Articles

ಜನಪ್ರಿಯ ನಾಯಕ ವಿಜಯೇಂದ್ರರ ದಾಳಗಳು ಪ್ರಖರವಾಗಿರಲೇಬೇಕು!. ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದು ಜನಪ್ರಿಯತೆ ಮೇಲೇನೆ?

ಚಾಣಕ್ಯನ ಪ್ರಕಾರ ನಿಮಗೆ ವಿರೋಧಿಗಳಿದ್ದರೇ ಅವರನ್ನು ಸದೆಬಡಿದರೆ ಮಾತ್ರ ನಿಶ್ಚಿಂತೆಯಾಗಿ ರಾಜ್ಯಬಾರ ಮಾಡಬಹುದು. ಎರಡು ಕಡೆಯಿಂದ ತರ್ಕ ಬದ್ದ ಯೋಜೆನೆಗಳು ಇರುತ್ತವೆ. ಆದರೆ ಇಲ್ಲಿ ಗಟ್ಟಿಯಾಗಿ ಯಾರು ದಾಳಗಳು ಉರಳಿಸುತ್ತಾರೋ ಅವರು ಗೆಲ್ಲುತ್ತಾರೆ. ವಿರೋಧಿಗಳು ಒಳಗು ಇರಬಹುದು ಅಥವಾ ಹೊರಗೂ ಇರಬಹುದು!

ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೋಗಿದ್ದು ಯಾವ ಕಾರಣಕ್ಕೆ? ಮಹಾಭಾರತದಲ್ಲಿ ಕೌರವರ ಮತ್ತು ಪಾಂಡವರ ನಡುವಿನ ಯುದ್ಧವಾಗಿದ್ದು ಯಾವ ಕಾರಣಕ್ಕೆ? ಹೀಗೆ ಅನೇಕ ಉಧಾಹರಣೆಗಳು ಇತಿಹಾಸದಲ್ಲಿ ನೋಡುತ್ತೇವೆ. ಇವೆಲ್ಲ ಸಂಭವಿಸಿದ್ದು ಅಧಿಕಾರಕ್ಕಾಗಿ! ಅಂದು ಅನೇಕ ಯುದ್ಧಗಳು ಕುಟುಂಬದ ಮಧ್ಯೆ ಅಥವಾ ಬೇರೆ ರಾಜ್ಯದ ಅರಸುಗಳು ದಂಡೆತ್ತಿ ಬಂದು ಅಧಿಕಾರವನ್ನು ಕಸಿದುಕೊಂಡಿದ್ದು ಕೇಳಿದ್ದೇವೆ. ಇವತ್ತಿನ ಸ್ಥಿತಿ ಸ್ವಲ್ಪ ಬೇರೆ! ಖುರ್ಚಿ ಒಂದು, ಪಕ್ಷಗಳು ನೂರೆಂಟು! ಒಂದೊಂದು ಪಕ್ಷದಲ್ಲಿ ಮತ್ತೆ ನೂರಾರು ನಾಯಕರು! ಒಂದು ಪಕ್ಷ ಜನರ ವಿಶ್ವಾಸ ಗಳಿಸಿದರೆ ಖುರ್ಚಿ ಯಾರಿಗೆ ಹೋಗುತ್ತೆ ಮತ್ತು ಅದನ್ನು ಹೇಗೆ ಪಡೆಯಬಹುದು ಎಂಬ ರಾಜಕೀಯ ಲೆಕ್ಕಾಚಾರ! ಇವರೆಲ್ಲರ ಮಧ್ಯೆ ನಡೆಯುವುದು ಯುದ್ಧವೇ ಅಲ್ಲದೆ ಮತ್ತೇನು? ಇವರದು ಮುಸಕಿನ ಗುದ್ದಾಟ! ಒಂದೊಂದು ಬಾರಿ ಓಪನ್ ಯುದ್ಧ! ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಖಂಡಿತ ನಮ್ಮ ಅರವಿಗೆ ಬಾರದೆ ಇರದು! ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲರೂ ಒಂದಿಲ್ಲೊಂದು ಯುದ್ಧದಲ್ಲಿ ಭಾಗಿಯಾಗಿದ್ದಾರೆ.

ಕಾಂಗ್ರೇಸ್ನಲ್ಲಿ ಸಿದ್ದು ಮತ್ತೆ ಮುಖ್ಯಮಂತ್ರಿ ಎಂದು ಸ್ವಲ್ಪ ಜನ ಹೇಳಿದರೇ, ಇನ್ನು ಸ್ವಲ್ಪ ಜನ ಡಿಕೆಶಿ ಅಂತ ಕೂಗುತ್ತಾರೆ! ಇತ್ತ ಬಿಜೆಪಿ ಪಕ್ಷದಲ್ಲಿ ಇಲ್ಲಿಯವರೆಗೆ ಯಡಿಯೂರಪ್ಪನವರೇ ಬಾಸ್ ! ಸದ್ಯ ಬಿಜೆಪಿಯಲ್ಲಿ ಅನೇಕ ನಾಯಕರು ಮುಖ್ಯಮಂತ್ರಿ ಆಗಬೇಕು ಎಂದು ಯೋಚನೆ ಮಾಡುತ್ತಾರೆ ವಿನಃ ಪಕ್ಷವನ್ನು ಸದೃಢವಾಗಿ ಬೆಳಸಬೇಕು ಯೋಚಿಸೋದೋ ವಿರಳ. ಇವತ್ತು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದು ಯಡಿಯೂರಪ್ಪನವರ ಕೃಪೆಯಿಂದ ಎನ್ನವುದು ಕಟುಸತ್ಯ! ಯಡಿಯೂರಪ್ಪ ನಾಯಕನಾಗಿದ್ದು ರಾತ್ರೋರಾತಿಯಲ್ಲ , ಅನೇಕ ಪಾದಯಾತ್ರೆಗಳ ಮೂಲಕ, ಅನೇಕ ಹೋರಾಟಗಳ ಮೂಲಕ ಜನರಿಗೆ ಹತ್ತಿರವಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದು. ಯಡಿಯೂರಪ್ಪ ಮತ್ತು ಅನಂತ ಕುಮಾರ ಕಟ್ಟಿದ ಪರಿಶ್ರಮದಿಂದ ಅನೇಕರು ಅಧಿಕಾರವನ್ನು ಅನುಭವಿಸಿದ್ದು ಕಂಡಿದ್ದೇವೆ. ಯಡಿಯೂರಪ್ಪನವರು ಇಲ್ಲದ ಬಿಜೆಪಿ ದಕ್ಷಿಣ ಭಾರತದಲ್ಲಿ ಶೂನ್ಯ!

ಅಡ್ವಾಣಿ ಮತ್ತು ವಾಜಪೇಯಿ ಪರಿಶ್ರಮದಿಂದ ದೇಶದಲ್ಲಿ ಪಕ್ಷ ಉನ್ನತೀಕರಣವಾಗಿದ್ದು ನೋಡಿದರೆ, ರಾಜ್ಯದಲ್ಲಿ ನಗರ ಪ್ರದೇಶದ ಪಕ್ಷ ಹಳ್ಳಿಗಳಿಗೆ ಹರಡಿದ್ದು ಯಡಿಯೂರಪ್ಪನವರಿಂದ ಮಾತ್ರ! ಅದಕ್ಕೆ ಅಲ್ಲವೇ ಅವರನ್ನು ರೈತ ನಾಯಕ ಎಂದು ಕರೆದಿದ್ದು. ಬಿಜೆಪಿಯಲ್ಲಿ ಮೋದಿಯವರು ನಾನೇ ಉತ್ತರಪ್ರದೇಶದಲ್ಲಿ ಕುಟುಂಬಕ್ಕೆ ಟಿಕೆಟ್ ನಿರಾಕರಿಸಿದ್ದು ಎಂದು ಘಂಟಾಘೋಶವಾಗಿ ಹೇಳಿದ್ದರು. ನಾವು ಕುಟುಂಬ ರಾಜಕಾರಣಕ್ಕೆ ಮನ್ನಣೆ ಕೊಡುವದಿಲ್ಲ. ಆದರೆ ಅತಿ ದೊಡ್ಡ ಪಕ್ಷದಲ್ಲಿ ತಾಕತ್ತು ಇರುವವನು ಜನಪ್ರಿಯತೆ ಹೊಂದಬಹುದಲ್ಲವೇ?

ಯಡಿಯೂರಪ್ಪನವರು ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ರಾಜಕೀಯಕ್ಕೆ ಬಂದವರಲ್ಲ ಹಾಗೆ ವಿಜಯೇಂದ್ರ ಶಾಸಕನಾಗಬೇಕು, ಅಥವಾ ಮಂತ್ರಿಯಾಗಬೇಕು ಎಂದು ರಾಜಕೀಯಕ್ಕೆ ಬಂದವರಲ್ಲ. ಅದೊಂದು ಆಕಸ್ಮಿಕ ಅಭಿಮಾನಿಗಳ ಒತ್ತಡದಿಂದ ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಧುಮಕಿದರು. ಯಾರು ಅವರಿಗೆ ಪ್ರಚಾರ ಮಾಡಿ ಎಂದು ಹೇಳಿದ್ದರೋ ಅವರೇ ನಿಮಗೆ ಟಿಕೆಟ್ ಕೊಡುವದಿಲ್ಲ ಎಂದರೂ ತುಟಿ ಪಿಟಕ್ಕೆ ಅನ್ನದೆ ಎಲ್ಲವನ್ನು ಸರಿಯಾಗಿ ನಿಭಾಯಿಸಿದ ಕೀರ್ತಿ ವಿಜಯೇಂದ್ರವರಿಗೆ ಸಲ್ಲುತ್ತೆ. ಇಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂತ್ರಿ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದು ನಾವು ನೋಡಿದ್ದೇವೆ. ಇದೆ ಮಾಜಿ ಉಪ ಮುಖ್ಯಮಂತ್ರಿ , ಹಿಂದಿನ ಪಂಚಾಯತಿ ಸಚಿವರು ರಾಯಣ್ಣ ಬ್ರಿಗೇಡ್ ಮಾಡಿ ಪಕ್ಷಕ್ಕೆ ಹಾನಿ ಮಾಡಿದ್ದು ನಾವು ನೋಡಿದ್ದೇವೆ. ಇದ್ಯಾವುದು ವಿಜಯೇಂದ್ರ ಮಾಡಿಯೇ ಇಲ್ಲ. ಯಾವಾಗಲೂ ಪಕ್ಷಕ್ಕೆ ಲಾಭವೇ ತಂದುಕೊಟ್ಟಿದ್ದಾರೆ.

ವಿಜಯೇಂದ್ರ ಪರಿಷತ್ ಚುನಾವಣೆಗೆ ಹೆಸರು ಗಣನೆಗೆ ತಗೆದುಕೊಂಡು ಅವರನ್ನು ಕೈಬಿಟ್ಟಿದ್ದು ಸರಿಯಿಲ್ಲ. ಅವರನ್ನು ಸದಸ್ಯನ್ನಾಗಿ ಮಾಡುವ ಮನಸ್ಸು ಇಲ್ಲದೆ ಇದ್ದರೇ ಅವರ ಹೆಸರು ಲಿಸ್ಟಲ್ಲಿ ಸೇರಿಸಬಾರದಿತ್ತು. ಅಭಿಮಾನಿಗಳ ಪ್ರಕಾರ ಜನಪ್ರಿಯ ನಾಯಕನಿಗೆ ಮಾಡುತ್ತಿರುವ ಅವಮಾನ. ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದಾಗ ಅವರನ್ನು ತಣಿಸಿದ್ದು ವಿಜಯೇಂದ್ರ! ಇನ್ನೂ ಅಭಿಮಾನಿಗಳ ಸಹನೆ ಕಟ್ಟೆ ಶಾಂತವಾಗಿರುವದಕ್ಕೆ ಕಾರಣ ೨೦೨೩ರ ಅಖಾಡಕ್ಕೆ ಅಣ್ಣ ನೇರವಾಗಿ ಧುಮಕಲಿ ಎಂಬ ಆಶೆ! ಮರಿಹುಲಿಯನ್ನು ಜನರಿಂದ ಭರ್ಜಿರಿಯಾಗಿ ಗೆಲ್ಲಿಸಬೇಕು ಮತ್ತು ಅವರ ತಾಕತ್ತು ತೋರಿಸಬೇಕು ಎಂಬ ಬಯಕೆ.

ವಿಜಯೇಂದ್ರ ರಾಜ್ಯದ ಯಾವದೇ ಮೂಲೆಗೆ ಹೋದರು ಜನರು ಸೇರುವುದು ನೋಡಿದ್ದೇವೆ. ನಾಯಕತ್ವ ಎನ್ನುವುದು ಜನಪ್ರಿಯತೆ ಮೇಲೆ ನಿಂತಿದೆ. ವಿಜಯೇಂದ್ರ ಯಡಿಯೂರಪ್ಪನವರು ಮಗ ಹೌದು ಆದರೇ ಅದರ ಆಚೆಗೂ ಅವರು ಬೆಳೆದು ನಿಂತಿದ್ದಾರೆ. ಜನರಿಗೆ ಕಷ್ಟಕಾಲದಲ್ಲಿ ನೆರವಾದರೆ ಮಾತ್ರ ನಾಯಕ ಎಂದು ಒಪ್ಪಿಕೊಂಡಿರುತ್ತಾರೆ. ಅದನ್ನು ಅವರು ಚೆನ್ನಾಗಿ ರೂಡಿಸಿಕೊಂಡು ಜನರಿಗೆ ನೆರವಾಗಿದ್ದಕ್ಕೆ ಇಂದು ಅವರ ಜನಪ್ರಿಯತಕ್ಕೆ ಸಾಕ್ಷಿ!

ಮೋದಿಯವರ ಜನಪ್ರಿಯತೆ ವಿಜಯೇಂದ್ರರವರ ಜನಪ್ರಿಯತೆಗೆ ಹೋಲಿಕೆ ಸಲ್ಲ. ಆದ್ರೂ ಅಂದು ಮೋದಿಯವರಿಗೆ ಅನೇಕ ಜನರು ಅವರನ್ನು ಪ್ರಧಾನಮಂತ್ರಿ ಮಾಡಲು ಇಷ್ಟವಿರಲಿಲ್ಲ. ಜನರಿಗೆ ಮೋದಿ ಬೇಕಾಗಿತ್ತು, ಆದರೆ ಪಕ್ಷಕ್ಕೆ ಬೇಕಾಗಿರಲ್ಲ.(ಸ್ವಲ್ಪ ಜನಕ್ಕೆ). ಆದರೂ ರಾಜನಾಥ್ ಸಿಂಗ್ ಅದಕ್ಕೆ ಕ್ಯಾರೇ ಎನ್ನದೆ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆಮಾಡಿ ಪಕ್ಷದ ಅಧ್ಯಕ್ಷಗಿರಿಗೆ ಜೈ ಹೊ ಎನಿಸಿಕೊಂಡಿದ್ದರು.

ಬಿಜೆಪಿ ಪಕ್ಷದಲ್ಲಿ ಸದ್ಯ ನಡೆಯುತ್ತಿರುವ ಯುದ್ಧದಲ್ಲಿ ಖಂಡಿತ ಅನೇಕ ನಾಯಕರು ವಿಜಯೇಂದ್ರರವರನ್ನು ಕುಟುಂಬದ ನೆಪದಲ್ಲಿ ಅವರನ್ನು ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕೆ ಅನೇಕ ಹಿರಿಯ ನಾಯಕರ ಆಶೀರ್ವಾದ ಖಂಡಿತ ಇದೆ. ಇದು ವಿಜಯೇಂದ್ರ ಅವರಿಗೂ ತಿಳಿದಿದೆ. ೧೯೪೭ ರಿಂದ ೧೯೮೪ ರ ಕಾಂಗ್ರೇಸ್ ಪಕ್ಷಕ್ಕೆ ವಿರೋಧಿಗಳೇ ಇರಲಿಲ್ಲ. ಕಾರಣ ಅನೇಕ ಒಳ್ಳೆಯ ನಾಯಕರಿಗೆ ಕಾಂಗ್ರೇಸ್ ನಡೆಯಿಸಿಕೊಂಡ ರೀತಿಯಿಂದ ಮನನೊಂದು ಹೊರಗೆ ಹೋಗಿ ಬೆಳೆದು ನಿಂತು ಕಾಂಗ್ರೇಸ್ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದರು. ಜನತಾ ಪಕ್ಷ ಕಟ್ಟಿದವರು ಬಂದಿದ್ದು ಕಾಂಗ್ರೇಸ್ ಪಕ್ಷದಿಂದ! ಅದಾದ ಮೇಲೆ ಶರತ್ ಪವಾರ, ಪಿ ಏ ಸಂಗ್ಮಾ ಮತ್ತು ಇತ್ತೀಚಿಕೆ ಆಂದ್ರದಲ್ಲಿ ಜಗಮೋಹನ್ ರೆಡ್ಡಿ ಹೊರ ಹೋದ ನಂತರ ಕಾಂಗ್ರೇಸ್ ಪಕ್ಷದ ಕುರುಹು ಸಿಗುವದಿಲ್ಲ. ಕಾಂಗ್ರೇಸ್ ಪಕ್ಷ ಸೋತಿದ್ದು ಒಳ್ಳೆಯ ನಾಯಕರನ್ನು ಗುರುತಿಸದೆ ಮಾಡಿದ ತಪ್ಪಿನಿಂದ ಅಧೋಗತಿಗೆ ಬಂದು ನಿಂತಿದೆ.

ಇಂದು ರಾಜ್ಯದಲ್ಲಿ ವಿಜಯೇಂದ್ರರವರ ಜನಪ್ರಿಯತೆ ಇದ್ದೆ ಇದೆ. ಅದನ್ನು ಪಕ್ಷ ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಖಂಡಿತ ಪಕ್ಷಕ್ಕೆ ಲಾಭ ತಂದುಕೊಡುತ್ತದೆ. ಇದನ್ನು ಈಗಾಗಲೇ ಉನ್ನತ ತಂಡ ಸಮೀಕ್ಷೆ ಮಾಡಿದೆ. ಅವರು ಇದರ ಬಗ್ಗೆ ಮೇಲಿನವರಿಗೆ ಮುಟ್ಟಿಸಿದ್ದಾರೆ. ಇದಾರ ಫಲಿತಾಂಶ ನಾವು ೨೦೨೩ರಲ್ಲಿ ಕಾಣಬಹುದು. ಕೇವಲ ಕುಟುಂಬ ರಾಜಕಾರಣ ಮುಂದಿಟ್ಟಿಕೊಂಡು ಅವರಿಗೆ ಬೆಳೆಯಲು ಅವಕಾಶ ಕೊಡದೆ ಇದ್ದರೇ ಅದು ಪಕ್ಷಕ್ಕೆ ಹಾನಿ! ವಿಜಯೇಂದ್ರ ಜನರ ನಾಯಕನಲ್ಲ , ಅವರಿಗೆ ತಂದೆಯ ಹೆಸರಿನಿಂದ ಟಿಕೆಟ್ ಕೊಡಬೇಕು ಎಂದು ಎನಿಸಿದರೆ ಖಂಡಿತ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡಬೇಡಿ. ನಿಮ್ಮ ಒಳ ಅಥವಾ ಹೊರ ಏಜನ್ಸಿ ಅವರಿಂದ ಸಮೀಕ್ಷೆ ಮಾಡಿ , ಅಳೆದು ತೂಗಿ ನೋಡಿ ಟಿಕೆಟ್ ಕೊಡಿ. ಸಮೀಕ್ಷೆಯಲ್ಲಿ ಈಗಿರುವ ಎಲ್ಲ ನಾಯಕರಿಗಿಂತ ಅವರಿಗೆ ಜನ ಬೆಂಬಲ ಕೊಡುತ್ತಾರೆ ಎಂದು ವಿಜಯೇಂದ್ರ ಅಭಿಮಾನಿಗಳ ಮಾತು.

ಅವರಿಗೆ ಶಾಸಕರಾಗಿ ಮಾಡಿದರೆ ಮುಂದೊಂದು ದಿನ ನಮ್ಮ ದಾರಿಗೆ ಅಡ್ಡ ಎಂದು ವಿರೋಧಿಗಳ ಗುಂಪು ವಿಜಯೇಂದ್ರರವರಿಗೆ ಹಿನ್ನಡೆ ಮಾಡುತ್ತಿದ್ದಾರೆ. ಈ ದಾಳಗಳು ವಿಜಯೇಂದ್ರರವರಿಗೆ ಗೊತ್ತಿರದ ವಿಷವೇನಲ್ಲ. ಆದರೆ ಎಲ್ಲವನ್ನು ಸಹಿಸಿಕೊಂಡಿದ್ದು ಆಗಿದೆ! ಇನ್ನೇನಿದ್ದರೂ ಮುಟ್ಟಿನೋಡಿಕೊಳ್ಳುವಂತೆ ದಾಳಗಳು ಇರಲೇಬೇಕು ಎಂದು ಅವರ ಬೆಂಬಲಿಗರ ವಾದ. ಅದನ್ನೇ ಟ್ರೈಲರ್ ರೂಪದಲ್ಲಿ ಹೊಳೆನರಸೀಪುರದ ಕಾರ್ಯಕ್ರಮದಲ್ಲಿ ನೋಡಿದ್ದೀರಿ. ಯುವಕ ವಿಜಯೇಂದ್ರ ಸಾಫ್ಟ್ ಸ್ವಭಾವ ಬಿಟ್ಟು ಸ್ವಲ್ಪ ಟೈಗರ್ ಸ್ವಭಾವ ಪರಿಚಯ ಮಾಡಿಕೊಡುವ ಕಾಲ ಬಂದಂತಿದೆ. ರಾಜಕೀಯದಲ್ಲಿ ದಾಳಗಳ ಪ್ರಯೋಗ ಸಾಮಾನ್ಯ! ಆದರೆ ದಾಳಗಳಿಗೆ ಪ್ರತಿದಾಳ ಪ್ರಯೋಗಿಸುವ ಜಾಣ್ಮೆ ವಿಜಯೇಂದ್ರವರಿಗೆ ಇದೆ ! ಅದರಲ್ಲಿ ಅವರು ಯಶಸ್ವಿಯಾಗಿ ಮುಂದೊಂದು ದಿನ ಮತ್ತೆ ಪಕ್ಷದ ಕೀರ್ತಿಪತಾಕೆ ಹಾರಿಸುತ್ತಾರೆ ಎಂದು ಅಭಿಮಾನಿಗಳ ಆಶಯ.

Categories: Articles

Leave a Reply