ಜನವರಿ ೨೨ಕ್ಕೆ ಅಯೋಧ್ಯಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸಮಯದಲ್ಲಿ, ಸ್ವತಃ ಅಡ್ವಾಣಿಯವರು ಹೇಳಿದ ಮಾತು! “ಮರ್ಯಾದಾ ಪುರೋಷತ್ತಮ ಶ್ರೀರಾಮಚಂದ್ರ ತನ್ನ ಮಂದಿರವನ್ನು ನಿರ್ಮಿಸಿಕೊಳ್ಳಲು , ರಾಮಭಕ್ತನಾದ ನರೇಂದ್ರ ಮೋದಿಯವರನ್ನು ಭೂಮಿಗೆ ಕರೆಯಿಸಿಕೊಂಡಿದ್ದಾರೆ”

ದೇಶಕ್ಕೆ ಸ್ವಾತಂತ್ರ್ಯ ೧೯೪೭ ರಲ್ಲಿ ಸಿಕ್ಕಿತಾದರೂ ಆದರೆ ನಿಜವಾಗಿ ದೇಶ ಪ್ರಜಾಪ್ರಭುತ್ವದಿಂದ ತುಂಬಾನೇ ದೂರ ಉಳಿದಿತ್ತು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಬಹಳ ಜನರ ಬಲಿದಾನ ಇತ್ತು. ಕಾಂಗ್ರೆಸ್ ಎಂಬ ಸಂಘಟನೆ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಇದ್ದ ಸಂಘಟನೆ ಮತ್ತು ಅದರಲ್ಲಿ ಎಲ್ಲರೂ ಭಾಗಿಯಾಗಿದ್ದರು. ಕಾಂಗ್ರೆಸ್ ಯಾರ ಸ್ವತ್ತು ಆಗಿರಲಿಲ್ಲ. ದೇಶಕ್ಕೆ ಸ್ವತಂತ್ರ ಬಂದಾದ ಮೇಲೆ ಕಾಂಗ್ರೆಸ್ ವಿಸರ್ಜಿಸಿ ಎಂದು ಹೇಳಿದರೂ ಅದು ಹಾಗೆ ಉಳಿಸಿಕೊಂಡು ದೇಶವನ್ನು ತಮ್ಮ ಕೈಗೆ ತಗೆದುಕೊಂಡು ದೇಶದ ಪ್ರಜಾಪ್ರಭುತ್ವ ಒಂದು ಮನೆತನದ ಸ್ವತ್ತಾಗಿಬಿಟ್ಟಿತು.
ಇದು ಅನೇಕ ಜನರಿಗೆ ಕಿರಿಕಿರಿ ಆಗಿ ಕಾಂಗ್ರೆಸ್ ಪಕ್ಷದಿಂದ ಹೊರೆಗೆ ಬಂದು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿ ಬಲಿಷ್ಠ ನೆಹರು ಮನೆತನವನ್ನು ಎದುರು ಹಾಕಿಕೊಂಡರು. ೧೯೫೧ರಲ್ಲಿ ಶ್ಯಾಮ ಪ್ರಸಾದ ಮುಖರ್ಜಿ ಭಾರತೀಯ ಜನ ಸಂಘವನ್ನು ಸ್ಥಾಪಿಸಿದರು ಮುಂದೆ ಜನತಾ ಪಕ್ಷವಾಗಿ ೧೯೭೭ ರ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸರ್ಕಾರವನ್ನು ಮಾಡಿತ್ತು. ಕಾಂಗ್ರೆಸ್ ಹೊರಡಿಸಿದ ೧೯೭೭ ಎಮರ್ಜೆನ್ಸಿ ಗೆ ತಕ್ಕ ಉತ್ತರ ಇದಾಗಿತ್ತು. ಆದರೆ ಸರ್ಕಾರ ಕೇವಲ ೩ ವರ್ಷದಲ್ಲಿ ಪತನವಾಗಿತ್ತು. ಮುಂದೆ ಜನತಾ ಪಕ್ಷ ಹೋಳಾಗಿ ೧೯೮೦ ರಂದು ಭಾರತೀಯ ಜನತಾ ಪಕ್ಷ ಉದಯವಾಗಿತ್ತು.
೧೯೮೦ರಲ್ಲಿ ಯಾರಿಗೂ ತಿಳೀಯದೇ ಹೋಗಿತ್ತು ಜಗತ್ತನ್ನೇ ಆಳುವ ಪಕ್ಷ ಉದಯವಾಗಿದೆ ಎಂದು! ೧೯೮೪ರ ಲೋಕಸಭೆ ಚುನಾವಣೆಯಲ್ಲಿ ಗೆದಿದ್ದು ಕೇವಲ ೨ ಸೀಟು. ಅದೇ ವರ್ಷ ೧೯೮೪ರಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅಡ್ವಾಣಿ ಮಾಡಿದ್ದು ಮೊದಲ ಕೆಲಸ ೧೯೮೦ರಲ್ಲಿ ವಿಶ್ವ ಹಿಂದೂ ಪರಿಷತ್ ಅವರಿಂದ ಪ್ರಾರಂಭವಾದ ರಾಮ ಜನ್ಮ ಭೂಮಿ ಹೋರಾಟವನ್ನು ಮತ್ತೆ ಮುನ್ನೆಲೆಗೆ ತಂದವರು. ಭಾರತೀಯ ಜನತಾ ಪಕ್ಷದ ಮುಂದಾಳತ್ವ ವಹಿಸಿದ ಮೇಲೆ ಅಡ್ವಾಣಿ ಸೋಮನಾಥ ಟು ಅಯೋಧ್ಯ ರಥ ಯಾತ್ರೆ ಹಮ್ಮಿಕೊಂಡರು. ಯಾಕೆ ಗೊತ್ತಾ?
ತರಾತುರಿಯಲ್ಲಿ ಯಾತ್ರೆ ಮಾಡಲು ಹೊರಟಿದ್ದು ಅಂದು ವಿ ಪಿ ಸಿಂಗ್ ಅವರಿಗೆ ನುಂಗಲಾರದ ತುತ್ತಾಗಿತ್ತು. ವಿಪಿ ಸಿಂಗ ಸರ್ಕಾರ ಕೆಲಸದಲ್ಲಿ ಹಿಂದುಳಿದವರಿಗೆ ಕೊಟ್ಟ ಮೀಸಲಾತಿ. ಇದು ಹಿಂದಿನ ಮಂಡಲ ಸಮಿತಿಯಲ್ಲಿ ಇರುವ ವಿಷಯಗಳು ಇರದೇ ಹೋದರು ಮೇಲ್ಜಾತಿಯವರನ್ನು ತುಳಿಯುವ ಹುನ್ನಾರ ಇದರಲ್ಲಿತ್ತು. ಆದರೆ ನೇರವಾಗಿ ವಿರೋಧ ಮಾಡಲಾಗದೆ ಬಿಟ್ಟ ಬ್ರಹ್ಮಾಸ್ತ್ರವೇ ಸೋಮನಾಥಪುರ ಟು ಅಯೋಧ್ಯ ಯಾತ್ರೆ ಎಂದು ಹೇಳುವವರಿಗೆ ಕಡಿಮೆಯೇನಿಲ್ಲ. ಇನ್ನೊಂದು ವರ್ಗ ವಿಪಿ ಸಿಂಗರ್ ಹಿಂದುಗಳನ್ನು ವಿಭಜಿಸುವ ಕಾರ್ಯ ಎಂದು ರಾಮಭಕ್ತರು ಹೇಳುತ್ತಾರೆ.
ರಥಯಾತ್ರೆಯ ನೇತೃತ್ವವನ್ನು ಕೊಟ್ಟಿದ್ದು ನರೇಂದ್ರ ದಾಮೋಧರದಾಸ ಮೋದಿ. ಇದಕ್ಕಿಂತ ಮೊದಲು ಗುಜರಾತದಲ್ಲಿ ಲೋಕಶಕ್ತಿ ಯಾತ್ರೆಯನ್ನು ಮಾಡಿ ಸೈ ಎನ್ನಿಸ್ಕೊಂಡ ಮೋದಿಯವರಿಗೆ ಯಾತ್ರೆ ಬಗ್ಗೆ ಪ್ರಸ್ತಾಪ ಮಾಡಿದಾಗ ಸ್ವತಃ ಮೋದಿ ಸೋಮನಾಥವನ್ನೇ ಆಯ್ದುಕೊಂಡಿದ್ದರು ಮತ್ತು ಅದಕೊಂದು ಕಾರಣವಿತ್ತು. ಸೋಮನಾಥದಲ್ಲಿ ಶಿವ ಮಂದಿರ ಇತ್ತು ಅದಕ್ಕೆ ಸೋಮನಾಥ ಹೆಸರು ಬಂದಿತ್ತು. ಸೋಮನಾಥದಲ್ಲಿ ಇದ್ದ ಶಿವ ಮಂದಿರ ಮಹಮ್ಮೊದ ಘಜನಿ ಯಿಂದ ಸುಮಾರು ಬಾರಿ ದಾಳಿಗೆ ಒಳಗಾಗಿತ್ತು. ಕಾಲ ಕಾಲಕ್ಕೆ ಅದರ ಪುನರನಿರ್ಮಾಣ ಮಾಡಿದರು ಮತ್ತೆ ಮತ್ತೆ ದಾಳಿಗೆ ಒಳಗಾಗಿತ್ತು. ರಾಷ್ಟ್ರತ್ವ ಪುನಶ್ಚೇತನದ ಸಂಕೇತವಾಗಿ ಸರ್ದಾರ ವಲ್ಲಭಾಯಿ ಪಟೇಲ್ ಮತ್ತೆ ದೇವಸ್ಥಾನವನ್ನು ಪುನರನಿರ್ಮಾಣ ಮಾಡಿದರು. ಇದೆಲ್ಲವನ್ನು ತಿಳಿದಿದ್ದ ಮೋದಿ ಯಾತ್ರೆಯನ್ನು ಸೋಮನಾಥಪುರದಿಂದ ಪ್ರಾರಂಭ ಮಾಡುವುದು ಒಳಿತೆಂದರು.
ಶಿವ ಸಂಪ್ರದಾಯ ಮತ್ತು ವೈಷ್ಣವ ಸಂಪ್ರದಾಯ ಎರಡು ಬರುತ್ತವೆ ಮತ್ತು ಇದರಿಂದ ಹಿಂದೂಗಳು ಒಟ್ಟಾಗುತ್ತಾರೆ ಎನ್ನುವ ಯೋಚನೆ ಇದರ ಹಿಂದೆ ಇತ್ತು. ಪುರಾತನ ದೇಶದ ದೇವಸ್ಥಾನಗಳು ಮತ್ತು ಪುಣ್ಯಕ್ಷೇತ್ರಗಳ ಮೇಲೆ ಮುಸಲ್ಮಾನ ದಾಳಿಕಾರರ ಆಘಾತಕ್ಕೆ ಸೋಮನಾಥ್ ಜೀವಂತ ಉದಾಹರಣೆ ಆಗಿದೆ ಎಂದು ೧೯೮೯ರ ಸೆಪ್ಟೆಂಬರ್ ೨೫ರಂದು ಯಾತ್ರೆಯ ಉದ್ಘಾಟನೆ ಭಾಷಣದಲ್ಲಿ ಅಡ್ವಾಣಿ ಹೇಳಿದರು. ಹಿರಿಯ ಪತ್ರಕರ್ತ ರಾಜೀವ ಷಾ ಹೇಳಿದ ಒಂದು ಮಾತು “ಸೋಮನಾಥ್ ವಿನಾಶ ಮತ್ತು ಲೂಟಿಯನ್ನು ಯಥಾವತ್ತಾಗಿ ಹೇಳಿ ಸಾರ್ವಜನಿಕರ ಕುತೂಹಲವನ್ನು ಹೆಚ್ಚಿಸಿ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿರುವ ಯಾತ್ರೆ ಹಿಂದುಗಳದ್ದು ಎಂದು ಮೇಲ್ನೋಟಕ್ಕೆ ಸಾಬೀತುಮಾಡಿದ್ದರು. ಯಾತ್ರೆ ಹೇಗೆ ಹಿಂದುತ್ವವನ್ನು ಸಾರಿತ್ತು ಎಂದರೆ ಅಲ್ಲಿನ ಮಹಿಳೆಯರು ಅಡ್ವಾಣಿಯವರಿಗೆ ಆರತಿ ಮಾಡುವಾಗ ರಕ್ತದ ತಿಲಕವನ್ನು ಹಚ್ಚಿದ್ದರು.
ರಥವು ಪಯಣಿಸಿದ ಮಾರ್ಗದಲ್ಲಿ ೫೫೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ದೊಡ್ಡ ಗುಂಪುಗಳು ಅಡ್ವಾಣಿಯವರನ್ನು ಸ್ವಾಗತಿಸಿದ್ದವು. ಮಾರ್ಗವು ಮೋದಿಯವರಿಂದ ಕರಾರುವಕ್ಕಾಗಿ ರೂಪಗೊಂಡಿತ್ತು. ಸುಮಾರು ೬೦ಕ್ಕೂ ಹೆಚ್ಚು ಬಹಿರಂಗ ಸಭೆಗಳು ನಡೆದಿದ್ದವು. ಪ್ರತಿಯೊಂದು ಬಹಿರಂಗ ಸಭೆಯಲ್ಲಿ ಅಡ್ವಾಣಿ ಪಕ್ಕದಲ್ಲಿ ಮೋದಿ ಇರುತ್ತಿದ್ದರು. ಸಭೆಗಳಲ್ಲಿ ಕೇವಲ ದೇವಸ್ಥಾನ ಪುನರನಿರ್ಮಾಣಕ್ಕಾಗಿ ಅಲ್ಲದೆ ಜನರ ಮೂಲಭೂತ ಹಕ್ಕುಗಳಿಗೆ, ಜಾತ್ಯತೀತೆ ಬಗ್ಗೆ, ಕೋಮುವಾದಿತ್ವ ಬಗ್ಗೆ, ರಾಷ್ಟ್ರೀಯತೆ ಎಂದರೇನು? ಕೇವಲ ಅಲ್ಪಸಂಖ್ಯಾತರನ್ನು ಓಲೈಸುವದರಿಂದ ದೇಶ ಏನು ಸಾಧಿಸುತ್ತದೆ? ಮತ್ತು ಬಹುಸಂಖ್ಯಾತ ಸರ್ಕಾರಗಳು ಅಲ್ಪಸಂಖ್ಯಾತರನ್ನು ತಿರಸ್ಕರಿಸುವದಕ್ಕೆ ಸಾಧ್ಯನಾ? ಹೀಗೆ ಅನೇಕ ಹತ್ತಾರು ದೇಶದ ವಿಷಯಗಳು ಜನರನ್ನು ಸೆಳೆಯಿತು ಎಂದರೆ ತಪ್ಪಾಗಲಿಕ್ಕಿಲ್ಲ. ಸುಮಾರು ೧೦ ಸಾವಿರ ಕಿ ಮೀ ರಥ ಪ್ರಯಾಣಿಸಿ ದಸರಾ ದಿನದಂದು ಅಯೋಧ್ಯಯಲ್ಲಿ ಸಮಾಪ್ತಿಯಾಗಬೇಕಿತ್ತು.
ಆದರೆ ವಿ ಪಿ ಸಿಂಗ್ ಅವರ ಮೌನ ಮತ್ತು ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ ದ್ವೇಷ ಅಡ್ವಾಣಿಯವರನ್ನು ಬಂಧನ ಮಾಡಿದರು. ಬಂಧನ ಖಂಡಿಸಿ ಕೋಮು ಗಲಭೆಗೆ ನಾಂದಿ ಹಾಡಿದವು. ಹಿಂದೂ ಮುಸ್ಲಿಂ ಭಾಯಿ ಭಾಯಿ ಹೋಗಿ ಕೈ ಕೈ ಮಿಲಾಯಿಸ ತೊಡಗಿದರು. ಅಲ್ಲಿಯವರೇ ಅಷ್ಟೇನು ಗೊತ್ತಿಲ್ಲದ ಮೋದಿ ಅಕ್ಟೋಬರ್ ಕೊನೆಯ ವಾರವನ್ನು “ತೀರ್ಮಾನ ವಾರ” ಎಂದು ಘೋಷಿಸದರು.
ವಿ ಎಚ್ ಪಿ ಇಂದ ನೂರಾರು ಸಭೆಗಳನ್ನು ಮಾಡಿ ರಾಮ ಮಂದಿರದ ಉದ್ದೇಶ ಹರಡಲು ಪ್ರಾರಂಭ ಮಾಡಿದರು. ಇದರ ಪರಿಣಾಮ ಮುಸ್ಲಿಂ ಮತ್ತು ಹಿಂದೂ ಇಬ್ಬಾಗ ಆಗಿ ಕೌರ್ಯಗಳು ಘಟಿಸಿದವು. ಇದಕ್ಕಿಂತ ಮುಂಚೆ ವಿ ಎಚ್ ಪಿ ರಾಜೀವ ಗಾಂಧಿ ಅವರಿಂದ ಪರವಾನಿಗೆ ಪಡೆದು ಮಸೀದಿ ಪಕ್ಕ ಅಡಿಪಾಯ ಹಾಕಿದ್ದರು. ಸಂಘ ಮತ್ತು ಅದರ ಉಪ ಪಂಗಡಗಳು ಕರಸೇವೆಯಾಗಿ ಇಟ್ಟಿಗೆಗಳು ಸಂಗ್ರಹಕ್ಕೆ ಕರೆ ಕೊಟ್ಟಿದ್ದರು. ಮರ್ಯಾದಾ ಪುರೋಷತ್ತಮ ರಾಮ ದೇವಸ್ಥಾನಕ್ಕೆ ಇದಕ್ಕಿಂತ ಕಾಣಿಕೆ ಕೊಡಲು ಏನಿದೆ ?
ದೇಶದಲ್ಲಿ ಸಂಘ ಪರಿವಾರದಿಂದ ಒಗ್ಗಟ್ಟಿನ ಪ್ರಯತ್ನ ಮಾಡಿದರೆ ಗುಜರಾತಿನಲ್ಲಿ ಒಬ್ಬ ವ್ಯಕ್ತಿ ತೀವ್ರವಾದ ಮತ್ತು ಆಸಕ್ತಿ ಪಾತ್ರ ವಹಿಸಿದ್ದರು. ಅವರೇ ಮೋದಿ! ಮೋದಿ ಸಣ್ಣ ಸಣ್ಣ ಹಳ್ಳಿಗಳಿಗೆ ಮತ್ತು ದೊಡ್ಡ ನಗರಗಳಿಗೆ ಭೇಟಿ ಕೊಡುತ್ತ ದೇವಸ್ಥಾನ ಕರಸೇವೆಗೆ ಇಟ್ಟಿಗೆಗಳು ಕೊಡಿ ಎಂದು ಹೇಳುತ್ತಾ ಬಂದವರನ್ನು ಭಾರತೀಯ ಜನತಾ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದರು. ಗಜರಾತಿನಿಂದ ಬಂದ ಇಟ್ಟಿಗೆಗಳ ಸಂಖ್ಯೆ ತುಂಬಾ ಹೆಚ್ಚಿತ್ತು ಅಂತ ಹೇಳುತ್ತಾರೆ. ಮತ್ತು ಸಣ್ಣ ಸಣ್ಣ ಹಳ್ಳಿಗಳನ್ನು ತಲಪುವುದಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಮೋದಿಯಿಂದ ಹಿಂದೂ ಮತ ಬ್ಯಾಂಕ್ ರೂಪಗೊಂಡಿತ್ತು. ಯಾತ್ರೆಯ ಸೂತ್ರದಾರ ಅಡ್ವಾಣಿ ಎಂಬ ದೊಡ್ಡ ಶಕ್ತಿಗೆ ತನ್ನದೇ ಅಳಿಲು ಸೇವೆ ಮಾಡಿ ಬೇಷ ಅನ್ನಿಸಿಕೊಂಡರೆ ಗುಜರಾತ ಜನರಿಗೆ ನಾಯಕನಾಗಿ ಹೊರಹೊಮ್ಮಿದ್ದರು.
ನಾನು ದೇಶದ ಪ್ರಧಾನ ಮಂತ್ರಿ ಅಥವಾ ಗುಜರಾತಿನ ಮುಖ್ಯಮಂತ್ರಿ ಆಗಬೇಕು ಎಂದು ಮಾಡಿದ ಕೆಲಸವಿರಲಿಲ್ಲ. ದೇಶವನ್ನು ಹೆಮ್ಮರವಾಗಿ ಬೆಳೆಸಲು , ದೇಶದ ಬಹುಸಂಖ್ಯಾತರ ನೆಮ್ಮದಿ ಮತ್ತು ಭಾರತವನ್ನು ವಿಶ್ವಗುರುವಾಗಿ ನೋಡುವ ದೃಷ್ಟಿಕೋನ ಅವರಾದಾಗಿತ್ತು. ಏನನ್ನು ಅಪೇಕ್ಷೆ ಪಡದೆ ಕರ್ಮವನ್ನು ಮಾಡಿದ ಫಲ ಇವತ್ತು ದೇಶದ ೧೨೫ ಕೋಟಿ ಜನರ ಸೇವಕನಾಗಿ ದುಡಿಯುತ್ತಿದ್ದಾರೆ. ಇವರನ್ನು ಅತಿ ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ಪಕ್ಷದ ಅನೇಕ ಜವಾಬ್ದಾರಿಗಳನ್ನು ನೀಡಿದ ಆಧುನಿಕ ಭೀಷ್ಮ ಅಡ್ವಾಣಿಯವರಿಗೆ ಒಂದು ಸಲಾಂ!
Categories: Articles
