By Bhimashankar Teli

ಚಿಕ್ಕಮಗಳೂರಿನ ಪ್ರವಾಸದಲ್ಲಿ ಅಂದು ರಾತ್ರಿ ಎಲ್ಲರೂ ” ಒಹೋ ಶಿವಾ ನ ಪ್ರೇಯಸಿ?” ಎಂದು ಕೂಗಿದಾಗ ಅಲ್ಲಿ ನಮ್ಮ ಯಜಮಾನರು ಮುಗುಳನಗುತ್ತಿದ್ದರು!
ನಾವೆಲ್ಲರೂ ಹತ್ತನೇ ತರಗತಿ ನಂತರ ಕಾಲೇಜು ಸೇರಿಕೊಂಡ ದಿನಗಳು! ತಮಗೆ ಇಷ್ಟವಾದ ವಿಷಯ ಆಯ್ಕೆ ಮಾಡಿಕೊಂಡು ಬೇರೆ ಬೇರೆ ಕಾಲೇಜುಗಳಿಗೆ ಸೇರಿದರು. ಕೆಲವರು ನಮ್ಮ ಕಾಲೇಜಿಗೆ ಸೇರಿಕೊಂಡಿದ್ದರು. ಪಿಯುಸಿ ಅಭ್ಯಾಸ ಎಷ್ಟು ಇತ್ತಂದರೆ ನಮ್ಮ ಜೀವನ್ ಸೈನ್, ತೀಟಾ ಎಂದೇ ಕಳೆದಿತ್ತು. ಇಲ್ಲಿ ಎಲ್ಲರಿಗೂ ತಮ್ಮ ಜೀವನದಲ್ಲಿ ಮುಂದೆ ಬರಬೇಕು, ಸಾಧನೆ ಮಾಡಬೇಕು ಎಂಬ ಹಠ!
ಮಹಾಭಾರತದಲ್ಲಿ ಅರ್ಜುನ್ ದ್ರೋಣಾಚಾರ್ಯರ ಅಚ್ಚುಮೆಚ್ಚಿನ ಶಿಷ್ಯ! ಕಾರಣ ಅರ್ಜುನ ಗುರುಕುಲದಲ್ಲಿ ಅತ್ಯಂತ ನಿಷ್ಠೆ , ಶ್ರದ್ಧೆಯಿಂದ ಕಠಿಣ ಪರಿಶ್ರಮ ಹಾಕಿ ವಿಧ್ಯೆ ಕಲಿತಿದ್ದ! ಒಂದು ದಿವಸ ದ್ರೋಣಾಚಾರ್ಯರ ಗುರುಕುಲದಲ್ಲಿ ಶಬ್ದವೇದಿ ಧನೃವಿದ್ದೇ ಬಗ್ಗೆ ಪಾಠ! ಒಂದು ಕ್ಷಣ ಎಲ್ಲರಿಗೂ ಆಶ್ಚರ್ಯ! ಶಬ್ದ ಬರುವ ಕಡೆ ಯಾರೋ ಒಬ್ಬರೋ ಬಾಣ ಪ್ರಯೋಗ ಮಾಡಿ ಗುರಿ ತಲುಪಿದ್ದರು. ಎಲ್ಲರೂ ಬೆನ್ನೆತ್ತಿ ಹೋದಾಗ ಕಂಡಿದ್ದು ಏಕಲವ್ಯ! ಅಲ್ಲಿ ಗುರುದ್ರೋಣಾಚಾರ್ಯ ಮೂರ್ತಿ , ಗುರುಗಳಿಗೆ ಪರಮಾಶ್ಚರ್ಯ! ಏನಿದೆಲ್ಲ? ಎಂದು ಏಕಲವ್ಯನಿಗೆ ಕೇಳಿದಾಗ, ಏಕಲವ್ಯ ಸವಿಸ್ತಾರವಾಗಿ ಗುರುಗಳಿಂದ ಪಡೆದ ಜ್ಞಾನದ ಬಗ್ಗೆ ಹೇಳಿದಾಗ, ಗುರುಗಳಿಗೆ ಒಂದು ಕ್ಷಣ ಭೂಮಿ ಕಂಪಿಸಿಬಿಟ್ಟಿತು! ಯಾವ ಕುರುವಂಶದಲ್ಲಿ ಅರ್ಜುನನನ್ನು ಮಾತ್ರ ಶ್ರೇಷ್ಠನನ್ನಾಗಿ ಮಾಡುವ ಪ್ರತಿಜ್ಞೆ ಮಾಡಿದ್ದರೋ ಇಂದು ಅವರಿಗೆ ಒಂದು ಕ್ಷಣ ಅವರ ಮೇಲೆ ಸಂದೇಹ ಬಂದಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿಯೇ ಏಕಲವ್ಯನ ಹೆಬ್ಬರಳನ್ನು ಪಡೆದುಕೊಂಡಿದ್ದರು. ಇದು ಅರ್ಜುನನ ಮನಸ್ಸಿನ ಮೇಲೆ ಅತ್ಯಂತ ಪರಿಣಾಮ ಬೀರಿತ್ತು. ಮುಂದೆ ಗುರುವಿಟ್ಟುಕೊಂಡು ನಾನು ಇನ್ನು ಅನೇಕ ವಿದ್ಯೆ ಕಲಿತಿಲ್ಲ ಎಂಬ ಭಾವನೆಗೆ ಸ್ಪಂದಿಸಿ ನಿರಂತರವಾಗಿ ಮತ್ತಿಷ್ಟು ಪರಿಶ್ರಮ ಹಾಕಿ ಎಲ್ಲರಿಗಿಂತ ಶ್ರೇಷ್ಠವಾಗಿ ಹೊರಹೊಮ್ಮಿದ್ದ.
ಎಲ್ಲರಿಗೂ ಹಠವಿದ್ದರೂ, ಅದನ್ನು ಕಾರ್ಯರೂಪದಲ್ಲಿ ತರುವುದು ಕಷ್ಟಸಾಧ್ಯ! ನಮ್ಮ ಕಾಲೇಜ್ ಜೀವನದಲ್ಲೂ ಸಹಿತ ಅನೇಕರು ಏಕಲವ್ಯನ ತರಹ ಅಭ್ಯಾಸ ಮಾಡಿ ತಮ್ಮ ಗುರಿಯನ್ನು ಸಾಧಿಸಿಕೊಂಡಿದ್ದರು. ಅನೇಕರಿಗೆ ಟ್ಯೂಷನ್ಗೆ ಕೊಡಲು ಹಣವಿರಲಿಲ್ಲ. ಟ್ಯೂಷನ್ ಬಿಡಿ, ಕೆಲವರ ಬಳಿ ಬೇಕಾಗಿರುವ ಪುಸ್ತಕಗಳೇ ಇರಲಿಲ್ಲ. ಆದರೂ ಗೆಳೆಯರ ಸಹಾಯದಿಂದ ಪಡೆದುಕೊಂಡು ಕಷ್ಟಪಟ್ಟು ಓದಿ ಸಾಧನೆ ಮಾಡಿದ್ದಾರೆ. ಯಾರಿಗೆ ಸಾಧಿಸುವ ಹಸಿವು, ಮನದಲ್ಲಿ ಸಾಧಿಸುವ ಬೆಂಕಿ ಮನೆ ಮಾಡಿರುತ್ತೋ ಅಂಥವರಿಗೆ ಸಾದಿಸುವುದು ಸರಳ! ಅರ್ಜುನ ಶ್ರೇಷ್ಠ ಅಥವಾ ಏಕಲವ್ಯ ಶ್ರೇಷ್ಟ ಎನ್ನುವ ತಾಳೆ ಮಾಡುವ ಅವಶ್ಯಕತೆ ನಮಗಿಲ್ಲ. ಒಂದು ಮಾತ್ರ ಅವರಿಂದ ಕಲಿತಿದ್ದು. ಏಕಲವ್ಯನ ಬಳಿ ಗುರು ಇಲ್ಲದಿದ್ದರೂ ಸಾಧನೆ ಮಾಡುವ ಛಲ ಇತ್ತು. ಅರ್ಜುನನಿಗೆ ಗುರುಗಳ ಬೆಂಬಲವಿತ್ತು, ಅದರ ಜೊತೆ ಅವನಿಗೂ ಸಾಧಿಸುವ ಛಲವಿತ್ತು! ಗುರುಕುಲದಲ್ಲಿ ಅನೇಕರಿಗೆ ಗುರುಗಳ ಬೆಂಬಲವಿದ್ದರೂ ಸಾಧಿಸಿದ್ದು ಶೂನ್ಯ! ಹಿಂದೆ ಗುರುವಿದ್ದು ಮುಂದೆ ಗುರಿವಿದ್ದರೆ ಖಂಡಿತ ಯಶಸ್ಸು ಸಾದ್ಯವೆನ್ನದು ಸತ್ಯ! ಇತ್ತೀಚಿಕೆ ಅನೇಕ ಪಂಡಿತರು ಹೇಳುತ್ತಾರೆ , “ಹಿಂದೆ ಗುರುಗಳೂ ಇಲ್ಲ, ಮುಂದೆ ಗುರಿನೂ ಇಲ್ಲ” ಹೊರಟಿದೆ ರಣಹೇಡಿಗಳ ಗುಂಪು!
ಕಷ್ಟಪಟ್ಟು ಓದಿ ನಾನು ಸಹಿತ ಇಂಜಿನಿಯರಿಂಗ್ ಸೇರಿಕೊಂಡು, ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಪಡೆದುಕೊಂಡೆ. ಒಂದೆರಡು ವರ್ಷದ ನಂತರ ಮನೆಯವರ ಮತ್ತು ನನ್ನ ನಿರ್ಧಾರದಂತೆ ಟ್ಯಾಮ್ನನ್ನು ಮದುವೆ ಆದೆ. ಅದೊಂದು ಅತ್ಯಂತ ಸಂತೋಷದ ಗಳಿಗೆ. ನಮ್ಮ ಮನೆಯವರಿಗೆ ಮೊದಲು ಕಷ್ಟವಾಗಿತ್ತು ಎಂದೆನಿಸಿದರೂ, ಅದೊಂದು ಅದ್ದೂರಿ ಮತ್ತು ಅಚ್ಚುಕಟ್ಟಾದ ಮದುವೆಯಾಗಿತ್ತು. ಎಲ್ಲ ಹೆಣ್ಣುಮಕ್ಕಳಿಗೆ ಒಂದು ಆಸೆ ಮತ್ತು ಕನಸು! ತಮ್ಮ ಮದುವೆ ಹೀಗೆ ಆಗಬೇಕು, ಮೇಕಪ್ ಗೆ ಇಂಥವರಿಗೆ ಕರೆಸಬೇಕು, ಅವರ ಡ್ರೆಸ್ ಬಗ್ಗೆ, ಆಭರಣಗಳ ಬಗ್ಗೆ, ಮದುವೆ ಮಂಟಪದ ಬಗ್ಗೆ, ಹೀಗೆ ಹತ್ತಾರು ಕನಸಗಳು ಇದ್ದೆ ಇರುತ್ತವೆ. ಎಲ್ಲ ಕನಸಗಳು ಈಡೇರದಿದ್ದರೂ , ಭಾಗಶ ನನ್ನ ಕನಸಗಳು ಈಡೇರಿದ್ದವು. ಮಹಾಭಾರತ ಮತ್ತು ರಾಮಾಯಣದಲ್ಲಿ, ತಮ್ಮ ಮಗಳು ವಯಸ್ಸಿಗೆ ಬಂದರೇ , ಸ್ವಯಂವರ ನಡೆಸಿ, ಎಲ್ಲ ರಾಜರುಗಳಿಗೆ ಆಹ್ವಾನ ಕೊಟ್ಟು ಕರೆಯಿಸಿ, ಅವರಿಗೊಂದು ಸವಾಲು ಕೊಟ್ಟು, ಸವಾಲು ಸ್ವೀಕರಿಸಿ , ಗೆದ್ದವನಿಗೆ ಹೆಣ್ಣು ಕೊಡುತಿದ್ದರು. ಸ್ವಯಂವರ ಗೆದ್ದು ಹೆಣ್ಣು ತರುವುದು ಒಂದು ಸಂದೇಶ ಕಡೆ ಆದರೇ , ಇನ್ನೊಂದು ಮುಖ್ಯವಾದ ಸಂದೇಶ ಕೊಡುತ್ತಿದ್ದರು. ಅದು ಏನೆಂದರೆ ನಮ್ಮ ರಾಜ್ಯ ಶಕ್ತಿಶಾಲಿಯಾಗಿದೆ ಎಂದು ಜಗಜ್ಜಾಹಿರಾ ಮಾಡುತ್ತಿದ್ದರು. ನಮ್ಮದು ಸ್ವಯಂವರ ಆಗಿರಲಿಲ್ಲ!
ಅಂದು ನಾವೆಲ್ಲಾ ಸುಮಾರು ೧೦-೧೫ ಜನ ಒಂದು ಕಡೆ ಸೇರಿದ್ದವು, ಇಂಜಿನಿಯರಿಂಗ್ ಎರಡನೆಯ ವರ್ಷ. ಸೇರಿದ ಜನರಲ್ಲಿ, ಅನೇಕರು ನಮ್ಮ ಹೈ ಸ್ಕೂಲ್ ಗೆಳೆಯರು, ಅಲ್ಲಿ ಒಂದು ಕಡೆ ಊಟಕ್ಕೆ ಅಂತ ಸೇರಿಕೊಂಡಿದ್ದು, ಅಂದು ರಾತ್ರಿ ಮೋಜಿನ ಕಾರ್ಯಕ್ರಮ ನಡೆದಿತ್ತು, ಅದೊಂದು ಯೋಜನೆ ಮಾಡದ ಕಾರ್ಯಕ್ರಮ. ಅಲ್ಲಿ ಶಿವಾ ತನ್ನ ಶಾಲೆಯಲ್ಲಿ ಪ್ರಭಂದದ ವಿಷಯ ದ್ರೌಪದಿ ಬಗ್ಗೆ ವರ್ಣಿಸಿ ಹೊಗಳಿದ್ದು, ನನಗೆ ಮತ್ತೆ ನನ್ನ ಶಿವ ಅರ್ಜುನನಾಗಿ ಕಾಣಿಸಿದ್ದು ಸುಳ್ಳಲ್ಲ. ಅಲ್ಲಿ ನಮ್ಮ ಗೆಳೆಯರಾದ ದುರ್ಯೋಧನ ಪಾತ್ರದಾರಿ ಗುರುರಾಜ್, ಕರ್ಣನ ಪಾತ್ರದಾರಿ ಮಹಾಂತೇಶ್ ಸಹಿತ ಅಲ್ಲಿದ್ದರು. ಅವರೆಲ್ಲ, ಏನೋ ಶಿವಾ ಇಂದು ವರ್ಣಿಸಿದ ರೀತಿ ನೀನು ಅಂದು ಶಾಲೆಗೆ ಬಂದು ದ್ರೌಪದಿ ಬಗ್ಗೆ ವರ್ಣಿಸಿದ್ದರೇ ನಿನಗೆ ಪ್ರಶಸ್ತಿ ಸಿಗುತ್ತಿತ್ತು ಎಂದಿದ್ದರು. ಶಿವಾ ಯಾವದೋ ಒಂದು ಕಾರಣದಿಂದ ಅಂದು ಶಾಲೆಗೇ ಬರದೇ ಕಾರ್ಯಕ್ರಮದಲ್ಲಿ ಭಾಗವಹಿಸದ ಕಾರಣ ಶಿವಾಗೆ ತುಂಬಾ ನಿರಾಸೆಯಾಗಿತ್ತು ಎಂದು ನನಗೆ ತಿಳಿದಿತ್ತು! ನನಗೂ ನೋವಾಗಿತ್ತು, ಆದರೆ ಅವನು ಹೇಳಿರಲಿಲ್ಲ, ನಾನು ಅವನಿಗೆ ಹೇಳಿರಲಿಲ್ಲ!
ಒಹೋ ಶಿವಾ ನ ಪ್ರೇಯಸಿ ಎಂದು ಕೂಗಿದಾಗ, ನುಗುತ್ತಿದ್ದ ನಮ್ಮ ಯಜಮಾನ ಶಿವಾ ನಮ್ಮ ಕಡೆ ಕುಡಿದು ಮತ್ತಿನಲ್ಲಿ ನಮ್ಮ ಕಡೆ ಬಂದು ಎಲ್ಲರನ್ನು ನೋಡುತ್ತಾ, ನಾನು ಅವಳ ಕತೆ ಮುಂದೆವರೆಸುತ್ತೇನೆ ಎಂದು ಹೇಳಿದರು. ಆಗ ಎಲ್ಲರೂ ಹೇಳಿ ಹೇಳಿ ಎಂದರು.
ನೋಡ್ರಿ, ನಾನು ಹೇಮಾಳನ್ನು ಮೊಟ್ಟ ಮೊದಲ ಬಾರಿ ಮಾತನಾಡಿಸಿದ್ದು ನಮ್ಮ ಎಂಜಿನೀರಿಂಗ್ ಎರಡನೆಯ ವರ್ಷದಲ್ಲಿ, ನಾವು ಶಾಲೆಯಲ್ಲಿ ಇದ್ದಾಗ , ನಾನು ಯಾವತ್ತೂ ಅವಳನ್ನು ಕಣ್ಣೆತ್ತಿ ನೋಡಿಲ್ಲ, ನಾಟಕದಲ್ಲಿ ಬಿಟ್ಟರೇ , ಅವಳ ಜೊತೆ ಮಾತನಾಡಿಯೇ ಇಲ್ಲ. ಹೇಮಾ, ಅರ್ಜುನ, ದ್ರೌಪದಿಯ ಪ್ರಭಂದದ ಸ್ಫರ್ಧೆವಿದ್ದಾಗ, ಅರ್ಜುನನ ಪಾತ್ರಕ್ಕೆ ಪ್ರೀತಿಮಾಡಿದ್ದಳು ಹೊರೆತೆ ಯಾವತ್ತೂ ತನ್ನ ಪ್ರೀತಿ ನನ್ನ ಜೊತೆ ಹೇಳಿವು ಇಲ್ಲ ಕೇಳಿವು ಇಲ್ಲ. ಅದೆಲ್ಲ ಅವಳ ಒಂದು ಕಲ್ಪನೆ! ಹಾಗಾದರೆ ಹೇಮಾ ಪ್ರೀತಿ ಮಾಡಿ ಮದುವೆ ಆಗಿಲ್ಲವೇ? ಆಗ ಯಜಮಾನರು ಅದು ಅವಳನ್ನೇ ಕೇಳಿ ಎಂದು ಇನ್ನೊಂದು ಪೆಗ್ ಹಾಕಕ್ಕೆ ಹೋದರು.
ಇಂಜಿನಿಯರಿಂಗ್ ಎರಡನೆಯ ವರ್ಷದಲ್ಲಿ ಊಟದ ಪಾರ್ಟಿ ನಂತರ, ಮತ್ತೆ ಅರ್ಜುನ ಮತ್ತು ದ್ರೌಪದಿಯ ಕನಸಗಳು ಪ್ರಾರಂಭವಾದವು. ಶಾಲೆಯಲ್ಲಿ ಇದ್ದಾಗ ಕೇವಲ ಕನಸಾಗಿದ್ದ ನನ್ನ ಭಾವನೆಗಳಿಗೆ ರೆಕ್ಕೆ ಬಂದಿದ್ದವು. ಇದಾದ ನಂತರ ಶಿವನ ಜೊತೆ ಸಲುಗೆ ಬೆಳೆಯಿತು. ಮೂರನೆಯ ವರ್ಷದ ಪ್ರಾಜೆಕ್ಟ್ ಸಹಿತ ಅವನ ಜೊತೇನೆ ಮಾಡಿದೆ. ಶಾಲೆಯ ದಿನಗಳು ಮೆಲಕು ಹಾಕಿದ್ದು ಇದೆ. ಪ್ರೌಢ ಶಾಲೆಯಲ್ಲಿ ಪ್ರೀತಿ ಪ್ರೇಮದ ಬಗ್ಗೆ ಕನಸು ಕಂಡಿದ್ದು ಹೇಳಿದ್ದು , ನಕ್ಕಿದ್ದು ಆಯಿತು. ಆದರೆ ಬರಬರುತ್ತ ಸ್ನೇಹ ಪ್ರೀತಿಯಾಗಿ ತಿರಿಗಿತ್ತು. ಯಾರಿಗೂ ಪ್ರೀತಿಯ ಬಗ್ಗೆ ನಿವೇದೇನೆ ಮಾಡುವ ಅವಶ್ಯಕತೆ ಬಂದಿರಲಿಲ್ಲ. ಎರಡು ದೇಹ ಒಂದೇ ಆಗಿತ್ತು. ತಾಳಿ! ಬೇರೆ ರೀತಿಯ ಕಲ್ಪನೆ ಮಾಡಿಕೊಳ್ಳುವ ಅಗತ್ಯವಿಲ್ಲ. ಅದರ ಅರ್ಥ ಇಬ್ಬರು ಇಂದೇ ಎನ್ನುವ ಭಾವ ಬಂದಿತ್ತು.
ಆದರೆ ನಾವು ಮಾಡಿದ್ದ ಆಟೋಪಗಳ ಲಿಸ್ಟ್ ದೊಡ್ಡದಿದೆ! ಪರದೆ ತಗೆಯದೇ , ಪರದೆ ಹಿಂದೆ ನಮ್ಮ ಆಟಕ್ಕ ಲೆಕ್ಕಿಲ್ಲ. ಹೀಗೆ ಅನೇಕ ರೋಮಾಂಚನಾಕಾರಿ ಪ್ರಣಯದ ಸಮಯ ಕಳೆದಿದ್ದೆವು. ಕವಿಯತ್ರಿ ಸುನಂದಾ ಬೆಳಗಾಂವಕರ ಅವರ ಒಂದು ಕಥೆ ಓದಿದ ನೆನಪು, ಧಾರವಾಡದ ಮಳೆಯಲ್ಲಿ ಹುಡುಗಿಯರು ಮಳೆಯಲ್ಲಿ ನೆನೆದಾಗ “ಅವರ ಉಬ್ಬು ತಗ್ಗುಗಳು” ನೋಡುವದಕ್ಕೆ ಅವರ ಹಿಂದೆ ಇಡೀ ಕಾಲೇಜು ಹುಡಗರ ಗುಂಪೇ ಇರುತ್ತಿತ್ತಂತೆ. ಹುಡಗರ ಚಂಚಲ ಬುದ್ದಿ ತಿಳಿದ್ದಿದ್ದ ನನಗೆ , ಶಿವಾ ಅನೇಕ ಬಾರಿ ಇಂತಹ ವಿಷಯಗಳು ಹೇಳಿ ನನ್ನ ಮನಸ್ಸನ್ನು ಕಲಕುವ ವ್ಯರ್ಥ ಪ್ರಯತ್ನ ಮಾಡಿದ್ದುಂಟು! ಮದುವೆಕ್ಕಿಂತ ಮೊದಲಾಗಬೇಕೋ ಅಥವಾ ಆಮೇಲೆ ಆಗಬೇಕು ಎನ್ನುವ ಮೊಂಡು ವಾದಕ್ಕೆ ಇಳಿಯುವ ದುಸ್ಸಾಸಕ್ಕೆ ಹೋಗದೆ ಇದ್ದ ಹುಡಗಿ ನಾನು! ಮದುವೆಕ್ಕಿಂತ ಮುಂಚೆ ಅವನ ಆಫೀಸಿಗೆ ಹೋದಾಗ ಪ್ಯಾಂಟ್ರಿ ಅಲ್ಲಿ ಕೊಟ್ಟ ಕಿಸ್ ಮಾತ್ರ ನೆನಪು!
ಇದರ ಜೊತೆ ನಮ್ಮ ಜವಾಬ್ದಾರಿಯೂ ಸಹಿತ ಆಚ್ಚುಕಟ್ಟಾಗಿ ನಿರ್ವಿಸಿದ್ದೆವು. ಇಂಜಿನಿಯರಿಂಗ್ ಮುಗಿದ ಮೇಲೆ ಕೆಲ್ಸಕ್ಕೆ ಸೇರಿದ್ದವು. ಮುಂದೆ ಮನೆಯಲ್ಲಿ ಮದುವೆ ವಿಷಯ ಪ್ರಸ್ತಾಪವಾದಾಗ ಇವನ ಬಯೋ ಡೇಟಾ ಇಟ್ಟೆ ಎಲ್ಲರನ್ನು ಒಪ್ಪಸಿದ್ದು ಆಯಿತು! ನಮ್ಮದು ಸ್ವಯಂವರ ಆಗಿರಲಿಲ್ಲ, ಮನೆಯಲ್ಲಿ ಸುಧಾರಿಸಿಕೊಂಡು ಒಪ್ಪಿದ್ದು !
ಒಂದು ಮರೆತಿದ್ದೆ, ಶಿವಾ ಶಾಲೆಯಲ್ಲಿ ಮತ್ತು ಕಾಲೇಜ್ನನ್ನು ಮ್ಯಾಥ್ಸ(MATHS) ವಿಷಯದಲ್ಲಿ ತುಂಬಾ ಜಾಣ! ಅವನಿಗೆ ಕಾಲೇಜ್ನಲ್ಲಿ ಅವನಿಗೆ ಮ್ಯಾಟ(MAT) ಎಂದು ಕರೆಯುತ್ತಿದ್ದರು. ಮೊದಲ ಬಾರಿಗೆ ಅದನ್ನು ಕೇಳಿ ಒಂದು ದಿಂದ ನಕ್ಕಿದ್ದೆ! ಮ್ಯಾಟ (MAT)ಅಂದರೆ ಚಾಪೆ ಎಂದು! ಮ್ಯಾಟ ಸರಿ ಹೊಂದುವದಿಲ್ಲ ಎಂದು ಟ್ಯಾಮ್(TAM) ಅಂತ ನಾನೇ ಇಟ್ಟ ಹೆಸರು!
ಮತ್ತೆ ಬೆಡ್ ರೂಮಿನಿಂದ ಧ್ವನಿ ಬಾ ಎಂದು ಯಜಮಾನರು ಕರೆದಾಗ ಬಂದೆ ಟ್ಯಾಮ್(ಶಿವಾ) ಎಂದು ಎದ್ದು ಹೋದೆ. ಇದರ ನಿರಂತರ ಪ್ರಯತ್ನವೇ “ಸೋಮ ” ಮತ್ತು ” ಮಾನ್ವಿ” ಇಷ್ಟೆಲ್ಲ ನನ್ನ ಜೀವನದ ಹಿಂದಿನ ನೆನಪುಗಳು ಉಕ್ಕುವದಕ್ಕೆ ಕಾರಣವಾದ ಮುಂಗಾರಿನ ಮಳೆಗೆ ಮತ್ತು ಬಾಲ್ಕನಿಗೆ ಧನ್ಯ!
Categories: news

Super Sir😍
LikeLike