By Bhimashankar Teli
ನಮ್ಮ ದೇಶದಲ್ಲಿ ಭಾಷೆಯ ಸಮಸ್ಯೆ ಎಂದಿಗಿಂತಲೂ ಇಂದು ಸ್ವಲ್ಪ ಜಾಸ್ತಿನೇ ಇದೆಯಾ? ಇದು ನಿಜವಾಗಿ ಜನರ ಸಮಸ್ಯೆನಾ ಅಥವಾ ರಾಜಕೀಯ/ನಾಯಕರ/ಪುಡಾರಿಗಳ ಒಳಆಟವಾ? ಇದಕ್ಕೆ ನೇರವಾಗಿ ಉತ್ತರ ಹೇಳದೆ ಹೋದರು ನನ್ನ ಅಭಿಪ್ರಾಯ ಖಂಡಿತ ವ್ಯಕ್ತಪಡಿಸುತ್ತೇನೆ. ಕಾರಣ ನನಗೆ ನನ್ನ ಮಾತೃಭಾಷೆ ಬಹಳ ಮುಖ್ಯ ಮತ್ತು ಬೇರೆ ಭಾಷೆಗಳಿಗೆ ಗೌರವ ಕೊಡುವ ಜಾಯಮಾನ ನನ್ನದು. ನಾಯಕರಿಗೂ ತಮ್ಮ ಭಾಷೆ ಮುಖ್ಯ ಅಂತಾನೆ ಹೋರಾಟಕ್ಕೆ ದುಮಿಕಿರುತ್ತಾರೆ. ಆದರೆ ಒತ್ತಡಕ್ಕೆ ಒಳಗಾಗಿ ಸ್ವಲ್ಪ ರಾಜಕೀಯ ಬೆರೆಸಿರುತ್ತಾರೆ ಅಷ್ಟೇ!
ಕನ್ನಡ ಭಾಷೆಯನ್ನಾಡುವ ಕನ್ನಡಿಗರ ರಾಜ್ಯ ಕರ್ನಾಟಕ. ಈಗಿನ ಭೌಗೋಳಿಕ ವ್ಯಾಪ್ತಿಯ ಕರ್ನಾಟಕ ೧೯೫೬ರಲ್ಲಿ ರಚನೆಯಾದರೂ, ಆಗ ರಾಜ್ಯದ ಹೆಸರು ಮೈಸೂರು ಎಂದೇ ಉಳಿದಿತ್ತು. ಸಂವಿಧಾನಾತ್ಮಕ ಕರ್ನಾಟಕ ಎಂಬ ಹೆಸರು ದೊರೆತದ್ದು ೧೯೭೩ರಲ್ಲಿ. ೧೯೫೬ಕ್ಕೆ ಮೊದಲು ಬಹುಕಾಲ, ಕನ್ನಡ ಭಾಷಿಕರು ಅಧಿಕವಾಗಿಯೇ ಇದ್ದ ಪ್ರದೇಶಗಳು ಬೇರೆ ಬೇರೆ ಪ್ರಾಂತ ಮತ್ತು ಸರ್ಕಾರಗಳಲ್ಲಿ ಹಂಚಿಹೋಗಿದ್ದವು. ಗಂಗ ,ಬಾದಾಮಿ ಚಾಲುಕ್ಯ , ರಾಷ್ತ್ರಕೂಟ , ಕಲ್ಯಾಣ ಚಾಲುಕ್ಯ , ಹೊಯ್ಸಳ, ಸೇವುಣ, ವಿಜಯನಗರ , ಮೈಸೂರ ಇತ್ಯಾದಿ ವಂಶಗಳು ಕರ್ನಾಟಕವನ್ನಾಳಿವೆ. ಇವರೆಲ್ಲರ ಆಡಳಿತದಲ್ಲೂ ಕರ್ನಾಟಕ ಗಡಿರೇಖೆ ಬದಲಾಗುತ್ತಲೇ ಇತ್ತು ಎನ್ನುವುದು ಇತಿಹಾಸದಿಂದ ತಿಳಿಯುತ್ತದೆ. ಕಾವೇರಿಯಿಂದ ಗೋಧವರಿಯವರಿಗೆ ಮಾತ್ರವಲ್ಲದೆ ನರ್ಮದೆಯ ತೀರದವರಿಗೆ ಕರ್ನಾಟಕ ವ್ಯಾಪ್ತಿ ಇತ್ತು ಎಂಬುದು ಇತಿಹಾಸಕಾರರ ಅಭಿಪ್ರಾಯ. ಆದರೆ ಆಕ್ರಮಣದ ಮೂಲಕ ರಾಜ್ಯದ ವ್ಯಾಪ್ತಿ ಕುಗ್ಗಿದ್ದು, ಹಿಗ್ಗಿದು ಇದೆ. ಮೊದಲೇ ಹರಿದು ಹಂಚಿ ಹೋಗಿದ್ದ ರಾಜ್ಯ ಬ್ರಿಟಿಷರ ಆಡಳಿತದಲ್ಲಿ ಮತ್ತಷ್ಟು ವಿಭಜನೆಯಾಗಿತ್ತು. ಇಲ್ಲಿ ಗಮನಿಸಿ ವಿಭಜನೆ ಆಗಿ ಕನ್ನಡಿಗರು ಬೇರೆಯವರ ರಾಜ್ಯದಲ್ಲಿ ಪರಕೀಯರಂತೆ ಜೀವಿಸಿದ್ದಾರೆ ಕಾರಣ ಬೇರೆ ಭಾಷೆ ಮತ್ತು ಸಂಸ್ಕೃತಿ ಬಲವಂತದ ಹೇರಿಕೆ!
ನಮ್ಮ ಜನರಿಗೆ ಬಲವಂತದ ದಿನಗಳು ಕಳೆದ ಮೇಲೆ ಮತ್ತೆ ಒಂದಾಗುವ ಪ್ರಯತ್ನ ಮಾಡಿದ್ದು ಇದೆ. ಶ್ರಮದಿಂದ ಕಡೆಗೂ ತಕ್ಕ ಮಟ್ಟಿಗೆ ಒಂದಾಗಿದ್ದು ಕರ್ನಾಟಕ ಏಕೀಕರಣ ಆದ ನಂತರವೇ! ಅದಕ್ಕೆ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ವೀರ ಕನ್ನಡಿಗರ ಶ್ರಮ ಎಂದೂ ಮರೆಯಬಾರದು! ಮತ್ತು ಕರ್ನಾಟಕದ ಮತ್ತು ಕನ್ನಡಿಗರ ಬಲ ವಿರುವುದು ಒಗ್ಗಟ್ಟಿನಲ್ಲಿ!
ಕರ್ನಾಟಕದ ಗಡಿರೇಖೆಯನ್ನು ಗುರುತಿಸುವ ಅನೇಕ ಕೃತಿಗಳು ಸಹಾಯಮಾಡುತ್ತವೆ ಆದರೆ ಅತಿ ಹಿಂದೆ ನಮ್ಮ ಭಾಷೆ ಯಾವದಿತ್ತು ಎಂದು ಹೇಳುವದು ಕಷ್ಟ! ಅವರ ಭಾಷೆ ದ್ರಾವಿಡ ಭಾಷೆಯಾಗಿತ್ತು ಎಂದು ಹೇಳಿದ್ದಾರೆ. ಕಾರಣ ಸರಿಯಾದ ಪುರಾವೆ ಇಲ್ಲ(ಯಾಕೆ ಇಲ್ಲ?). ರಾಜ್ಯ ವಿಸ್ತಾರಣೆ ಮಾಡುವಾಗ ಯುದ್ಧಗಳು ನಡೆಯುತ್ತಿದ್ದವು ಅಂತಹ ಸಮಯದಲ್ಲಿ ಭಾಷೆಗೆ ಮತ್ತು ಸಂಸ್ಕೃತಿಗೆ ಹಾನಿ ಮಾಡಿ ಅದರ ಕುರುಹು ಸಿಗದಹಾಗೆ ಮಾಡುತ್ತಿದ್ದರು. ನಮ್ಮ ರಾಜ್ಯದ ಇತಿಹಾಸ ಆರಂಭವಾಗುವುದು ೩ನೇ ಶತಮಾನದಿಂದ, ಅದಕ್ಕಿಂತ ಮೊದಲಿನ ಧಾಖಲೆಗಳು ಲಭ್ಯವಿಲ್ಲ! ಕರ್ನಾಟಕದಲ್ಲಿ ದೊರೆತಿರುವ ಬರಹಗಳೆಂದರೆ ಅಶೋಕನ ಶಾಸನಗಳು , ಇವೆಲ್ಲವುಗಳ ಭಾಷೆ ಪ್ರಾಕೃತ ಮತ್ತು ಲಿಪಿ ಬ್ರಾಹ್ಮೀ!
ಕರ್ನಾಕದಲ್ಲೇ ಸಿಕ್ಕಿರುವ ಬರಹ ಕನ್ನಡ ಭಾಷೆಯಲ್ಲಿ ಇರಲಿಲ್ಲ, ಇದಕ್ಕೆ ಕಾರಣವೂ ಇದೆ . ಅಶೋಕನು ಬೌದ್ಧ ಧರ್ಮದ ಪ್ರಚಾರಕರನ್ನು ಕಳುಹಿಸಿದ್ದ. ಅವುಗಳು ಪ್ರಾಕೃತ ಮತ್ತು ಲಿಪಿ ಬ್ರಾಹ್ಮೀ ಭಾಷೆಗಲ್ಲಿ ಇದ್ದವು. ಯಾಕೆ ನಮ್ಮ ಕನ್ನಡ ಭಾಷೆ ಲಿಪಿ ಇರಲಿಲ್ಲವಾ? ಖಂಡಿತ ಇತ್ತು ಅದು ಕನ್ನಡಿಗರ ಮನೆಗಳಲ್ಲಿ ಇತ್ತು! ಅಂದು ಕನ್ನಡಿಗರಿಗೆ ಪ್ರಾಕೃತ ಮತ್ತು ಬ್ರಾಹ್ಮೀ ಲಿಪಿಯ ಬಗ್ಗೆ ಪರಿಚಯ ಚೆನ್ನಾಗಿಯೇ ಇರಬೇಕು. ಕನ್ನಡ ಕೇವಲ ಜನರ ಸಂಪರ್ಕ ಭಾಷೆಯಾಗಿ ಇದ್ದಿರಬೇಕು ಎಂದು ಭಾವಿಸಬೇಕು! ಅಂದೇ ನಮ್ಮವರು ನಮ್ಮ ಭಾಷೆಯಲ್ಲಿ ಬರಹಗಳು ಬೇಕು ಎಂದು ಹೋರಾಟ ಮಾಡಿದ್ದರೇ ನಮಗೆ ಧಾಖಲೆಗಳು ದೊರೆಯುತ್ತಿದ್ದವು. ಇದನ್ನು ನಾವು ಇಂದಿನ ಕಾಲಕ್ಕೆ ಹೋಲಿಕೆ ಮಾಡಿ ಒಂದು ವೇಳೆ ನಮ್ಮ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಮಾಡದೆ ಹೋದರೆ ಮುಂದೆ ಸಾವಿರ ವರ್ಷದ ನಂತರ ಆಂಗ್ಲಭಾಷೆ ಮಾತ್ರ ಇತ್ತು ಎಂದು ಹೇಳಬಹುದಲ್ಲವೇ? ಹೇಗೆ? ಬನ್ನಿ ನೋಡೋಣ.
ಸದ್ಯದ ಮಟ್ಟಿಗೆ ವಿಧಾನಸಭೆ, ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್ತು ಮತ್ತು ಅನೇಕ ಸರ್ಕಾರಿ ಕಚೇರಿಗಳು ಎಲ್ಲ ಕಡತಗಳನ್ನು ಸಂಗ್ರಹ ಮಾಡಿ ಇಡುತ್ತಾರೆ. ಬೇರೆ ಸಾರ್ವಜನಿಕರ ಕಡತಗಳು ಸಂಗ್ರಹವಾದರೂ ಮುಂದೆ ಲೆಕ್ಕಕ್ಕೆ ಬರುವದಿಲ್ಲ. ಮತ್ತೆ ಬೇರೆ ದೇಶದ ಸರ್ಕಾರಿ ಪಧಾಧಿಕಾರಿಗಳು ನಮ್ಮ ದೇಶಕ್ಕೆ ಬಂದಾಗ ಅವರಿಗೆ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಬರಹಗಳನ್ನು ಒದಗಿಸುತ್ತಾರೆ. ಇಲ್ಲಿಗೆ ಒಂದನ್ನು ಗಮನಿಸಿ ಸಂಗ್ರಹವಾಗುವ ನಮ್ಮ ಕಡತಗಳು ಮುಂದೆ ನಮ್ಮ ಇತಿಹಾಸವನ್ನು ಹೇಳುತ್ತವೆ! ಇತಿಹಾಸ ಓದಿ , ಅದರ ಬಗ್ಗೆ ಆಳವಾದ ಅಧ್ಯಯನ ಮಾಡಿ ಹೇಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅಳಿಸದೆ ಇರಬೇಕು ಎಂದರೆ ನಮ್ಮ ಎಲ್ಲ ಸರ್ಕಾರಿ ಕಡತಗಳು ನಮ್ಮ ಭಾಷೆಯಲ್ಲಿ ಇರಬೇಕು. ಬೇರೆ ದೇಶದವರು ಬಂದಾಗು ಸಹಿತ ಆಂಗ್ಲದ ಜೊತೆ ನಮ್ಮ ಭಾಷೆಯು ಉಪಯೋಗಮಾಡಿಕೊಳ್ಳಬೇಕು. ಇದನ್ನು ನಮ್ಮ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರು ಅನೇಕ ಬಾರಿ ಹೇಳಿದ್ದಾರೆ. ಆದರೆ ಇದರ ಪರಿಪೂರ್ಣ ಅರಿವು ನಮಗೆ ಇಲ್ಲವೇ ಇಲ್ಲ. ಪಕ್ಕದ ರಾಜ್ಯದ ಬರಹಗಳು ಅವರೇ ಭಾಷೆಯಲ್ಲೇ ಧಾಖಲೆಗಳು ಸಿಕ್ಕಿವೆ ಎಂದರೇ ಅವರು ತಮ್ಮ ಭಾಷೆಗೆ ಸಂಪೂರ್ಣ ಬೆಂಬಲಕೊಟ್ಟಿದ್ದಾರೆ. ಇವತ್ತಿಗೂ ಅದನ್ನು ನಾವು ನೋಡಬಹುದು! ಅಲ್ಲವೇ?
ದೇಶದ ಕಾನೂನಿನ ಪ್ರಕಾರ ನಮಗೆ ರಾಷ್ಟ್ರಭಾಷೆ ಇಲ್ಲ. ಹಿಂದಿ ಕೇವಲ ಸರ್ಕಾರಿ ಆಡಳಿತದಲ್ಲಿ ಉಪಯೋಗ ಮಾಡುವ ಭಾಷೆ! ಆದರೆ ಎಲ್ಲ ಪಠ್ಯ ಪುಸ್ತಕಗಳಲ್ಲಿ ಇಂದಿಗೂ ಅದೊಂದು ರಾಷ್ಟ್ರಭಾಷೆಯಾಗಿ ಮಕ್ಕಳಿಗೆ ಕಲಿಸುತ್ತಾರೆ . ಅಷ್ಟೇ ಯಾಕೆ ಹಿಂದಿ ಪುಸ್ತಕದಲ್ಲಿ ಭಾರತದ ಭಿನ್ನ ಭಿನ್ನ ಭಾಷೆಗಳಲ್ಲಿ ಕೇವಲ ಉತ್ತರ ಭಾರತದ ಭಾಷೆಗಳು ಮಾತ್ರ ಕಾಣಸಿಗುತ್ತವೆ! ಕಾರಣ ನಾವು ಅದಕ್ಕೆ ಪ್ರತಿರೋಧ ಮಾಡಲ್ಲ! ನಾವೆಲ್ಲ ರಾಷ್ಟ್ರಪ್ರೇಮಿಗಳೆಂದು ನಮ್ಮತನವನ್ನು ಬಿಟ್ಟಿಕೊಟ್ಟರೆ ಮುಂದೆ ಇತಿಹಾಸದಲ್ಲಿ ಮತ್ತೊಮ್ಮೆ ದಬ್ಬಾಳಿಕೆಗೆ ತುತ್ತಾಗಬೇಕಾಗಬಹುದು. ನಾವು ಭಾರತೀಯರು ಮತ್ತು ನಮಗೆ ದೇಶದ ಬಗ್ಗೆ ಅಪಾರ ಗೌರವ ಇದೆ. ಇದರ ಜೊತೆಗೆ ಬೇರೆ ಭಾಷೆಯ ಬಗ್ಗೆ ಗೌರವವೂ ಇದೆ. ಆದರೆ ನನ್ನ ಭಾಷೆ ಮೊಟ್ಟ ಮೊದಲಿಗೆ ಮತ್ತು ಎಲ್ಲವನ್ನು ನನ್ನ ಭಾಷೆಯಲ್ಲೇ ಸಿಗುವ ಹಾಗೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದು! ಕನ್ನಡಿಗನಾಗಿ ಭಾರತೀಯನಾಗುವದಕ್ಕೆ ನನಗೆ ಹೆಮ್ಮೆ ಇದೆ!
ಸುದೀಪ್ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಯಾವದೋ ಸಂದರ್ಭದಲ್ಲಿ ಹೇಳಿದ್ದರು. ಅದು ಸರಿಯೇ ಇತ್ತು. ಆದರೆ ಹಿಂದಿ ನಟ ಅದನ್ನು ದೊಡ್ಡದು ಮಾಡಿ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿದ್ದು ಗೊತ್ತಿರುವ ವಿಷಯವೇ! ನಾವು ಕನ್ನಡಿಗರು, ನಾವು ಹಿಂದಿ ವಿಷಯವನ್ನು ಕಲಿತಿದ್ದೇವೆ. ಅದರ ಉಪಯೋಗ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅದೊಂದು ನಮ್ಮ ದೇಶದ ಭಾಷೆ ಮತ್ತು ಜಾಸ್ತಿ ಜನರನ್ನು ಒಂದುಗೂಡಿಸುತ್ತದೆ ಎಂದು ನಾವೆಲ್ಲಾ ಕಲಿತಿದ್ದೇವೆ ಮತ್ತು ಅದರ ಬಗ್ಗೆ ಗೌರವನು ಇದೆ. ಆದರೆ ಕೇವಲ ಹಿಂದಿ ಮಾತನಾಡಿದರೆ ಮಾತ್ರ ಭಾರತೀಯ ಎಂದು ಭಾವಿಸುವ ಜನರನ್ನು ಏನೆಂದು ಕರೆಯಬೇಕು? ಇವರಿಗೆ ಬಿಸಿ ಮುಟ್ಟಿಸಬೇಕಾದರೆ ನಮ್ಮ ಭಾಷೆಯನ್ನು ನಾವು ಗಟ್ಟಿಯಾಗಿ ಬೆಂಬಲಿಸಬೇಕು. ಯಾವದೇ ಸರ್ಕಾರಿ ಫಲಕಗಳು, ಸರ್ಕಾರಿ ಕಡತಗಳು , ಕೇಂದ್ರ ಮತ್ತು ರಾಜ್ಯದಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ಇರಲೇಬೇಕು. ಅನೇಕ ಜನರಿಗೆ ಆಂಗ್ಲ ಬರುವದಿಲ್ಲ ಅವರಿಗೂ ಕಡತಗಳು ಕನ್ನಡದಲ್ಲಿ ಇದ್ದರೇ ಸರಳವಾಗಿ ಅವರೇ ಓದುತ್ತಾರೆ. ಸದ್ಯಕ್ಕೆ ಹೆಚ್ಚಾಗಿ ಕಡತಗಳು ಕನ್ನಡದಲ್ಲಿ ಇವೆ ಆದರೂ ನೂರಕ್ಕೆ ನೂರು ಎಲ್ಲ ಮಾಹಿತಿಗಳು ನಮ್ಮ ಮಾತೃಭಾಷೆಯಲ್ಲೇ ಇರಬೇಕು.
ಕರ್ನಾಟಕದ ಗಡಿಗಾಗಿ, ಕನ್ನಡಿಗರ ಕನ್ನಡ ಭಾಷೆಗಾಗಿ, ಕನ್ನಡಿಗರ ಸಂಸ್ಕೃತಿಗಾಗಿ ನಾವು ಯಾವಾಗಲೂ ಜಾಗರೂಕತೆಯಿಂದ ಇರಬೇಕು ಮತ್ತು ಸಮಯ ಬಂದಾಗ ಬೆಂಬಲಿಸಬೇಕು.
*ಯಾವದಾದರೂ ಮಾಹಿತಿ ಸರಿವಿಲ್ಲದೆ ಇದ್ದರೇ ದಯವಿಟ್ಟು ಬರೆದು(comment box) ತಿಳಿಸಿ.*
Categories: Articles
