news

ರಕ್ಷಿತ್ ಶೆಟ್ಟಿಯ “೭೭೭ ಚಾರ್ಲಿ” ಪ್ರೀಮಿಯರ್ ಷೋನಲ್ಲಿ ಜೈ ಹೊ.

ಮನುಷ್ಯತ್ವದ ಪಾಠವನ್ನು ಹೇಳಿದ ಹಾಗೆ ಚಾರ್ಲಿ ಸಿನಿಮಾದಲ್ಲಿ ಕಾಣಬಹದು. ವಿವಿಧ ನಗರಗಳಲ್ಲಿ ಚಾರ್ಲಿ ಶೋ ಜನರು ನೋಡಿ ಇದೊಂದು ಉತ್ತಮ ಚಿತ್ರ ಮತ್ತು ನಾಯಿಗಳನ್ನು ಪ್ರೀತಿಸುವವರು ನೋಡಬಹುದು ಮತ್ತು ಮನುಷ್ಯತ್ವ ಇದ್ದವರು ನೋಡಲೇಬೇಕು ಅಂತೇ! ಪ್ರಾಣಿ ಧರ್ಮನ ಜೀವನದಲ್ಲಿ ಹೇಗೆ ಭಾವನೆಗಳನ್ನು ಹುಟ್ಟಾಕುತ್ತದೆ ಎಂದು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಅನೇಕರ ಇದರ ಬಗ್ಗೆ ವಿಮರ್ಶೆ ಮಾಡಿದ್ದಾರೆ ಆದರೆ ಅದನ್ನು ಇಲ್ಲಿ ಹೇಳುವುದಕ್ಕೆ ಹೋಗುವದಿಲ್ಲ ಕಾರಣ ನಾನು ಇನ್ನು ಚಿತ್ರ ನೋಡಿಲ್ಲ ಆದರೆ ಜನರ ಅಭಿಪ್ರಾಯ ಕೇಳಿ ತುಂಬಾ ಸಂತೋಷವಾಗಿದೆ. ರಕ್ಷಿತ್ ಶೆಟ್ಟಿಯವರು ಶ್ರಮಪಟ್ಟು ಒಂದು ಕನ್ನಡದ ಚಿತ್ರವನ್ನು ಮಾಡಿದ್ದಾರೆ. ಅದರ ಜೊತೆ ಎಲ್ಲರಿಗೂ ಮುಟ್ಟಿಸುವ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಇದನ್ನು ಕನ್ನಡಿಗರು ನೋಡಲೇಬೇಕು! ಹೊಸತನವನ್ನು ಮೆಚ್ಚಿ ಹಾರೈಸಿದರೆ ಖಂಡಿತ ಇನ್ನೂ ಅನೇಕರು ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಾರೆ.

ಜೂನ್ ೧೦ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಒಳ್ಳೆಯದು ಆಗಲಿ ಮತ್ತು ಯಶಸ್ವಿಸಿಗಲಿ ಎಂದು ಹಾರೈಸೋಣ!

Categories: news

Leave a Reply