ನಿಂಬೆಗೆ ಪ್ರಸಿದ್ದಿ ಪಡೆದ ಇಂಡಿಯಲ್ಲಿ ನೇರ ಪೈಪೋಟಿ ಇರುವುದು ಕಾಂಗ್ರೇಸ್ ಮತ್ತು ಬಿಜೆಪಿ ಮಧ್ಯ! ಜೆಡಿಎಸ್ ಕಳೆದ ಬಾರಿ ಉತ್ತಮ ಪೈಪೋಟಿ ಕೊಟ್ಟಿದ್ದು ನಿಜ ಆದರೇ ಅದು ವ್ಯಕ್ತಿ ಮತ್ತು ಒಂದು ಸಮುದಾಯದ ಮತಗಳ ಕ್ರೋಡೀಕರಣ. ಆದರೆ ಇದಕ್ಕಿಂತ ಮುಂಚೆ ಜೆಡಿಎಸ್ ಅಷ್ಟಕ್ಕೇ ಅಷ್ಟೇ! ಮೊಟ್ಟ ಮೊದಲ ಬಾರಿ ಅಂದರೆ ೨೦೦೮ರಲ್ಲಿ ಇಂಡಿಯಲ್ಲಿ ಬಿಜೆಪಿ ಕೀರ್ತಿ ಪತಾಕೆ ಹಾರಿಸಿದ್ದು ಡಾಕ್ಟರ್ ಸಾರ್ವಭೌಮ ಬಗಲಿ. ಸರ್ರನೆ ಬಂದು ಬಿಜೆಪಿ ಟಿಕೆಟ್ ಪಡೆದು ಇಂಡಿಯಲ್ಲಿ ಕೇಸರಿ ಹಾರಿಸಿದ್ದು ಶ್ರೇಯಸ್ಸು ಸಲ್ಲುತ್ತದೆ. ಜನರಿಗೆ ಕೆಲಸ ಮಾಡಿಕೊಟ್ಟು ಜನರಿಗೆ ಹತ್ತಿರವಾಗಿದ್ದರೂ ಪಕ್ಷದ ಶಿಸ್ತನ್ನು ಪಾಲಿಸಿದೆ ನಾಯಕರ ಅವಕೃಪೆಗೆ ಒಳಗಾದರು. ಅವರೊಂದು ವೇಳೆ ಶಿಸ್ತಿನ ಸಿಪಾಯಿಯಾಗಿದ್ದರೇ ಅವರನ್ನು ಸೋಲಿಸುವುದು ಯಾರಿಂದಲೂ ಸಾದ್ಯವಿರಲಿಲ್ಲ. ಜನರ ಮಧ್ಯೆ ಇರಬೇಕಾದವರು ಸ್ವಯಂಕೃತ ಅಪರಾಧದಿಂದ ಮತ್ತೆ ಪಕ್ಷಕ್ಕೆ ಸೇರಿಕೊಳ್ಳುವ ವ್ಯರ್ಥ ಪ್ರಯತ್ನಮಾಡಿದರು. ಏನೆ ಇರಲಿ ಬಿಜೆಪಿಗೆ ಬಲ ಕೊಟ್ಟಿದ್ದು ಡಾಕ್ಟರ್ ಸಾಹೆಬ್ರೆ !
ಇತ್ತೀಚಿಕೆ ನಿಧನರಾದ ಸಜ್ಜನಿಕೆಯ ರಾಜಕಾರಣಿ ದಿವಂಗತ ಕಲ್ಲೂರ ಅವರು ಮೂರೂ ಬಾರಿ ಇಂಡಿಯ ಕಾಂಗ್ರೇಸ್ ಶಾಸಕರಾಗಿದ್ದರು. ಇವರು ಜನರ ಪ್ರೀತಿ ಗಳಿಸಿ ಆಯ್ಕೆಯಾಗಿ ಬಂದ ಧೀಮಂತ ನಾಯಕ. ತದನಂತರ ಪಕ್ಷೇತರ ಅಭ್ಯರ್ಥಿ ಮೂರೂ ಬಾರಿ ಶಾಸಕಾರಾಗಿದ್ದು ಎಲ್ಲರಿಗೂ ಗೊತ್ತುರಿವ ವಿಚಾರ! ೨೦೦೮ರಲ್ಲಿ ಇಂಡಿ ಮತಕ್ಷೇತ್ರ ಮರುವಿಂಗಡಣೆ ಮತ್ತು ಮಷೀನ್ ಮತದಾನ ಆದ ನಂತರ ಮತದಾನ ವ್ಯವಸ್ಥೆ ಸರಿಯಾಗಿ ನಡೆಯುತ್ತಿರುವ ಕಾರಣ ರಿಗ್ಗಿಂಗ್ ತಪ್ಪಿದೆ. ೨೦೦೮ರಲ್ಲಿ ಸೋಲಾಪುರದ ಸುಶೀಲ್ ಕುಮಾರ ಶಿಂದೆ ಮೂಲಕ ಟಿಕೆಟ್ ಪಡೆದು ಕೇವಲ ೫೦೦
ಮತಗಳ ಅಂತರದಿಂದ ಸೋತ ಪಾಟೀಲರು ಮುಂದೆ ೨೦೧೩ರಲ್ಲಿ ಅನುಕಂಪದ ಆದಾರದ ಮೇಲೆ ಗೆಲುವು ಧಾಖಲಿಸಿದರು.
೨೦೧೮ರ ಇಂಡಿಯ ಚುನಾವಣೆ ಬಿಜೆಪಿ ಟಿಕೆಟ್ಗಾಗಿ ಸುಮಾರು ೮ ಜನ ಪ್ರಯತ್ನ ಮಾಡಿದ್ದರು. ಅವರಲ್ಲೇ ಒಂದು ಒಪ್ಪಂದವಾಗಿತ್ತು ಯಾರಿಗೆ ಟಿಕೆಟ್ ಸಿಗಲಿ ನಮ್ಮ ೮ ಜನ ಮಧ್ಯೆ ಸಿಗಲಿ , ಯಾರಿಗೆ ಸಿಕ್ಕರೂ ಎಲ್ಲರೂ ಕೂಡಿಕೊಂಡು ಚುನಾವಣೆ ಮಾಡೋಣ! ಆದರೆ ಟಿಕೆಟ್ ಘೋಷಣೆಯಾದಾಗ ಆಗಿದ್ದೆ ಬೇರೆ! ಪಕ್ಷಕ್ಕಿಂತ ಸ್ವಾರ್ಥ ಮುಖ್ಯವಾಗಿ ಹೋಯಿತು. ಅದರ ಪ್ರತಿಫಲ ಪಕ್ಷದ ಸೋಲು! ಹಾಗೆ ನೋಡಿದರೇ ಬಿಜೆಪಿ ಪಕ್ಷ ಎಡವಿದ್ದೆಲ್ಲಿ ಎಂದು ತೂಗಿ ನೋಡಿದಾಗ ಟಿಕೆಟ್ ಘೋಷಣೆ ತುಂಬಾ ತಡವಾಗಿ ಆಯಿತು. ಟಿಕೆಟ್ ಘೋಷಣೆಯಾಗಿ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದಕ್ಕೂ ಸಮಯವಿರಲಿಲ್ಲ. ಪಕ್ಷ ಟಿಕೆಟ್ ಕೊಟ್ಟಿದ್ದು ಅಥರ್ಗಾದ ಯುವಕ ದಯಾಸಾಗರ ಪಾಟೀಲರಿಗೆ. ಪಕ್ಷದ ಕಟ್ಟಾಳು. ಎಲ್ಲರ ಜೊತೆ ಬೆರೆಯುವ ಮತ್ತು ಅಹಂ ಇಲ್ಲದ ವ್ಯಕ್ತಿತ್ವ ಎಂದು ಸಂತೋಷಪಟ್ಟು ಅವರ ಪರವಾಗಿ ಕೆಲಸ ಮಾಡಿದ್ದರು.
ಆದರೆ ಫಲಿತಾಂಶ ಬಂದಾಗ ಸುಮಾರು ನಲವತ್ತು ಸಾವಿರ ಮತಗಳು ಪಡೆದು ಸೋಲಿನಲ್ಲಿ ಗೆಲುವು ಕಂಡಿದ್ದರು. ಇಲ್ಲಿ ಗಮನಿಸಬೇಕು ಕೇವಲ ೧೦-೧೫ ದಿವಸ ಚುನಾವಣೆಗೆ ತಯಾರಿ, ಒಪ್ಪಂದವಾಗಿದ್ದ ೭ ಜನರ ತಂಡ ಪಕ್ಷಕ್ಕೆ ಕೈಕೊಟ್ಟಿದ್ದರು. ಜಿಲ್ಲೆಯ ಪ್ರಮುಖ ನಾಯಕರು ಸರಿಯಾಗಿ ಪ್ರಚಾರಕ್ಕೆ ಬರಲಿಲ್ಲ. ಯೋಗಿಯ ಪ್ರಚಾರ ಮಾತ್ರ ಅಬ್ಬರಿಸಿತ್ತು ಆದರೂ ಅದು ಸಾಕಾಗಲಿಲ್ಲ. ದಯಾಸಾಗರ ಪಾಟೀಲರನ್ನು ಜಾತಿಬೇಧ ಮರೆತು ಜನ ಬೆಂಬಲಿಸಿದ್ದರು. ಜಾತ್ಯತೀತ ವ್ಯಕ್ತಿ ದಯಾಸಾಗರ ಪಾಟೀಲರ ಶಾಂತ ಸ್ವಭಾವ ಮತ್ತು ಯುವಕರ ಜೊತೆ ಬರೆಯುವ ಅದರಲ್ಲಿ ವಿಶೇಷವಾಗಿ ಹಿರಿಯರಿಗೆ ಗೌರವಕೊಡುವ ವ್ಯಕಿತ್ವ! ಉನ್ನತ ಶಿಕ್ಷಣ ಪಡೆದು ಕ್ಷೇತ್ರವನ್ನು ಮಾದರಿ ಕ್ಷೇತ್ರಮಾಡಬೇಕು ಎಂದು ಕನಸು ಕಂಡವರು.
ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಉಸ್ತುವಾರಿ ಅರುಣ ಅವರನ್ನು ಭೇಟಿಯಾಗಿದ್ದಾರೆ. ಇಂಡಿಯ ವಸ್ತುಸ್ಥಿತಿ ವಿವರಿಸಿದ್ದಾರೆ. ಕಳೆದ ಬಾರಿ ಕೇವಲ ೧೫ದಿವಸದಲ್ಲಿ ೪೦ ಸಾವಿರ ಮತಗಳ ಲೆಕ್ಕ ಉಸ್ತುವಾರಿಗೆ ಗೊತ್ತಿದೆ. ಅದಕ್ಕೆ ಟಿಕೆಟ್ ನಿಮಗೆ ಸಿಗುತ್ತದೆ ಎಂಬ ಅಭಯ ಸಿಕ್ಕಿದೆ. ಅದಕ್ಕೆ ಮತ್ತೆ ಕ್ಷೇತ್ರದಲ್ಲಿ ದಯಾಸಾಗರ ಪಾಟೀಲರ ಓಡಾಟ ಎಂದಿನಂತೆ ಶರವೇಗದಲ್ಲಿ ಸಾಗಿದೆ. ಇಂಡಿಯ ಟಿಕೆಟಿಗಾಗಿ ಯಾವದೇ ಗೊಂದಲವಿಲ್ಲ. ಪಕ್ಷದ ಸಮೀಕ್ಷೆಯಲ್ಲಿ ಹಿಂದಿನ ಬಾರಿ ಸೋತ ಅಭ್ಯರ್ಥಿಯ ಪರವಾಗಿಯೇ ಇದೆ. ಪಕ್ಷ ಇನ್ನೂ ಅನೇಕ ಸಮೀಕ್ಷೆ ಮಾಡಿಯೇ ಅವರಿಗೆ ಕೊಡುತ್ತದೆ. ಇಷ್ಟಾದರೂ ಗೊಂದಲವೇಕೆ? ಹೌದು ಅದು ಸಹಜ ಅನೇಕ ನಾಯಕರ ಕನಸು ನಾವು ಶಾಸಕರಾಗಬೇಕು ಎಂಬುದು. ಅವರ ಹೇಳಿಕೆಯೂ ಸಹಜ ಆದರೆ ಅದನ್ನೇ ಗೊಂದಲವೆಂದು ಪಕ್ಷದ ಕಾರ್ಯಕರ್ತರು ನಂಬುವುದು ಬೇಡ. ಪಕ್ಷ ಇನ್ನೊಮ್ಮೆ ಮಗದೊಮ್ಮೆ ಸಮೀಕ್ಷೆ ಮಾಡಿ ದಯಾಸಾಗರವರನ್ನೇ ಇಂಡಿಯ ಅಭ್ಯರ್ಥಿಯಾಗಿ ಮಾಡುತ್ತದೆ. ೨೦೨೩ರಲ್ಲಿ ಮತ್ತೊಮೆ ಬಿಜೆಪಿ ಬಾವುಟ ಹಾರುತ್ತೆ ಎಂದು ಬಿಜೆಪಿ ಕಾರ್ಯಕರ್ತರ ಅಭಿಮತ.
Categories: Articles
