
ನಾರಾಯಣ ನಾರಾಯಣ , ಏಳು ನಾರಾಯಣ ,ಏಳು ನಾರಾಯಣ ಬೆಳಗಾಯಿತು! ಇಷ್ಟೊಂದು ಅಸಹ್ಯವಾದ ಚಿಂತನೆ ಸರಿನಾ ? ೫ ಗ್ಯಾರೆಂಟಿ ಯೋಜನೆಗೆಳು ಜಾರಿ ತರುತ್ತೇವೆ ಎಂದು ಚುನಾವಣೆಗಿಂತ ಮುಂಚೆ ಕಾಂಗ್ರೇಸ್ ಪಕ್ಷ ಹೇಳಿತ್ತು. ನಮ್ಮ ರಾಜ್ಯದ ಅನೇಕ ಪ್ರಾಮಾಣಿಕ ಪತ್ರಕರ್ತರು ನೀವು ಹೇಳುತ್ತಿರುವ ಯೋಜನೆಗಳು ಜಾರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಇಟ್ಟಾಗ . ನಮ್ಮ ರಾಜ್ಯದ ಬಜೆಟ್ ೩ಲಕ್ಷ ಕೋಟಿ, ನಿಮ್ಮ ಬಿಟ್ಟಿ ಯೋಜನೆಗಳಿಗೆ ಸುಮಾರು ೬೦ ಸಾವಿರ ಕೋಟಿ ಬೇಕು, ಇದು ಹೇಗೆ ಹೊಂದಿಸುತ್ತಿರಿ? ಮತ್ತೆ ಕೇವಲ ಬಡವರಿಗಾಗಿನಾ? ಹೀಗೆ ಅನೇಕ ಪ್ರಶ್ನೆಗಳಿಗೆ ಕಾಂಗ್ರೇಸ್ ಉತ್ತರ, ನಮಗೆಲ್ಲ ಗೊತ್ತಿದೆ ಹೇಗೆ ಯೋಜನೆಗಳಿಗೆ ಹಣ ಹೊಂದಿಕೆ ಮಾಡಬೇಕು, ಮತ್ತು ಇದು ಎಲ್ಲರಿಗೂ ಅನ್ವಯ ಎಂದು ಹೇಳಿದ್ದೆ, ಹೇಳಿದ್ದು.
ಸರಕಾರ ರಚನೆ ಆದ ೨೪ ಘಂಟೆಗಳಲ್ಲಿ ಎಲ್ಲವನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ ಹುಲಿಗಳಿಗೆ ೨೪ ಘಂಟೆಯಲ್ಲಿ ತಮ್ಮಿಂದ ಇದು ಸಾಧ್ಯವಿಲ್ಲ ಎನ್ನವುದು ಗೊತ್ತಿರಲಿಲ್ಲವೇ?
ಮೊದಲು ತಾತ್ವಿಕ ಒಪ್ಪಿಗೆ, ತದನಂತರ ಯೋಜನೆಗಳನ್ನು ಜಾರಿ ಮಾಡಲು ಏನೇನೊ ಷರತ್ತು! ಚುನಾವಣೆಗಿಂತ ಮುಂಚೆ ಷರತ್ತು ವಿಧಿಸಬೇಕಿತ್ತಲ್ವಾ? ವಿರೋಧ ಪಕ್ಷ ಸಾಲ ಮಾಡಿ ಸರ್ಕಾರ ನಡೆಸುತ್ತಿದೆ, ೪೦% ಸರ್ಕಾರ ಎಂದು ಹೇಳಿದ ಇದೆ ಪಕ್ಷ ಇಂದು ಉಚಿತ ಯೋಜನೆಗಳು ಕೊಡುತ್ತೇವೆ ಎಂದು ಹೇಳುತ್ತಿದೆ! ಬಿಜೆಪಿ ಪಕ್ಷ, ಕಾಂಗ್ರೇಸ್ ಪಕ್ಷಕ್ಕೆ ವಿರೋಧ ಪಕ್ಷವಾಗಿ ಎಲ್ಲ ಯೋಜನೆಗಳಿಗೆ ಷರತ್ತು ವಿಧಿಸಿ ಜಾರಿಗೊಳಿಸಬೇಕೆಂದು ಕೇಳಬೇಕಂತೆ ? ಬೇರೆ ಪಕ್ಷಗಳು ಇದು ಅಸಾಧ್ಯ ಎಂದು ಹೇಳಿದ್ದು ಕೇಳಿಸಿಕೊಳ್ಳದ ನೀವು , ಇಂದು ಒದ್ದಾಡುತ್ತಿರುವುದು ನೋಡಿದರೇ ಅಧಿಕ್ಕಾರಕ್ಕಾಗಿ ಮಾಡಿದ ಮೋಸ ಎಂದು ಜನರಿಗೆ ಈಗಾಗಲೇ ತಿಳಿದಿದೆ! ಆತುರದ ಭರವಸೆ ಅಂತೇ! ಅಯ್ಯೋ ದೇವರೇ ಎಂಥಿತ ಅತಿರಥ ಮಹಾರಥರು ನಮ್ಮ ನಡುವೆ ಇದ್ದಾರೆ. ಇದೆ ಆತುರದ ನಿರ್ಧಾರವನ್ನು ನ್ಯಾಯಾಲಗಳಲ್ಲಿ ಧಾವೆ ಹುಡಿ ಸರ್ಕಾರವನ್ನೇ ಅಶಿಂದು ಗೊಳಿಸುವ ಪಥ ಇದ್ದಿದ್ದರೆ ತಿಳಿಯುತ್ತಿತ್ತು. ಯಾವದೇ ಉಚಿತ ಯೋಜನೆಗಳು ದೇಶಕ್ಕೆ ಮಾರಕ ಎಂದು ಸುಪ್ರೀಂ ಕೋರ್ಟ್ ಎಷ್ಟೋ ಬಾರಿ ಹೇಳಿಯಾಗಿದೆ! ಮತ್ತೇಕೆ ಚಿಂತನ ಮಂಥನ! ಇದು ನಮ್ಮ ಲೇಖಕರಿಗೆ ಗೊತ್ತಿಲ್ಲವೇ?
ಶತಮಾನಗಳಿಂದ ಬಿಟ್ಟಿ ಭಾಗ್ಯ ಮೇಲ್ವರ್ಗದ ಜನ ತಿಂದಿದ್ದಾರೆ ಎಂದು ಪಂಗುತ್ತಿರುವ ಪುಂಗಲಿ, ಯಾವ ಯಾವ ಬಿಟ್ಟಿ ಭಾಗ್ಯ ಎಂದು ಹೇಳಬಾರದೇ? ಮೇಲ್ವರ್ಗದ ಜನರು ಯಾರು ? ೮೦ ವರ್ಷಗಳು ಕಳೆದಿವೆ. ಯಾವದೇ ಪಾಳೇಗಾರ ಅಥವಾ ರಾಜ್ಯ ರಾಜ್ಯವನ್ನು ಆಳುತ್ತಿಲ್ಲ. ಮತ್ಯಾರು ಮೇಲ್ವರ್ಗ ಜನ? ಕಾಂಗ್ರೇಸ್ ಅಧಿಕಾರಕ್ಕಾಗಿ ಏನೆಲ್ಲ ಕಳಪೆ ವಚನಗಳನ್ನು ಕೊಡುತ್ತಾರೆ ಎಂದು ಮಂಡ್ಯ ಶಾಸಕರಾದ ಚಲುವರಾಯಸ್ವಾಮಿ ತುಂಬಾ ನಯವಾಗಿ ಹೇಳಿದ್ದಾರೆ. ಇಂಥಹ ಸಂದರ್ಭದಲ್ಲಿ ಬುದ್ಧನ ಮಾತುಗಳ ವಾಖ್ಯಾನ ಲೇಖಕನ ಭುದ್ಧಿಮಾಂದ್ಯ ಎತ್ತಿ ತೋರಿಸುತ್ತದೆ.
ಹೌದು ತೆರಿಗೆ ಕಟ್ಟುತ್ತಿರುವ ಜನರು ಕೇಳುವ ಒಂದೇ ಪ್ರಶ್ನೆ, ದೇಶದಲ್ಲಿ, ರಾಜ್ಯದಲ್ಲಿ ತೆರಿಗೆ ಕಟ್ಟುವ ಕಾರಣ! ನಮಗೆ ರಾಜ್ಯ ನಡೆಸಲು ದುಡ್ಡು ಬೇಕು, ನಿಮಗಾಗಿ ಸರ್ಕಾರ ಇರುತ್ತದೆ, ಅದಕ್ಕಾಗಿ ನೀವು ತೆರಿಗೆ ಕೊಡಬೇಕು. ಅದು ಬಿಟ್ಟು ನೀವು ತೆರಿಗೆ ಕೊಡಿ ನಾವು ಉಚಿತವಾಗಿ ಬಡವರಿಗೆ ಅಕ್ಕಿ ಕೊಡುತ್ತೇವೆ ಎಂದಾಗ ಯಾರು ಅವರಿಗೇಕೆ ಎಂದು ಕೇಳಲಿಲ್ಲ! ಕೊಡುತ್ತಿರುವ ಅಕ್ಕಿ ಉತ್ತಮ ಮಟ್ಟದ್ದು ಇರಲಿ ಎಂದಿದ್ದರು. ಅಕ್ಕಿ ಜೊತೆ, ಗೋಧಿ, ಜೋಳ, ರಾಗಿ ಕೊಡಿ ಎಂದಿದ್ದರು. ಬಡವರಿಗಾಗಿ ಲ್ಯಾಪಟಾಪ್ ಕೊಟ್ಟಾಗೂ ಸಹಿತ ಅವರಿಗ್ಯಾಕೆ ಎಂದು ಕೇಳಲಿಲ್ಲ! ಸೈಕಲ್ ಕೊಡುವಾಗ, ವಿದ್ಯಾಸಿರಿ ಕೊಡುವಾಗ, ಬೋರೆವೆಲ್ ಉಚಿತವಾಗಿ ಕೊಟ್ಟಾಗ, ಎಮ್ಮೆ ಕೊಟ್ಟಾಗ, ಕುರಿ ಕೊಟ್ಟಾಗ, ೨ ಎಕ್ರೆ ಜಮೀನ್ ಕೊಟ್ಟಾಗ, ಯಾರು ಯಾಕೆ ಕೊಡುತ್ತೀರಿ ಎಂದು ಕೇಳಲಿಲ್ಲ. ಯಾಕೆ ಗೊತ್ತಾ? ಎಲ್ಲಾ ಯೋಜನೆಗಳು ಬಡವರ ಜೀವನ ಮಟ್ಟ ಸುಧಾರಣೆಗೆ ಸಂಬಂದಿಸಿದ್ದು.
ನಾವು ತೆರಿಗೆ ಕೊಟ್ಟಿದ್ದು, ದೇವಸ್ಥಾನ ,ಮಠ ಮಾನ್ಯಗಳು ಕಟ್ಟಲಿ ಎಂದು! ಅದು ಬಿಟ್ಟು ಇನ್ನ್ಯಾವದೋ ಬೇರೆ ಧರ್ಮದ ಕಟ್ಟಡ ಕಟ್ಟಲಿಕೆ ಅಲ್ಲ ಎನ್ನವುದು ಅರತಿರಬೇಕು ಅಲ್ವಾ? ದೇಶದ ಸಂಸತ್ತಿನಲ್ಲಿ ಎಲ್ಲ ವರ್ಗದ ಜನರು ಕುಳಿತುಕೊಳ್ಳುತ್ತಾರೆ ಎನ್ನುವು ಸಾಮಾನ್ಯ ಜ್ಞಾನವು ಇಲ್ಲದೆ ಹೋಯಿತಲ್ಲ! ದೇಶದಲ್ಲಿ ಮೊಟ್ಟ ಮೊದಲ ಬಾರಿ ಜಾಹಿರಾತಿಗೆ ಜನರ ತೆರಿಗೆ ವ್ಯಯ ಮಾಡಿದ್ದು ಯಾರು? ” ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ” ಅರ್ಥ ಆಯಿತು ಅನಿಸುತ್ತೆ!
ವಿದ್ಯುತ್ ಉಚಿತದ ಮದ್ಯೆ ಅಡುಗೆ ಅನಿಲ ಬಗ್ಗೆ ಪ್ರಸ್ತಾಪಿಸಿದ್ದು ನಗೆಪಾಟಿಲಿಕೆ! ಆರ್ಥಿಕ ಅಭಿವೃದ್ಧಿ ಚಿಂತನೆಯಲ್ಲಿ ನೇರವಾಗಿ ದುಡ್ಡು ಜೇಬಿಗೆ ಇಳಿಸಿದರೆ ಆರ್ಥಿಕ ಅಬಿವ್ರುದ್ದಿ ಆಗುವದಿದ್ದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು. ಇದರ ಅರ್ಥ ಆರ್ಥಿಕ ಪುನಸ್ಚೇತನಕ್ಕೆ ಬಡವರ ಕೈಗೆ ಕೆಲ್ಸದ ಜೊತೆ ಜೇಬಿಗೆ ಹಣ ಹರಿವಂತೆ ಮಾಡಿದರೆ ಅಭಿವೃದ್ಧಿ ಎಂದು ಅರ್ಥಶಾಸ್ತ ಹೇಳುತ್ತದೆ ಅಲ್ವಾ? ರಾಜ್ಯದಲ್ಲಿ ಈಗಾಗಲೇ ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹೀಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ. ಚುನಾವಣೆಗಿಂತ ಮುಂಚೆ ಕನಿಷ್ಠ ವೇತನವಿರುವ ಜನರಿಗೆ ೨೦೦೦ ರೂಪಾಯಿ ಎಂದು ಘೋಷಣೆ ಮಾಡಬೇಕಿತ್ತು. ಅಂದು ಎಲ್ಲರಿಗೂ ಕೊಡುತ್ತೇವೆ ಎಂದು, ಇಂದು ಆರ್ಥಿಕ ಸಬೂಬು ಹೇಳುತ್ತಿರುವುದು ಯಾರು? ತೆರಿಗೆ ಕೊಟ್ಟವರಿಗೆ ಎಲ್ಲಾ ಯೋಜನೆಗಳು ಕೊಡಲಿ, ನಿಮ್ಮ ಪ್ರಕಾರ ಎಲ್ಲಾ ಜನರ ಜೇಬಿಗೆ ಹಣ ಹರಿಯಲಿ, ಇನ್ನು ಅಭಿವೃದ್ಧಿ ಆಗುತ್ತಲ್ವಾ?
ಒಬ್ಬರಿಗೆ ೧೦ಕೆಜಿ ಕೊಟ್ಟ ಮೇಲೆ , ಅವರಿಗೊಂದು ಉದ್ಯೋಗದ ಖಾತ್ರಿ ಕೊಡಲು ಸರ್ಕಾರ ಮುಂದಾಗಬೇಕಿತ್ತು. ಉದ್ಯೋಗ ಕೊಡಲು ಅದೇ ಹಣವನ್ನು ವಿನಿಯೋಗಿಸುವ ಪ್ರಯತ್ನಕ್ಕೆ ಮುಂದಾಗಬೇಕಿತ್ತು. ಅದು ಅಲ್ವೇ ನಿಜವಾದ ಬಡವರ ಮತ್ತು ಶೋಷಿತರ ಕಾಳಜಿ? ಉತ್ತಮ ಅರ್ಥ ವ್ಯವಸ್ಥೆ ಹೊಂದಿದ ಆಂಧ್ರವನ್ನು ಅಧೋಗತಿಗೆ ತಳ್ಳಿ, ಇಂದು ಎಷ್ಟೋ ಯೋಜನೆಗಳು ಅರ್ಧಕ್ಕೆ ನಿಂತಿರುವ ಮಾಹಿತಿ ಇದೆ, ಆಂದ್ರಕ್ಕೆ ಭೇಟಿ ಕೊಟ್ಟು ಇನ್ನೊಮ್ಮೆ ಉಚಿತ ಯೋಜನೆಗಳ ಅನುಷ್ಠಾನ ಬಗ್ಗೆ ತಿಳಿದುಕೊಳ್ಳಿ . ಇಲ್ಲಿಯವರೆಗೆ ಒಂದು ರಾಜಧಾನಿಯನ್ನು ನೆಟ್ಟಕೆ ಕಟ್ಟಿಕೊಳ್ಳುವದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ನಿಜ ತಾನೇ? ಆಂಧ್ರದ ಜನರೇ ಹೇಳುತ್ತಾರೆ.
ಒಂದು ಕಡೆ ಉಚಿತ ಯೋಜನೆ ಮತ್ತೊಂದು ಕಡೆ ಮತಾಂದತೆ. ಜನರು ಮತಾಂದತೆಗಿಂತ ಉಚಿತ ಯೋಜನೆಗಳೇ ಮೇಲು ಎಂದು ಜೈ ಎಂದಿದ್ದಾರೆ ಎಂದು ಹೇಳುವದಕ್ಕೆ ಯಾವ ಪುರಾವೆನು ಇಲ್ಲ. ರಾಜ್ಯದ ಮತದಾರರು ಮುಗ್ದರು, ಎಲ್ಲಾ ಪಕ್ಷದವರು ನನ್ನವರೇ, ಇಂದು ನಮ್ಮ ಮುಂದೆ ಬಂದು ನಿಮಗೆ ೫ ಗ್ಯಾರಂಟಿ ಗಳು ಕೊಡುತ್ತೇವೆ, ನಮಗೊಂದು ಅವಕಾಶ ಕೊಡಿ ಎಂದು ಕೇಳಿದ್ದಾರೆ. ಈಗಾಗಲೇ ೫ ವರ್ಷ ಆಡಳಿತ ಮಾಡಿರುವ ಪಕ್ಷಕ್ಕೆ ಬದಿಗಿಟ್ಟು, ಕಾಂಗ್ರೇಸ್ ಪಕ್ಷಕ್ಕೆ ೫ ಗ್ಯಾರಂಟಿ ಯೋಜನೆಗಳು ಕೊಡುತ್ತಾರೆ ಎಂದು ನಂಬಿ ಅಧಿಕಾರ ಕೊಟ್ಟಿದ್ದಾರೆ. ಉಚಿತ ಯೋಜನೆಗಳು ಕೊಟ್ಟರೆ ಏನೆಲ್ಲಾ ಆಗುತ್ತದೆ ಎಂದು ಇತಿಹಾಸ ಹೇಳುತ್ತದೆ. ಆದರೆ ಆರ್ಥಿಕ ದಿವಾಳಿ ಆಗದ ರೀತಿ ನಾವು ಎಲ್ಲವನ್ನು ನಿಭಿಯಿಸುತ್ತೇವೆ ಎಂದು ಕಾಂಗ್ರೇಸ್ ನಾಯಕರು ಹೇಳಿದ್ದಾರೆ. ಅದಕ್ಕಾಗಿ ತೆರಿಗೆ ಕಟ್ಟಿದವರು, ತೆರಿಗೆ ಕಟ್ಟದವರು ಎಲ್ಲರೂ ಉಚಿತ ಯೋಜನೆ ಜಾರಿ ಮಾಡಿ ಎಂದು ಕೇಳುತ್ತಿದ್ದಾರೆ, ಇದು ತಪ್ಪೇ? ಎಲ್ಲರಿಗೂ ಉಚಿತವಾದ ಯೋಜನೆ ಇಲ್ಲವೆಂದಾಗ, ನಮ್ಮ ತೆರಿಗೆ ಹಣ ರಾಜ್ಯದ ಮತ್ತು ಬಡವರ ಅಭಿವೃದ್ದಿಗಾಗಿ ಎಂದು ಹೇಳುವದು ತಪ್ಪಾ?
ಒಂದು ವೇಳೆ ಎಲ್ಲರಿಗೂ ಉಚಿತವಾದ ಯೋಜನೆಗಳು ಜಾರಿಯಾಗದೇ ಇದ್ದರೇ , ಮತ್ತೆ ಅದೇ ಜನ ಯಾವ ನಿರ್ಧಾರ ತಗೆದುಕೊಳ್ಳಬೇಕು ಎನ್ನವುದು ಅವರಿಗೆ ಗೊತ್ತಿದೆ. ಉಚಿತ ಯೋಜನೆಗಳು ಯಾವತ್ತೂ ಪ್ರಯೋಗವಾಗಲಿಕ್ಕೆ ಸಾಧ್ಯವೇ ಇಲ್ಲ, ಕಾರಣ, ಈಗಾಗಲೇ ಅನೇಕ ಪ್ರಯೋಗಾಲಯಗಳಲ್ಲಿ ಪ್ರಯೋಗವಾಗಿ ಯಶಸ್ವಿಯಾದ ಉಧಾಹರಣೇನೇ ಇಲ್ಲ. ಉಚಿತ ಯೋಜನೆಗಳು ಬಡವರಿಗೆ ಮೀನು ಹಿಡಿಯುವ ಶಕ್ತಿ ಕೊಡಲಿಕ್ಕೆ ಇರಬೇಕು, ಅದು ಬಿಟ್ಟು ಅಧಿಕಾರಕ್ಕಾಗಿ ಬರಲು, ಜನರಿಗೆ ಬಿಸಿಲು ಕುದರೆ ತೋರಿಸಿ ಮೋಸಮಾಡುವದಕ್ಕೆ ಅಲ್ಲ ಎನ್ನುವುದು ಎಲ್ಲರೂ ಅರಿಯಬೇಕು. ಬಿಟ್ಟಿ ಭಾಗ್ಯ ಎಂದು ಹಂಗಿಸುವರು ಯಾರು? ನ್ಯಾಯಾಲಗಳಲ್ಲಿ ಚುನಾವಣೆ ಪ್ರಣಾಳಿಕೆಯನ್ನು ಪ್ರಶ್ನಿಸುವ ಹಕ್ಕು ಜನರಿಗೆ ಬೇಗನೆ ದೊರೆಯಬೇಕು.
Categories: Articles
