೩೦ ವರ್ಷಗಳ ಚುನಾವಣೆ ಇತಿಹಾಸ ತಗೆದು ನೋಡಿದರೆ, ಇಂಡಿಯಲ್ಲಿ ಎಲ್ಲ ಅಭ್ಯರ್ಥಿಗಳು ಚುನಾವಣೆ ಬಂದಾಗ ಬಂದು, ಸೋತು ಹೋದರೇ ಮತ್ತೆ ಬರುವುದು ಚುನಾವಣೆಗೆ ಟಿಕೆಟ್ ಸಿಕ್ಕರೆ ಮಾತ್ರ! ಹಿಂದೆ ವಿಠ್ಠಲ್ ಕಟಕದೊಂಡ ಬಳ್ಳೊಳ್ಳಿ ಮಾತ್ರಕ್ಷೇತ್ರವಿದ್ದಾಗ ಅವರಿಗೆ ಚುನಾವಣೆಯಲ್ಲಿ ೨೦೦ ಮತಗಳು ಬಂದರೂ ಕ್ಷೇತ್ರದ ಪ್ರವಾಸ ಮಾತ್ರ ನಿರಂತರ! ಆದರೆ ಬೇರೆ ಅಭ್ಯರ್ಥಿಗಳನ್ನು ನೋಡಿದರೆ, ಸೋತು ಹೋದ ನಂತರ ಮತ್ತೆ ಮತದಾರರನ್ನು ಬೇಟಿಯಾಗುವದನ್ನೇ ಮರೆಯುತ್ತಿದ್ದರು. ಆದರೆ ೨೦೧೮ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸಲ್ಪ ಮತಗಳ ಅಂತರದಿಂದ ಪರಾಭವಗೊಂಡ ದಯಾಸಾಗರ ಪಾಟೀಲರು ಜನರ ಮಧ್ಯೆ ನಿಂತು ಮತ್ತೆ ಪಕ್ಷದ ಬಾವುಟವನ್ನು ಹಾರಿಸುವದಕ್ಕೆ ಸಕಲ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂಡಿಯಲ್ಲಿ ಬಿಜೆಪಿ ಪಕ್ಷ ಸದೃಢವಾಗಿದೆ ಇದಕ್ಕೆ ಕಾರಣ ಅಲ್ಲಿನ ದೇವದುರ್ಲಬ ಕಾರ್ಯಕರ್ತರು.

ಎರಡನೆಯ ಹಂತದ ನಾಯಕರ ಮುನಿಸಿನಿಂದ ಮಾತೃ ಸಮಾನ ಪಕ್ಷಕ್ಕೆ ದಕ್ಕೆ ಬಂದಿತ್ತು. ಯಾವದೇ ಪಕ್ಷ ಇರಲಿ ಕಾರ್ಯಕರ್ತನೇ ಮುಖ್ಯ! ಕಾರ್ಯಕರ್ತನ ಬೆವರಿನಿಂದ ಮಾತ್ರ ಪಕ್ಷಕ್ಕೆ ಗೆಲುವು ಸಾಧ್ಯ! ಒಬ್ಬ ಸಾಮಾನ್ಯ ಊರಿನ , ಸಾಮಾನ್ಯ ಓಣಿಯ , ಸಾಮಾನ್ಯ ಸಮುದಾಯದ ಕಾರ್ಯಕರ್ತನೇ ಪಕ್ಷಕ್ಕೆ ಗೆಲುವು ತಂದುಕೊಡಬಲ್ಲನು. ಅದಕ್ಕಾಗಿಯೇ ಇಂದು ಇಂಡಿಯ ಮತಕ್ಷೇತ್ರದ ಅಭ್ಯರ್ಥಿ ದಯಾಸಾಗರ ಪಾಟೀಲರು ತಮ್ಮ ಪಕ್ಷದ ಕಾರ್ಯಕರ್ತರನ್ನು ಬೇಟಿಯಾಗುತ್ತಿದ್ದಾರೆ. ಕಾರ್ಯಕರ್ತರ ಮನದಾಳದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಸುಖ ದುಃಖಕ್ಕೆ ಹೆಗಲು ಕೊಡುತ್ತಿದ್ದಾರೆ. ಇದಲ್ಲವೇ ಒಬ್ಬ ಪ್ರಾಮಾಣಿಕ ಸೇವಕನ ಕೆಲಸ!

೨೦೨೧ರಲ್ಲಿ ನಡೆದ ಮಸ್ಕಿ ಚುನಾವಣೆಯಲ್ಲಿ ಅಲ್ಲಿನ ಸ್ಥಳೀಯ ಕಾರ್ಯಕರ್ತರು ಯುವ ನಾಯಕರಾದ ವಿಜಯೇಂದ್ರರವರ ಸಮ್ಮುಖದಲ್ಲಿ ಭಾಷಣ ಮಾಡಿದ ರೀತಿ ಕೇಳಿದರೇ ಗೊತ್ತಾಗುತ್ತೆ, ಯಾವದು ಪಕ್ಷ? ಯಾರು ಕಾರ್ಯಕರ್ತ? ಯಾರು ದೇಶಭಕ್ತ? ಅವರ ಹೆಸರು ನೆನಪಿಲ್ಲ, ಆದರೆ ಅವರು ಹೇಳಿದ್ದು ನಾನು ವಾಜಪೇಯಿ , ಅಡ್ವಾಣಿ ಮತ್ತು ನಿಮ್ಮ ತಂದೆಯವರಾದ ಯಡಿಯೂರಪ್ಪನವರಿಗೆ ಖಾಸಾ ಮನುಷ್ಯ! ಅವರಿಗೆ ಹೋಗಿ ಕೇಳಿ ನನ್ನ ಬಗ್ಗೆ ಹೇಳುತ್ತಾರೆ, ಕಾರಣ ಪಕ್ಷ ಕಟ್ಟಿದ ನಂತರ ಇಲ್ಲಿಯವರೆಗೆ ನಿರಂತರವಾಗಿ ಪಕ್ಷದ ಜೊತೆ ಇದ್ದೇನೆ ಮತ್ತು ನನ್ನ ಜಾತಿಯವರ ವಿರುದ್ಧವೇ ಹೋರಾಡಿದ್ದೇನೆ, ಕಾರಣ ಪಕ್ಷ ಮತ್ತು ನನ್ನ ಸಿದ್ದಾಂತ! ಪಕ್ಷಕ್ಕಾಗಿ ದುಡಿದ ನಾನು ಯಾವತ್ತೂ ಸ್ಥಾನಮಾನದ ಆಸೆ ಪಡಲಿಲ್ಲ. ಆದರೆ ಪಕ್ಷದಲ್ಲಿ ನನಗೆ ಕೊಡುತ್ತಿರುವ ಗೌರವ ಮಾತ್ರ ಎಲ್ಲದಕ್ಕೂ ಮಿಗಿಲಾದದ್ದು! ನನಗೆ ಇಷ್ಟು ಗೌರವವಿದೇ ಎಂದರೆ ಅದಕ್ಕೆ ಕಾರಣ ನನ್ನ ಪಕ್ಷ ನಿಷ್ಠೆ!
ಭಾರತದ ಒಬ್ಬ ಸೈನಿಕ ಹುತಾತ್ಮನಾದಾಗ ನನಗೆ ನಿದ್ದೆ ಬರುವದಿಲ್ಲ, ನನ್ನ ದೇಶದ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡಿದರೆ ಮನಸ್ಸೆಲ್ಲ ಉರಿ! ಹೀಗೆ ಅವರು ಹೇಳುತ್ತಿದ್ದನ್ನು ಹೇಳಿ ನಮ್ಮ ಕೂದಲು ನೆಟ್ಟಗಾಗಿದ್ದವು. ಮೋದಿ ಎಂಬ ಪುಣ್ಯಾತ್ಮ ಇರುವದರಿಂದ ನಾವು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡಿ ನಮ್ಮ ಶತ್ರುಗಳನ್ನು ಹಿಮ್ಮೆಟ್ಟಸಿದ್ದೇವೆ ಎಂಬ ಖುಷಿ ಇದೆ. ಇಂದು ಜಗತ್ತಿನಲ್ಲಿ ನನ್ನ ಭಾರತದ ಹೆಸರು ಮುಂಚೂಣಿಯಲ್ಲಿ ಇದೆ ಎಂದರೆ ಅದಕ್ಕೆಲ್ಲ ನಮ್ಮಂತ ದೇವದುರ್ಲಬ ಕಾರ್ಯಕರ್ತರು ಆಯ್ಕೆ ಮಾಡಿದ ನನ್ನ ಬಿಜೆಪಿ ಪಕ್ಷ!
ಸತತವಾಗಿ ೧೨ ವರ್ಷ ಗುಜರಾತದ ಮುಖ್ಯಮಂತ್ರಿಯಾಗಿ, ಎರಡು ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಪಡೆದು ಸರ್ಕಾರ ನಡೆಸುತ್ತಿರುವ ನರೇಂದ್ರ ಮೋದಿ ಅಧಿಕಾರ ಪಡೆಯುವಕ್ಕಿಂತ ಮೊದಲು, ಒಬ್ಬ ನಿಷ್ಠಾವಂತ ಕಾರ್ಯಕರ್ತ! ಅಡ್ವಾಣಿಯವರ ನೇತೃತ್ವದಲ್ಲಿ ರಥಯಾತ್ರೆಗೆ ಸಾರಥಿಯಾಗಿ, ರಾಮಮಂದಿರಕ್ಕಾಗಿ ದೇಶದಲ್ಲೇ ತಮ್ಮ ರಾಜ್ಯದಿಂದ ಹೆಚ್ಚು ಇಟ್ಟಿಗೆ ಸಂಗ್ರಹಿಸಿ ಕೊಟ್ಟ ಮಹಾನ ಕಾರ್ಯಕರ್ತ ಮೋದಿ!
ರಾಜ್ಯದಲ್ಲಿ ಬಿಜೆಪಿ ಗಂಧಗಾಳಿ ಗೊತ್ತಿಲ್ಲದ ಸಮಯದಲ್ಲಿ ಎಂದರೆ ೧೯೮೫ರಲ್ಲಿ ಇಬ್ಬರು ಶಾಸಕರು ಆಯ್ಕೆಯಾಗಿದ್ದರು, ಅದರಲ್ಲಿ ಒಬ್ಬರು ಆಮಿಷಕ್ಕಾಗಿ ಅಥವಾ ಬಿಜೆಪಿಯಲ್ಲಿ ಇದ್ದರೇ ಭವಿಷ್ಯವಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗಿದ್ದರು. ಆದರೆ ಇನ್ನೊಬ್ಬ ಶಾಸಕರು ಗಟ್ಟಿಯಾಗಿ ಪಕ್ಷದ ಸಿದ್ದಾಂತಕ್ಕೆ ಒತ್ತುಕೊಟ್ಟು ಪಕ್ಷನಿಷ್ಠೆಗೆ ಮಣೆಹಾಕಿ ಬಿಜೆಪಿಯಲ್ಲೇ ಉಳಿದು ೨೦೦೮ರಲ್ಲಿ ಉಪಮುಖ್ಯಮಂತ್ರಿಯಾಗಿ ಮುಂದೆ ನಾಲ್ಕುಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇದೆ ರೈತನಾಯಕ ಯಡಿಯೂರಪ್ಪ. ಇದೆಲ್ಲವೂ ಸಾಧ್ಯವಾಗಿದ್ದು ಪಕ್ಷ ನಿಷ್ಠೆ ಮತ್ತು ಪಕ್ಷದ ಸಿದ್ದಾಂತಕ್ಕೆ ತಮ್ಮನ್ನು ಸಮರ್ಪಣೆ ಮಾಡಿದ್ದಕ್ಕೆ. ಹೀಗೆ ಅನೇಕ ನಿಷ್ಠಾವಂತ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿ ಇದ್ದಾರೆ. ಇವರಿಂದಲೇ ಇಂದು ಪಕ್ಷ ಹೆಮ್ಮರವಾಗಿ ಬೆಳದಿದೆ.
ಯಾವದೇ ಚುನಾವಣೆ ಗೆಲ್ಲಬೇಕಾದರೆ, ದೇಶ ಕಟ್ಟಬೇಕಾದರೆ ಕಾರ್ಯಕರ್ತನ ಪ್ರಾಮಾಣಿಕ ಪರಿಶ್ರಮ ಅತ್ಯಗತ್ಯ! ೨೦೨೩ರ ಚುನಾವಣೆಗೆ ಸಜ್ಜಾಗುತ್ತಿರುವ ಬೊಮ್ಮಾಯಿಯವರು ಸಂಕಲ್ಪ ಯಾತ್ರೆಗೆ ಕರೆಕೊಟ್ಟಿದ್ದಾರೆ. ಬರದಿಂದ ಯಾತ್ರೆ ಸಾಗುತ್ತಿದೆ. ಇದೆಲ್ಲಾ ಮಾಡುತ್ತಿರುವುದು ದೇವದುರ್ಲಬ ಕಾರ್ಯಕರ್ತರನ್ನು ಭೇಟಿಮಾಡುವುದು ಮತ್ತು ತಾವು ಮಾಡಿದ ಕೆಲಸದ ಬಗ್ಗೆ ಹೇಳುವುದು. ಇದರ ಜೊತೆ ನಿರಂತರವಾಗಿ ಸ್ಥಳೀಯ ನಾಯಕರು ಕಾರ್ಯಕರ್ತರನ್ನು ಭೇಟಿಮಾಡಿಕೊಂಡು ಬಂದಿದ್ದಾರೆ. ಇಂಡಿಯಲ್ಲಿ ದಯಾಸಾಗರವರು ತಮ್ಮ ನಿಷ್ಠಾವಂತ ಕಾರ್ಯಕರ್ತರನ್ನು ಭೇಟಿಮಾಡುತ್ತ ತಮಗೊಂದು ಅವಕಾಶಕ್ಕಾಗಿ ಕೇಳುತ್ತಿದ್ದಾರೆ.

ಕಳೆದ ಬಾರಿ ಸಮಯದ ಅಭಾವದಿಂದ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವುದು ಸರಿಯಾದ ಸಮಯಕ್ಕೆ ಆಗಿಲ್ಲ ಆದರೆ ಸದ್ಯ ಪ್ರತಿಯೊಂದು ಗ್ರಾಮಕ್ಕೆ ಭೇಟಿಕೊಟ್ಟು ಎಲ್ಲರಿಗೆ ಹುರಿದುಂಬಿಸುತ್ತಾ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಒಳ್ಳೆಯ ವಾತಾವರಣ ಕಾಣಿಸುತ್ತಿದೆ. ೨೦೦೮ರಲ್ಲಿ ಗೆದ್ದು ಘರ್ಜಿಸಿದ ಪಕ್ಷ ಮತ್ತೊಮ್ಮೆ ೨೦೨೩ರಲ್ಲಿ ಘರ್ಜಿಸಬೇಕಾದರೆ ಕಾರ್ಯಕರ್ತರ ಪರಿಶ್ರಮದಿಂದ ಮಾತ್ರ! ಅದಕ್ಕಾಗಿಯೆ ಹಗಲಿರಳು ಶ್ರಮಿಸುತ್ತಿರುವ ದಯಾಸಾಗರ ಪಾಟೀಲರು ಪಕ್ಷದ ಬಾವುಟವನ್ನು ಈ ಬಾರಿ ಖಂಡಿತ ಹಾರಿಸುತ್ತಾರೆ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರ ಮಾತು.
Categories: Articles
