Articles

ಕೆಜಿಫ್ ಕ್ರಾಂತಿ! ವಿಕ್ರಾಂತ್ ರೋಣದ ಅಬ್ಬರ ನೋಡುವ ತವಕ. ಗುಮ್ಮ ಬಂದ ಗುಮ್ಮ ..

Subbaya Naidu

ಸುಬ್ಬಯ್ಯ ನಾಯ್ಡು ನಾಯಕತ್ವದಲ್ಲಿ ೧೯೩೪ರಲ್ಲಿ ಸತಿ ಸುಲೋಚನಾ ಚಿತ್ರದಿಂದ ಪ್ರಾರಂಭವಾದ ಕನ್ನಡ ಚಿತ್ರೋದ್ಯೋಮ ಇಂದು ಹೊಳೆಯುತ್ತಿದೆಯಾ? ಶಾರ್ಟ್ ಆಗಿ ಕೇಳಿದರೇ ಖಂಡಿತ ಹೊಳೆಯುತ್ತಿದೆ, ಡೀಟೇಲ್ ಆಗಿ ಕೇಳಿದರೆ ಇವತ್ತು ಅಲ್ಲ ಮೊದಲಿನಿಂದಲೂ ಹೊಳೆಯುತ್ತಿತ್ತು. ವಜ್ರ ಬೂದಿ ಮುಚ್ಚಿ ಒಳಗಡೆ ಇದ್ದಾಗ ಅದರ ಹೊಳೆಪು ಕಾಣುವದಿಲ್ಲ. ಮೇಲಿನ ಬೂದಿ ಹೋದಾಗ ಮತ್ತೆ ಖಂಡಿತ ವಜ್ರ ಹೊಳೆಯುತ್ತೆ. ಹಾಗೆ ನಮ್ಮ ಸ್ಯಾಂಡಲ್ ವುಡ್ ವಜ್ರ ಇದ್ದ ಹಾಗೆ ಅದರ ಹೊಳಪು ಇದ್ದೆ ಇತ್ತು ಅದು ಕೆಲಯೊಂದು ಬಾರಿ ಮಾತ್ರ ದೇಶದ ಇನ್ನಿತರ ಭಾಷೆಗಳಿಗೆ ಪಸರಿಸಿತ್ತು. ಕನ್ನಡದ ಆರಾಧ್ಯದೈವ ರಾಜಕುಮಾರ ಅವರ ಕೆಲವು ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿದ್ದವು. ಪುಟ್ಟಣ್ಣ ಕಣಗಾಲ್ ಅಂತಹ ನಿರ್ದೇಶಕರ ಹುಟ್ಟಿದ ನಾಡಿದು. ಇವತ್ತಿನ ರಹಮಾನ್ ಅವರ ಗುರು ಇಳಿಯರಾಜ್ ಕನ್ನಡದ ಬಗ್ಗೆ ಅನೇಕ ಬಾರಿ ಒಳ್ಳೆಯ ಮಾತಗಳನ್ನಾಡಿದ್ದಾರೆ. ಶಂಕರನಾಗ್ ಎಂಬ ಗಾರುಡಿಗ ಹುಟ್ಟಿದ್ದೇ ಇದೆ ನಾಡಿನಲ್ಲಿ.

ಮಾಲ್ಗುಡಿ ಡೇಸ್ ದೇಶದಲ್ಲೇ ಹೆಸರು ಮಾಡಿದ್ದು ನಮಗೆಲ್ಲ ಗೊತ್ತಿದೆ. ವಿಷ್ಣುವರ್ಧನ್ ಅವರ ಚಿತ್ರಗಳು ಹಿಂದಿಯಲ್ಲಿ ಬಂದಿವೆ. ಅಂಬರೀಷ್ ಮತ್ತು ರವಿಚಂದ್ರನ್ ಚಿತ್ರರಂಗದ ಸಲುವಾಗಿ ಅವರ ದುಡಿಮೆ ಸಾಕಷ್ಟಿದೆ.

ಇವತ್ತಿನ ಟಾಲೆಂಟೆಡ್ ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವಣ್ಣನ ನಟನೆಗೆ ಇಂದಿಗೂ ಜನ ಬೇಷ ಎನ್ನುತ್ತಾರೆ. ಇದೊಂದು ಮಾಸ್ಟರ್ ಪೀಸ್! ಉಪೇಂದ್ರ ಅಭಿನಯದ ಉಪೇಂದ್ರ, ಏ ಚಿತ್ರಗಳು ಇಡೀ ಜಗತ್ತಿನಲ್ಲೇ ಸಿಗುವದಿಲ್ಲ. ಉಪೇಂದ್ರ ಅವರೊಬ್ಬ ಸ್ಕ್ರೀನ್ ಪ್ಲೇ ಮಾಸ್ಟರ್! ಇವರ ಚಿತ್ರಗಳಿಗೆ ತೆಲಗು ನಿರ್ದೇಶಕರು ಅನೇಕ ಬಾರಿ ಕೊಂಡಾಡಿದ್ದಾರೆ.

ಇಂದಿನ ನಾಯಕನಟರಾದ ಸುದೀಪ್, ದರ್ಶನ, ಗಣೇಶ್ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಮಳೆಯ ಖ್ಯಾತಿಯ ಗಣೇಶ್ ಎಬ್ಬಿಸಿದ ಮುಂಗಾರು ಮಳೆಯ ಬಿರುಗಾಳಿ ಜಗತ್ತಿಗೆ ಹರಡಿತ್ತು. ಅದೇ ತರಹ ಸ್ಯಾಂಡಲ್ ವುಡ್ ಡಿ ಬಾಸ್ ರಾಜ್ಯದಲ್ಲಿ ಎಲ್ಲಿಗೆ ಹೋದರೂ ಅಭಿಮಾನಿಗಳ ದಂಡು ನೋಡಿದರೆ ದಂಗಾಗಿ ಹೋಗುತ್ತೀರಿ. ಅವರ ಚಿತ್ರಗಳಿಗೆ ಭರಪೂರ ಮಾರ್ಕೆಟ್ ಇದೆ. ಚಿತ್ರರಂಗಕ್ಕೆ ಇವರು ಕೊಡುಗೆಯು ಅಪಾರ. ಇನ್ನು ನಮ್ಮ ಪವರ್ ಸ್ಟಾರ್ ಅಪ್ಪು ಅಲ್ಲಲ್ಲ ಅಪ್ಪುವರು! ಆರುವರೆ ಕೋಟಿ ಕನ್ನಡಿಗರ ಹೀರೋ! ಉಪೇಂದ್ರರವರ ಪ್ರಕಾರ ಅಪ್ಪು ದೇವರ ಮಗ. ಜಗ್ಗೇಶ್ ಪ್ರಕಾರ ಇವರಷ್ಟು ಸಾಧನೆ ಮಾಡಿದ ನಟ ಇನೊಬ್ಬ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಪ್ರಕಾರ ರಾಜ್ಯದ ಯಾವದೇ ಚಿಕ್ಕ ಹಳ್ಳಿಗೆ ಹೋಗಿ ಅಪ್ಪು ಫೋಟೋ ಕಾಣಿಸುತ್ತೆ. ಅಂತಹ ಸಾಧಕ ನಮ್ಮ ಅಪ್ಪು. ಇವರ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ವಿಶೇಷವಾದದ್ದು. ಹೀಗೆ ಅನೇಕರು ಕನ್ನಡದ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಮಾಡಿ ತಮ್ಮ ಜೀವನವನ್ನು ಕಟ್ಟಿ ಚಿತ್ರರಂಗವನ್ನು ಬೆಳೆಸಿದ್ದಾರೆ.

ಆದರೆ ಇಂದು ನಮ್ಮ ಚಿತ್ರರಂಗ ಇಡೀ ಜಗತ್ತು ಮಾತನಾಡುವ ಹಾಗೆ ಮಾಡಿದ್ದು ಕೆ ಜಿ ಎಫ್ ಎಂಬ ಅತ್ಯದ್ಭುತ ಚಿತ್ರ ! ಅದು ನಮ್ಮ ಕನ್ನಡದೇ . ಪ್ರಶಾಂತ್ ನೀಲ್ ಎಂಬ ನಿರ್ದೇಶಕ ಹುಟ್ಟಾಕಿದ್ದ ಗೋಲ್ಡ್ ಮೈನಿಂಗ್ ಕಥೆಗೆ ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯಿ ಆಗಿದ್ದು ಯಾವದು ಇದು ಸ್ಯಾಂಡಲ್ ವುಡ್ ಎಂದು ಜಗತ್ತೇ ಕೇಳುತ್ತಿದೆ. ಉಗ್ರಂ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟ ಪ್ರಶಾಂತ್ ಕೂಡಿಕೊಂಡಿದ್ದು ಹೊಂಬಾಳೆ ಸಂಸ್ಥೆಯ ಜೊತೆ. ಅಲ್ಲಿಂದ ಮುಂದೆ ಆಗಿದ್ದು ಇತಿಹಾಸ. ಕೆಜಿಫ್ ಎಲ್ಲರಿಗೂ ಇಷ್ಟವಾಗಿದೆ , ದುಡ್ಡಿನ ಜೊತೆ ಅತಿ ಹೆಚ್ಚು ಜನ ಚಿತ್ರವನ್ನು ನೋಡಿದ್ದಾರೆ. ಹಿಂದಿ ಪ್ರದೇಶದಲ್ಲಿ ೩೦೦ ಕೋಟಿ ಕಮಾಯಿ ಮಾಡಿದ್ದು ಕನಸಿನಲ್ಲಿ ಊಹಿಸಿವುದು ಕಷ್ಟ! ಇಷ್ಟಕ್ಕೆ ನಿಂತಿಲ್ಲ ಇನ್ನೂ ಅತಿ ವೇಗದದಿಂದ ಓಡುತ್ತಿದೆ. ಮತ್ತೆ ಹೀಗೆ ಇನ್ನೂ ಸ್ವಲ್ಪ ದಿವಸ ದುಡ್ಡಿನ ಜೊತೆ ಪ್ರೇಕ್ಷರಿಗೆ ಮನರಂಜನೆ ಕೊಡಲಿ.

ಮೊನ್ನೆ ಬೆಂಗಳೂರನಲ್ಲಿ ಉಪೇಂದ್ರ ಅಭಿನಯದ ಮತ್ತು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರ “R” ಟೈಟಲ್ ಲಾಂಚ್ ಸಂದರ್ಭದಲ್ಲಿ ರಾಮ್ ಗೋಪಾಲ್ ವರ್ಮಾ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿ “ವಿಕ್ರಾಂತ್ ರೋಣದ” ಬಗ್ಗೆ ಇದೊಂದು ನೆಕ್ಸ್ಟ್ ಲೆವೆಲ್ ಚಿತ್ರ ಎಂದು ಟ್ವಿಟ್ ಮಾಡಿದ್ದು ಕನ್ನಡಿಗರಿಗೆ ಹೆಮ್ಮೆ ತಂದಿದೆ. ಕೆಜಿಎಫ್ ಎಂಬ ಚಿತ್ರ ಬಿಡುಗಡೆಯಾಗಿ ಸಂಪೂರ್ಣ ದೇಶವನ್ನು ಆವರಿಸಿ ಮುನ್ನುಗ್ಗುತ್ತಿರುವಾಗ ಮತ್ತೊಂದು ಕನ್ನಡದ ಸಿನಿಮಾ ದೊಡ್ಡ ರೀತಿಯಲ್ಲಿ ಬರುತ್ತಿರುವುದು ಕೇಳಿ ತುಂಬಾ ಖುಷಿಯಾಗಿದೆ. ಇದರ ಒಂದು ಕಾರ್ಯಕ್ರಮ ದುಬೈಯಲ್ಲಿ ಮಾಡಿ ಕನ್ನಡ ಧ್ವಜ ಹಾರಿಸಿ ಬಂದ ಕೀರ್ತಿ ಕಿಚ್ಚರವರಿಗೆ ಸಲ್ಲುತ್ತೆ. ರಂಗಿತರಂಗಿ ಎಂಬ ಚಿತ್ರವನ್ನು ಕನ್ನಡಿಗರಿಗೆ ಕೊಟ್ಟ ಅನೂಪ್ ಬಂಡಾರಿ ಇದರ ಕ್ಯಾಪ್ಟನ್ ಅಪ್ ದಿ ಶಿಪ್. ವಿಕ್ರಾಂತ್ ರೋಣ ಗುಮ್ಮನ ತರಹ ಬಂದು ಗುಮ್ಮುವ ಲಕ್ಷಣಗಳು ಇವೆ. ಕಾರಣ ಅನೇಕ ಖ್ಯಾತನಾಮರು ವಿಕ್ರಾಂತ್ ರೋಣದ ಬಗ್ಗೆ ಒಳ್ಳೆಯ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ದೊಡ್ಡ ಇತಿಹಾಸ ಇದೆ. ಇದನ್ನು ಕಟ್ಟಿದ ಕೀರ್ತಿ ಅನೇಕರಿಗೆ ಸಲ್ಲುತ್ತೆ. ಜೀವನ ಕಟ್ಟಿಕೊಳ್ಳುವದಕ್ಕಾಗಿ ಬಂದು ಇದನ್ನು ಜಬರದಸ್ತಿವಾಗಿ ಕಟ್ಟಿದ ಎಲ್ಲ ಚಿತ್ರರಂಗದವರಿಗೆ ಕನ್ನಡಿಗರ ಪರವಾಗಿ ಒಂದು ಸಲಾಂ ಹೇಳುತ್ತಾ ಮುಂದೆ ಬರುವ ವಿಕ್ರಾಂತ್ ರೋಣ ಕನ್ನಡಿಗರ ಮತ್ತು ಕನ್ನಡ ಚಿತ್ರರಂಗದ ಕೀರ್ತಿಪತಾಕೆ ಹಾರಿಸುತ್ತೆ ಎನ್ನುವದರಲ್ಲಿ ಸಂಶಯವಿಲ್ಲ

Categories: Articles

Tagged as: , ,

Leave a Reply