಗಿ ಖಾತೆಗಳು. ಇವರಿಗೆಲ್ಲ ಇರುವುದು ಒಂದೇ ಗುರಿ ಪ್ರತಿಶತ(%) ರೂಪದಲ್ಲಿ ಹಣ ಮಾಡುವುದು. ಹಿಂದೆ ಒಂದು ಕಾಲವಿತ್ತು ನಜಿರ್ ಸಾಹೇಬ ಎಂಬ ಮಾಜಿ ಸಚಿವರು ನನಗೆ ಹಳ್ಳಿಗರ ಜೀವನ ಮಟ್ಟವನ್ನು ಸುಧಾರಿಸಬೇಕು ಅದಕ್ಕೆ ಗ್ರಾಮೀಣಾಭಿವೃದ್ಧಿ ಖಾತೆಬೇಕು ಎಂದು ಕೇಳಿ ಪಡೆದಿದ್ದರು. ಅದೊಂದು ಯಾರಿಗೂ ಬೇಡವಾದ ಖಾತೆಯಾಗಿತ್ತು ಆದರೂ ಕೇವಲ ಜನರಿಗಾಗಿ ಕೆಲಸ ಮಾಡಿಸಬೇಕು ಎಂದು ಖಾತೆ ಪಡೆದು ಹಳ್ಳಿಯ ಜನರಿಗೆ ನೀರು ಒದಗಿಸಿ ನಜೀರ್ ಸಾಹೇಬ್ ಹೋಗಿ ನೀರ ಸಾಹೇಬ ಆಗಿದ್ದರು. ಇಂದು ಅಂಥಹ ವ್ಯಕ್ತಿಗಳು ಸಿಗುವುದು ಅಪರೂಪ ಸಿಕ್ಕರೂ ಅವರಿಗೆ ಬೆಂಬಲವಾಗಿ ನಿಂತು ಅವರ ಗುರಿಗಳನ್ನು ಸಾಧಿಸುವದಕ್ಕೆ ಹೆಗಲ ಕೊಡುವ ಮುಖ್ಯಮಂತ್ರಿ ಬೇಕಲ್ಲ?
ಕುಮಾರಸ್ವಾಮಿ ಆಂಗ್ಲ ಶಾಲೆಗಳಿಗೆ ಅನುಮತಿ ಕೊಟ್ಟಿದ್ದರು:-
ಸಮಾಜದ ಏಳಿಗೆಗಾಗಿ ದುಡಿಯಬೇಕು ಎಂದು ಮನಸ್ಸು ಮಾಡಿದರೆ ಕೇವಲ ಎರಡೇ ವರ್ಷದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಪರಿವರ್ತನೆ ಮಾಡುವುದಕ್ಕೆ ಸಾಧ್ಯ! ಈಗಿರುವ ಶಿಕ್ಷಕರು ಮೆರಿಟ್ ಆದರದ ಮೇಲೆ ಆಯ್ಕೆಯಾಗಿದ್ದಾರೆ. ಅವರ ಕೌಶಲ್ಯ ಬಗ್ಗೆ ಯಾರಿಗೂ ಸಂಶಯವಿಲ್ಲ ಕಾರಣ ಅವರೆಲ್ಲರೂ ಆಯ್ಕೆಯಾಗಿದ್ದು ಮೆರಿಟ್ ಆದರದ ಮೇಲೆ. ಸದ್ಯ ನಮಗಿರುವುದು ಮಾಧ್ಯಮ !
ಯಾವ ಮಾಧ್ಯಮ ಇಂದಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅದೇ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಬರಬೇಕು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕೆ ಕೈಹಾಕಿದ್ದರು. ಅವರು ಇದರ ವಿಸ್ಕೃತ ವರದಿಯನ್ನು ಅಧ್ಯಯನ ಮಾಡಿ ೧೦೦೦ ಆಂಗ್ಲ ಶಾಲೆಗಳನ್ನು ತೆರಯಲು ಆದೇಶ ಮಾಡಿದ್ದರು. ಆದರೂ ಅನೇಕರು ವಿರೋಧಮಾಡಿದ್ದರು. ವಿರೋಧ ಮಾಡಿದವರ ಮಕ್ಕಳು ಆಂಗ್ಲ ಮಾಧ್ಯಮದಲ್ಲೇ ಓದುತ್ತಿದ್ದರು. ಕೇವಲ ಮಾಧ್ಯಮ ಬದಲಾವಣೆ ಆದರೆ ಉನ್ನತ ಮಟ್ಟದ ಶಾಲೆ ಅಂತಲ್ಲ. ಇದರ ಜೊತೆ ಶಾಲೆಗಳ ಕಟ್ಟಡ, ಶಾಲೆಗಳ ಪ್ರಯೋಗ ಶಾಲೆಗಳು, ಗಣಕ ಯಂತ್ರದ ಮೂಲಕ ಪಾಠ ಹೇಳುವುದು. ಇದರಿಂದ ಬೇಗನೆ ಮಾಹಿತಿಗಳು ವಿದ್ಯಾರ್ಥಿಗಳಿಗೆ ಕೊಡಬಹುದು. ಶಿಕ್ಷರಿಗೆ ಉನ್ನತ ಮಟ್ಟದ ತರಬೇತಿ. ಶಾಲೆಗಲ್ಲಿ ಪಾಠದ ಜೊತೆ ಆಟದ , ಕರಕುಶಲ ಬಗ್ಗೆ ಮಾಹಿತಿ. ಇಂಥಹ ಕೆಲಸಗಳು ಮಾಡಿದರೆ ನಾಯಕನ ಹೆಜ್ಜೆ ಗುರುತಗಳು ಕಾಣಬಹುದು.
ಮಕ್ಕಳ ಸೃಜನಶೀಲತೆ ಮತ್ತು ದೇಶಾಭಿಮಾನ :-
ಅಂಗೈಯಲ್ಲಿ ಜಗತ್ತಿನ ಮಾಹಿತಿ ಪಡೆದುಕೊಳ್ಳಬಹುದು ಅಂದರೇ ಎಲ್ಲರಿಗೂ ಅಂತರ್ಜಾಲದ ಬಗ್ಗೆ ಮಾಹಿತಿ ಇದೆ ಸುಮಾರು ಹಳ್ಳಿಗಳಲ್ಲಿ ಯೂಟ್ಯೂಬ್ , ಫೇಸ್ಬುಕ್, ಸೋಶಿಯಲ್ ಮೀಡಿಯಾ ಉಪಯೋಗ ಮಾಡುತ್ತಿದ್ದಾರೆ. ಇದರ ಲಿಮಿಟೆಡ್ ಉಪಯೋಗ ತಗೆದುಕೊಂಡು ಇಂದಿನ ಯುಗಕ್ಕೆ ಮಕ್ಕಳನ್ನು ಸಜ್ಜುಗೊಳಿಸಬೇಕು. ಮಕ್ಕಳಿಗೆ ದೇಶಾಭಿಮಾನ ಮತ್ತು ನಮ್ಮ ದೇಶದ ಇತಿಹಾಸ ಮತ್ತು ದೇಶದ ಅಭಿವೃದ್ಧಿ ಎಷ್ಟು ಮುಖ್ಯ ಎನ್ನವುದು ಶಾಲೆಗಳಲ್ಲೇ ಕಲಿಸಬೇಕು. ನಾವೆಲ್ಲ ಬೇರೆ ಬೇರೆ ಧರ್ಮದವರಾಗಿದ್ದರೂ ದೇಶ ಮೊದಲು ಎಂಬ ಭಾವನೆ ಶಾಲೆಗಳಲ್ಲೇ ತಿಳಿಹೇಳಬೇಕು. ಇದನ್ನೇ ಯೂರೋಪಿನ ಮತ್ತು ಜಗತ್ತಿನ ಶಕ್ತಿಶಾಲಿ ಅಮೇರಿಕಾ ಮಾಡುವುದು. ಅದು ಬಿಡಿ ಇವತ್ತಿನ ಆರ್ಥಿಕತೆಯಲ್ಲಿ ಮುನ್ನುಗ್ಗಿತ್ತಿರುವ ಚೈನಾ ನೋಡಿ ನಾವು ಕಲಿಯುವುದು ಬಹಳಷ್ಟು ಇದೆ.
ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಒಂದು ವಿಷಯವಾಗಿ ಆದರೂ ಬಹುಬೇಗನೆ ಕಲಿಸಬೇಕು. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು ಅದರ ಜೊತೆ ಆಂಗ್ಲ ಭಾಷೆಯಾಗಿ ಕಲಿತು ನಮ್ಮ ಮಕ್ಕಳನ್ನು ಅಂತರಾಷ್ಟ್ರಿಯ ಮಟ್ಟದಲ್ಲಿ ಸಾಧನೆಮಾಡಲು ತಯಾರಿ ಮಾಡಬೇಕು. ಸದ್ಯ ಖಾಸಗಿ ಶಾಲೆಗಲ್ಲಿ ಇವೆಲ್ಲವೂ ನಮ್ಮ ದೇಶದಲ್ಲೇ ಕಾಣುತ್ತೇವೆ. ಅದನ್ನೇ ನಾವು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಬಹುದು. ಡಿಗ್ರಿ ಮುಗಿದರೂ ದೇಶದ ಮತ್ತು ದೇಶದ ಆರ್ಥಿಕತೆ ಬಗ್ಗೆ ಜ್ಞಾನವೇ ಇರುವದಿಲ್ಲ. ದೇಶ ಸದೃಢವಿದ್ದರೇ ಮಾತ್ರ ನಾವೆಲ್ಲ!
ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು:-
ಸರ್ಕಾರದ ಜೊತೆ ನಾಯಕರಿಗೂ ಸಮಾಜದ ಬಗ್ಗೆ ಮತ್ತು ದೇಶದ ಕಾಳಜಿಬೇಕು. ಕೇವಲ ರಾಜಕೀಯಕ್ಕೆ ಬಂದು ಹೆಸರು ಮತ್ತು ದುಡ್ಡು ಮಾಡುವುದನ್ನು ಬಿಟ್ಟು ನಾನೇನು ಮಾಡಬಲ್ಲೆನು ಎಂದು ಯೋಚಿಸಬೇಕು. ಸದ್ಯ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಜನಪ್ರಿಯ ಯೋಜನೆಗಳಿಗೆ ಬಹಳ ಮಹತ್ವ. ಅಕ್ಕಿ ಕೊಡುವುದು, ಕುಕ್ಕರ್ ಕೊಡುವುದು, ಅಡಿಗೆ ಸಾಮಾನುಗಳು ಕೊಡುವುದು , ಟಿವಿ ಕೊಡುವುದು ಹೀಗೆ ಅನೇಕ ಹತ್ತಾರು ಜನಪ್ರಿಯ ಯೋಜನೆಕೊಟ್ಟು ಮರಳಿ ಗೆಲ್ಲವುದಕ್ಕೆ ಪ್ರಯತ್ನ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈಗ ಜನರ ಚಿಂತನೆ ಬದಲಾಗಿದೆ ಜನರು ಇಂಥಹ ಕಣ್ಣೊರೆಸುವ ತಂತ್ರಕ್ಕೆ ಮರಳಾಗುವದಿಲ್ಲ ಎಂದು ೨೦೧೩ರ ವಿಧಾನಸಭೆಯ ಚುನಾವಣೆ ಸಾಕ್ಷಿ!
೭೦ ವರ್ಷಗಳ ಕಾಲ ಕಾಲಹರಣ ಮಾಡಿ ಜನರನ್ನು ಮೋಸಮಾಡಿದ್ದು ಸಾಕು ಇನ್ನಾದರೂ ದೇಶದ, ರಾಜ್ಯದ ಮತ್ತು ರಾಜ್ಯದ ಜನರ ಬಗ್ಗೆ ಯೋಚನೆ ಮಾಡಿದರೆ ರಾಜಕೀಯದಲ್ಲಿ ಇದ್ದುದಕ್ಕೆ ಜೀವನ ಸಾರ್ಥಕ! ಹೊಸ ಪಕ್ಷಗಳು ಕೇವಲ ಅಭಿವೃದ್ಧಿ ಬಗ್ಗೆ ಹೇಳುತ್ತಾರೆ. ಪ್ರಜಾಕೀಯ ಸಿದ್ದಾಂತ , ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಿದ್ದಾಂತ ಪ್ರಾದೇಶಿಕ, ಪ್ರಾಮಾಣಿಕ, ಮತ್ತು ಜನರ ಕಲ್ಯಾಣ!


ಇದನ್ನೇ ಮೊನ್ನೆ ಬಿಜೆಪಿಯ ಲೆಹರ್ ಸಿಂಗ್ ವಿಧಾನಪರಿಷತ್ತಿನಲ್ಲಿ ನಾವು ಮೂರೂ ಪಕ್ಷಗಳು ಆತ್ಮಸಾಕ್ಷಿಯಾಗಿ ಕೆಲಸ ಮಾಡದೆ ಹೋದರೆ ಹೊಸ ಪಕ್ಷಗಳು ರಾಜ್ಯವನ್ನು ಆಳುತ್ತವೆ. ಇದಕ್ಕೆ ತಾಜಾ ಉಧಾಹರಣೆ ಪಂಜಾಬ್ . ೨೦೨೩ರಲ್ಲಿ ಆಯ್ಕೆಯಾಗಿ ಬಂದ ಸರ್ಕಾರದ ಚಿಂತನೆ ಅಭಿವೃದ್ಧಿ ಕಡೆ ಇರಬೇಕೆ ಹೊರೆತು % ಮೇಲೆ ಕೆಲಸ ಮಾಡುವುದು ಮುಂದೆ ನಡೆಯುದಿಲ್ಲ. ಭ್ರಷ್ಟಾಚಾರ ಎಂದಿಗೂ ಸಹಿಸುವದಿಲ್ಲ ಎಂದು ಜನರು ಹೇಳುವಕ್ಕಿಂತ ಮುಂಚೆ ಪಕ್ಷಗಳೇ ತಮ್ಮ ನಿಲುವನ್ನು ಬದಲಿಸಬೇಕು. ಶಿಕ್ಷಣ ಒಂದೇ ಅಲ್ಲ ಎಲ್ಲಾ ಖಾತೆಗಳು ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಮುಕ್ತವಾದರೇ ಮಾತ್ರ ದೇಶದ ಭವಿಷ್ಯ!
Categories: news
