news

ಮಾಜಿ ಪೊಲೀಸ್ ಅಧಿಕಾರಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ! ಭಾಸ್ಕರ ರಾವ್ ರಾಜಕೀಯ ಪ್ರವೇಶ.

ಇತ್ತೀಚಿಕೆ ಅಧಿಕಾರಿಗಳು ಸ್ವಯಂ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಸೇರುತ್ತಿದ್ದಾರೆ. ಕರ್ನಾಟಕದ ಸಿಂಗಂ ಎಂದೇ ಗುರುತಿಸಿಕೊಂಡಿದ್ದ ಕೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬೆಂಗಳೂರು ಕಮಿಷಿನರ್ ಆಗಿದ್ದ ಭಾಸ್ಕರ ರಾವ್ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಹಾಗೆ ನೋಡಿದರೆ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಥಳೀಯ ನಾಯಕರ ಕೊರೆತೆ ಇದೆ. ಪಂಜಾಬದಲ್ಲಿ ಗೆದ್ದ ಆಮ್ ಆದ್ಮಿ ಪಕ್ಷಕ್ಕೆ ಅಲ್ಲಿ ಸ್ಥಳೀಯ ನಾಯಕರ/ರಾಜಕಾರಣಿಗಳ ಬಲ ಪಕ್ಷಕ್ಕೆ ಇತ್ತು. ರಾಜ್ಯದಲ್ಲೂ ಅದರಲ್ಲೂ ಬೆಂಗಳೂರು ಮಹಾನಗರ ಪಾಲಿಕೆ ಒಲಿಸಿಕೊಳ್ಳಲು ಯೋಜನೆ ರೂಪಿಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮಾಜಿ ಪೊಲೀಸ್ ಅಧಿಕಾರಿ ಸೇರ್ಪಡೆ ಖಂಡಿತ ಪಕ್ಷದಲ್ಲಿ ಬದಲಾವಣೆ ಗಾಳಿ ಬೀಸುವ ಮುನ್ಸೂಚನೆಯಾ ?

ದೇಶದ ಯುವಕರು ೨೦೧೯ರಲ್ಲಿ ಅಭೂತಪೂರ್ವ ಜಯವನ್ನು ದೇಶದ ಪ್ರಧಾನಮಂತ್ರಿ ಮೋದಿಯವರ ಮಡಿಲಿಗೆ ಹಾಕಿದ್ದರು ಕಾರಣ ಮೋದಿ ಪ್ರಾಮಾಣಿಕ, ಕೆಲಸಗಾರ ಮತ್ತು ರಾಷ್ಟ್ರೀಯವಾದಿ. ಎಲ್ಲರ ಬಾಯಲ್ಲೂ ಒಂದೇ ಮಾತು ಕಳೆದ ಐದು ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪವಿಲ್ಲ. ಸೇಮ್ ಟು ಸೇಮ್ ದೆಹಲಿಯಲ್ಲಿ ಅಧಿಕಾರ ಮಾಡುತ್ತಿರುವ ಕೇಜ್ರಿವಾಲ್ ಮೇಲೂ ಯಾವದೇ ಭ್ರಷ್ಟಾಚಾರ ಆರೋಪವಿಲ್ಲ. ಇದರ ಅರ್ಥ ಒಂದು ಪ್ರಾಮಾಣಿಕ ಸರ್ಕಾರ ದೆಹಲಿಯಲ್ಲಿ ಇದೆ. ಯಾವ ಮತದಾರರು ಮೋದಿಯನ್ನು ಹೊಗಳಿ ಲೋಕಸಭೆಯಲ್ಲಿ ಮತವನ್ನು ಹಾಕಿದ್ದಾರೋ ಅದೇ ಮತದಾರರು ವಿಧಾನಸಭೆಯಲ್ಲಿ ಕೇಜ್ರಿವಾಲ್ ಅವರಿಗೆ ಜೈ ಅಂದಿದ್ದಾರೆ. ಒಂದುಂತು ಪಕ್ಕ ಇವತ್ತಿನ ಮತದಾರ ನೋಡುತ್ತಿರುವುದು ಪ್ರಾಮಾಣಿಕ ರಾಜಕಾರಣಿಗಳನ್ನು.

೨೦೨೨ರಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶ ಗೆದ್ದ ಯೋಗಿ ಮತ್ತು ಪಂಜಾಬ ಗೆದ್ದ ಆಮ್ ಆದ್ಮಿ ಪಕ್ಷ. ಇವರೆಡು ಗಮನಿಸಿದರೆ ಒಂದುತು ಸ್ಪಷ್ಟವಾಗಿ ಗೋಚರಿಸುತ್ತದೆ ಅಭಿವೃದ್ಧಿ ಮತ್ತು ಪ್ರಾಮಾಣಿಕತನಕ್ಕೆ ಜನರು ಕೈಹಿಡಿಯುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಜನ ರೋಷಿಹೋಗಿದ್ದಾರೆ. ರಾಜ್ಯದ ಅಧೀನದಲ್ಲಿ ಇರುವ ಯಾವದೇ ಇಲಾಖೆಕೆಗೆ ನೋಡಿದರೆ ಅಲ್ಲಿರುವ ಅಧಿಕಾರಿಗಳು ದನ ಪಿಶಚಿಗಳಿಗಿಂತಲೂ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಕಷ್ಟಪಟ್ಟು ಓದಿ ನೌಕ್ರಿ ಹಿಡಿದು ೧೦೦ಕೋಟಿ, ೧೦೦೦ ಕೋಟಿ ಗಳಿಸುವ ಚಿಂತೆ. ಅದು ಲಂಚ ತಿಂದು! ಕೆಲವೇ ಕೆಲವು ಅಧಿಕಾರಿಗಳು ಇದ್ದಾರೆ , ಅವರು ಪ್ರಾಮಣಿಕತೆಯಿಂದ ಕೆಲಸವೂ ಮಾಡುತ್ತಿದ್ದಾರೆ ಮತ್ತು ರಾಜಕಾರಣಿಗಳಿಗೆ ಭಯವು ಹುಟ್ಟಿಸಿದ್ದಾರೆ.

ಪಕ್ಷ ಸೇರ್ಪಡೆ ಆಗಿರುವ ಮಾಜಿ ಪೊಲೀಸ್ ಅಧಿಕಾರಿಯಿಂದ ರಾಜ್ಯದಲ್ಲಿ ಏನೋನೋ ಆಗಿಬಿಡುತ್ತೆ ಎಂಬ ಭ್ರಮೆಬೇಡ. ಆದರೆ ರಾಜ್ಯದಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ ಎನ್ನುವದಕ್ಕೆ ಇದೊಂದು ತಾಜಾ ಉಧಾಹರಣೆ. ಕೆಲವು ದಿನಗಳ ಹಿಂದೆ ಬಿಜೆಪಿಯ ಲೆಹರ್ ಸಿಂಗ್ ವಿಧಾನಪರಿಷತ್ತಿನಲ್ಲಿ ಮಾತನಾಡುತ್ತಾ “ಮೂರೂ ಪಕ್ಷಗಳು ಹೀಗೆ ಬ್ರಷ್ಟಾಚಾರದಲ್ಲಿ ” ತೊಡಗಿದರೆ ಆಮ್ ಆದ್ಮಿ ಪಕ್ಷಯೋ ಅಥವಾ ಇನ್ನೊಂದು ಪಕ್ಷವು ರಾಜ್ಯದಲ್ಲೂ ಬರುತ್ತದೆ ಎಂದು ಹೇಳಿದ್ದರು. ಮಾಜಿ ಪೊಲೀಸ್ ಅಧಿಕಾರಿಯ ಸೇರ್ಪಡೆ ಇನ್ನೂ ಹಲವರಿಗೆ ರಾಜಕೀಯ ಪ್ರವೇಶದ ಬಗ್ಗೆ ಚಿಂತಿಸಬಹುದು.

ಕೇಂದ್ರದಲ್ಲಿ ಯಾವದೇ ಕಪ್ಪು ಚುಕ್ಕೆ ಇಲ್ಲದೆ ಅಧಿಕಾರ ನಡೆಸುತ್ತಿರುವ ಮೋದಿಯನ್ನು ಸ್ಥಳೀಯ ನಾಯಕರು ಅನುಸರಿಸುತ್ತಿಲ್ಲ. ಅಸ್ಸಾಂ ಮುಖ್ಯಮಂತ್ರಿ, ಯೋಗಿ , ಶಿವರಾಜ್ ಸಿಂಗ್ ಹೀಗೆ ಕೆಲವೇ ಕೆಲವರು ಶುದ್ಧ ಹಸ್ತಗಳನ್ನು ಇಟ್ಟುಕೊಂಡು ಕೆಲಸಮಾಡುತ್ತಿದ್ದಾರೆ. ಸುಮಾರು ಬಿಜೆಪಿ ಬೆಂಬಲಿತ ಅಥವಾ ಬಿಜೆಪಿ ಮುಖ್ಯಮಂತ್ರಿಗಳು , ಮಂತ್ರಿಗಳು ಇನ್ನೂ ಜನರ ದುಡ್ಡನ್ನು ಹೊಡೆಯುದರಲ್ಲೇ ನಿರತರಾಗಿದ್ದಾರೆ. ಮೋದಿ ಹೇಳಿದ ಹಲವು ಪಾಠಗಳು ಇನ್ನೂ ಅವರ ತಲೆಯಲ್ಲಿ ಹೋಗಿಲ್ಲ. ದುಡ್ಡು ತಿಂದು ದುಡ್ಡಿನಿಂದ ಚುನಾವಣೆ ಗೆಲವು ಪಡೆಬಹುದು ಎಂದು ನಂಬಿ ಕುಳಿತ ನಾಯಕರಿಗೆ ಪಂಜಾಬದಲ್ಲಿ ನಾಯಕರು ಸೋತ ರೀತಿ ಇವರಿಗೂ ಬಂದ ಮೇಲೇ ಗೊತ್ತಾಗುತ್ತೆ.

೨೦೧೪ರಲ್ಲಿ ನಡೆದ ಲೋಕಸಭೆಯಲ್ಲಿ ದೇಶದ ಜನ ಮತಹಾಕಿದ್ದು ಪ್ರಾಮಾಣಿಕತೆಗೆ ಮತ್ತು ಅಭಿವೃದ್ಧಿಗೆ. ಮತ್ತದೇ ೨೦೧೯ರಲ್ಲಿ ರಿಪೀಟ್! ೨೦೧೪ರ ನಂತರ ಸೋತ ಕಾಂಗ್ರೇಸ್ ಪಕ್ಷ ತನ್ನಲ್ಲೂ ಬದಲಾವಣೆ ಬೇಕು ಎಂದು ಹೇಳುತ್ತಿದೆ ಆದರೆ ಕಾರ್ಯರೂಪಕ್ಕೆ ಬರುವುದು ವಿಳಂಬವಾದರೆ ಅದರ ಗತಿ ಊಹಿಸುವುದು ಕಷ್ಟ. ದೇಶದಲ್ಲಿ ಅಲ್ಲದೆ ಜಗತ್ತಿನಲ್ಲಿ ಹೆಸರು ಮಾಡಿರುವ ಮೋದಿ ಹೇಳುತ್ತಿರುವ ಪಾಠ ಸಬಕಾ ಸಾಥ್ ಸಬಕಾ ವಿಕಾಸ್, ಮೈ ನಹಿ ಖಾಯೊಂಗ್ , ಖಾನೆ ನಹಿ ದುಂಗಾ ಎಂದು ಹೇಳುತ್ತಿದ್ದರೂ ರಾಜ್ಯ ಮಂತ್ರಿಗಳು ಅದನ್ನು ಕೇಳಿಸಿಕೊಳ್ಳದೆ ಹಳೆ ಚಾಳಿ ಮುಂದುವರೆಸಿದ್ದಾರೆ. ಇವರು ತಿದ್ದಿಕೊಳ್ಳದೇ ಹೋದರೆ ಪಕ್ಷದಲ್ಲಿ ಇರುವ ಪ್ರಾಮಾಣಿಕ ಮಂತ್ರಿಗಳು, ಪ್ರಾಮಾಣಿಕ ಶಾಸಕರು ಬೇರೆಯೊಂದು ಪಕ್ಷಕ್ಕೆ ಜೈ ಎಂದರೇ ಖಂಡಿತ ಇರುವ ಮೂರೂ ಪಕ್ಷಗಳ ಮುಖ ಒಣಗುವುದು ನಿಶ್ಚಿತ.

ರಾಜಕೀಯ ಪ್ರವೇಶ ಮಾಡಿರುವ ಮಾಜಿ ಪೊಲೀಸ್ ಅಧಿಕಾರಿ ಇನ್ನೂ ಹಲವರಿಗೆ ಸ್ಪೂರ್ತಿಯಾಗಲಿ ಮತ್ತು ಅವರು ಪ್ರಾಮಾಣಿಕ ಕೆಲಸ ಮಾಡಿ ಸಮಾಜದಲ್ಲಿ ತೊಡಗಲಿ ಎಂದು ಹಾರೈಸೋಣ.

Categories: news

Tagged as: ,

Leave a Reply