ನಮ್ಮ ದೇಶಕ್ಕೆ ಯಾವದೇ ರಾಷ್ಟ್ರೀಯಭಾಷೆ ಇರುವದಿಲ್ಲ ಕಾರಣ ನಮಗೆಲ್ಲ ನಮ್ಮದೇ ಆದ ಮಾತೃಭಾಷೆಗಳಿವೆ. ಹಿಂದಿ ಹೆಚ್ಚಿನ ಜನ ಉಪಯೋಗಿಸುತ್ತಾರೆ ಎಂದು ಅದೊಂದು ಅಫೀಷಿಯಲ್ ಭಾಷೆ ಆಗಲಿ ಎಂದು ಎಲ್ಲ ರಾಜ್ಯಗಳು (ತಮಿಳನಾಡು ಒಪ್ಪಿಕೊಂಡಿಲ್ಲ, ಅಲ್ಲಿ ಹಿಂದಿ ಅಫೀಷಿಯಲ್ ಅಲ್ಲ. )ಒಪ್ಪಿಕೊಂಡಿದ್ದು ಒಂದು ಕಂಡೀಶನ್ ಮೇಲೆ ನಮ್ಮ ಭಾಷೆಗಳಿಗೆ ಆದ್ಯತೆ ಇರಲೇಬೇಕು! ಇದು ಒಕ್ಕೂಟದ ದೇಶ. ಇಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲ ಭಾಷೆಗಳು ನಮ್ಮ ದೇಶಕ್ಕೆ ಸೇರಿದ್ದು. ಯಾವದೇ ಭಾಷೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಸಲ್ಲ. ಆದರೇ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಹಿಂದಿ ಹೇರಿಕೆ ಆಗುತ್ತಿದೆ. ಕ್ಷಮಿಸಿ ಹಿಂದಿ ಹೇರಿಕೆ ನಿರಂತರವಾಗಿದೆ. ಅದು ನಮ್ಮ ರಾಜ್ಯದಲ್ಲೂ ಅಂತೂ ಸ್ವಲ್ಪ ಜಾಸ್ತಿನೇ!
ಹಿಂದಿ ಮಾತಾಡಿದರೆ ಮಾತ್ರ ಭಾರತೀಯ ಎನ್ನುವ ಮಟ್ಟಿಗೆ ಅವರ ವಿಚಾರ. ಅದೊಂದು ಶುದ್ಧ ಮೂರ್ಖತನದ ಪರಮಾವಧಿ. ನಂಬೋಣ ಮತ್ತು ಇಂದಿಗೂ ನಾವು ಪಾಲಿಸುತ್ತಿದ್ದೇವೆ ಏನೆಂದರೆ ಹಿಂದಿ ನಮ್ಮ ದೇಶದ ಆಡಳಿತದ ಭಾಷೆ ಅದಕ್ಕೆ ನಾವು ಒಪ್ಪಿಕೊಂಡು ಶಾಲೆಯಲ್ಲೇ ಅದನ್ನು ಕಲಿತು ಬೇರೆಯವರ ಜೊತೆ ಅದೇ ಭಾಷೆಯಲ್ಲಿ ವ್ಯವಹರಿಸುತ್ತಿದ್ದೇವೆ. ಆದರೆ ಹಿಂದಿ ಜನರು ಇಲ್ಲಿಗೆ ಬಂದು ನಮ್ಮ ಭಾಷೆಯ ಬಗ್ಗೆ ತಾತ್ಸಾರ ತೋರಿಸುವುದು ನೋಡಿದರೇ ಅವರಿಗೆ ನಮ್ಮ ದೇಶದ ಅಖಂಡತೆ ಬಗ್ಗೆ ಅರಿವಿಲ್ಲ. ಎಲ್ಲರೂ ಸಮಾನರು ಮತ್ತು ಎಲ್ಲ ಭಾಷೆಗಳು ಭಾರತೀಯರದ್ದು ಎಂಬ ಅನಿಸಿಕೆ ಅವರಿಗಿಲ್ಲ. ನಮ್ಮ ರಾಜ್ಯಗಳಿಗೆ ಬಂದು ನಮ್ಮ ಮೇಲೆ ಹಿಂದಿ ಹೇರಿಕೆ ಅಗತ್ಯವೂ ಇಲ್ಲ ಮತ್ತು ಅದು ಕಲಿತರೂ ಅದರಿಂದ ನಮಗೆ ಜಾಸ್ತಿ ಗೌರವನು ಬರಲ್ಲ . ನಾವು ಯಾವಾಗಲೂ ಎಲ್ಲ ಭಾಷೆಗಳಿಗೆ ಗೌರವ ಕೊಡುತ್ತಾ ಬಂದಿದ್ದೇವೆ.
ವಿಮಲ್ ಸ್ಟಾರ್ ಅಜಯ್ ದೇವ್ಗನ್ ಕಿಚ್ಚ್ ಸುದೀಪ್ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿದಕ್ಕೆ ನೀವ್ಯಾಕೆ ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡುತ್ತೀರಿ ಎಂದು ಕೇಳಿದ್ದಾರೆ. ಸುದೀಪ್ ಉತ್ತರಕ್ಕಿಂತ ಮುಂಚೆ ಸುದೀಪ್ ಏನು ಹೇಳಿದ್ದರು ಎಂದು ನೋಡಿದರೇ. ಅವರು ಹೇಳಿದ್ದು ಇಷ್ಟೇ ನಮ್ಮ ಚಿತ್ರಗಳಿಗೆ ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಯಬೇಡಿ . ಭಾರತೀಯ ಸಿನಿಮಾ ಎಂದು ಕರೆಯಿರಿ ಅಂತ ಹೇಳುವಾಗ ಹಿಂದಿ ಬಗ್ಗೆ ಹೇಳಿದ್ದು. ಎಲ್ಲಿಯೂ ಹಿಂದಿ ಬಗ್ಗೆ ಒಂದೇ ಒಂದು ಕೆಟ್ಟ ಶಬ್ದ ಪ್ರಯೋಗ ಮಾಡಿಲ್ಲ. ಇದನ್ನು ಸರಿಯಾಗಿ ತಿಳಿಯದ ವಿಮಲ್ ಸ್ಟಾರ್ ನಮ್ಮ ಸ್ವಾಭಿಮಾನದ ಪ್ರಶ್ನೆಗೆ ಸುದೀಪ್ ಅವರ ಕೆಳಗಿನ ಟ್ವಿಟ್ ಇಡೀ ದಕ್ಷಿಣ ಭಾರತದ ಜನರು ಖುಷಿ ಪಟ್ಟರು. ಸುದೀಪ್ ಮಾಡಿದ್ದ ಒಂದು ಟ್ವಿಟ್ ಇಡೀ ದಕ್ಷಿಣದ ಜನರು ಒಗ್ಗಟ್ಟಾಗಿ ಮುಗಿಬಿದ್ದು ಕಿಚ್ಚಸುದೀಪ್ ಹ್ಯಾಷಟ್ಯಾಗ ಟ್ರೆಂಡ್ ಮಾಡಿದ್ದು ಧಾಖಲೆ!

ಅನೇಕ ನಟರು ಮತ್ತು ವಿಶೇಷವಾಗಿ ರಾಮ್ ಗೋಪಾಲ್ ವರ್ಮ ಸುದೀಪ್ ಬೆನ್ನಿಗೆ ನಿಂತಿದ್ದು ಎಲ್ಲರಿಗೂ ಖುಷಿ ತಂದಿದೆ. ಅದರಲ್ಲಿ ಸಮಾರು ಪತ್ರಿಕಾ ಸಂಪಾದಕರು, ಅಂಕಣಕಾರರು ಸುದೀಪ್ ಅವರನ್ನು ಮನಸಾರೆ ಹೊಗಳಿದ್ದಾರೆ. ತಪ್ಪೇ ಮಾಡದ ಸುದೀಪ್ ಅವರ ಜೊತೆ ಜಗಳಕ್ಕೆ ನಿಂತ ವಿಮಲ್ ಸ್ಟಾರ್ ನಾನು ಅರ್ಥ ಮಾಡಿಕೊಂಡಿದ್ದು ತಪ್ಪಾಗಿದೆ ಎಂದು ತೇಪೆ ಹಚ್ಚಿದರು. ತೇಪೆ ಹಚ್ಚುವಕ್ಕಿಂತ ಮುಂಚೆ ದಕ್ಷಿಣದವರ ಅಭಿಪ್ರಾಯ ದೇಶಕ್ಕೆ ಗೊತ್ತಾಗಿದ್ದು ಖುಷಿಯ ವಿಚಾರ! ನಾವೆಲ್ಲ ಭಾರತೀಯರು ಎಂದು ತಿಳಿಕೊಳ್ಳಬೇಕು ಮತ್ತು ಎಲ್ಲ ೨೨ ಅಫೀಷಿಯಲ್ ಭಾಷೆಗಳನ್ನು ಗೌರವ ಕೊಡುವ ಮನೋಭಾವನೆಯನ್ನು ಬೆಳಿಸಿಕೊಳ್ಳಬೇಕು. ಭಾರತ ಕೇವಲ ಹಿಂದಿಯವರದು ಎಂಬ ಮನಸ್ಥಿತಿಯಿಂದ ಹೊರಗೆ ಬರಲೇಬೇಕು! ಹಿಂದಿಯಲ್ಲಿ ಮಾತನಾಡಿದರೇ ಮಾತ್ರ ಭಾರತೀಯರು ಎಂಬ ಸ್ವಯಂ ನಿರ್ಣಯವನ್ನು ಸರಿಮಾಡಿಕೊಳ್ಳಬೇಕು.
Categories: news
