Articles

ರಾಷ್ಟ್ರೀಯ ಸ್ವಯಂ ಸೇವಕ ಸಂಘ. ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಶಾಲೆ!

ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘ! ಇವರೆಲ್ಲ ಶಿಸ್ತಿನ ಸೇವಕರು.

ಸಂಘದ ವಿಸ್ತಾರ ಮತ್ತು ಅದರ ಕೆಲಸ ಊಹೆಗೂ ನಿಲುಕಲಾರದು. ನಾನು ಬರೆದದ್ದು ಅತಿ ಸ್ವಲ್ಪ. ಮತ್ತೊಮ್ಮೆ ಇನ್ನೊಂದು ಸರಣಿ ಮೂಲಕ ಬರುತ್ತೇನೆ.

ಸ್ವಾಮಿ ವಿವೇಕಾನಂದರು ೧೮೮೩ರಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಅಮೇರಿಕಾದ ಅಣ್ಣ ತಮ್ಮಂದಿಯರೇ, ಅಕ್ಕ ತಂಗಿಯರೇ ಎಂದು ಹೇಳಿದ ಮಾತುಗಳೇ ಹೆಚ್ಚಿನ ಜನರಿಗೆ ನೆನೆಪಿದೆ ಆದರೆ ಅಂದು ನಿಜವಾಗಿ ಏನೆಲ್ಲ ನಡೆಯಿತು ಎಂದು ಸಂಪೂರ್ಣ ಅವರ ಮಾತುಗಳು ಕೇಳಿದ್ದರೇ ನಿಮಗೂ ಗೊತ್ತಿರುತ್ತೆ. ಸೆಪ್ಟೆಂಬರ್ ೧೧ ೧೯೮೩ ಇಡೀ ಜಗತ್ತೇ ನಿಬ್ಬೆರಗಾಗಿತ್ತು ಮತ್ತು ಮುಟ್ಟಿ ನೋಡಿಕೊಳ್ಳುವಂತ ಅಧ್ಯಾತ್ಮದ ಪಾಠ ಅದಾಗಿತ್ತು. ಇಲ್ಲಿಯವರೆಗೆ ಭಾರತ ಕೇವಲ ಹಾವಾಡಿಗರ ದೇಶ, ಮೂಢನಂಬಿಕೆಯ ದೇಶ ಮತ್ತು ಬಡದೇಶ ಎಂದು ತಿಳಿದೊಕೊಂಡವರಿಗೆ ಭಾರತ ದೇಶದ ಹಲವು ಮಜಲಗಳನ್ನು ವಿವೇಕಾನಂದರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಜಗತ್ತಿಗೆ ಕಲಿಸಿದ ಧರ್ಮಕ್ಕೆ ಸೇರಿದವನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ನಾವು ಸಾರ್ವತ್ರಿಕ ಸಹಿಷ್ಣುತೆಯನ್ನು ಮಾತ್ರ ನಂಬುವುದಿಲ್ಲ, ಆದರೆ ನಾವು ಎಲ್ಲಾ ಧರ್ಮಗಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ಎಲ್ಲಾ ಧರ್ಮಗಳ ಮತ್ತು ಭೂಮಿಯ ಎಲ್ಲಾ ರಾಷ್ಟ್ರಗಳ ಶೋಷಿತರಿಗೆ ಮತ್ತು ನಿರಾಶ್ರಿತರಿಗೆ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ರೋಮನ್ ದಬ್ಬಾಳಿಕೆಯಿಂದ ಅವರ ಪವಿತ್ರ ದೇವಸ್ಥಾನವು ಚೂರುಚೂರಾದ ವರ್ಷದಲ್ಲಿಯೇ ದಕ್ಷಿಣ ಭಾರತಕ್ಕೆ ಬಂದು ನಮ್ಮೊಂದಿಗೆ ಆಶ್ರಯ ಪಡೆದ ಇಸ್ರೇಲಿಗಳ ಶುದ್ಧ ಅವಶೇಷಗಳನ್ನು ನಾವು ನಮ್ಮ ಎದೆಯಲ್ಲಿ ಸಂಗ್ರಹಿಸಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಇದೆ. ಇಂಥಹ ಮಾತುಗಳು ಕೇಳಿದ ಅನೇಕ ದೇಶಗಳು ಭಾರತ ಜಗತ್ತಿಗೆ ಕೊಟ್ಟ ಕೊಡುಗೆ ಕೇಳಿ ಭಾರತ ದೇಶದ ಗೆಳತನಕ್ಕೆ ಹಂಬಲಿಸಿದರು.

ಆದರೆ ಇತ್ತ ದೇಶದಲ್ಲಿ ಸ್ವಾತಂತ್ರ್ಯವಿಲ್ಲದೆ ಬ್ರಿಟಿಷರ ದಬ್ಬಾಳಿಕೆಯಲ್ಲಿ ದೇಶದ ಜನರು ನಲಗುತ್ತಿದ್ದರು. ಅನೇಕ ಮಹನೀಯರು ಬ್ರಿಟಿಷರ ವಿರುದ್ಧ ತೊಡೆತಟ್ಟಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು ಮತ್ತು ಜನಜಾಗೃತಿ ಮಾಡಿ ದೇಶದ ಜನರನ್ನು ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿದ್ದರೂ ಯಶಸ್ಸು ತೃಪ್ತಿಕರವಾಗಿರಲಿಲ್ಲ. ಇದಕ್ಕೆ ಅನೇಕ ಕಾರಣಗಳು ಇದ್ದವು , ಬ್ರಿಟಿಷರ ಒಡೆದು ಆಳುವ ನೀತಿಗೆ ನಮ್ಮ ಜನರು ಕಿವಿಕೊಟ್ಟು ದೇಶವನ್ನು ಅಧೋಗತಿಗೆ ತಳ್ಳಿದ್ದರು. ಆದರೂ ಸ್ವಾತಂತ್ರ್ಯದ ಕಿಚ್ಚು ಉರಿತಾನೆ ಇತ್ತು. ಸುಭಾಸ್ ಚಂದ್ರ ಬೋಸ್, ಮಾಹಾತ್ಮ ಗಾಂಧೀ, ತಿಲಕ್, ವೀರ್ ಸಾವರ್ಕರ್, ಅಜಾದ್, ಕೆಚ್ಚೆದೆಯ ಭಗತ್ ಸಿಂಗ್, ಇದಕ್ಕಿಂತ ಮುಂಚೆ ಸಂಗೊಳ್ಳಿ, ರಾಯಣ್ಣ, ಮಾಹಾರಾಣಾ ಪ್ರತಾಪ್ ಹೀಗೆ ಅನೇಕರು ತಮ್ಮ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಬ್ರಿಟಿಷರ ಒಡೆದು ಆಳುವ ನೀತಿಯಿಂದ ದೇಶದ ಸ್ವಾತಂತ್ರ್ಯ ಕನಸಾಗಿತ್ತು.

೧೮೫೭ರಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಮಂಗಲ್ ಪಾಂಡೆ , ಮುಂದೆ ೧೯೦೦ರ ಆಸುಪಾಸಿನಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ನೇತಾಜಿ! ಅಜಾದ್ ಹಿಂದ್ ಪೌಜ್ ಸ್ಥಾಪನೆ ಮಾಡಿ ಬ್ರಿಟಿಷರಿಗೆ ತಲೆನೋವಾಗಿದ್ದು ಸುಳ್ಳಲ್ಲ. ಹೀಗೆ ಅನೇಕರು ಸತತ ಪ್ರಯತ್ನ ಮಾಡಿದ್ದರು ಆದರೆ ಮಾಡುತ್ತಿರುವ ಕೆಲಸ ಕಡಿಮೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಹಿಂದೂ ಮಹಾಸಭಾದ ಕಾರ್ಯಕರ್ತರಾದ ಬಿ ಎಸ್ ಮುಂಜಿಯವರು ನಾಗಪುರದ ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಗೆ ಕೋಲ್ಕೋತ್ತಾಗೆ ಮೆಡಿಕಲ್ ಅಭ್ಯಾಸದ ಜೊತೆಗೆ ಬಂಗಾಳಿಗಳ ರಹಸ್ಯ ಕ್ರಾಂತಿಕಾರಿ ಯುದ್ಧ ತಂತ್ರಗಳು ಕಲಿತುಕೊಂಡು ಬರಲಿ ಎಂದು ಕಳಿಸಿದ್ದರು. ಕೊಲ್ಕೊತ್ತದಿಂದ ಮರಳಿದ ನಂತರ ಹೆಡ್ಗೆವಾರ್ ಅವರು ಕ್ರಾಂತಿ ದಳ ಹುಟ್ಟಾಕಿದರು. ಅದೊಂದು ಬಂಡಾಯದ ಪಕ್ಷ! ಅವರಿಗೆ ಗೊತ್ತಾಗಿತ್ತು ಕೇವಲ ಬಂಡಾಯದಿಂದ ಯಶಸ್ಸು ಸಿಗುವುದು ಕಷ್ಟಸಾಧ್ಯ ಅದಕ್ಕೆ ೧೯೨೩ರಲ್ಲಿ ಪ್ರಕಟಣೆಗೊಂಡ ಸಾವರ್ಕರ್ ಅವರ ಹಿಂದುತ್ವದ ಬಗ್ಗೆ ಆಳವಾದ ಅಧ್ಯಯನ ಮಾಡಿ, ೧೯೨೫ರಲ್ಲಿ ಹೆಡ್ಗೆವಾರ್ ಅವರು ಮತ್ತು ಅವರ ಅನೇಕ ಸಂಗಡಿಗರು ವಿಜಯದಶಮಿ ದಿನದಂದು ರಾಷ್ಟ್ರೀಯ ಸ್ವಯಂ ಸಂಘ ಸ್ಥಾಪನೆ ಮಾಡಿದರು.

ಹಿಂದೂಗಳು ವಿಘಟಿತರಾಗಿದ್ದರಿಂದ, ಶೌರ್ಯದ ಕೊರತೆಯಿಂದ (ಪರಾಕ್ರಮ್) ಮತ್ತು ನಾಗರಿಕ ಸ್ವಭಾವದ ಕೊರತೆಯಿಂದಾಗಿ ಬೆರಳೆಣಿಕೆಯಷ್ಟು ಬ್ರಿಟಿಷರು ಭಾರತದ ವಿಶಾಲ ದೇಶವನ್ನು ಆಳಲು ಸಾಧ್ಯವಾಯಿತು ಎಂದು ಹೆಡ್ಗೆವಾರ್ ನಂಬಿದ್ದರು. ಅವರು ಕ್ರಾಂತಿಕಾರಿ ಹುರುಪಿನಿಂದ ಶಕ್ತಿಯುತ ಹಿಂದೂ ಯುವಕರನ್ನು ನೇಮಿಸಿಕೊಂಡರು, ಅವರಿಗೆ ಕಪ್ಪು ಮೇವಿನ ಕ್ಯಾಪ್, ಕಾಕಿ ಶರ್ಟ್ (ನಂತರ ಬಿಳಿ ಶರ್ಟ್) ಮತ್ತು ಕಾಕಿ ಶಾರ್ಟ್‌ಗಳ ಸಮವಸ್ತ್ರವನ್ನು ನೀಡಿದರು – ಬ್ರಿಟಿಷ್ ಪೋಲಿಸರನ್ನು ಅನುಕರಿಸಿದರು ಮತ್ತು ಅವರಿಗೆ ಲಾಠಿ (ಬಿದಿರು ಸಿಬ್ಬಂದಿ), ಕತ್ತಿ, ಜಾವೆಲಿನ್ ಮೂಲಕ ಅರೆಸೈನಿಕ ತಂತ್ರಗಳನ್ನು ಕಲಿಸಿದರು , ಮತ್ತು ಕಠಾರಿ. ಹಿಂದೂ ಆಚರಣೆಗಳು ಮತ್ತು ಆಚರಣೆಗಳು ಸಂಘಟನೆಯಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ, ಧಾರ್ಮಿಕ ಆಚರಣೆಗಾಗಿ ಅಲ್ಲ, ಆದರೆ ಭಾರತದ ಭವ್ಯವಾದ ಭೂತಕಾಲದ ಅರಿವು ನೀಡಲು ಮತ್ತು ಸದಸ್ಯರನ್ನು ಧಾರ್ಮಿಕ ಸಹಭಾಗಿತ್ವದಲ್ಲಿ ಬಂಧಿಸಲು. ಹೆಡ್ಗೆವಾರ್ ಅವರು ಬೌದ್ಧಿಕ (ಸೈದ್ಧಾಂತಿಕ ಶಿಕ್ಷಣ) ಎಂದು ಕರೆಯಲ್ಪಡುವ ಸಾಪ್ತಾಹಿಕ ಅಧಿವೇಶನಗಳನ್ನು ನಡೆಸುತ್ತಿದ್ದರು, ಅನೇಕ ಹಿಂದೂ ರಾಜರಾದ ಶಿವಾಜಿ ಮಹಾರಾಜರ ಹಿಂದೂ ಕಾಳಜಿ ಯುವಕರಿಗೆ ಹೇಳುತ್ತಿದ್ದರು. ಭಾರತ ದೇಶದ ಸಂಸ್ಕೃತಿ ಬಗ್ಗೆ ಅಧ್ಯಯನ ಮೂಲಕ ಹೇಳುತ್ತಿದ್ದರು. ಹೀಗೆ ಅನೇಕ ಪ್ರಯತ್ನಗಳು ಅವರಿಂದ ಮತ್ತು ಇನ್ನು ಅನೇಕ ಸಂಘದ ಮಹನೀಯರ ಕಡೆಯಿಂದ ಕೆಲಸಗಳು ನಡೆದವು. ಅವರ ಸಂಪೂರ್ಣತೆಯಿಂದ ತೊಡಗಿಕೊಂಡಿದ್ದಕ್ಕೆ ಇಂದು ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಗತ್ತಿನ ಅತಿ ದೊಡ್ಡ ಸಂಘವೆಂದು ಖ್ಯಾತಿ ಪಡೆದಿದೆ.

ಭಾರತ ದೇಶದಲ್ಲೇ ಇದ್ದು, ಭಾರತೀಯರಾಗಿ ಶತ್ರು ದೇಶದ ಪರ ಘೋಷಣೆ ಕೂಗುತ್ತಾರೆ ಎಂದರೆ ನಾವು ಎಡವಿದ್ದೆಲ್ಲಿ ಎಂದು ಯೋಚಿಸಿದಾಗ ನಮ್ಮ ದೇಶದ ಯುವಕರಲ್ಲಿ ದೇಶಪ್ರೇಮ, ರಾಷ್ಟ್ರೀಯತೆ ಕೊರೆತೆ ಎದ್ದು ಕಾಣುತ್ತದೆ. ಭಾರತದಲ್ಲಿ ಅನೇಕ ಧರ್ಮದವರು ಇದ್ದಾರೆ ಅವರೆಲ್ಲರೂ ಭಾರತೀಯರಾಗಿದ್ದಾರೆ ಎನ್ನುವ ಕಾರಣಕ್ಕೆ ಅವರೆಲ್ಲ ದೇಶದಲ್ಲಿ ಸ್ಥಾನ ಪಡೆದಿದ್ದಾರೆ. ಅವರೆಲ್ಲರಿಗೂ ನಾವು ಭಾರತೀಯರಲ್ಲ ಎಂಬ ಮನಸ್ಸಿನಲ್ಲಿ ಇದ್ದಿದ್ದರೆ ಇಷ್ಟೊತ್ತಿಗೆ ಅವರೆಲ್ಲ ದೇಶ ಖಾಲಿ ಮಾಡಬೇಕಿತ್ತು ಅಥವಾ ಅವರ ರಾಷ್ಟ್ರ ವಿರೋಧಿ ದೋರಣೆಯನ್ನು ಬೇರೆಯವರು ದಿಕ್ಕಾರ ಹಾಕಿ ಅದನ್ನು ಸರಿಮಾಡಬೇಕಿತ್ತು. ಅದು ಆಗಿಲ್ಲವೆಂದರೆ ಅದಕ್ಕೆ ಕಾರಣ ನಮ್ಮಲ್ಲೂ ರಾಷ್ಟ್ರೀಯತೆ, ದೇಶಪ್ರೇಮದ ಕೊರೆತೆ ಎದ್ದು ಕಾಣುತ್ತದೆ. ಕಾರಣ ನಮಗೆ ಶಾಲೆಗಳಲ್ಲಿ , ನಮ್ಮ ಮನೆಯಗಳಲಿ ನಮ್ಮ ದೇಶದ ಬಗ್ಗೆ , ನಮ್ಮ ದೇಶ ನಮಗೆಷ್ಟು ಮುಖ್ಯ, ನಮ್ಮ ಮತ್ತು ನಮ್ಮ ದೇಶದ ಸಂಸ್ಕೃತಿ ಏನು ಎಂಬುದು ಸರಿಯಾಗಿ ಕಲಿತಿಲ್ಲ ಅಥವಾ ನಮಗೆ ಯಾರು ಕಲಿಸಿಲ್ಲ.

ಇಂಥಹ ಮುಖ್ಯವಾದ ವಿಷಯಗಳು ಜನರ ಮನದಲ್ಲಿ ಮೂಡಲಿ ಮತ್ತು ಜನರು ಇದನ್ನು ರೂಢಿಮಾಡಿಕೊಳ್ಳಲಿ ಎಂದು ಅನೇಕರು ಎಂದರೆ ವಿದ್ಯಾವಂತರು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಓದಿ ಮದುವೆಯಾಗದೆ ಸಂಘಕ್ಕೆ ಸೇರಿಕೊಂಡು ನಮ್ಮ ದೇಶದ ಸಂಸ್ಕೃತಿ ಮತ್ತು ದೇಶಾಭಿಮಾನದ ಬಗ್ಗೆ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ.

ಸಂಘದ ಪ್ರಚಾರಕರ ಜೀವನ ಅತಿ ಸರಳ ಮತ್ತು ನಿರ್ಮಲವಾದದ್ದು. ಅವರ ಅಂಗಿ ಮತ್ತು ಲುಂಗಿ ಎರಡು ಶುದ್ಧ ಬಿಳಿ! ಅವರ ಹತ್ತಿರ ಹೆಚ್ಚೆಂದರೆ ನೂರು ಅಥವಾ ಸಾವಿರ ಲೆಕ್ಕದಲ್ಲಿ ದುಡ್ಡಿರುತ್ತದೆ ಅದು ತಮ್ಮ ದೈನಂದಿನ ಖರ್ಚಿಗಾಗಿ. ಅದೇ ದುಡ್ಡಿನಲ್ಲಿ ಇನ್ನೊಬ್ಬ ಪ್ರಚಾರಕನಿಗೂ ಸಹಾಯ ಮಾಡುತ್ತಾರೆ ಕಷ್ಟಕಾಲದಲ್ಲಿ! ಸಂಘಕ್ಕೆ ಇತ್ತೀಚಿಗೆ ದಾನಿಗಳು ಕಾಣಿಕೆ ಕೊಟ್ಟಿದ್ದಾರೆ ಅದೆಲ್ಲ ದೇಶದ ಸಲುವಾಗಿ ವಿನಿಯೋಗವಾಗುವ ಹಣ ಎಂಬುದು ಯಾರು ಮರೆಯಬಾರದು. ಮನಸ್ಸು ಮಾಡಿದರೆ ಬುದ್ದಿವಂತರಾಗಿದ್ದ(IIT, IIM products :)) ಇವರು ಕೆಲಸ ಹಿಡಿದು ಅಥವಾ ವ್ಯವಹಾರ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಬಹುದಿತ್ತು ಆದರೆ ಇವರು ಆಯ್ಕೆಮಾಡಿಕೊಂಡಿದ್ದು ತಾಯಿ ಭಾರತ ಮಾತೆಯ ಸೇವೆ!

ಇಂತಹ ಕೆಲಸಗಳು ಕೇವಲ ಒಬ್ಬ ವ್ಯಕ್ತಿಯಿಂದ ಆಗುವ ಕೆಲಸವಲ್ಲ ಇದನ್ನು ಪ್ರತಿಯೊಬ್ಬ ಭಾರತೀಯರ ಮನದಲ್ಲಿ ಇರಬೇಕು ಅದನ್ನು ನಿರಂತರವಾಗಿ ಮುಂದಿನ ಪೀಳಿಗೆಗಳ ಮನದಲ್ಲೂ ಮೂಡುವಂತೆ ಇರಬೇಕು ನಮ್ಮ ಪ್ರಯತ್ನ. ೧೯೪೭ರ ಸ್ವತಂತ್ರ ಪಡೆದ ನಾವು ನಮ್ಮ ದೇಶವನ್ನು ಅಮೆರಿಕಾದ ದೊಡ್ಡಣ್ಣಂತೆ ನಾವು ವಿಶ್ವಗುರುವಾಗಲು ಸದೃಢವಾದ ದೇಶ ಕಟ್ಟಿದರೆ ಮಾತ್ರ ನಮ್ಮ ಮೇಲೆ ಯಾರೂ ದಬ್ಬಾಳಿಕೆ ಮಾಡಲಾರರು ಇಲ್ಲವಾದರೆ ಮತ್ತೆ ಇತಿಹಾಸ ಮರುಕಳಿಸುತ್ತದೆ. ಇಂತಹ ಸದೃಢವಾದ ದೇಶವನ್ನು ಕಟ್ಟುವದರ ಜೊತೆ ಮರೆತ ನಮ್ಮ ದೇಶದ ಸಂಸ್ಕೃತಿಯನ್ನು ನೆನಪಿಸಿ ಭಾರತೀಯರನ್ನು ಜಾಗೃತಗೊಳಿಸುವ ಶಾಲೆಯೇ ನಮ್ಮ ಹೆಮ್ಮೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ!

Categories: Articles

Tagged as: , ,

Leave a Reply