Articles

ದರ್ಶನ, ಸುದೀಪ್ , ಯಶ್ ಇದರಲ್ಲಿ ಯಾರು ಗ್ರೇಟ್? ಯಾರು ಬಾಸ್ ?

ಒಬ್ಬರು ನಾ ಬಂದ್ರೆ ನಂದೇ ಹವಾ, ಇನ್ನೊಬ್ಬರು ಇದು ಸ್ವಂತ ಬ್ರಾಂಡ್ ಕಣೋ ಹೀಗೆ ಕನ್ನಡಿಗರಿಂದ ಬೆಳೆದ ನಾಯಕರೆಲ್ಲರೂ ಕೌಂಟರ್ ಡೈಲಾಗ್ ಹೊಡೆಯುತ್ತ ಅಭಿಮಾನಿಗಳನ್ನು ರಂಜಿಸುತ್ತಾ ದುಡ್ಡನ್ನು ಮಾಡುವುದು ನಾವೆಲ್ಲಾ ನೋಡಿದ್ದೇವೆ. ದುಡ್ಡು ಮಾಡುತ್ತಾ ಅನೇಕ ಸಂದೇಶಗಳನ್ನು , ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಭಿಮಾನಿಗಳ ಋಣವನ್ನು ತೀರಿಸುವ ಸಣ್ಣ ಪ್ರಯತ್ನ ನಿರಂತರವಾಗಿ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಇವರೆಲ್ಲ ದೇವರುಗಳಲ್ಲ. ಆದರೆ ಇವರ ಬಗ್ಗೆ ಒಂದು ಹೆಮ್ಮಯ ಮಾತು ದೈರ್ಯವಾಗಿ ಹೇಳಬಹುದು. ಇವರು ತಮ್ಮ ದುಡಿದ ಹಣದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಅನೇಕ ಭ್ರಷ್ಟರಿಗಿಂತ ಉತ್ತಮ ಪ್ರಜೆಗಳು.

ಮೊಟ್ಟ ಮೊಟ್ಟ ಮೊದಲ ಬಾರಿಗೆ ಒಬ್ಬ ನಟ ಎಂತಹ ಪರಿಣಾಮಕಾರಿಯಾಗಿ ಜನರ ಮನಸ್ಸನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟ ಮಹಾನನಟ ನಮ್ಮ ಡಾಕ್ಟರ್ ರಾಜಕುಮಾರ್. ಗೋಕಾಕ ಚಳುವಳಿ ಮಾಡಿ ದೇಶದ ಪ್ರಧಾನಮಂತ್ರಿ ಇತ್ತ ನೋಡುವಂತೆ ಮಾಡಿದ ಶಕ್ತಿ ಅಣ್ಣಾವರದ್ದು . ಪ್ರೇಕ್ಷಕರನ್ನು ಅಭಿಮಾನಿ ದೇವರಗಳು ಎಂದು ಕರೆದಿದ್ದು ಹೃದಾಂತರಾಳದಿಂದ . ನನಗೆ ನೀವೆಷ್ಟು ಕೊಟ್ಟಿದ್ದ್ರಿ, ನಿಮ್ಮಿಂದ ನಾನು ಆದರೆ ನಿಮಗೇನು ನಾ ಮಾಡಬಲ್ಲೆ ಎಂದಾಗ ನನಗೆ ಏನು ತೋಚದು. ಅದಕ್ಕೆ ನನಗಿಂತ ನೀವೇ ಎಷ್ಟೋ ಉತ್ತಮರು ಎಂದು ಅವರನ್ನು ಅಭಿಮಾನಿ ದೇವರಗಳೆಂದು ಕರೆದದ್ದು. ಇಂದಿನ ಅನೇಕ ನಾಯಕನಟರು ಅವರದೇ ದಾರಿಯಲ್ಲಿ ಹೋಗುತ್ತಿದ್ದು ನೋಡಿ ಅನೇಕ ಬಾರಿ ಹೆಮ್ಮೆ ಆಗುತ್ತದೆ.

ಇತ್ತೀಚಿಕೆ ರಿಯಲ್ ಸ್ಟಾರ್ ಒಂದು ಸಂದರ್ಶನದಲ್ಲಿ ತಮ್ಮ ಜೀವನದ ಅನುಭವದ ಜೊತೆ ಮಾತನಾಡುವಾಗ ಶೊನ್ನೆಯಿಂದ ಪ್ರಾರಂಭಮಾಡಿ ಏನೆಲ್ಲ ನಾನು ಸಾಧಿಸುವಂತೆ ಆದೆ , ಅದರಿಂದ ಸುಖವನ್ನು ಪಟ್ಟೆ ಆದರೆ ಇದೆ ಅಂತಿಮವಲ್ಲ. ಏನಾದರೂ ನಮ್ಮ ರಾಜ್ಯಕ್ಕೆ, ಪ್ರಜೆಗಳಿಗೆ ಎಂದರೇ ಎಲ್ಲ ಅಭಿಮಾನಿಗಳಿಗೆ ನನ್ನಿಂದ ಏನಾದರೂ ಮಾಡುವದಕ್ಕೆ ಸಾಧ್ಯವೇ ಎಂದು ಮೊದಲಿಂದಲೂ ಯೋಚನೆ ಇತ್ತು ಅದಕ್ಕೆ ನಾನು ಪ್ರಜಾಕಿಯ ಎಂಬ ಪಕ್ಷದೊಂದಿಗೆ ನನ್ನ ಅಳಿಲು ಸೇವೆ ಮಾಡುತ್ತಿದ್ದೇನೆ. ನೀವು ಕೈಜೋಡಿಸಿ ಎಂದರು. ಇವರೂ ತಮ್ಮ ದುಡ್ಡಿನಿಂದ ಸಾಮಾಜಿಕ ಕಾರ್ಯಗಳು ಮಾಡುತ್ತಿದ್ದಾರೆ. ಮತ್ತೊಂದು ಪ್ರಶ್ನೆ ಉಪೇಂದ್ರವರಿಗೆ ಕನ್ನಡ ನಾಯಕ ನಟರ ಬಗ್ಗೆ ಹೇಳಿ.. ಮೊದಲು ಯಶ್!

ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ಯಶ್ ಇಡೀ ಜಗತ್ತಿನ ಚಿತ್ರರಂಗ ಯಾರು ಇವರು ಎಂದು ನೋಡುತ್ತಿರುವಾಗ ಇವರ ಸಾಧನೆ ಬಗ್ಗೆ ಅರಿವಿಗೆ ಬಾರದೆ ಇರದು. ಒಂದು ಟಿವಿ ಚಾನೆಲ್ ಜೊತೆ ಯುದ್ಧ ಸಾರಿ ನನ್ನ ಸಾಮಾಜಿಕ ಕಳಕಳಿ ಬಗ್ಗೆ ಪ್ರಶ್ನೆ ಮಾಡುವವರಿಗೆ ರಾಜ್ಯದಲ್ಲಿ ಒಂದು ಕರೆಯನ್ನು ದತ್ತಕ್ಕೆ ತಗೆದುಕೊಂಡು ಅದನ್ನು ಪುನರ್ಜ್ಜೀವನ್ ಮಾಡಿದ್ದು ನೋಡಿ ಮತ್ತೆ ಟಿವಿ ಚಾನೆಲ್ ಅವರ ಜೊತೆ ಕೈಜೋಡಿಸಿದ್ದು ಸುಳ್ಳಲ್ಲ. ಇದರ ತಾತ್ಪರ್ಯ ಏನಂದರೆ ಸಿನಿಮಾ ಸ್ಟಾರ್ ಆಗಬೇಕು ಎಂದು ಕನಸು ಕಂಡು ಅದರಲ್ಲಿ ಯಶಸ್ವಿಯಾಗಿ ದುಡ್ಡು ಬಂದರೆ ಖಂಡಿತ ನಾನು ಸಾಮಾಜಿಕ ಕೆಲಸಗಳನ್ನು ಮಾಡಿ ನನ್ನ ಅಭಿಮಾನಿಗಳ/ಜನರ ಋಣ ತೀರಿಸುವ ಮನಸ್ಸು ಇದ್ದೆ ಇದೆ ಎಂದು ಅನೇಕ ಬಾರಿ ತೋರಿಸಿದ್ದಾರೆ. ಹಾಗೆ ಉಪೇಂದ್ರ ಅವರ ಪ್ರಕಾರ ಯಶ್ ಒಬ್ಬ ಕನಸುಗಾರ ನಮ್ಮ ಇಂಡಸ್ಟ್ರಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಗುರಿ. ತುಂಬಾ ಕೆಲಸಗಾರ ಎಂದು ಹೊಗಳಿದ್ದರು. ಇವಾಗ ಅದನ್ನು ಮಾಡಿದ್ದಾರೆ. ತುಂಬಾ ಖುಷಿ ಇದೆ. ಇವಾಗ ಸುದೀಪ್ ಬಗ್ಗೆ?

ಐರನ್ ಲೆಗ್ ಎಂದೇ ಖ್ಯಾತಿ ಯಾಗಿದ್ದ ಸುದೀಪ್ ಅವರನ್ನು ಕಿಚ್ಚ ಮಾಡಿ ಹುಚ್ಚೆಬಿಸಿದ್ದು ಹುಚ್ಚ ಸಿನಿಮಾ. ಡಾಕ್ಟರ್ ರಾಜಕುಮಾರ್ ಸಹ ಇದನ್ನು ಮೆಚ್ಚಿಕೊಂಡಿದ್ದರು. ಸುಮಾರು ವರ್ಷಗಳ ಹಿಂದೆ ಇವರನ್ನು ಅಹಂ ತುಂಬಿದ ಮನುಷ್ಯ. ಬೆಳ್ಳಿ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದ ಮನುಷ್ಯ ಎಂದು ಹೇಳಿದವರಿಗೆ ಕಡಿಮೆ ಏನಿಲ್ಲ. ಆದರೆ ಕೆಲವು ವರ್ಷಗಳ ನಂತರ ಸುದೀಪ್ರ ಬಗ್ಗೆ ಅನೇಕ ಕುತೂಹಲಕಾರಿ ಅಂಶಗಳು ಹೊರಗೆ ಬರತೊಡಗಿದವು, ತಂದೆಯ ಬೆಂಬಲ ಇಲ್ಲದೆ ಕಷ್ಟಪಟ್ಟು ಚಿತ್ರರಂಗಕ್ಕೆ ಬಂದು ಅನೇಕ ಏಳುಬೀಳುಗಳನ್ನು ನೋಡಿ ಬಿಗ್ ಬಾಸ್ ಎಂಬ ರಿಯಾಲಿಟಿ ಶೋವನ್ನು ಅದ್ಭುತವಾಗಿ ನಡೆಯಿಸಿಕೊಟ್ಟು ಎಲ್ಲರ ಮನವನ್ನು ಗೆದ್ದ ಅಭಿನವ ಚಕ್ರವರ್ತಿ. ಇವರೂ ಸಹ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಇವರಿಗೊಂದು ಶನಿ ಕಾಟವಿದೆ! (ಹಾಹಾ, ಅವರೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. )ಇವರು ಏನೆ ಮಾತಾಡಲಿ ಸುದ್ದಿಯಲ್ಲಿ ಇರುತ್ತಾರೆ. ಕಾರಣ ಇವರಿಗೆ ಇರುವ ಜನಪ್ರಿಯತೆ. ಇತ್ತೀಚಿಕೆ ಹಿಂದಿ ಬಗ್ಗೆ ಆಡಿದ ಮಾತು ಇಡೀ ಭಾರತದಲ್ಲೇ ಟಾಕ್ ಆಫ್ ದಿ ಟೌನ್ ಆಗಿತ್ತು. ಇವರ ಬಗ್ಗೆ ಉಪೇಂದ್ರ ಹೇಳಿದ್ದು , ಇವರು ಫೋಕಸ್ಡ್ ಮನುಷ್ಯ. ಒಳ್ಳೆಯ ಚಿತ್ರಗಳನ್ನು ಮಾಡುತ್ತಿದ್ದಾರೆ. ಅನೇಕ ಹೊಸಬರಿಗೆ ಉತ್ತೇಜನ ಕೊಡುತ್ತಿದ್ದಾರೆ. ಮುಂದಿನ ಪ್ರಶ್ನೆ ಅಪ್ಪು?

ಉಪೇಂದ್ರ ಹೇಳಿದ್ದು ದೇವರು, ನಮಗೂ ಅವರು ದೇವರೇ! ಇದ್ಕಕಿಂತ ಜಾಸ್ತಿ ಪದಗಳು ನನ್ನಲ್ಲಿ ಇಲ್ಲ.

ಮುಂದಿನ ಪ್ರಶ್ನೆ ದರ್ಶನ!

ಅಪ್ಪ ಗ್ರೇಟ್ ಕಲಾವಿದ ಆದರೂ ಲೈಟ್ ಬಾಯ್ ಯಾಗಿ ಕೆಲಸಮಾಡಿದ್ದು ಅನೇಕರಿಗೆ ಮೊದಲು ತಿಳಿದಿರಲಿಲ್ಲ. ಆಕಳು ಸಾಕಿ ಹಾಲು ಮಾರಿ ಜೀವನ ಸಾಗಿಸಿದ ನಟ. ಮೈಸೂರರಿನಿಂದ ರೈಲಿಗೆ ಬಂದು ಬೆಂಗಳೂರಲ್ಲಿ ಧಾರಾವಾಹಿ ನಟನೆ ಮಾಡಿ ಮತ್ತೆ ಮೈಸೂರಿಗೆ ಹೋಗಿದ್ದ ಉಧಾಹರಣೆ ಇದೆ. ಕಾರಣ ಬೆಂಗಳೂರಲ್ಲಿ ಉಳಿದಕೊಳ್ಳಲು ಮನೆಯಿಲ್ಲ. ಹೀಗೆ ಸಾಗಿದ ಇವರ ಜೀವನಕ್ಕೆ ಬ್ರೇಕ್ ಕೊಟ್ಟಿದ್ದು ಮಜೆಸ್ಟಿಕ್! ಕರಿಯನ ಕ್ಯಾರಿಯರ್ ನೋಡಿದರೇ ಎಂಥವರಿಗೂ ಅಚ್ಚರಿ ಆಗುತ್ತೆ. ಎಂಥಹ ಅಭಿಮಾನಿ ಬಳಗ ಎಂದರೇ ನೋಡುಗರು ಸಹ ಎಪ್ಪಾ ಎಂಥಾ ಕ್ರೆಜ್ ! ಅತಿ ದೊಡ್ಡ ಅಭಿಮಾನಿಗಳ ಹೊಂದಿರುವ ದರ್ಶನ ಉರ್ಫ್ ಡಿ-ಬಾಸ್ ! ಯಾವಾಗಲೂ ಸಮಾಜದ ಕೆಲಸುಗಳನ್ನು ಮಾಡಿಕೊಂಡೆ ಬಂದವರು. ಆದರೇ ದುರದೃಷ್ಟ ಅನೇಕ ಬಾರಿ ಬೇಡವಾದ ವಿಷಯಗಳು ಇವರನ್ನು ಸುತ್ತುವರೆದೆದಿದ್ದರೂ ಅದಲ್ಲೆವನ್ನೂ ಮತ್ತೆ ಸರಿದೂಗಿಸಿ ಅಲುಗಾಡದೆ ನಿಂತಿರುವುದು ಅವರ ಪರಿಶ್ರಮದಿಂದ ! ದಚ್ಚು ಮತ್ತು ಕಿಚ್ಚನ ಒಂದು ಮಾಡಲು ಇಬ್ಬರ ಅಭಿಮಾನಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೆ ಒಂದಾದರೇ ಅಭಿಮಾನಿಗಳಿಗೆ ಖುಷಿಯ ವಿಚಾರ. ಇವರ ಬಗ್ಗೆ ಉಪೇಂದ್ರ ಹೇಳಿದ್ದು, ದರ್ಶನ ಅವರಿಗೆ ಅತಿ ದೊಡ್ಡ ಅಭಿಮಾನಿಗಳ ಬಳಗ, ಸಾಧಕ!

ಇನ್ನೂ ಹಲವಾರು ನಾಯಕರು ಇದ್ದಾರೆ ಮತ್ತು ಅನೇಕ ಒಳ್ಳೆಯ ಚಿತ್ರಗಳನ್ನು ಮಾಡುತ್ತಿದ್ದಾರೆ. ಗಣೇಶ್, ದ್ರುವ, ಮುರಳಿ, ಅಜಯ್, ಪ್ರಜ್ವಲ್. ಆದರೆ ಇಂದು ಯಶಸ್ವಿ ಚಿತ್ರಗಳನ್ನು ಕೊಡುತ್ತಿರುವ ಮತ್ತು ವೃತ್ತಿ ಜೀವನದ ಮದ್ಯಮದಲ್ಲಿ ನಿಂತು ಕನ್ನಡ ಚಿತ್ರಗಳನ್ನು ಮಾಡುತ್ತಾ ಹೊಸ ಹೊಳಪನ್ನು ಕೊಡುತ್ತಿರುವ ನಾಯಕ ನಟರ ಬಗ್ಗೆ ಅಳೆದು ತೂಗಿ ನೋಡಿದಾಗ ಎಲ್ಲರೂ ತಮ್ಮ ತಮ್ಮ ಸಾಮರ್ಥ ಉಪಗೋಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಅಭಿಮಾನ ಬಳಗ ಇರಬೇಕು ಆದರೆ ನಟರ ಅಭಿಮಾನಿಗಳ ನಡೆವೆ ಜಗಳ ಇರಬಾರದು. ಏನೆ ಡೈಲಾಗ್ ಹೊಡೆಯಿಲಿ ಅದು ಜನರನ್ನು ರಂಜಿಸುವದಕ್ಕೆ ಎನ್ನುವುದು ಸತ್ಯ!

ಇವರಲ್ಲಿ ಯಾರು ಗ್ರೇಟ್? ಯಾರು ಬಾಸ್ ? ಎಂದು ಹೇಳುವುದಕ್ಕಿಂತ ಇವರ ಜೊತೆ ಅನೇಕರು ಕನ್ನಡದ ಚಿತ್ರಗಳನ್ನು ಮಾಡುತ್ತಿದ್ದಾರೆ. ಒಳ್ಳೆಯ ಚಿತ್ರಗಳಿಗೆ ಬೆಂಬಲಿಸುತ್ತಾ , ನಮ್ಮ ಚಿತ್ರಗಳನ್ನು ಸಿನಿಮಾ ಹಾಲನಲ್ಲಿ ಕುಳಿತು ನೋಡುವ ಪ್ರೇಕ್ಷಕನೇ ಗ್ರೇಟ್ ಮತ್ತು ಬಾಸ್!

Categories: Articles

Tagged as: , , , ,

Leave a Reply