Articles

ಉತ್ಸವ ಹುಟ್ಟಿದ್ದು ಪಕ್ಷದಲ್ಲಿ ನಾನೆಷ್ಟು ಶಕ್ತಿಶಾಲಿ? ಸಾಕ್ಸಿಯಾಗಿದ್ದು ಒಗ್ಗಟ್ಟಿನ ಮಂತ್ರಕ್ಕೆ! ಚುನಾವಣೆಗೆ ದಿಕ್ಸೂಚಿನಾ?

By Bhimashankar Teli

ಜನಪ್ರಿಯ ನಾಯಕರು:-

ರಾಜ್ಯದಲ್ಲಿ ದೇವೇಗೌಡರು, ಯಡಿಯೂರಪ್ಪನವರು ಮತ್ತು ಸಿದ್ದರಾಮಯ್ಯನವರು ಜನಪ್ರಿಯ ನಾಯಕರು. ಈಗಿನ ಎಲ್ಲ ರಾಜಕಾರಣಿಗಳು , ಎಲ್ಲ ಪಕ್ಷದ ಕಾರ್ಯಕರ್ತರು ಇವರಿಗೆಲ್ಲ ಮರ್ಯಾದೆ ಕೊಡುವುದು ನಾವು ಕಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಇವರೆಲ್ಲ ಅಧಿಕಾರದಲ್ಲಿ ಇದ್ದಾಗ ಕೆಲವೊಂದು ಒಳ್ಳೆಯ ಕೆಲಸಗಳು ರಾಜ್ಯಕ್ಕೆ ಆಗಿವೆ. ಇವರು ಬಡವರ, ದೀನದಲಿತರ ಏಳಿಗೆಗಾಗಿ ಒಂದಿಷ್ಟು ಶ್ರಮವೂ ಹಾಕಿದ್ದಾರೆ ಮತ್ತು ದೇಶದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ತಲೆ ಎತ್ತಿ ನಿಂತು ಉತ್ತರವು ಕೊಟ್ಟಿದ್ದಾರೆ. ಬೇರೆ ಬೇರೆ ಪಕ್ಷದವರಾಗಿದ್ದರೂ ಒಬ್ಬರಿಗೊಬ್ಬರು ವ್ಯಯಕ್ತಿವಾಗಿ ನಾವೆಲ್ಲ ಸ್ನೇಹಿತರು ಎಂದು ತೋರಿಸಿ ಕಾರ್ಯಕರ್ತರಿಗೆ ಮಾರಾ ಮಾರಿ ಜಗಳಕ್ಕೆ ನಿಲ್ಲುವುದು ಸರಿಯಿಲ್ಲ ಎಂದು ಹೇಳಿದ್ದಾರೆ. ಆದರೆ ಇದರ ಜೊತೆ ನಮ್ಮ ಸಿದ್ದಾಂತ ಮಾತ್ರ ಬೇರೆ ಅದಕ್ಕಾಗಿ ನಾವು ವೈರಿಗಳು ಎಂದು ಹೇಳುತ್ತಾರೆ. ಯಾವದು ಸಿದ್ದಾಂತ? ಜನರ ಮನಸ್ಸಿನಲ್ಲಿ ಏನಿದೆ? ೨೦೨೩ಕ್ಕೆ ಯಾವ ಸಿದ್ದಾಂತಕ್ಕೆ ಮಣೆ ಹಾಕುತ್ತಾರೆ? ದೇಶಭಕ್ತಿ, ದೇಶಾಭಿಮಾನಿ, ಭ್ರಷ್ಟಾಚಾರ, ಕೋಮುವಾದಿ, ಓಲೈಕೆ ರಾಜಕಾರಣ , ಸ್ವಜಾತಿ ಪ್ರೇಮ, ಅಭಿವೃದ್ಧಿ ಹೀಗೆ ಹತ್ತಾರು ವಿಷಯಗಳು ಚುನಾವಣೆಯಲ್ಲಿ ಮುನ್ನೆಲೆಗೆ ಬರುತ್ತವೆ. ಅಳೆದು ತೂಗಿ ಜನ ೨೦೨೩ಕ್ಕೆ ನಿರ್ಧಾರ ಮಾಡುತ್ತಾರೆ. ಆದರೆ ಖಂಡಿತ ೨೦೨೩ಕ್ಕೆ ಜನಪ್ರಿಯ ನಾಯಕರು ತಮ್ಮ ಪಕ್ಷದ ಗೆಲುವನ್ನು ನಿರ್ಧಾರ ಮಾಡುವಷ್ಟು ಬಲಶಾಲಿಗಳಾಗಿದ್ದಾರೆ. ಬಿಜೆಪಿಯ ಉತ್ಸವವು ಸದ್ಯದಲ್ಲೇ ಆಗುವದಿದೆ! ಜೆಡಿಸ್ ಅನೇಕ ಉತ್ಸವಗಳನ್ನು ಮಾಡಿಯಾಗಿದೆ.

ಉತ್ಸವಕ್ಕೆ ಹರಿದು ಬಂದ ಜನಸಾಗರ,ಉತ್ಸವ ಮಾಡಿದ್ದು ಮೇಕೆದಾಟು ಪಾದಯಾತ್ರೆಗೆ ಕೌಂಟರ್ ? :-

ಉತ್ಸವ ಭವ್ಯವಾಗಿತ್ತು, ಭವ್ಯವಾಗಿಲ್ಲ ಎಂದು ಹೇಳಿದರೇ ಖಂಡಿತ ಯಾರೂ ಒಪ್ಪುವದಿಲ್ಲ. ಉತ್ಸವಕ್ಕೆ ಬಂದ ಜನರು ತಮ್ಮ ನಾಯಕನಿಗೆ ಜೈ ಹೇಳಿದ್ದು ನಾವೆಲ್ಲಾ ಕಂಡಿದ್ದೇವೆ. ಸಿದ್ದಾರಾಮಯ್ಯನವರಿಗೆ ಖಂಡಿತ ಬಾರಿ ಅಭಿಮಾನಿಗಳ ಬೆಂಬಲ ನೋಡಿದ್ದೇವೆ ಮತ್ತು ಕಾರ್ಯಕರ್ತರ ಪಡೆ ಅವರ ಬೆನ್ನಿಗೆ ಇದೆ. ದಾವಣಗೆರೆಯಲ್ಲಿ ಬಂದ ಜನ ತಮ್ಮ ಕೈಯಿಂದ ದುಡ್ಡು ಹಾಕಿ ಬಂದಿದ್ರಾ? ಹೌದು ಸ್ವಲ್ಪ ಜನ ಖಂಡಿತ ಕೇವಲ ಸಿದ್ರಾಮಯ್ಯನವರ ಅಭಿಮಾನಕ್ಕೆ ಬಂದಿದ್ದರು. ಆದರೆ ಬಹಳ ಜನರನ್ನು ಉತ್ತರ ಕರ್ನಾಟಕದ ಶಾಸಕರು, ಮಾಜಿ ಶಾಸಕರು,ಮತ್ತು ಪಟ್ಟಾ ಶಿಷ್ಯವೃಂದರು ಕರೆಯಿಸಿಕೊಂಡಿದ್ದರು. ಹೇಳಿ ಕೇಳಿ ರಾಜ್ಯದಲ್ಲಿ ಚುನಾವಣೆ ಸಮೀಪ ಇರುವದರಿಂದ ತಮ್ಮ ನಾಯಕನಿಗಾಗಿ ತನು , ಮನ ಮತ್ತು ಧನವನ್ನು ವ್ಯಯಿಸಿದ್ದಾರೆ. ಮುಖ್ಯವಾಗಿ ಬಬಲೇಶ್ವರ ಶಾಸಕ ಎಂ ಬಿ ಪಾಟೀಲರು, ಅಶೋಕ ಪಟ್ಟಣ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ದೇಶಪಾಂಡೆ, ಎಚ್ ಕೆ ಪಾಟೀಲ್, ಜಮೀರ್ ಹೀಗೆ ಅನೇಕರು ಇದೊಂದು ಡಿಕೆ ಶಿವಕುಮಾರವರಿಗೆ , ಸಿದ್ದು ಮತ್ತು ಅವರ ಬೆಂಬಲಿಗರಿಗೆ ಎಷ್ಟು ಶಕ್ತಿ ಇದೆ ಎಂದು ತೋರಿಸುವ ಬರದಲ್ಲಿ ತಮ್ಮ ಸ್ವಂತ ಹಣವನ್ನು ಖರ್ಚುಮಾಡಿದ್ದಾರೆ. ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಸ್ವಲ್ಪ ದಿನದ ಹಿಂದೆ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡು ಡಿಕೆ ಸಹೋದರರು ರಾಜ್ಯದಲ್ಲಿ ಒಮ್ಮಲೇ ಮುಂಚಣಿಗೆ ಬಂದಿದ್ದರು, ರಾಜ್ಯ ಕಾಂಗ್ರೇಸ್ನ ಸಿದ್ದು ಬಣಕ್ಕೆ ಗರಬಡಿದಿತ್ತು. ಅಲ್ಲಿಂದಲೇ ಹೊಂಚು ಹಾಕಿ ಏನಾದರೂ ಮಾಡಿ ನಮ್ಮ ಬಣಕ್ಕೆ ಹೆಚ್ಚಿನ ಶಕ್ತಿ ಸಿಗುವ ಹಾಗೆ ಮಾಡಬೇಕು ಎಂದು ಮಾಡಿದ್ದೆ ಅವರ ನಾಯಕನ ಉತ್ಸವ! ಉತ್ಸವದಲ್ಲಿ ಕೆಲಯೊಂದು ಕುಂದು ಕೊರೆತಗಳು ಇದ್ದರೂ ಉತ್ಸವ ಯಶಸ್ವಿಯಾಗಿತ್ತು. ಇದೆಲ್ಲವೂ ಮತಗಳಾಗಿ ಪರಿವರ್ತನೆಯಾಗುತ್ತಾ ಎನ್ನುವುದು ಯಡಿಯೂರಪ್ಪನವರ ದಾಳಗಳ, ಬಿಜೆಪಿ ಕೇಂದ್ರ ನಾಯಕರು ಹೇಗೆ ರಾಜ್ಯ ಜನಪ್ರಿಯ ಯುವ ನಾಯಕರನ್ನು ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ನಿಂತಿದೆ. ಆದರೆ ಸಿದ್ದರಾಮಯ್ಯನವರು ಕಾಂಗ್ರೇಸ್ಗೆ ಅನಿವಾರ್ಯ ಎಂಬ ಸತ್ಯವನ್ನು ಉತ್ಸವ ಮತ್ತೊಮ್ಮೆ ಮಗದೊಮ್ಮೆ ತೆರೆದಿಟ್ಟಿದೆ.

೨೦೧೮ರಲ್ಲಿ ಮುಗ್ಗರಿಸಿದ್ದ ಸಿದ್ದು ಸರ್ಕಾರ :-

ಸಿದ್ದರಾಮಯ್ಯನವರ ೨೦೧೩ರ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ , ಭಾಗ್ಯಗಳ ಸರ್ಕಾರ , ನಮ್ಮ ನಡೆ ಕೃಷ್ಣೆಯ ಕಡೆ, ನಮ್ಮ ನಡೆ ಜನರ ಕಡೆಗೆ ಎಂದು ಅನೇಕ ಘೋಷಗಳ ನಡುವೆ ಸಿದ್ದು ಸರ್ಕಾರ ಸೋತು ಮನೆಯ ಕಡೆ ಹೆಜ್ಜೆಹಾಕಿತ್ತು, ಅದರಲ್ಲಿ ವಿಶೇಷವಾಗಿ ಸ್ವತಃ ಮುಖ್ಯಮಂತ್ರಿ ಸ್ವಂತ ಕ್ಷೇತ್ರದಲ್ಲಿ ೩೦ ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಉತ್ತರಕರ್ನಾಟಕದ ಬಾದಾಮಿಯಲ್ಲಿ ೧೫೦೦+ ಮತಗಳ ಅಂತರದಲ್ಲಿ ಗೆದ್ದಿದ್ದರು. ಜಮಖಂಡಿಯ ಅಂದಿನ ಶಾಸಕರಾದ ಸಿದ್ದು ನ್ಯಾಮಗೌಡರು ಸೇರಿ ಅನೇಕರು ಸಿದ್ದು ಅವರಿಗೆ ಗೆಲ್ಲುವದಕ್ಕೆ ಸಹಾಯ ಮಾಡಿದ್ದರು. ಇಷ್ಟೆಲ್ಲಾ ಭಾಗ್ಯಗಳು ಕೊಟ್ಟಿದ್ದರೂ ಸೋತಿದ್ದರು. ಇತ್ತೀಚಿನ ಸುದ್ದಿ ನೋಡಿದರೆ ಉಚಿತ ಚುನಾವಣೆ ಘೋಷಣೆಗಳು ದೇಶಕ್ಕೆ ಮಾರಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು ಅದರ ವಿಸ್ಕೃತ ಮಾಹಿತಿಯನ್ನು ಕೇಳಿದ್ದಾರೆ. ಉಚಿತವಾಗಿ ಕೊಟ್ಟ ಭಾಗ್ಯಗಳು ತುಂಬಾ ಜನರಿಗೆ ಅನುಕೂಲವಾಗಿಲ್ಲ ಅದಕ್ಕೆ ಸರ್ಕಾರವನ್ನು ತಿರಸ್ಕರಿಸಿದ್ದರು ಎಂದು ಹೇಳಬಹುದಾ? ಅಥವಾ ಹಿಂದೂಗಳ ಹತ್ಯೆ ಮಾರಕವಾಯಿತಾ? ಅಥವಾ ಬಾಯಿಗೆ ಬಂದಂತೆ ಮಾತಾಡಿದ್ದು ಮುಳುವಾಯಿತಾ? ರಾಜ್ಯದಲ್ಲಿ ೨೦೧೫ಕ್ಕೆ ೧ಲಕ್ಷದ ಐದು ಸಾವಿರ ಕೋಟಿ ಸಾಲವಾಗಿತ್ತು. ಅದರಲ್ಲಿ ಸುಮಾರು ೪೦ ಸಾವಿರ ಕೋಟಿ ಸಿದ್ದರಾಮಯ್ಯನವರ ಸರ್ಕಾರ ಮಾಡಿತ್ತು. ಉಚಿತ ಭಾಗ್ಯಗಳಿಗಾಗಿ ಸಾಲ ಮಾಡಿದ್ರಾ? ಅವರದೇ ಸರ್ಕಾರದಲ್ಲಿ ಸುಮಾರು ೧೭ ಸಾವಿರ ಕೋಟಿ ಬಡ್ಡಿಯೂ ತುಂಬಿದ್ದು ಇನ್ನೊಂದು ಒಳ್ಳೆಯ ಕೆಲಸ! ಎಸ್.ಎಂ. ಕೃಷ್ಣ- ಐದು ವರ್ಷಗಳಲ್ಲಿ 35,902.30 ಕೋಟಿ ರೂ. ಧರಂ ಸಿಂಗ್- 20 ತಿಂಗಳಲ್ಲಿ 15,635.78 ಕೋಟಿ ರೂ. ಎಚ್.ಡಿ. ಕುಮಾರಸ್ವಾಮಿ- 20 ತಿಂಗಳಲ್ಲಿ 3,545.91 ಕೋಟಿ ರೂ. ಬಿ.ಎಸ್. ಯಡಿಯೂರಪ್ಪ- 40 ತಿಂಗಳಲ್ಲಿ 25,653.41 ಕೋಟಿ ರೂ. ಡಿ.ವಿ. ಸದಾನಂದ ಗೌಡ- 11 ತಿಂಗಳಲ್ಲಿ 9,357.95 ಕೋಟಿ ರೂ. ಜಗದೀಶ್ ಶೆಟ್ಟರ್- 10 ತಿಂಗಳಲ್ಲಿ 13,464.66 ಕೋಟಿ ರೂ. ಸಿದ್ದರಾಮಯ್ಯ- 22 ತಿಂಗಳಲ್ಲಿ 39,161.44 ಕೋಟಿ ರೂ.

ಬಿಜೆಪಿ ಸರ್ಕಾರದ ಆಳ್ವಿಕೆ :-

೨೦೧೮ರಲ್ಲಿ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡು ಸರ್ಕಾರ ರಚನೆ ಮಾಡಿ ರಾಜೀನಾಮೆ ಕೊಟ್ಟಾಗಲೇ ರಾಜ್ಯದ ಜನರು ಬಿಜೆಪಿ ಜೊತೆಗಿದ್ದಾರೆ ಎಂದೆನಿಸಿತ್ತು. ಶಿಶುವಿನ (ಅವರೇ ಹೇಳಿದ್ದು)ಸರ್ಕಾರ ಪಥನವಾಗಿ ಯಡಿಯೂರಪ್ಪನವರ ಸರ್ಕಾರ ರಚನೆಯಾಗಿ, ಅನೇಕ ನೈಸರ್ಗಿಕ ತೊಂದರೆಗಳು ಅನುಭವಿಸಿದರು. ನೆರೆ ಹಾವಳಿ, ಜಗತ್ತನ್ನೇ ಬಾಧಿಸಿದ ಕರೋನ ಹೀಗೆ ಅನೇಕ ನೈಸರ್ಗಿಕ ಹೊಡೆತಗಳನ್ನು ಎದುರಿಸಿ ಮೆಟ್ಟಿನಿಂತಿದ್ದರು. ವಯಸ್ಸಿನ ಆಧಾರದ ಮೇಲೆ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟ ಮೇಲೆ ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನದ ಮೂಲಕ ತಾನೊಬ್ಬ ಕಾಮನ್ ಮಾನ್ ಎಂದು ಅಬ್ಬರಿಸುತ್ತಾ ಅಧಿಕಾರ ಪ್ರಾರಂಭ ಮಾಡಿದರು. ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಸ್ವಲ್ಪ ಜನ ಹೇಳಿದರೇ , ಇನ್ನು ಕೆಲವರು ಟೇಕ್ ಆಫ್ ಆಗಿದೆ. ೪೦% ಸರ್ಕಾರ, ಹಗರಣಗಳ ಸರ್ಕಾರ ಎಂದು ವಿರೋಧಿಗಳು ಹೇಳಿದರೇ , ಪಿಎಸೈ ಹಗರಣ ನಿಮ್ಮ ಕೂಸು ಎಂದು ಸರ್ಕಾರ ಹೇಳಿ , ನಾವು ಪ್ರಾಮಾಣಿಕವಾಗಿ ಇರುವುದಕ್ಕೆ ಇದು ಹೊರಗೆ ಬಂದಿದೆ. ನಿವಾಗಿದ್ದರೇ ಇದನ್ನೂ ಮುಚ್ಚಿ ಹಾಕುತ್ತಿದ್ದೀರಿ! ಇತ್ತೀಚಿಕೆ ಬಿಜೆಪಿ ಕಾರ್ಯಕರ್ತನ ಕೊಲೆ ಬಿಜೆಪಿಯ ಕಾರ್ಯಕರ್ತರಲ್ಲಿ ಆಕ್ರೋಶ ಹೆಚ್ಚಾಗಿದೆ. ಅದನ್ನು ತಣಿಸಲು ಅನೇಕರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ವಿಜಯೇಂದ್ರರವರ ಹುತಾತ್ಮ ಪ್ರವೀಣ ಮನೆಯ ಭೇಟಿ ಮತ್ತು ಕಾರ್ಯಕರ್ತರು ಪಕ್ಷಕ್ಕೆ ಎಷ್ಟು ಮುಖ್ಯ ಮತ್ತು ಅವರ ನಿಶ್ವಾರ್ಥ ಮನಸ್ಸನ್ನು ಜನರ ಮುಂದೆ ತರೆದಿಟ್ಟಿದ್ದಾರೆ. ಸ್ವಲ್ಪ ಮಟ್ಟಿಗೆ ಆವೇಶ ಕಮ್ಮಿಯಾಗಿದೆ. ಸಿದ್ದರಾಮಯ್ಯನವರ ಉತ್ಸವ ಬಿಜೆಪಿಗೆ ಶಾಕ್ ಕೊಟ್ಟಿದ್ದರೇ ಅದು ಸ್ವಾಭಾವಿಕ!

ಕೊನೆಯ ಆಟಕ್ಕೆ ತಯಾರಿ :-
ಉತ್ಸವದಲ್ಲಿ ಬಿಜೆಪಿ ಆಡಳಿತದ ವೈಫಲ್ಯ , ಬ್ರಷ್ಟಾಚಾರ ಮತ್ತು ರಾಜ್ಯ ಸರ್ಕಾರ ಅತಿ ಸಾಲವನ್ನು ಮಾಡಿದೆ ಎಂದು ತೆರೆದಿಟ್ಟಿದ್ದಾರೆ. ಸುಮಾರು ೨ಲಕ್ಷಕ್ಕೂ ಕೋಟಿ ಅಧಿಕ ಸಾಲವನ್ನು ಮಾಡಿದ್ದಾರೆ. ಇಂತಹ ಸರ್ಕಾರವನ್ನು ಬೆಂಬಲಿಸಬೇಡಿ. ಕಾರ್ಯಕ್ರಮಕ್ಕೆ ರಾಹುಲ್ ಅವರನ್ನು ಕರೆಯಿಸಿ ಉತ್ಸವ ಪಕ್ಷದ ಕಾರ್ಯಕ್ರಮವಾಗಿ ಪರಿವರ್ತಿಸಿ ಡಿಕೆ ಸಿದ್ದರಾಮಯ್ಯನವರನ್ನು ಅಪ್ಪಿಕೊಳ್ಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿ ಚುನಾವಣೆಗೆ ತೊಡೆ ತಟ್ಟಿದ್ದಾರೆ. ನಾಯಕನ ಅಪ್ಪಣೆ ಮೇರೆಗೆ ಅಪ್ಪಿಕೊಂಡಿದ್ದು ಆಯಿತು. ಸದ್ಯಕ್ಕೆ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಾರಿದ್ದಾರೆ. ಆದರೆ ನಿಜವಾದ ಆಟ ಈಗ ಶುರು ಕಾರಣ ಒಂದು ವೇಳೆ ಗೆದ್ದರೇ ಯಾರು ಮುಖ್ಯಮಂತ್ರಿ ? ಅದಕ್ಕೆ ನಾನಾ ತರಹ ರಂಗಿನಾಟ ಇನ್ನು ಕಾಂಗ್ರೇಸ್ ಪಕ್ಷದಲ್ಲೂ ಕಾಣಬಹುದು! ಇತ್ತ ಬಿಜೆಪಿ ಯಡಿಯೂರಪ್ಪನವರನ್ನು ಮತ್ತು ವಿಜಯೇಂದ್ರರವರನ್ನು ಬಿಟ್ಟು ಚುನಾವಣೆ ಗೆಲ್ಲಬೇಕು ಎಂಬ ಮನಸ್ಸು ಇದೆ. ಆದರೆ ಅದು ನಿರೀಕ್ಷಿತ ಫಲ ಕೊಡುವದಿಲ್ಲ ಎಂದು ಅವರಿಗೆ ಗೊತ್ತಿದೆ ಆದರೂ ಅವರಿಬ್ಬರ ಮಹತ್ವ ಅರಿವಾದಂತೆ ಕಾಣುವದಿಲ್ಲ. ಬಿಜೆಪಿ ಗೆಲ್ಲಬೇಕಾದರೆ ಎಲ್ಲ ನಾಯಕರು ಒಗ್ಗಟ್ಟಾದರೆ ಮಾತ್ರ ಕಾಂಗ್ರೇಸ್ ಗೆ ಠಕ್ಕರ್! ಉತ್ಸವದ ಮಾಹಿತಿ ಬಿಜೆಪಿ ನಾಯಕರ ಗಮನಕ್ಕೆ ಬಂದೆ ಇವರೂ ಯಾತ್ರೆಗಳ ಅಥವಾ ಉತ್ಸವದ ಮೊರೆ ಹೋಗುವ ಲಕ್ಷಣ ಇವೆ. ಕಾಂಗ್ರೇಸ್ ಒಗ್ಗಟ್ಟು ಬಿಜೆಪಿ ಒಳ ಬೇಗುದಿ ಕಡಿಮೆ ಮಾಡುತ್ತಾ ಎಂಬುದು ಕಾದುನೋಡಬೇಕು!


Categories: Articles

Tagged as: ,

Leave a Reply