news

ನಟ ರಾಕ್ಷಸ ಡಾಲಿ ಚಿತ್ರ ಮೇಲೆ ಮಾತ್ರ ರೌಡಿಗಳ ಚಿತ್ರ , ಒಳಗೆ ಪಕ್ಕಾ ರಾಜಕೀಯ ಚಿತ್ರ . ಹೆಡ್ ಬುಷ್ ಹೇಗಿದೆ?

ಬೆಂಗಳೂರಿನ ಕರಗ , ತಿಗಳರ ಪೇಟೆಯ ಹುಡುಗ ಪೈಲ್ವಾನ್ ಜಯರಾಜ್, ಸುಮಾರು ೭ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ , ಅವರ ಅಳಿಯ ನಟರಾಜನ್ ಅವರ ಇಂದಿರಾ ಬ್ರಿಗೇಡ್ ಕಟ್ಟಿದ ರೀತಿ. ಇಂದಿರಾ ಬ್ರಿಗೇಡ್ ಯಾಕೆ ಬೇಕು? ಹಿಂದೊತ್ತು ಕಾಲವಿತ್ತು ಇಂದಿರಾ ಎಂದರೆ ಇಂಡಿಯಾ ಇಂಡಿಯಾ ಎಂದರೆ ಇಂದಿರಾ! ಅರಸ್ ಅವರ ತತ್ವ ಸಿದ್ದಾಂತಗಳೇನು? ಇದು ಇತಿಹಾಸ ಆದರೆ, ಚಿತ್ರದಲ್ಲಿ ಜಯರಾಜ್ ಪಾತ್ರ ಮಾಡಿದ ಡಾಲಿ ಅಲಿಯಾಸ್ ನಟ ರಾಕ್ಷಸ ಧನಂಜಯ್ ಅವರ ನಟನೆ ಅದ್ಬುತ!

ಇದೊಂದು ಪಕ್ಕ ನೈಜವಾಗಿ ನಡೆದ ಘಟನೆ ಬಗ್ಗೆ ಮತ್ತು ದಾದಾಗಿರಿಯ ದಿನಗಳ ಪುಸ್ತಕದಲ್ಲಿನ ಘಟನೆಯೇ ಹೆಡ್ ಬುಷ್ ಚಿತ್ರ.

೧೯೭೦ರ ಆಸುಪಾಸಿನ ಬೆಂಗಳೂರಿನ ಆಗುಹೋಗುಗಳು ಜೊತೆಗೆ ರಾಜ್ಯದ ರಾಜಕೀಯ ಸೂಕ್ಷ್ಮವಾಗಿ ಚಿತ್ರಿಸಿ ಕೊಟ್ಟಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಫೆಡರಲ್ ಸಿಸ್ಟಮ್ ಬಗ್ಗೆ ಇದ್ದ ತಾತ್ಸಾರದ ಬಗ್ಗೆ ಅತಿ ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ತಿಗಳಪೇಟೆಯ ಅಣ್ಣಪ್ಪ ಗರಡಿ ಮನೆಯಲಿ ತಾಲೀಮು ತಗೆದು ಜಬರದಸ್ತ್ ಕುಸ್ತಿ ಮಾಡುತ್ತಿದ್ದ ಎಂ ಪಿ ಜಯರಾಜ್ ರಾಜ್ಯವನ್ನೇ ಬೆಚ್ಚಿಬೀಳಿಸುವ ಹಾಗೆ ಮುನ್ನೆಲೆಗೆ ಬಂದಿದ್ದರು ಎಂದು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹೌದು ಜಯರಾಜ್ ಒಬ್ಬ ರೌಡಿ , ಆದರೆ ರೌಡಿ ಪಟ್ಟ ಬಂದಿದ್ದು ಹೇಗೆ? ಜಯರಾಜ್ ಕೊಲೆಗಳನ್ನು ಮಾಡಿ ದುಡ್ಡು ಸಂಪಾದನೆ ಮಾಡುತ್ತಿದ್ದಾರಾ? ಖಂಡಿತ ಇಲ್ಲ! ಇಂದಿರಾ ಬ್ರಿಗೇಡ್ ಕಟ್ಟಲುಜಯರಾಜರ ಕೈವಾಡ ಎಷ್ಟಿತ್ತು? ಅಂದಿನ ಪೊಲೀಸ್ ಕಮಿಷನರ್ ಗರುಡಾಚಾರ್ ಹೇಗೆ ಬೆಂಗಳೂರಿನ ರೌಡಿಸಂ ಮಟ್ಟಹಾಕಿದರು? ಭೂಗತಲೋಕಕ್ಕೆ ಮುಖ್ಯಮಂತ್ರಿಗಳ ಆಶೀರ್ವಾದ ಇತ್ತಾ?

ಜಯರಾಜ್ ಅವರು ನಡೆಸುತ್ತಿದ್ದ ಗರೀಬಿ ಹಟಾವೊ ಪತ್ರಿಕೆ ಮೂಲಕ ಯಾರಿಗೆಲ್ಲ ನಿದ್ದೆ ಕೆಡಿಸಿದ್ದರು? ಉಳ್ಳವರಿಗೆ ಎಂದರೆ ಕೊಳ್ಳೆ ಹೊಡೆದ ದುಡ್ಡನ್ನು ಕಸಿದು ಬಡವರಿಗೆ ಸಹಾಯ ಮಾಡಿದ್ದು ಸತ್ಯನಾ? ಹೀಗೆ ಅನೇಕ ವಿಷಯಗಳ ಬಗ್ಗೆ ಚೆನ್ನಾಗಿ ಚಿತ್ರದ ಮೂಲಕ ಹೇಳಿದ್ದಾರೆ. ಹೆಡ್ ಬುಷ್ ಒಂದು ಉತ್ತಮ ಚಿತ್ರ! ಯಾರೋ ಹೇಳಿದ್ದು ಇದೊಂದು ರೌಡಿಸಂ ಚಿತ್ರ ಇದಕ್ಕೆ ಯಾಕೆ ಹೋಗಬೇಕು? ಮತ್ತೆ ಹಿಂದೆ ಬಂದ ಅನೇಕ ಚಿತ್ರಗಳು ಇದಕ್ಕಿಂತ ಹೊಡೆದಾಟ ಬಡಿದಾಟ ಜಾಸ್ತಿ ಇದ್ದ ಚಿತ್ರಗಳಿಗೆ ನೋಡಿ ಬೆಂಬಲ ಕೊಟ್ಟಿದ್ದು ನಾವುಗಳೇ. ಕಾರಣ ಚಿತ್ರಗಳು ಮಾಡುವುದು ನಮ್ಮ ಮನರಂಜನೆಗಾಗಿ!

ಬೆಂಗಳೂರಿನ ಗಲ್ಲಿಗಲ್ಲಿಯ , ಪೊಲೀಸರ ಮತ್ತು ರಾಜಕೀಯ ವ್ಯಕ್ತಿಗಳ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ತಾಂತ್ರಿಕವಾಗಿ ಚೆನ್ನಾಗಿ ಮೂಡಿ ಬಂದಿದೆ. ರೈಟ್ ಐಸ್ ರಾಂಗ್ ಅಥವಾ ಲೆಫ್ಟ್ ಐಸ್ ರಾಂಗ್ ಅನ್ನೋದಕ್ಕಿಂತ ಚಿತ್ರ ಚೆನ್ನಾಗಿದೆ, ನೋಡಿ ಆನಂದಿಸಿ.

Categories: news

Tagged as: , ,

Leave a Reply