
ಶುಭ್ರ ಸಫಾರಿ ಇನ್ನೂ ಹೊಳೆಯುತ್ತಿದೆ, ಸಫಾರಿ ಜನಪ್ರಿಯತೆ ಕುಂದಿಲ್ಲ, ಸಫಾರಿ ಸೇವೆ ಪಕ್ಷಕ್ಕೆ ಬೇಕಿದೆ. ಅದಕ್ಕೆಂದೇ ನನಗೆ ಇನ್ಮುಂದೆ ರಾಜನಾಗುವ ಬಯಕೆ ಇಲ್ಲ , ಆದರೆ ಪಕ್ಷ ಮತ್ತೊಮ್ಮೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬೇಕು ಅದಕ್ಕಾಗಿ ನನ್ನ ಹೋರಾಟ! ವಿಧಾನಸಭೆಯಲ್ಲಿ ತಮ್ಮ ಕೊನೆಯ ಮಾತು ಹೇಳುವಾಗ ಪಕ್ಷಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಹೇಳುತ್ತಾ. ನಮ್ಮ ಶಾಸಕರು ಆತ್ಮವಿಶ್ವಾಸದಿಂದ ಮುನ್ನುಗ್ಗಿ , ಮತ್ತೆ ಸರ್ಕಾರ ಮಾಡುವರು ನಾವೇ ಎಂದಾಗ ಕಾಂಗ್ರೇಸ್ ಶಾಸಕರು ಥಂಡಾ ಹೊಡೆದಿದ್ದು ಸುಳ್ಳಲ್ಲ.
ಅಂದು ಯಡಿಯೂರಪ್ಪ ಗುಡುಗಿದರೆ ವಿಧಾನಸಬೆ ನಡಗುತ್ತೆ ಎಂದಾದರೆ, ಇಂದು ಯಡಿಯೂರಪ್ಪ ನುಡಿದರೆ ವಿರೋಧಿಗಳು ಸಹಿತ ತಲೆಯಾಡಿಸುತ್ತಾರೆ !. ಅಂದಿನಿಂದ ಇಲ್ಲಿಯವರೆಗೆ ಓಡುವ ಕುದರೆಯಾಗಿ ಉಳಿದಿದ್ದು ಕರ್ನಾಟಕ ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿಯಲಿದೆ. 2014ರಲ್ಲಿ ಶಿವಮೊಗ್ಗದ ಲೋಕಸಭೆಯಲ್ಲಿ ರಾಜಕುಮಾರ ಸೊಸೆ, ಬಂಗಾರಪ್ಪನವರ ಮಗಳನ್ನು ಸುಮಾರು ೪ ಲಕ್ಷ್ಯ ಮತಗಳ ಅಂತರಿಂದ ಜಯಗಳಿಸಿದ್ದು ಸಾಮನ್ಯ ಮಾತಲ್ಲ. ಸಂಘದ ಶಿಸ್ತಿನ ಸಿಪಾಯಿ, ಎಂದು ಸಂಘದ ವಿರುದ್ಧ ಮಾತನಾಡಿದ ಉಧಾಹರಣೆ ಇಲ್ಲವೇ ಇಲ್ಲ. ಸಂಘ ಇವರಿಗೆ ಬೆಳಿಸಿತು ಎಂದರೇ ತಪ್ಪಾಗಲಾರದು.
ಬಿಜೆಪಿ ಬೇರೂರಿದ್ದು ಇವರ ನಾಯಕತ್ವದಿಂದಲೇ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಹುಟ್ಟು ಹೋರಾಟಗಾರ ಯಡಿಯೂರಪ್ಪನವರ ನಡೆದು ಬಂದ ಹಾದಿ ಎಷ್ಟೋ ಯುವಕರಿಗೆ ಮಾರ್ಗ ತೋರಿಸಬಲ್ಲದು. ಯಾವದು ಸರಳವಾಗಿ ಬರುವದಿಲ್ಲ. ಅದಕ್ಕೆ ಸತತವಾದ ಪ್ರಯತ್ನ ಇರಬೇಕು. ಗಟ್ಟಿಯಾಗಿ ಹಿಡಿದ ಹಾದಿ ಬಿಡದೆ ಇದ್ದರೇ ಖಂಡಿತ ಯಶಸ್ಸು ಪಡೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ರಾಜಕಾರಿಣಿಗಳನ್ನು ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಇವರೇ ಬಾಸ್ . ಫೇಸಬುಕ್ನಲ್ಲಿ ೧೭ಲಕ್ಷ ಫಾಲ್ಲೋರ್ಸ್, ಟ್ವಿಟ್ಟರ್ ನಲ್ಲಿ ಸುಮಾರು ೧೨ ಲಕ್ಷ್ಯ! ಯುವಕರಿಗೆ, ಹಿರಿಯ ನಾಗರಿಕರಿಗೆ ಮತ್ತು ಮಹಿಳಾಮಣಿಗಳು ಇಷ್ಟಪಡುವ ರಾಜಕಾರಿಣಿ ಯಡಿಯೂರಪ್ಪ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ರಾಜಕಾರಿಣಿಗಳನ್ನು ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಇವರೇ ಬಾಸ್ . ಫೇಸಬುಕ್ನಲ್ಲಿ ೧೭ಲಕ್ಷ ಫಾಲ್ಲೋರ್ಸ್, ಟ್ವಿಟ್ಟರ್ ನಲ್ಲಿ ಸುಮಾರು ೧೨ ಲಕ್ಷ್ಯ! ಯುವಕರಿಗೆ, ಹಿರಿಯ ನಾಗರಿಕರಿಗೆ ಮತ್ತು ಮಹಿಳಾಮಣಿಗಳು ಇಷ್ಟಪಡುವ ರಾಜಕಾರಿಣಿ ಯಡಿಯೂರಪ್ಪ. ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಅಭಿಮಾನಿಗಳ ಇವರ ಹೆಸರಲ್ಲಿ ಪುಟಗಳು ತೆರೆದಿದ್ದಾರೆ. ೨೦೧೨ರಲ್ಲಿ ಸೋಶಿಯಲ್ ಮೀಡಿಯಾ ದ ಬಗ್ಗೆ ಚರ್ಚೆ ಮಾಡುವಾಗ ಅವರು ಹೇಗೆ ಅದನ್ನು ಆಸಕ್ತಿಯಿಂದ ಕೇಳುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ ಕೆಳಗಿನ ಚಿತ್ರ.

ಇಡೀ ದೇಶ ಕೋಮುವಾದಿ ಬಿಜೆಪಿ ಪಕ್ಷ ಎಂದು ಜರಿಯುತ್ತಾರೆ. ಅನೇಕೆ ಬಿಜೆಪಿ ನಾಯಕರು ಹಿಂದೂ ಮುಸ್ಲಿಂ ಎಂದು ವರ್ಗಿಕರಣ ಮಾಡಿ ರಾಜಕೀಯ ಮಾಡಿದ್ದು ಕಂಡಿದ್ದೇವೆ. ಆದರೆ ನಮ್ಮ ಯಡಿಯೂರಪ್ಪನವರು ಯಾವತ್ತೂ ಯಾವದೇ ಸಮುದಾಯಕ್ಕೆ ನಿಂದಿಸಿದ ಉಧಾಹರಣೆ ಇಲ್ಲ. ಅದಕ್ಕೆ ಯಾವಾಗಲೂ ಅವರು ಹೇಳಿದ್ದು “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು”. ಎಲ್ಲ ಸಮುದಾಯದ ಜನರು ಜೈ ಎಂದು ಹೇಳುವ ನಾಯಕ!
ಸಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡದೆ ಇದ್ದಾಗ , ಮುಂದೆ ಚುನಾವಣೆಯಲ್ಲಿ ಇಡೀ ಲಿಂಗಾಯತ ಸಮುದಾಯ ಬಿಜೆಪಿ ಜೊತೆ ನಿಂತಿದ್ದಕ್ಕೆ ಬಿಜೆಪಿ ೧೦೦ ಗಡಿ ದಾಟುವದಕ್ಕೆ ಸಾಧ್ಯವಾಯಿತು. ಆದರೆ ಅವ್ರು ಯಾವತ್ತೂ ಒಂದೇ ಸಮುದಾಯದ ನಾಯಕನಾಗಲಿಲ್ಲ. ಅತಿ ಸಣ್ಣ ಸಮುದಾಯ ಗುರುತಿಸಿ ಅನುಧಾನ ಕೊಡುವ ಕೆಲಸ ಮಾಡಿದರು. ಸಾಧ್ಯವಾದಷ್ಟು ರಾಜ್ಯದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಕೊಟ್ಟು ಸೈ ಎನಿಸಿಕೊಂಡ ನಾಯಕ. ಅತ್ಯಂತ ಕ್ಲಿಷ್ಟ ಪರಿಸ್ಥಿತಿಗಳನ್ನು ಎದುರಿಸಿದ ದಿಟ್ಟ ನಾಯಕ!
ಪಕ್ಷದ ಕಾರ್ಯಕ್ರಮ ದಕ್ಷಿಣ ಕನ್ನಡದಲ್ಲಿ ಇದ್ದಾಗ , ಎಷ್ಟೋ ಜನರಿಗೆ ಗೊತ್ತಿರಲಿಲ್ಲ ಇನ್ನೂ ಯಡಿಯೂರಪ್ಪನವರ ಹವಾ ನಿಂತಿಲ್ಲ! ಲಿಂಗಾಯತ ಸಮುದಾಯ ಇಲ್ಲದ ದಕ್ಷಿಣ ಕನ್ನಡದ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಯಡಿಯೂರಪ್ಪನವರು ಬಂದಾಗ ಜನರ ಜಯಘೋಷಗಳು ಸಾರಿ ಸಾರಿ ಹೇಳುತ್ತವೆ ಇವರೊಬ್ಬ ಯಾವದೇ ಸಮದಾಯಕ್ಕೆ ಅಂಟಿಕೊಂಡು ರಾಜಕೀಯ ಮಾಡಿದವರಲ್ಲ. ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವಾಗ ಒಕ್ಕಲಿಗ ಸಮುದಾಯದ ನಾಯಕನನ್ನು ಮುಖ್ಯಮಂತ್ರಿ ಮಾಡಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು, ರೈಲು ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕರ ಹೆಸರು ಸೂಚಿಸಿದ್ದು ಹೇಳುತ್ತದೆ ಅವರ ಘನ ವ್ಯಕ್ತಿತ್ವ!
ಅವರು ನಡೆದು ಬಂದ ದಾರಿ ನೋಡಬೇಕಾದರೆ …
ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಸಿ ಕೆಲಸ ಪ್ರಾರಂಬಿಸಿದ್ದು ಶಿವಮೊಗ್ಗದ ಶಿಕಾರಿಪುರದಲ್ಲಿ. ಕೇವಲ ನಮ್ಮ ಮಾತುಗಳು ನಮ್ಮ ಸಾಧನೆಯಯಾಗಬಾರದು ನಮ್ಮ ಕೆಲಸದಿಂದ ಸಾಧನೆಮಾಡಬೇಕು ಎಂದು ತೋರಿಸಿಕೊಟ್ಟ ಧೀಮಂತ ನಾಯಕ ಯಡಿಯೂರಪ್ಪ. ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಇವರಿಗೆ ರಾಷ್ಟ್ರಭಕ್ತಿ ಇವರನ್ನು ಸಾಮಾಜಿಕ ಜೀವನಕ್ಕೆ ಕಾಲಿಡುವಂತೆ ಮಾಡಿತು. ನಾನು ರಾಜ್ಯದ ಮುಖ್ಯಮಂತ್ರಿ ಯಾಗಬೇಕೆಂದು ಸಾಮಾಜಿಕ ಜೀವನಕ್ಕೆ ಬಂದವರಲ್ಲ. ತನ್ನ ನಂಬಿದ ಜನ ಮತ್ತು ದೇಶ,ರಾಜ್ಯದ ಸೇವೆಗಾಗಿ ರಾಜಕೀಯ ಹಾದಿ ತುಳಿದಿದ್ದು.
ಇಂದಿನ ರಾಜಕಾರಿಣಿಗಳಿಗೆ ೫ ವರ್ಷ ಅಧಿಕಾರದಿಂದ ದೂರ ಉಳಿದರೆ ನೀರಲ್ಲಿರುವ ಮೀನನ್ನು ನೀರಿನಿಂದ ಹೊರಗೆ ತೆಗೆದಂತೆ! ಆದರೆ ರಾಜಕೀಯವಾಗಿ ೫೦ ವರ್ಷ ಅನುಭವ ಹೊಂದಿದ ಯಡಿಯೂರಪ್ಪನವರ ಹಾದಿ ಹೇಗಿತ್ತು? ಅವರ ಸಂಘರ್ಷ ಹೇಗಿತ್ತು?
ಮೊದಲು ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಜೊತೆ ನಿಕಟ ಸಂಪರ್ಕ ಹೊಂದಿದ ಯಡಿಯೂರಪ್ಪನವರು ಮುಂದೆ ೧೯೭೨ರಲ್ಲಿ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಅದೇ ವರ್ಷ ಜನಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ. ೧೯೭೫ರಲ್ಲಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ೧೯೭೭ರಲ್ಲಿ ಇಂದಿರೆಯ ಎಮರ್ಜೆನ್ಸಿ ಕಾಲದಲ್ಲಿ ಯಡಿಯೂರಪ್ಪನವರು ಸಹಿತ ಜೈಲಿಗೆಹೋಗಿದ್ದರು. ಬಳ್ಳಾರಿ ಮತ್ತು ಶಿವಮೊಗ್ಗ ಜೈಲಲ್ಲಿ ಯಡಿಯೂರಪ್ಪನವರನ್ನು ಬಂದಿಯಾಗಿಸಿದ್ದರು. ಪುರಸಭೆಯ ಸದಸ್ಯರಾಗಿದ್ದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಹೀಗೆ ಇವರ ಸಾಮಾಜಿಕ ಜೀವನ ಮುಳ್ಳಿನ ಹಾದಿಯಿಂದ ಇತ್ತು. ಆದರೆ ಎಷ್ಟೇ ಕಷ್ಟ ಬಂದರೂ ಸಾಮಾಜಿಕ ಜೀವನದಿಂದ ಓಡಿಹೋಗಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ೧೯೮೩ರಲ್ಲಿ ಮೊದಲ ಸಲ ವಿಧಾನಸಭೆಗೆ ಆಯ್ಕೆಯಾಗಿ ವಿಧಾನಸಭೆ ಪ್ರವೇಶಮಾಡಿದರು.
೧೯೮೩ರಲ್ಲಿ ಕೇವಲ ಎರಡೇ ಎರಡು ಶಾಸಕರು ಜನಸಂಘದಿಂದ ಆಯ್ಕೆಯಾಗಿದ್ದರು. ಅಂದಿನ ಸರ್ಕಾರ ಇಬ್ಬರು ಇರುವ ಪಕ್ಷಕ್ಕೆ ಗಾಳಹಾಕಿ ಒಬ್ಬ ಶಾಸಕನನ್ನು ಸೆಳೆದುಬಿಟ್ಟರು ಆದರೆ ಯಡಿಯೂರಪ್ಪನವರು ಮಾತ್ರ ಬೇರೆ ದಾರಿ ತುಳಿಯಲಿಲ್ಲ. ಸತತ ಪ್ರಯತ್ನ ಮತ್ತು ಜನರ ಒಡನಾಟದ ಫಲ ೧೯೮೮ರಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೯೪ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಪಕ್ಷವನ್ನು ರಾಜ್ಯದ ತುಂಬಾ ಓಡಾಡಿ ಪಕ್ಷವನ್ನು ಬಲಪಡಿಸಿದರು. ಮುಂದೆ ೧೯೯೯ರ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಅನೇಕ ಬದಲಾವಣೆಗಳಾಗಿದ್ದವು. ಲೋಕಶಕ್ತಿ ,ಜನತಾ ಪಕ್ಷ ಜೊತೆ ಭಾರತೀಯ ಜನತಾ ಪಕ್ಷ ಚುನಾವಣೆ ಸ್ಪರ್ದಿಸಿ ಸರ್ಕಾರ ರಚನೆ ಒಂದೇ ಬಾಕಿ ಎನ್ನುವ ಮಟ್ಟಿಗೆ ಭಾರತೀಯ ಜನತಾ ಪಕ್ಷದ ಹವಾ ಸೃಷ್ಟಿಯಾಗಿತ್ತು. ಆದರೆ ಪಕ್ಷಗಳ ಹೊಂದಾಣಿಕೆ ಕೊರೆತೆಯಿಂದ ಸರ್ಕಾರ ರಚನೆ ಮಾಡುವ ಬದಲು ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ಒಳ ಹೊಡೆತದಿಂದ ವಿಧಾನಸಭೆಯಲ್ಲಿ ಪರಾಭವಗೊಂಡರು. ವಿಧಾನಸಭೆಯಲ್ಲಿ ಹಿನ್ನಡೆಯಾದರು ಎದೆಗುಂದದೆ ಪಕ್ಷ ಸಂಘಟನೆ ಕಡೆ ಹೆಚ್ಚಿನ ಗಮನ ಕೊಟ್ಟಿದ್ದರು.
೨೦೦೪ರಲ್ಲಿ ದರ್ಮಸಿಂಗರ ಸರ್ಕಾರ ಕೆಡವಿ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ರಚನೆ ಮಾಡಿ ಸುಮಾರು ೨೦ ತಿಂಗಳ ಅತ್ಯುತ್ತಮ ಆಡಳಿತ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ೨೦ ಅಧಿಕಾರವನ್ನು ಜೆಡಿಎಸ್ ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಡಬೇಕಿತ್ತು. ಆದರೆ ಅದು ಫಲ ಕೊಡದೆ ಇದ್ದಾಗ ಜನರ ಮುಂದೆ ಹೋಗಿ ೨೦೦೮ರಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಪಕ್ಷೇತರ ಜೊತೆಗೂಡಿ ಸರ್ಕಾರ ರಚನೆ ಮಾಡಿದರು. ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಬಿಎಸ್ವೈ. ಅಧಿಕಾರ ವಹಿಸಿಕೊಂಡ ನಂತರ ಅನೇಕ ಅಭಿವೃದ್ಧಿ ಕೆಲಸಗಳು ಕೊಟ್ಟರು, ಸಂದ್ಯಾ ಸುರಕ್ಷಾ ಯೋಜನೆ, ಭಾಗ್ಯಲಕ್ಷ್ಮಿ, ಸೈಕಲ್ ಯೋಜನೆ, ರೈತರಿಗಾಗಿ ಬಜೆಟ್ ಹೀಗೆ ಹಲವಾರು ಕಾರ್ಯಕ್ರಮಗಳು ಕೈಗೊಂಡಿದ್ದರು.
ಅಧಿಕಾರ ಸಿಕ್ಕಾಗ ಯಾವತ್ತೂ ಸ್ವಾರ್ಥ ಬಯಸಲಿಲ್ಲ, ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಬಿಜೆಪಿ ಅಧ್ಯಕ್ಷ ತಮಗೆ ಬೇಕಾದವರಿಗೆ ಕೂಡಿಸಿ ಇನ್ನೂ ಪಕ್ಷವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದಿತ್ತು. ಅವರು ಹಾಗೆ ಮಾಡಲಿಲ್ಲ. ರಾಷ್ಟ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ನೋಡಬಹುದು ತಮಗೆ ಬೇಕಾದವರಿಗೆ ಆಯಾಕಟ್ಟಿನಲ್ಲಿ ತಂದು ಬಿಡುತ್ತಾರೆ. ಯಡಿಯೂರಪ್ಪನವರಿಗೆ ತಮ್ಮ ಹಾಗೆ ಕೆಲಸ ಮಾಡಿದವರಿಗೆ ಅಧಿಕಾರ ಸಿಗಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ತಾವು ಹೇಳಿದ್ದೆ ವೇದವಾಕ್ಯ ಎನ್ನುವ ಮಟ್ಟಿಗೆ ಹೋಗಲಿಲ್ಲ. ಅದರ ಪ್ರತಿಫಲ ಅವರ ಮೇಲೆ ಪಕ್ಷದ ಒಳಗಿನಿಂದಲೇ ದಾಳಿಗಳು ಪ್ರಾರಂಭವಾದವು. ದಾಳಿಗಳು ಎಷ್ಟು ತೀಕ್ಷ್ಣವಾಗಿದ್ದವು ಎಂದರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಪಕ್ಷ ಬಿಡುವ ಮಟ್ಟಿಗೆ ಇದ್ದವು. ಅಧಿಕಾರ ಸಿಕ್ಕಾಗ ಮುಳ್ಳಿನ ಮೇಲೆ ಅವರ ನಡಿಗೆಯಾಗಿತ್ತು. ಇದರ ಮಧ್ಯದಲ್ಲಿ ಅವರಿಗೆ ಜೈಲು ಸೇರುವ ಕಾಲದ ಬಗ್ಗೆ ಕೇಳಿದಾಗ ಅವರ ಅಭಿಮಾನಿಗಳಿಗೆ ಖಂಡಿತ ನೋವು ಆಗದೆ ಇರಲಾರದು. ಒಂದು ಖಾಸಗಿ ಕೇಸ್ ಜೈಲಿಗೆ ಕಳಿಸುತ್ತೆ ಎಂದರೆ ರಾಜಕೀಯ ಆಳ ಅಳೆಯುವುದು ತುಂಬಾ ಕಷ್ಟ! ಹೇಗಾದರೂ ಮಾಡಿ ಯಡಿಯೂರಪ್ಪನವರ ಜನಪ್ರಿಯತೆ ತಗ್ಗಿಸುವ ಕೆಲಸ ಬರದಿಂದ ಇತ್ತು.
ತಾವು ಕಟ್ಟಿದ ಪಕ್ಷ ಒಂದೇ ವರ್ಷದಲ್ಲಿ ೧೦% ಮತಗಳು, ೩೭ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾನದಲ್ಲಿ ಇತ್ತು. ಮತ್ತೆ ಮಾತೃ ಪಕ್ಷಕ್ಕೆ ಸೇರಿ ಸರ್ಕಾರ ರಚನೆ ಮಾಡಿದ್ದು ಇತಿಹಾಸ. ಇಂಥಹ ಗಟ್ಟಿತನ ಎಲ್ಲರಿಗೂ ಬರುವದಿಲ್ಲ. ರಾಜ್ಯದಲ್ಲಿ ಇಲ್ಲಿಯವರೆಗೆ ಬಿಜೆಪಿಯ ನಾಲ್ಕು ಮುಖ್ಯಮಂತ್ರಿಗಳಾಗಿದ್ದಾರೆ , ಎಲ್ಲರೂ ಇವರ ಕೃಪಾಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದವರೇ.
ತಾವು ರಾಜ್ಯ ನಾಯಕರಾದಾಗ ಪಕ್ಷ ಸಂಘಟನೆ ಮಾಡಲು ಇವರಿಗೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ. ಅಂದಿನ ಕಾಲದಲ್ಲಿ ಬಿಜೆಪಿಯಿಂದ ಚುನಾವಣೆಗೆ ಅಭ್ಯರ್ಥಿಗಳನ್ನು ಹುಡುಕಿ , ಒತ್ತಡ ಹಾಕಿ ನಾಮಪತ್ರ ಸಲ್ಲಿಸುವ ಕಾಲದಲ್ಲಿ ಇಂತಹ ಪಕ್ಷಕ್ಕೆ ಯಾರು ಹಣ ಸಹಾಯ ಮಾಡುತ್ತಾರೆ. ಪಕ್ಷದ ಸಂಘಟನಗೆ ಅನೇಕರ ಬಳಿ ಸಹಾಯ ಕೇಳುವಾಗ, ತಮ್ಮ ಗುರುತು ಸಿಗಲಿ ಎಂದು ತಮ್ಮ ಉಡುಗೆಯನ್ನು ಬದಲಾವಣೆ ಮಾಡಿದ್ದರು. ಪಕ್ಷ ಕಟ್ಟುವ ಸಲುವಾಗಿ ಸಫಾರಿ ತೊಟ್ಟರು!
ಯಡಿಯೂರಪ್ಪನವರು ಇನ್ಮುಂದೆ ಚುನಾವಣೆ ಕಣದಲ್ಲಿ ಇಲ್ಲ ಎನ್ನುವ ನೋವು ಒಂದು ಕಡೆ ಆದರೆ, ಯುವನಾಯಕ ಅವರ ಸುಪುತ್ರ ವಿಜಯೇಂದ್ರ ಚುನಾವಣೆ ಕಣದಲ್ಲಿ ಇರುತ್ತಾರೆ ಎಂಬ ಸಂತೋಷವು ಅವರ ಅಪಾರ ಅಭಿಮಾನಿಗಳಿಗೆ ಇದೆ.
Categories: Articles
