By Bhimashankar Teli
ರಮೇಶ್ ಜಿಗಜಿಣಗಿ ಮತ್ತು ರಾಜು ಆಲಗೂರ್ ಇಬ್ಬರು ಜಿಲ್ಲೆಯ ಜನತೆಗೆ ಚಿರಪರಿಚಿತ. ಮೊದಲ ಬಾರಿಗೆ ರಾಜು ಆಲಗೂರ ಅವರು ಲೋಕಸಭೆಯ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಕಾಂಗ್ರೇಸ್ನ ಎಲ್ಲಾ ಶಾಸಕರು ಪ್ರಚಾರ ಮಾಡಿ ಕಾಂಗ್ರೇಸ್ ಪಕ್ಷ ಗೆಲ್ಲಿಸಬೇಕು ಎಂದು ಹಠ ತೊಟ್ಟು ಓಡಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಲಕ್ಷಣ್ ಸವದಿಯವರ ಪ್ರಚಾರ ಬರಾಟೆನು ಇದೆ. ಜಾತಿ ಜಾತಿಗಳನ್ನು ಒಂದುಗೂಡಿಸಿ ಕಾಂಗ್ರೇಸ್ ಗೆಲ್ಲಲು ಶತ ಪ್ರಯತ್ನ ಮಾಡುತ್ತಿದೆ. ಮೋದಿಯವರ ಅಲೆ ಒಳಗಿನಿಂದ ಗುಮ್ಮುತ್ತದೆ ಎಂದು ಬಿಜೆಪಿಯವರ ಲೆಕ್ಕ!
ವಿಧಾನಸಭೆ ಬಂದಾಗ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದೇವೆ ಆದರೆ ಇದು ದೇಶದ ಚುನಾವಣೆ ಮೋದಿಯವರಿಗೆ ನಮ್ಮ ಬೆಂಬಲ ಎನ್ನುತ್ತಿರುವ ಜನರ ಅಭಿಪ್ರಾಯಕ್ಕೆ ಕಾಂಗ್ರೆಸ್ ತೀಕ್ಷ್ಣವಾಗಿ ಜಾತಿಯ ಓಲೈಕೆಗೆ ಮುಂದಾಗಿದೆ. ಕಲಿತ ಜನರು ಮತ್ತು ಜಿಲ್ಲೆಯ ಮಹಿಳಾ ಮಣಿಗಳು ಹೇಗೆ ಈ ಚುನಾವಣೆಯಲ್ಲಿ ಮತದಾನ ಮಾಡುತ್ತಾರೆ ಎಂಬುದರ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ನಿಂತಿದೆ.
ಅಂಕೆ ಸಂಖ್ಯೆಗಳನ್ನೂ ನೋಡಿದರೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಗೆಲುವಿನ ದಾರಿ ಸುಗಮವಿದೆ ಎಂದೆನಿಸುತ್ತಿದೆ.
ವಿಜಯಪುರದ ೨೦೧೪ ಮತ್ತು ೨೦೧೯ರ ಲೋಕಸಭೆಯ ಚುನಾವಣೆಯ ಬಲಾಬಲ
ಕಾಂಗ್ರೆಸ್ | ಬಿಜೆಪಿ | |
2014 | 4,01,938 | 4,71,757 |
2019 | 3,77,829(ಜೆಡಿಸ್+ ಕಾಂಗ್ರೆಸ್) | 635,867 |
೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿ ಸೀಟು ಗೆದ್ದು ಪಡೆದ ಮತಗಳ ಲೆಕ್ಕಾಚಾರ . ಬಿಜೆಪಿ ಮತ್ತು ಜೆಡಿಸ್ ಮತಗಳು ಒಟ್ಟಾಗಿಸಿದರೆ ೧ ಲಕ್ಷ ಅಂತರ ಇದೆ.
ಕಾಂಗ್ರೆಸ್ | ಬಿಜೆಪಿ | ಜೆಡಿಸ್ | |
ಇಂಡಿ | 71785 | 39862 | 61456 |
ಬಸವನ ಬಾಗೇವಾಡಿ | 68126 | 43263 | 40197 |
ಮುದ್ದೇಬಿಹಾಳ | 79483 | 71846 | |
ಬಬಲೇಶ್ವರ | 93923 | 78707 | 1300 |
ದೇವರ ಹಿಪ್ಪರಗಿ | 33673 | 45777 | 65952 |
ಸಿಂದಗಿ | 87621 | 79813 | 2283 |
ನಾಗಠಾಣ | 78950 | 48175 | 34114 |
ವಿಜಯಪುರ ನಗರ | 89988 | 94211 | 500 |
ಒಟ್ಟು | 603549 | 501564 | 205802 |
೨೦೧೮ ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಸ್ ಪಡೆದ ಮತಗಳು ಸುಮಾರು ೭ಲಕ್ಷದ ೨೦ ಸಾವಿರ
ಕಾಂಗ್ರೆಸ್ | ಬಿಜೆಪಿ | ಜೆಡಿಸ್ | |
ಇಂಡಿ | 50401 | 38941 | 40463 |
ಬಸವನ ಬಾಗೇವಾಡಿ | 58647 | 25501 | 55461 |
ಮುದ್ದೇಬಿಹಾಳ | 54879 | 63512 | 9845 |
ಬಬಲೇಶ್ವರ | 98339 | 68624 | 0 |
ದೇವರ ಹಿಪ್ಪರಗಿ | 38038 | 48245 | 44892 |
ಸಿಂದಗಿ | 22818 | 61500 | 70860 |
ನಾಗಠಾಣ | 54108 | 53562 | 59709 |
ವಿಜಯಪುರ ನಗರ | 69895 | 76308 | 2000 |
ಒಟ್ಟು | 447125 | 436193 | 283230 |
Categories: Articles