ಇಂದಿನ ಶಾಸಕರ ಕಾರ್ಯವೈಖರಿ ಹೇಗೆ ಇದೆ ಎಂದು ಜನರಿಗೆ ಚೆನ್ನಾಗಿ ತಿಳಿದಿದೆ. ೨೦೦೮ರಲ್ಲಿ ಬಿಜೆಪಿ ಕಾಂಗ್ರೇಸ್ ಪಕ್ಷವನ್ನು ಸೋಲಿಸಿ ಭರ್ಜರಿ ಜಯಗಳಿಸಿತ್ತು. ಆದರೆ ಗೆಲುವಿನ ಅಂತರ ತುಂಬಾ ಕಡಿಮೆ ಇದ್ದ ಕಾರಣ ಸೋಲೇ ಗೆಲುವಿನ ಸೋಪಾನ ಎನ್ನುವ ಹಾಗೆ ಮುಂದೆ ಗೆಲ್ಲುವ ವಾಸನೆ ಕಾಂಗ್ರೇಸ್ ಪಕ್ಷಕ್ಕೆ ಅಂದೇ ಬಡಿದಿತ್ತು. ೨೦೦೮ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅನೇಕರು ದುಡಿದಿದ್ದರು. ಅಂದಿನ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಬಿ ಜಿ ಪಾಟೀಲ್ ಅವರು ಇವರಿಗೆ ಸಹಾಯ ಮಾಡಿದ ಪರಿಣಾಮ ಇವರ ಮತಗಳಿಕೆ ಚೆನ್ನಾಗಿಯೇ ಆಗಿತ್ತು. ಗೆಲುವಿನ ಅಂತರದ ಅನುಕಂಪವನ್ನು ೨೦೧೩ರಲ್ಲಿ ಚೆನ್ನಾಗಿ ಬಳಕೆ ಮಾಡಿಕೊಂಡು ಶಾಸಕರಾಗಿ ಆಯ್ಕೆಯಾಗಿದ್ದು ಯಶವಂತರಾಯ ಪಾಟೀಲರು. ನಾನು ಏನಾದರೂ ೨೦೧೩ರ ಸೋತರೆ ನನ್ನ ಪರಸ್ಥಿತಿ ತೀರಾ ಹದಗೆಡುತ್ತದೆ ಎಂದು ಅತ್ಯುತ್ತಮ ರೀತಿಯಲ್ಲಿ ಜನರಿಗೆ ತಲುಪಿಸಿದ್ದರು. ಅದೇ ಅವರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿ ಗೆಲುವಿನ ದಡ ಸೇರಿಸಿತ್ತು. ಗೆದ್ದ ನಂತರ ದುಬಾರಿ ಕಾರ್ ವೋಲ್ವೋ ಉಪಯೋಗ ಮಾಡುತ್ತಿದ್ದರು ಎನ್ನುವುದು ಸೋಜಿಗದ ಸಂಗತಿ! ಎಲ್ಲಿಂದ ಬಂತು ಅಷ್ಟೊಂದು ದುಡ್ಡು?. ಆದರೆ ಜನರ ಸ್ಥಿತಿ ಮೊದಲಿನಿಕ್ಕಿಂತಲೂ ಭಿನ್ನವೇನಿಲ್ಲ.
೨೦೧೩ ಮತ್ತು ೨೦೧೮ರ ಎರಡು ಚುನಾವಣೆಗಳ ವಿಶ್ಲೇಷಣೆ ಮಾಡಿದರೆ ಒಂದಂತು ಅರ್ಥವಾಗುತ್ತೆ. ೨೦೧೮ರಲ್ಲೇ ಯಶವಂತರಾಯ ಪಾಟೀಲರನ್ನು ಜನರು ತಿರಸ್ಕಾರ ಮಾಡಿದ್ದರು ಎಂದು ಕೆಳಗಿನ ಅಂಕಿ ಸಂಖ್ಯೆ ನೋಡಿದರೆ ತಿಳಿಯುತ್ತೆ! ೨೦೧೩ರಲ್ಲಿ ಸುಮಾರು ೪೨% ಪ್ರತಿಶತ ಮತಗಳನ್ನು ಪಡೆದ ಯಶವಂತರಾಯ ಪಾಟೀಲರು ೨೦೧೮ರಲ್ಲಿ ೩೦% ಪ್ರತಿಶತ ಮತಗಳನ್ನು ಪಡೆದಿದ್ದರು. ಅವರಿಗೆ ಈಗಾಗಲೇ ಗೊತ್ತಾಗಿದೆ ಚುನಾವಣೆ ಕಷ್ಟ ಇದೆ ಅಂತ. ಅದಕ್ಕೆಂದೇ ಕಳೆದ ಕೆಲವು ದಿನಗಳಿಂದ ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಪ್ರತಿಶತ ಒಟ್ಟು ಮತಗಳ ಗಳಿಕೆ ಮೇಲೆ ಲೆಕ್ಕ ಹಾಕಲಾಗಿದೆ. ಇದನ್ನು ಯಾವದೇ ಸರ್ಕಾರಿ ವೆಬ್ಸೈಟ್ ಗಳಿಂದ ತಗೆದುಕೊಳ್ಳಬಹುದು.
| Party | Year | Votes | % |
| Congress | 2013 | 58562 | 42.2% |
| Congress | 2018 | 50401 | 29.98% |
ಇವರು ಶಾಸಕರಾಗಿ ಆಯ್ಕೆಯಾಗಿ ಅಭಿವೃದ್ಧಿ ಮಾಡಿಲ್ಲ ಎಂದರೇ ತಪ್ಪಾಗುತ್ತೆ! ಕಾರಣ ಎಷ್ಟು ಮಿನಿಮಮ್ ಆಗಲೇಬೇಕು ಅವಲ್ಲೇ ಆಗಿವೆ. ಆದರೆ ಹೇಳಿಕೊಳ್ಳುವ ಕೆಲ್ಸಗಳು ಎಂದರೆ ಇಂಡಿಗೆ ಕುಡಿಯುವ ನೀರನ್ನು ಕೊಟ್ಟಿದ್ದಾರೆ, ಶುಗರ್ ಫ್ಯಾಕ್ಟರಿ ಆಗಿದೆ, ಆದರೆ ಇದರಿಂದ ಜನರಿಗೆ ಎಷ್ಟು ಅನುಕೂಲವಾಗಿದೆ ಎಂದು ಅವರೇ ಹೇಳಬೇಕು! ಕಾರಣ ಇವರು ಫ್ಯಾಕ್ಟರಿ ಪೂರ್ಣಮಾಡುವ ಹೊತ್ತಿಗೆ ಅನೇಕ ಫ್ಯಾಕ್ಟರಿಗಳು ತಲೆ ಎತ್ತಿ ನಿಂತಿದ್ದವು. ಇದು ಬಿಟ್ಟು ಜಾತಿಗಳನ್ನು ಮತಗಳಿಕೆಗೆ ತಮ್ಮ ಬುದ್ಧಿಶಕ್ತಿ ಬಳಸಿಕೊಂಡು ಒಳ್ಳೆಯ ಉಪಯೋಗ ಮಾಡಿಕೊಂಡಿದ್ದಾರೆ ಎಂದು ಕೇಳಿದ್ದೇವೆ. ಶಾಸಕರ ಕ್ಷೇತ್ರದ ಅಭಿವೃದ್ಧಿ ,ಕಾಳಜಿ ಮತ್ತು ಅವರ ೧೦ ವರ್ಷದ ಆಡಳಿತ ಹೇಗೆ ಎಂದು ಜನರು ನಿರ್ಧಾರ ಮಾಡಲಿ ಬಿಡಿ!
ಬಳ್ಳೊಳ್ಳಿ ಮತಕ್ಷೇತ್ರ ತಗೆದು , ನಾಗಠಾಣ ಮತಕ್ಷೇತ್ರವಾಯಿತು. ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಅನೇಕ ಊರುಗಳ ಕ್ಷೇತ್ರಗಳ ಬದಲಾವಣೆ ಆದವು. ಹೊಸ ಊರುಗಳ ಮತ್ತು ಹೊಸ ಅಭ್ಯರ್ಥಿ ಬಗಲಿಯವರ ಜಾತ್ಯತೀತೆ ಪರಿಣಾಮ ೨೦೦೮ರಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಪಕ್ಷ ಜಯಗಳಿಸಿತ್ತು. ಶಾಸಕರಾಗಿ ಆಯ್ಕೆಯಾಗಿದ್ದ ಬಗಲಿಯವರ ಅಭಿವೃದ್ಧಿ ಕಾರ್ಯಗಳಿಗೆ ಜನರು ಜೈಹೋ ಅಂದಿದ್ದರು. ಆದ್ರೆ ಸ್ವಯಂ ಕೃತ ಅಪರಾಧದಿಂದ ಅವರಿಗೆ ಟಿಕೆಟ್ ತಪ್ಪಿ ಬಿಜೆಪಿ ಮಖಾಡೆ ಮಲಗಿತು. ೨೦೧೩ರಲ್ಲಿ ಶ್ರೀಶೈಲ್ ಬಿರಾದಾರ ಗಳಿಸಿದ ಮತ ಸುಮಾರು ೧೫ಸಾವಿರ! ಆದರೆ ೨೦೧೮ರಲ್ಲಿ ಬಿಜೆಪಿಯ ಮತಗಳಿಕೆ ಅತ್ಯುತ್ತಮವಾಗಿತ್ತು. ಆದರೆ ೨೦೧೮ರಲ್ಲಿ ಕೊನೆಯ ಗಳಿಗೆಯಲ್ಲಿ ಟಿಕೆಟ್ ಪಡೆದುಕೊಂಡ ದಯಾಸಾಗರ ಪಾಟೀಲ್ ಸುಮಾರು ೪೦ಸಾವಿರ ಮತಗಳನ್ನು ಪಡೆದಿದ್ದರು. ಅಂದು ಅವರಿಗೆ ಇಂಡಿಯ ಮುತ್ಯಾ ಬೆಂಬಲವಾಗಿ ನಿಂತಿದ್ದರೇ ಗೆಲುವು ಆರಾಮವಾಗಿ ದಕ್ಕುತ್ತಿತ್ತು. ಇವರ ಜೊತೆ ಟಿಕೆಟ್ ಕೈ ತಪ್ಪಿದ ಮೇಲೆ ಟಿಕೆಟ್ ಆಕಾಂಕ್ಷಿಗಳು ಬೇಸರ ಮಾಡಿಕೊಂಡು ಚುನಾವಣೆಯಿಂದ ದೂರ ಉಳಿದರು. ಅವರ ಜೊತೆ ಇದ್ದ ಕಾರ್ಯಕರ್ತರು ಕನ್ಫ್ಯೂಸ್ ಆಗಿ ಮತಗಳ ವಿಭಜನೆಯಾಗಿದ್ದು ಸೋಲಿಗೆ ಕಾರಣ!

ಹಿರಿಯರು ಹೇಳುತ್ತಾರೆ, ಮಾಡಿದ ತಪ್ಪನ್ನು ಮತ್ತೆ ಮಾಡುವದಿಲ್ಲ. ೨೦೧೮ರಲ್ಲಿ ನಮ್ಮ ನಾಯಕನಿಗೆ ಟಿಕೆಟ್ ಸಿಗಲಿಲ್ಲ ಎಂದು ಕಾರ್ಯಕರ್ತರು ಮನಸಲ್ಲಿ ನೋವಿದ್ದರೂ ಪಕ್ಷದ ಜೊತೆ ನಿಲ್ಲಲಿಲ್ಲ. ಅದಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಈಗಿನ ಸ್ಥಿತಿ ಕಳೆದ ಚುನಾವಣೆಯಲ್ಲಿ ಇದ್ದ ರೀತಿಯಲ್ಲೇ ಇದೆ. ಸ್ವಲ್ಪ ಬದಲಾವಣೆ ಎಂದರೇ ದಯಾಸಾಗರ ಪಾಟೀಲರು ೪೦ಸಾವಿರ ಮತಗಳನ್ನು ಪಡೆದು ಮತ್ತು ನಿರಂತರವಾಗಿ ಕಾರ್ಯಕರ್ತರ ಜೊತೆ ಇದ್ದು ಬಿಜೆಪಿಯನ್ನು ಬಲಿಷ್ಠ ಮಾಡಿದ್ದಾರೆ. ಇವರ ಜೊತೆ ಕಾಸುಗೌಡ ಬಿರಾದಾರ್, ಉಮರಾಣಿ ಇನ್ನೂ ಅನೇಕರು ನಿರಂತರವಾಗಿ ಪಕ್ಷದ ಕೆಲಸ ಮಾಡಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಪಕ್ಷ ಬಲಿಷ್ಟವಾಗಿದೆ. ಇದನ್ನು ಕಾರ್ಯರೂಪಕ್ಕೆ ಬರಬೇಕಾದರೆ ೨೦೨೩ರಲ್ಲಿ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು.
ಇಂಡಿಯಲ್ಲಿ ಬಿಜೆಪಿ ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಕೈಯ್ಯಲ್ಲಿಇದೆ. ೧೦ವರ್ಷಗಳಿಂದ ಪಕ್ಷ ಗೆಲ್ಲಿಸಬೇಕು ಎಂದು ದುಡಿಯುತ್ತಿರುವ ಕಾರ್ಯಕರ್ತರು ಪಕ್ಷದ ಜೊತೆ ನಿಲ್ಲಬೇಕು, ನನ್ನ ಜಾತಿಯ ಮತ್ತು ನನ್ನ ನಾಯಕನಿಗೆ ಟಿಕೆಟ್ ಸಿಕ್ಕರೆ ಮಾತ್ರ ಬಿಜೆಪಿ ಎಂದರೆ ಪಕ್ಷ ಮತ್ತೊಮ್ಮೆ ಮಖಾಡೆ ಮಲಗೋದು ನಿಶ್ಚಿತ. ಗುಜರಾತದಲ್ಲಿ ಯಾಕೆ ಸತತವಾಗಿ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದರೇ ಅಲ್ಲಿನ ಕಾರ್ಯಕರ್ತರು ಪಕ್ಷದ ಜೊತೆ ನಿಲ್ಲುತ್ತಾರೆ. ಪಕ್ಷವು ಹಾಗೆ ನಡೆದುಕೊಳ್ಳುತ್ತದೆ, ಯಾರು ಭ್ರಷ್ಟರಾಗುತ್ತಾರೋ ಅಂಥವರಿಗೆ ಟಿಕೆಟ್ ಕೊಡುವುದೇ ಇಲ್ಲ!
ಪ್ರಾಮಾಣಿಕ ಮತ್ತು ಶುದ್ದ ವ್ಯಕ್ತಿಗಳಿಗೆ ಟಿಕೆಟ್ ಕೊಟ್ಟು ಪಕ್ಷದ ಚಿಹ್ನೆ ಮೇಲೆ ಗೆಲ್ಲಿಸುತ್ತಾರೆ. ಹಾಗೆಯೇ ಯಾರೇ ಅಭ್ಯರ್ಥಿಯಾದರು, ಜಾತಿಯ ಪ್ರೇಮ ಮತ್ತು ನಾಯಕನ ಪ್ರೇಮ ಬದಿಗೊತ್ತಿ ಒಂದು ಅವಕಾಶ ಕೊಡಬೇಕು. ಸಮೀಕ್ಷೆ ಮಾಡಿ ಗೆಲ್ಲುವ ಸಾಮರ್ಥ್ಯವುಳ್ಳ ವ್ಯಕ್ತಿಯನ್ನೇ ಪಕ್ಷ ಟಿಕೆಟ್ ಕೊಡುತ್ತದೆ. ಅದನ್ನು ಸ್ವೀಕರಿಸುವ ಮನಸ್ಥಿತಿ ನಮ್ಮಲ್ಲಿ ಇರಬೇಕು. ಅದರ ವಿರುದ್ಧವಾಗಿ ಹೋದರೆ ಯಾರಿಗೆ ಉಪಯೋಗ? ಇದನ್ನು ತಿಳಿದುಕೊಳ್ಳುವ ಕಾಲ ಪಕ್ವವಾಗಿದೆ. ಆಯ್ಕೆಯಾದ ಬಂದ ಮೇಲೆ ಸರಿಯಾಗಿ ಕೆಲಸ ಮಾಡದೆ ಹೋದರೆ ಮನೆಗೆ ಕಳಿಸುವ ಶಕ್ತಿಯೂ ಕಾರ್ಯಕರ್ತರಲ್ಲೇ ಇರುತ್ತೆ. ಟಿಕೆಟ್ ಯಾರಿಗೆ ಸಿಗಲಿ ಕಾರ್ಯಕರ್ತರ ಗೌರವ ಪಕ್ಷದ ಮೇಲೆ ಇದ್ದರೇ ಖಂಡಿತ ಬಿಜೆಪಿ ಗೆಲ್ಲುತ್ತೆ! ಇಂಡಿಯಲ್ಲಿ ಬಿಜೆಪಿ ಗೆಲ್ಲಬೇಕಾದರೆ ಕಾರ್ಯಕರ್ತರಿಂದ ಮಾತ್ರ ಸಾಧ್ಯ!’
Categories: Articles
