
ಕರಿಮಣಿ ಮಾಲೀಕ “ಏನಿಲ್ಲ ಏನೆನೆಯಿಲ್ಲ” ಹಾಡು ಸರಳವಾಗಿದ್ದರೂ ೧೫ ವರ್ಷಗಳ ನಂತರ ಅದರ ಅರ್ಥ ತಿಳಿದಿತ್ತು. ಯುಐ ಚಿತ್ರ ಅತ್ಯಂತ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಚಿತ್ರ ಆದರೆ ಒಂದು ಷರತ್ತು, ನಿಮ್ಮ ಮನಸ್ಸು ಖಾಲಿಯಾಗಿ ಇರಬೇಕು.
ಉಪೇಂದ್ರರ ನಿರ್ದೇಶನ ಯಾವಾಗಲೂ ಒಂದು ಸಂದೇಶ ಕೊಡುತ್ತದೆ . ಈ ಚಿತ್ರದಲ್ಲಿ ಸಹಿತ ಸಂದೇಶ ಕೊಟ್ಟಿದ್ದಾರೆ. ಉಪೇಂದ್ರ ಯಾವಾಗಲೂ ಬೇರೆ ತರಹ ಚಿತ್ರ ಕೊಡುವಲ್ಲಿ ಎತ್ತಿದ ಕೈ. ಅವರಲ್ಲಿ ಸಾಮಾಜಿಕ ಕಳಕಳಿ ಎತ್ತಿ ತೋರಿಸುವ ಮನೋಭಾವ ! ಜನರು ನೆಮ್ಮದಿಯಿಂದ ಬದುಕಬೇಕು, ಅದಕ್ಕೆ ಏನು ಬೇಕು ಎಂದು ಚಿತ್ರದ ಮೂಲಕ ಹೇಳಿದ್ದಾರೆ. ಇದು ಆಕ್ಷನ್ ಚಿತ್ರಗಳ ಜೊತೆ ನಿಲ್ಲುವ ಚಿತ್ರ ಇದಲ್ಲ. ಇದೊಂದು ನಮ್ಮ ಮನಸ್ಥಿತಿ ಹೇಳುವ ಚಿತ್ರ! ನಮ್ಮ ಮನದಾಳದ ತುಮುಲಗಳ ನೈಜ ಅನುಭವಗಳೇ ಯುಐ ಚಿತ್ರ. ೨೫೦೦ ವರ್ಷಗಳ ಹಿಂದೆ ಬುದ್ಧ ತನ್ನನ್ನು ತಾನು ಗೆದ್ದು ಗೆದ್ದಲ ಹಿಡದ ಮನಸ್ಥಿತಿಯಿಂದ ಹೊರಬಂದಿದ್ದು!
ಬಸವಣ್ಣ ಮತ್ತು ಜೀಸಸ್ ಮಹಾನ ವ್ಯಕ್ತಿಗಳು , ಅವರ ಮಾಡಿದ ಕೆಲಸ ಅತಿ ದೊಡ್ಡದು. ಆದರೆ ಕೊನೆಗೆ ಆಗಿದ್ದು ಏನು? ನನಗೆ ಹುಟ್ಟಿಸಿದ ದೇವರನ್ನು ನಾನು ಪೂಜಿಸುತ್ತೇನೆ , ಆದರೆ ನಾನು ಹುಟ್ಟಿಸಿದ ದೇವರನ್ನು ನಾವು ತಿರಸ್ಕಾರ ಮಾಡಬಲ್ಲೆ! ಇದನ್ನೇ ಬಸವಣ್ಣ ಮತ್ತು ಜೀಸಸ್ ಮಾಡಿದರು, ಆದರೆ ಅದೇ ಜನ ಸತ್ಯವನ್ನು(Satya) ಒಪ್ಪಲಿಲ್ಲ.
ನನ್ನಲ್ಲೂ ಸಾಧನೆ ಮಾಡುವ ಶಕ್ತಿ ಇದೆ, ನಾನು ನನ್ನನ್ನು ಗೆಲ್ಲಬಲ್ಲೆ, ಸಾಧನೆ ಮೂಲಕ ನಾನು ನನ್ನ ಕುಟುಂಬಕ್ಕೆ ಮತ್ತು ದೇಶಕ್ಕೆ ಉತ್ತಮ ನಾಗರಿಕನಾಗಬಲ್ಲೆ ಎಂದು ಅತ್ಯಂತ್ಯ ಚೆನ್ನಾಗಿ ತೋರಿಸಿದ್ದಾರೆ. ಆದ್ರೆ ಇದು ನೀವು ಫೋಕಸ್ ಮಾಡಿ ನೋಡಿ ತಿಳಿದುಕೊಳ್ಳುವ ಚಿತ್ರ! ಸೋಶಿಯಲ್ ಮೀಡಿಯಾದಲ್ಲಿ ಸೆಗೇಣಿ ತಟ್ಟುವ ಮನಸ್ಸುಗಳಿಗೆ ಚಿತ್ರದ ಮಹತ್ವ ಗೊತ್ತಾಗುವದಿಲ್ಲ.
ಮಳೆಯಾಗಿ ಮನೆಯೆಲ್ಲ ನೀರು, ಮಳೆಯಾಗದೆ ನೀರೆಯಿಲ್ಲದ ನಗರಗಳು, ಸುಂದರವಾದ ಜಗತ್ತನ್ನು ಕುರೂಪಿಯಾಗಿ ಮಾಡಿದ್ದು. ರಾಜಕಾರಣಿಗಳು ಹೇಗೆಲ್ಲ ನಮಗೆ ರೈಲು ಹತ್ತಿಸುತ್ತಾರೆ! ಯಾವೆಲ್ಲ ಮಾಫಿಯಾಗಳು ನಮ್ಮನ್ನು ಆಳುತ್ತಿವೆ, ಹೇಗೆ ನಾವು ನಮ್ಮ ಸುಂದರವಾದ ಜೀವವನ್ನು ಹಾಳು ಮಾಡಿಕೊಂಡಿದ್ದೇವೆ, ಅದಕ್ಕೆ ನಮ್ಮ ಮುಖವನ್ನು ಕನ್ನಡಿ ಇಟ್ಟು ನಮ್ಮನ್ನೇ ತೋರಿಸುವ ಅದ್ಬುತ ಪ್ರಯತ್ನಕ್ಕೆ ಒಂದು ಹಾಟ್ಸ್ ಆಫ್ ! ಇದರ ಅರ್ಥ, ಎಲ್ಲವನ್ನು ನೀನೆ ಮಾಡಿದ್ದೀಯಾ ಅದಕ್ಕೆ ನೀನೆ ಇದನ್ನು ಅನುಭವಿಸಬೇಕು!
ಕಲ್ಕಿ ಬಂದು ನಮ್ಮನ್ನು ಉಳಿಸುತ್ತಾನೆ, ಜಗತ್ತು ಚೆನ್ನಾಗಿ ಮಾಡುತ್ತಾನೆ ಎನ್ನುವ ನಂಬಿಕೆಗಿಂತ ನನ್ನನ್ನು ನಾನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಅಚ್ಚುಕಟ್ಟಾಗಿ ಹೇಳಿದ್ದಾರೆ. ಇಲ್ಲಿ ಕಲ್ಕಿ ನಮ್ಮ ಮನಸ್ಸಿನ ಇನ್ನೊಂದು ಮುಖ. ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುವ ಯುದ್ಧ!
ಜಗತ್ತನ್ನು ಈ ಚಿತ್ರದಲ್ಲಿ ಸೃಷ್ಟಿದ್ದಾರೆ , ಹೇಗೆ ಅಮೇರಿಕ ಜಗತ್ತನ್ನು ತನ್ನ ತಾಳಕ್ಕೆ ಕುಣಿಸುತ್ತದೆ ಎಂದು ಹೇಳುವ ಪ್ರಯತ್ನ. ಅಘಾನಿಸ್ತಾನ ದೇಶಹೇಗೆ ಹಾಳಾಯಿತು ಎಂದು ಸೂಚ್ಯವಾಗಿ ತೋರಿಸಿದ್ದಾರೆ. ಆಡಮ್ ಮತ್ತು ಏವ್ ನಿಂದ ಪ್ರಾರಂಬವಾದ ಚಿತ್ರ, ಸುಂದರವಾದ ಜಗತ್ತಿನಲ್ಲಿ ಆರಾಮವಾಗಿ ಇರು, ಇದನ್ನು ಅನುಭವಿಸು ಎಂದು ಹೇಳಿ, ಸೇಬು ಹಣ್ಣನ್ನು ಮಾತ್ರ ಸೇವಿಸಬೇಡ ಎಂದು ಹೇಳಿದರು. ಇದರ ಅರ್ಥ ನಿನ್ನ ದುರಾಸೆಗೆ ಕಿವಿಕೊಡಬೇಡ ಎಂದರ್ಥ ! ಆದರೆ ನಾವು ಯಾವುದನ್ನು ಮಾಡಬೇಡ ಎಂದು ಹೇಳುತ್ತಾರೆ ಅದನ್ನೇ ಮಾಡುವ ಮನುಗುಣ ನಮ್ಮದು ! ದುರಾಸೆ ಏನೆಲ್ಲ ಮನುಕುಲಕ್ಕೆ ಸಂಚಕಾರ ತರಬಲ್ಲದು ಎಂದು ಹೇಳಿದ್ದಾರೆ.
ಜನರಿಗೆ ಎಲ್ಲವು ತಿಳಿದಿದೆ, ಆದರೆ ಸತ್ಯದ ದಾರಿಯಲ್ಲಿ ನಡೆಯುವ ಮನಸ್ಸಿಲ್ಲ. ಮನಸ್ಸಿದ್ದರೂ ಅದಕ್ಕೆ ದಿಕ್ಕು ತಪ್ಪಿಸುವ ನೂರಾರು ಜನರಿದ್ದಾರೆ. ಅದಕ್ಕೆ ಬಾಬಾರನ್ನು ತೋರಿಸಿದ್ದಾರೆ, ಹಾಗೆಯೇ ಮುಗ್ದ ಜನರನ್ನು(ಜೇನು ಹೀರಿಕೊಂಡು ಸಪ್ಪೆ ಮಾಡಿದ್ದಾರೆ) ದ್ದಾರಿ ತಪ್ಪಿಸುವ ಜಾತಿ ಮತ್ತು ಧರ್ಮದ ನಾಯಕರು!
ಯುಐ ಚಿತ್ರದಲ್ಲಿ ಇನ್ನೊಂದು ಯುಐ ಚಿತ್ರ ತೋರಿಸಿಸುತ್ತಾ, ಅದರಲ್ಲಿ ಅನೇಕ ವಿಷಯಗಳು ಜನರಿಗೆ ತೋರಿಸಿ , ಜನ ಅದರ ಅರ್ಥ ಮಾಡಿಕೊಂಡರು ಎಂದು ತೋರಿಸುತ್ತಾರೆ. ಅದೇ ಮೊದಲ ಮತ್ತು ಕೊನೆಯ ತುಣುಕು. ಕಟ್ಟ ಕಡೆಗೆ ನಿಜವಾದ ನಿರ್ದೇಶಕ ಮತ್ತು ಕಲ್ಕಿ ಜೊತೆ ಸಂಭಾಷಣೆನೆ ಚಿತ್ರದ ನೈಜವಾದ ಕಥೆ. ಕಥೆ ಬರೆದು ಕಥೆಯನ್ನೇ ಸುಟ್ಟು ಹಾಕುವ ಪ್ರಯತ್ನ. ಇದು ನೋಡಲು ನೀವು ಚಿತ್ರಮಂದಿರಕ್ಕೆ ಹೋಗಲೇಬೇಕು. ಇವಾಗ ಏನು ತಿಳಿದಿಲ್ಲ ಎಂದು ಮುಂದೆ ೧೦ ವರ್ಷವಾದ ನಂತರ ಚಿತ್ರ ಎಷ್ಟೊಂದು ಚೆನ್ನಾಗಿ ಇತ್ತು ಎಂದು ಹೇಳಿದರು ನಿರ್ಮಾಪಕನ ಹೊಟ್ಟೆ ತುಂಬುವದಿಲ್ಲ. ಅದ್ಭುತವಾದ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ.
ಚಿತ್ರ ನೋಡುವಾಗ ಅನಿಸಿದ್ದು, ನಾವು ಹೇಗೆ ಇದ್ದೇವೆ, ಏನೆಲ್ಲ ಸಮಸ್ಸೆಗಳನ್ನು ಎದುರಿಸುತ್ತಿದ್ದೇವೆ ಮತ್ತು ಇದನ್ನು ಹೇಗೆ ಮೆಟ್ಟಿ ನಿಲ್ಲಬೇಕು, ಮೆಟ್ಟಿ ನಿಂತರೆ ಹೇಗೆ ನಾವು ಎದ್ದೇಳಬಹುದು ಎಂದು ಹೇಳುವ ಪ್ರಯತ್ನವೇ ಯುಐ
Categories: Articles
