By Bhimashankar Teli
ವಿಶ್ವ ಕನ್ನಡ ಟೆಸ್ಟಿಂಗ್ ಗುಂಪು ಕನ್ನಡಿಗರ ವಾಟ್ಸ್ ಆಪ್ ಗುಂಪು. ನಮ್ಮ ಕನ್ನಡಿಗರಿಗೆ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಸಿಗುವಲ್ಲಿ, ಹಿರಿಯರ ಅನುಭವವನ್ನು ಹಂಚುವದಕ್ಕೆ ಉಪಯೋಗವಾಗಲಿ ಎಂದು ಸ್ಥಾಪನೆಯಾದ ಗುಂಪು. ನಮ್ಮವರು ಮುಂದೆ ಬರಲಿ, ನಮ್ಮವರೆಗೆ ಕೆಲಸ ಸಿಗಲಿ ಎಂದು ನಿಶ್ವಾರ್ಥವಾಗಿ ಕೆಲಸ ಮಾಡುವ ಟೆಕಿಗಳ ಗುಂಪು. ಮೊದಲು ಯಾಹೂ ಗ್ರೂಪ್ಸ್ ಮೂಲಕ ತಮ್ಮ ತಮ್ಮ ಜನರಿಗೆ ಕೆಲ್ಸದ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಕನ್ನಡದವರಲ್ಲಿ ಒಗ್ಗಟ್ಟು ಇಲ್ಲ ಎನ್ನುವ ನಡುವೆ ಅನೇಕ ಗುಂಪುಗಳು ನಿರಂತರವಾಗಿ ತಮ್ಮ ಕೆಲಸವನ್ನು ಮುನ್ನೆಡೆಸುತಿದ್ದಾರೆ. ಹಿಂದೆ ಬನವಾಸಿ ಬಳಗ, ಕಹಳೆ ಮತ್ತು ಎನ್ಕೆ ಟೆಕಿಸ್ ಇತ್ಯಾದಿ ಗುಂಪುಗಳ ನಮ್ಮ ಸೀನಿಯರ್ಸ್ ಕೊಟ್ಟ ಕೊಡುಗೆ. ಇಂಥಹ ಗುಂಪುಗಳ ಮೂಲಕ ಅನೇಕ ಜನರಿಗೆ ಉದ್ಯೋಗ ದೊರೆಕಿದೆ ಮತ್ತು ಉದ್ಯೋಗ ಮಾಡುವವರು ಸಹಿತ ತಮ್ಮ ಜೂನಿಯರ್ಸ್ ಗಳಿಗೆ ಸಹಾಯ ಮಾಡುತ್ತಾ ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಇಂದು ಅನೇಕ ನಮ್ಮ ಜೂನಿಯರ್ಸ್ ವಾಟ್ಸ್ ಅಪ್ ಮೂಲಕ ನಮ್ಮವರಿಗೆ ಉಪಯೋಗವಾಗಲಿ ಎಂದು ಗುಂಪುಗಳು ರಚಿಸಿ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ರವೀಂದ್ರ ಅವರ ಮೂಲಕ ಪ್ರಾರಂಭವಾದ ಗುಂಪು, ಇಂದು ನಮ್ಮ ಅಜಿತ್, ಶಂಬು ,ಗುರು, ನಮಿ ಹೀಗೆ ಅನೇಕ ಯಂಗ ಅಂಡ್ ಎನಿರ್ಜಟಿಕ್ ಡೈನಾಮಿಕ್ ಟೆಕಿಗಳು ನಿಶ್ವಾರ್ಥವಾಗಿ ಕೆಲಸವನ್ನು ಮುಂದೆವರೆಸಿದ್ದಾರೆ. ವಿಶ್ವ ಕನ್ನಡ ಟೆಸ್ಟಿಂಗ್ ವಾಟ್ಸ್ ಅಪ್ ಗುಂಪಿನಲ್ಲಿ ಇಂದು ಸುಮಾರು ೭೦೦೦ ಸಾಫ್ಟ್ವೇರ್ ಇಂಜಿನಿಯರ್ ಇದ್ದಾರೆ. ನಿರಂತರವಾಗಿ ಕೆಲಸದ ಬಗ್ಗೆ ಮಾಹಿತಿ, ಟೂಲ್ಸ್, ಕಂಪ್ಯೂಟರ್ ಭಾಷೆಗಳ ಬಗ್ಗೆ ಹೇಳಿಕೊಡುವುದು ಇವರ ಮುಖ್ಯ ಉದ್ದೇಶ. ಇವರೆಲ್ಲ ಸೇರಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಯನಗರದ ದೇಸಿ ಮಸಾಲಾ ಹೋಟೆಲದಲ್ಲಿ ಅದ್ದೂರಿಯಾಗಿ ಆಚರಿಸಿದರು.
ಆಯೋಜಕರಾದ ಅಜಿತ್, ಶಂಬು, ನಮಿ ಚಂದ್ರ , ಶಿಲ್ಪಾ, ಚೋಳಕೆ, ಪ್ರವೀಣ, ಚೇತನ್, ಪ್ರದೀಪ್, ವಿನಯ, ಸಾಗರ್ . ಸೀಮಾ ಹಿರೇಮಠ , ಹರ್ಷಾ , ಪೂನಂ, ರಾಹುಲ್, ಮಧು ಖೇಣಿ, ಬಸು ಕಂಡೆ, ಸದಾಶಿವ ಶಿರಬೂರ ..ಹೀಗೆ ಅನೇಕ ಕನ್ನಡ ಕಲಿಗಳು ಅಚ್ಚುಕಟ್ಟಾಗಿ ಕನ್ನಡದ ಹಬ್ಬವನ್ನು ಆಯೋಜನೆ ಮಾಡಿದ್ದರು, ಇದಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಧರ್ಮೇಂದ್ರ ಕುಮಾರ್ ಮತ್ತು ಭಾನು ಪ್ರಕಾಶ ಬಂದಿದ್ದರು. ಇವರ ಜೊತೆ ಅತಿಥಿಯಾಗಿ ಸಚಿನ ಸಂಕನಗೌಡರ್ ಮತ್ತು ಭೀಮಾಶಂಕರ ತೇಲಿ ಭಾಗಿಯಾಗಿದ್ದರು. ನಿರೂಪಕರಾದ ಶಿಲ್ಪಾ ಮತ್ತು ನಮಿ ಚಂದ್ರ ಕಾರ್ಯಕ್ರಮವನ್ನು ನಡೆಯಿಸಿಕೊಟ್ಟರು.

ಧರೇಂದ್ರ ಕುಮಾರ್ ಮೈಸೂರ್ ಮಹಾರಾಜರ ಕೊಡುಗೆಗಳ ಬಗ್ಗೆ ಎಲ್ಲರಿಗೂ ಮನದಟ್ಟ ಆಗುವ ಹಾಗೆ ತಮ್ಮದೇ ಶೈಲಿಯಲ್ಲಿ ಹೇಳಿದರು. ನಮ್ಮ ಕನ್ನಡ ಹಬ್ಬ ಯಾಕೆ ಆಚರಿಸುತ್ತೇವೆ ಮತ್ತು ಇದರ ಹಿಂದಿನ ಇತಿಹಾಸದ ಬಗ್ಗೆ ಎಳೆ ಎಳೆಯಾಗಿ ಹೇಳಿದರು. ಕನ್ನಡಿಗರ ಕೊಡುಗೆ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ ಇದರ ಜೊತೆ ದೇಶ ಕಟ್ಟುವಲ್ಲಿ ನಮ್ಮ ಕೊಡುಗೆ ಅಪಾರ!

ಭಾನು ಪ್ರಕಾಶ ಅವರು ತಮ್ಮ ಜೀವನದ ಅನುಭವ ಹೇಳಿ ಯುವ ಇಂಜಿನಿಯರ್ ಗಳಿಗೆ ಸ್ಪೂರ್ತಿ ತುಂಬಿದರು. ಇಂದು ಅನೇಕರು ಕೆಲಸ ಸಿಗಲ್ಲ, ನನ್ನ ಕಮ್ಯುನಿಕೇಷನ್ ಸರಿಯಿಲ್ಲ ಎಂದು ವ್ಯಥೆ ಪಡುವವರಿಗೆ ಖಂಡಿತ ಇವರ ಮಾತುಗಳು ಧೈರ್ಯ ತುಂಬಿದೆ! ನಿಮ್ಮ ಕೆಲ್ಸದಲ್ಲಿ ಹೆಚ್ಚಿನ ಫಲಿತಾಂಶ ಪಡೆಯಬೇಕಾದರೆ ಅಪಸ್ಕಿಲ್ ಆಗ್ಲೇಬೇಕು ಎಂದು ಹೇಳಿದರು ಮತ್ತು ಕಂಫರ್ಟ್ ಜೋನ್ ದಿಂದ ಹೊರಗಡೆ ಬಂದರೆ ಮಾತ್ರ ನಾವು ಉನ್ನತಿ ಹೊಂದಬಹುದು!
ಇದರ ಜೊತೆ ಸಚಿನ್ ಮತ್ತು ಭೀಮಾಶಂಕರ ತೇಲಿ ತಮ್ಮ ಅನುಭವ ಹಂಚಿಕೊಂಡು , ನಾವೆಲ್ಲಾ ಒಗ್ಗಟ್ಟಾಗಬೇಕಾದರೆ ಮತ್ತು ನಮ್ಮವರಿಗೆ ಕೆಲಸ ಸಿಗಬೇಕಾದರೆ ನಾವೆಲ್ಲ ಇಂತಹ ಕಾರ್ಯಕ್ರಮಗಳ ಮೂಲಕ ಮಾತ್ರ ಸಾಧ್ಯ! ರಾಜ್ಯೋತ್ಸವ ಒಂದಕ್ಕೆ ಸೀಮಿತವಾಗದೆ ನಿರಂತರವಾಗಿ ಭೇಟಿಯಾಗುವ ಮೂಲಕ ನಮ್ಮಲ್ಲಿ ಒಗ್ಗಟ್ಟು ಹೆಚ್ಚಿಸಬಹುದು ಎಂದು ಹೇಳಿದರು. ಪುಟಾಣಿಗಳು ಹಾಡು ಮತ್ತು ನೃತ್ಯ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಮರೆಗು ಕೊಟ್ಟರು. .
೧೦ ಘಂಟೆಗೆ ಪ್ರಾರಂಭವಾದ ಕಾರ್ಯಕ್ರಮ್ಮ ಮುಗಿಯುವ ಹೊತ್ತಿಗೆ ಬರೋಬ್ಬರಿ ೨.೩೦. ಕಾರ್ಯಕ್ರಮದ ಕೊನೆಯಲ್ಲಿ ಅದ್ದೂರಿ ಭೋಜನ ಚೆನ್ನಾಗಿ ಇತ್ತು. ಕಾರ್ಯಕ್ರಮ ಮುಗಿಸಿ ಹೋಗುವಾಗ ಎಲ್ಲರಿಗೂ ಸಸಿ ಕೊಡುವ ಮೂಲಕ ವಿಶ್ವ ಕನ್ನಡ ಟೆಸ್ಟಿಂಗ್ ಗುಂಪು “ಕಾಡು ಬೆಳಿಸಿ ನಾಡು ಉಳಿಸಿ ” ಎಂದು ಎಲ್ಲರಿಗೂ ಹೇಳಿದಂತಿತ್ತು.
ವಿಶ್ವ ಕನ್ನಡ ಟೆಸ್ಟಿಂಗ್ ಗುಂಪು ಮುಂದೆ ಇಂತಹ ಅನೇಕ ಅದ್ದೂರಿ ಕಾರ್ಯಕ್ರಮ ಮಾಡಲಿ ಎಂದು ಅನೇಕರ ಅಭಿಪ್ರಾಯವಾಗಿತ್ತು. ನಮ್ಮ ಎಂಜಿನೀರ್ಸ್ ಅವರ ನೈಪುಣ್ಯತೆ ನಮ್ಮ ಜೂನಿಯರ್ಸ್ ಅವರುಗಳಿಗೆ ಮಾರ್ಗದರ್ಶನ ಕೊಡುವದರ ಮೂಲಕ ಇನ್ನಷ್ಟು ಸಾರ್ಥಕತೆ ಮಾಡೋಣ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
Categories: Articles
