By Bhimashankar Teli
೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೧೦ ರಿಂದ ೬೫ ಕ್ಕೆ ಬಂದು ನಿಂತಿತ್ತು. ಖ್ಯಾತ ಪತ್ರಕರ್ತರಾದ ವಿಶೇಶ್ವರಯ್ಯ ಭಟ್ ಅವರು ಹೀಗೆ ಬರೆದಿದ್ದರು ” ವಿಜಯಪುರದ ಕೂಗುಮಾರಿ ‘, ಮಾಜಿ ಮುಖ್ಯಮಂತ್ರಿಯವರ ಬಗ್ಗೆ “ಮಂಡೆ ಹಿಡಿದರು ಬೋಳು , ಕುಂಡೆ ಹಿಡಿದರೂ ಬೋಳು”, ಪ್ಯಾದೆ ಮೆಂಟಾಲಿಟಿ , ಸಂಘದ ಕೂಸು . ಬೆಳಗಾವಿ ಬಳುವಿನ. ಅವರ ಅಂಕಣ ಬಿಜೆಪಿ ಸೋಲಿಗೆ ಯಾರು ಕಾರಣರು ಎಂದು ಅತ್ಯಂತ ನೇರವಾಗಿ ಹೇಳಿದ್ದರು. ಸೋತರು ತಪ್ಪಿನ ಅರಿವು ಇನ್ನೂ ಆಗಿಲ್ಲ. ಇಂದಿನ ಬಿಜೆಪಿಯ ವಸ್ತಿಸ್ಥಿತಿಯ ಬಗ್ಗೆ ನೋಡುವದಾದರೆ.
ಬಿ.ವೈ. ವಿಜಯೇಂದ್ರ, 49 ವರ್ಷದ ಯುವ ರಾಜಕೀಯ ನಾಯಕ, ತಮ್ಮ ಪರಿಶ್ರಮ, ತಾಳ್ಮೆ, ಮತ್ತು ಸಂಘಟನಾ ಕೌಶಲ್ಯದಿಂದ ಕರ್ನಾಟಕ ರಾಜಕಾರಣದಲ್ಲಿ ಪ್ರಭಾವ ಬೀರಿದ್ದಾರೆ. ಅವರು ರಾಜ್ಯದಾದ್ಯಂತ ಸುತ್ತಾಡುತ್ತ, ಕಾರ್ಯಕರ್ತರ ಜೊತೆ ನೇರ ಸಂಪರ್ಕ ಬೆಳೆಸಿ, ಅವರ ಸಂಕಟಗಳನ್ನು ಅರಿಯುತ್ತಿರುವುದು ಪಕ್ಷದ ಭವಿಷ್ಯಕ್ಕೆ ಶಕ್ತಿಯುತ ಬೆಳವಣಿಗೆ. ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರುವಂತಹ ಪ್ರಮುಖ ನಾಯಕರಾಗಿ ಅವರು ಬೆಳೆಯುತ್ತಿದ್ದಾರೆ. ವಿಜಯೇಂದ್ರರವರ ಜೊತೆ ಮೊನ್ನೆ ೨೩ ಜಿಲ್ಲಾ ಅಧ್ಯಕರನ್ನು ನೋಡಿದರೆ, ಮುಂದಿನ ಯುವ ನಾಯಕತ್ವ ಬೆಳೆಸುವ ಇರಾದೆ ಬಿಜೆಪಿಗಿದೆ ಎನ್ನುವುದು ಸ್ಟಷ್ಟ. ೧ ಲಕ್ಷ ಯುವಕರು ರಾಜಕೀಯಕ್ಕೆ ಬನ್ನಿ ಎಂದು ಮೋದಿ ಹೇಳಿದ್ದು ನೆನಪಿಗೆ ಬರುತ್ತಿದೆ.
ಬಿಜೆಪಿಯ ಮಾಜಿ ಹಾಗೂ ಹಾಲಿ ಶಾಸಕರ ಬೆಂಬಲ:-
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110ರಿಂದ 65 ಸ್ಥಾನಗಳಿಗೆ ಕುಸಿದ ಬಳಿಕ, ಪಕ್ಷದ ಸಂಘಟನಾತ್ಮಕ ಬಲವನ್ನು ಪುನಃ ಸ್ಥಾಪಿಸಲು ಜವಾಬ್ದಾರಿಯನ್ನು ವಿಜಯೇಂದ್ರ ಸ್ವೀಕರಿಸಿದ್ದಾರೆ. ಈ ಹಿನ್ನಲೆಯಲ್ಲಿ, ಅವರ ಸಂಘಟನೆ, ಕಾರ್ಯಶೈಲಿ ಮತ್ತು ನಾಯಕತ್ವಕ್ಕೆ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರ ಅವರ ಬಗ್ಗೆ ಬಿಜೆಪಿ ನಿರ್ಧಾರ ಕೈಗೊಂಡು ಅವರನ್ನು ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ನೇಮಿಸಿದುದು ಸುಲಭ ನಿರ್ಧಾರವಾಗಿರಲಿಲ್ಲ. ಪಕ್ಷದಲ್ಲಿ ಎಲ್ಲವೂ ಸರಾಗವಾಗಿದ್ದರೆ, ಈ ಪದವಿಗೆ ಬೇರೆ ಯಾರನ್ನಾದರೂ ಆಯ್ಕೆ ಮಾಡಬಹುದಿತ್ತು. ಆದರೆ, ರಾಜ್ಯದಲ್ಲಿ ಸಂಘಟನಾತ್ಮಕವಾಗಿ ಬಲಿಷ್ಠ ನಾಯಕನ ಅವಶ್ಯಕತೆ ಇತ್ತು. ಆದ್ದರಿಂದ, ಅವರ ಕೌಶಲ್ಯ, ತಾಳ್ಮೆ, ಹಾಗೂ ಭರವಸೆ ಹೊಂದಿರುವ ನಾಯಕತ್ವವನ್ನು ಪರಿಗಣಿಸಿ, ಸುಮಾರು ಆರು ತಿಂಗಳ ನಂತರ, ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಯಿತು.
ವಿಜಯೇಂದ್ರ – ಬೆಂಕಿಯ ಮೇಲಿನ ನಡಿಗೆ!
“ಬಂಗಾರ ಬೆಂಕಿಯಲ್ಲಿ ಕರಗಿ, ಸುತ್ತಿಗೆಯ ಪೆಟ್ಟು ತಿಂದಾಗಲೇ ಆಭರಣವಾಗುವುದು!” ವಿಜಯೇಂದ್ರ ಅವರ ರಾಜಕೀಯ ಪ್ರವೇಶವನ್ನು ಅವರೇ “ಆಕಸ್ಮಿಕ” ಎಂದು ಹಲವಾರು ಬಾರಿ ಹೇಳಿದ್ದಾರೆ. ಆದರೆ, ಇಂದು ಅವರ ಕಾರ್ಯಶೀಲತೆಯು, ಸಂಘಟನಾ ಚಾತುರ್ಯ ಮತ್ತು ಹೋರಾಟದ ಮನೋಭಾವವು ಅವರನ್ನು ಕರ್ನಾಟಕದ ಪ್ರಮುಖ ರಾಜಕೀಯ ನಾಯಕರಾಗಿ ರೂಪಿಸುತ್ತಿದೆ. ಇಂದು ನಡೆಯುತ್ತಿರುವ ಬೆಳವಣಿಗೆ ರಾಜಕಾರಣದಲ್ಲಿ ಸಾಮಾನ್ಯ! ಪ್ರಬಲ ನಾಯಕತ್ವವನ್ನು ಅಸ್ತಿತ್ವಹೀನಗೊಳಿಸಲು ಒಂದೊಬ್ಬ ನಾಯಕ ಪ್ರಯತ್ನಿಸುತ್ತಾರೆ; ಅವರಿಂದ ಸಾಧ್ಯವಾಗದೆ ಹೋದಾಗ, ಗುಂಪು ಕಟ್ಟಿಕೊಂಡು ದಾಳಿಯತ್ತ ಮುಂದಾಗುತ್ತಾರೆ. ಇದು ರಾಜಕೀಯದಲ್ಲಿ ಸಾಮಾನ್ಯ ಬೆಳವಣಿಗೆ—ಒಳಗೂ ಮತ್ತು ಹೊರಗೂ.
ಪ್ರಧಾನಮಂತ್ರಿ ಮೋದಿ ಅಧಿಕಾರಕ್ಕೇರುವುದನ್ನು ತಡೆಯಲು ನೂರಾರು ಅತೃಪ್ತ ಶಕ್ತಿಗಳು ಸಜ್ಜಾಗಿದ್ದರೂ, ಅವರ ತೀರ್ಮಾನಶೀಲತೆ ಮತ್ತು ಜನಮನ್ನತೆಯಿಂದ ಅವರು ದಡಸೇರಿದರು. ಅದೇ ರೀತಿ, ಇಂದು ವಿಜಯೇಂದ್ರ ಅವರು ತಮ್ಮ ಪರಿಶ್ರಮದೊಂದಿಗೆ ಪಕ್ಷಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಅವರ ಬೆನ್ನಲುಬಾಗಿ ನಿಂತಿರುವವರು ಬಿಜೆಪಿ ಕಾರ್ಯಕರ್ತರು. ಅವರ ತಾಳ್ಮೆ, ದೃಢ ನಿಶ್ಚಯ ಮತ್ತು ಸಮಗ್ರ ಪ್ರಯತ್ನಗಳು ಅವರಿಗೆ ಖಂಡಿತ ಯಶಸ್ಸು ತರುವವು ಎಂದು ಕಾರ್ಯಕರ್ತರ ಅಭಿಪ್ರಾಯ!
ರಾಜ್ಯದಲ್ಲಿ ಬಿಜೆಪಿ ಮೂರು ಬಣಗಳಾಗಿ ವಿಭಜನೆಯಾಗಿದೆ – ವಿರೋಧಿ ಬಣ, ತಟಸ್ಥ ಬಣ, ಮತ್ತು ಪಕ್ಷದ ಬಣ. ಕೆಲವರ ಮನದಲ್ಲಿ “ನಮ್ಮಿಗಿಂತ 49 ವರ್ಷದ ಯುವ ನಾಯಕನಿಗೆ ಗೌರವ ನೀಡುವುದೇ?” ಎಂಬ ಪ್ರಶ್ನೆ ಇದೆ. ಆದರೆ, ಇತಿಹಾಸ ಸಾಕ್ಷಿ – ಜಗತ್ತಿನ ಅನೇಕ ಶ್ರೇಷ್ಠ ನಾಯಕರು ತಮ್ಮ ತಳಮಟ್ಟದಿಂದ ಕಠಿಣ ಪರಿಶ್ರಮದ ಮೂಲಕ ಮುಂದುವರಿಯುತ್ತಾರೆ. ಚಿಕ್ಕ ವಯಸ್ಸಿನಲ್ಲೂ ಒಳ್ಳೆಯ ಕೆಲಸ ಮಾಡುತ್ತಾ ನುಗ್ಗುತ್ತಿರುವ ವಿಜಯೇಂದ್ರರ ಏಳಿಗೆ ನೋಡಿ, ನಾಯಕರಿಗೆ ನುಂಗಲಾರದ ತುತ್ತಾಗಿದೆ. ಮುಂದೆ ದೇವೇಂದ್ರ ಫಡ್ನವಿಸ್, ಯೋಗಿ ತರಹ ಇವರೇ ಮುಖ್ಯಮಂತ್ರಿಯಾದ್ರೆ? ಕೇವಲ ಸಣ್ಣ ವಯಸ್ಸು ಎಂದು ಸಬೂಬು ಕೊಡುತ್ತಿರುವ ದೊಡ್ಡ ನಾಯಕರ ಇತಿಹಾಸ ನೋಡಿದರೆ, ತಮ್ಮ ತಮ್ಮ ಜಿಲ್ಲೆಯಲ್ಲೇ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ, ಎರಡು ಮೂರು ಬಣಗಳನ್ನು ಸೃಷ್ಟಿಮಾಡಿಕೊಂಡಿದ್ದಾರೆ! ಇವರೆಲ್ಲ ವಿಜಯೇಂದ್ರರ ಬಗ್ಗೆ ಹೇಳುವಾಗ ಅಸಹ್ಯ ಎನಿಸುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಬೆಳವಣಿಗೆಗೆ ಬೆಂಬಲ ಕೊಡುತ್ತಿರುವ ನಾಯಕರೆಲ್ಲರೂ, ಹಿರಿಯರೇ!!
ಬೊಮ್ಮಾಯಿ, ಯತ್ನಾಳ, ಅಶೋಕ್ , ಸೋಮಣ್ಣ, ಲಿಂಬಾವಳಿ , ಸುಧಾಕರ್ ರೆಡ್ಡಿ ಹೀಗೆ ಅನೇಕ ಹಿರಿಯರು , ಒಂದು ವೇಳೆ ಮುಂದೆ ಸರ್ಕಾರ ಬಂದು ಬಿಜೆಪಿ ಅಧಿಕಾರಕ್ಕೆ ಬಂದರೇ , ವಿಜಯೇಂದ್ರ ಮುಖ್ಯಮಂತ್ರಿ ಆದರೆ, ಇವರ ರಾಜಕೀಯ ಕತೆ ಏನು? ಅದಕ್ಕಾಗಿಯೇ ಇದೆಲ್ಲ ನಡೆಯುತ್ತಿದೆ. ಇಲ್ಲಿ ರಾಜ್ಯದ ಹಿತಾಶಕ್ತಿಗಿಂತ ವ್ಯಯಕ್ತಿಕ ಹಿತಾಶಕ್ತಿ ಅಡಗಿದೆ. ಒಂದು ಗಮನಿಸಿ, ಪಕ್ಷದಲ್ಲಿ ಯುವಕರಿಗೆ ಅವಕಾಶಗಳು ಸಿಗುತ್ತಿವೆ, ಯುವಕರು ಉತ್ಸಾಹದಲ್ಲಿ ಇದ್ದಾರೆ. ಆದರೆ ಹಿರಿಯರು ಮಾತ್ರ ಸಮಸ್ಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಕಾರಣ? ಮುಂದೆ ವಿಜಯೇಂದ್ರ ಅವರ ಕ್ಯಾಬಿನೆಟ್ ನಲ್ಲಿ ಹೇಗೆ ಮಂತ್ರಿ ಆಗುವುದು? ಹೀಗೆ ಜಗಳ ಮಾಡಿದರೆ ಸರ್ಕಾರ ಬರುವುದು ಬಿಡಿ, ಪಕ್ಷ ಉಳಿಯುವದೇ ಕಷ್ಟಸಾಧ್ಯ!
ಜಗತ್ತಿನ ಪ್ರಮುಖ ಯುವ ನಾಯಕರು – ಪ್ರೇರಣೆ
ಅಮೇರಿಕಾದ ನಾಯಕರು:
- ಬಾರಕ್ ಒಬಾಮಾ (47 ವರ್ಷ) – ಸಮಾನತೆ ಮತ್ತು ಸಮಾಜ ಸುಧಾರಣೆಗೆ ಶಕ್ತಿಯುತ ನಾಯಕತ್ವ.
- ಜಾನ್ ಎಫ್. ಕೆನೆಡಿ (43 ವರ್ಷ) – ಅಮೇರಿಕಾದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಪ್ರೇರಣಾದ ಯುವ ನಾಯಕ.
- ಥಿಯೋಡೋರ್ ರೂಸವೆಲ್ಟ್ (42 ವರ್ಷ) – ಅಮೇರಿಕಾದ ಅತೀ ಕಿರಿಯ ಅಧ್ಯಕ್ಷರಾಗಿದ್ದು, ಸ್ಮಾರ್ಟಾದ ಆರ್ಥಿಕ ಪರಿಷ್ಕರಣೆಗಳನ್ನು ಮಾಡಿದ್ದಾರೆ.
- ಅಲೆಕ್ಸಾಂಡರ್ ಹ್ಯಾಮಿಲ್ಟನ್ (20ರ ದಶಕ)– ಅಮೇರಿಕಾದ ಹಣಕಾಸು ವ್ಯವಸ್ಥೆಯ ಶಿಲ್ಪಿ.
ಇಂಗ್ಲೆಂಡ್ನ ನಾಯಕರು:
- ವಿಲಿಯಂ ಪಿಟ್ (24 ವರ್ಷ) – ಬ್ರಿಟನ್ ಇತಿಹಾಸದ ಅತೀ ಕಿರಿಯ ಪ್ರಧಾನ ಮಂತ್ರಿ.
- ಟೋನಿ ಬ್ಲೇರ್ (43 ವರ್ಷ) – ಲೇಬರ್ ಪಕ್ಷವನ್ನು ಮುನ್ನಡೆಸಿ ಆಧುನಿಕ ನೀತಿಗಳನ್ನು ಜಾರಿಗೆ ತಂದ ನಾಯಕ.
-ಡೇವಿಡ್ ಕ್ಯಾಮೆರಾನ್ (43 ವರ್ಷ) – ಯುವ ವಯಸ್ಸಿನಲ್ಲಿ ಪ್ರಧಾನಿಯಾಗಿ ಬ್ರಿಟನ್ನಲ್ಲಿ ಆಧುನಿಕ ನೀತಿಗಳನ್ನು ಜಾರಿಗೆ ತಂದವರು. - ಬೋರಿಸ್ ಜಾನ್ಸನ್ – ಲಂಡನ್ ಮೇಯರ್ ಆಗಿ ಸೇವೆ ಸಲ್ಲಿಸಿ, ಬ್ರಿಟಿಷ್ ಪ್ರಧಾನಿಯಾದವರು.
ಯುವ ನಾಯಕರು ರಾಜಕೀಯಕ್ಕೆ ಏನನ್ನು ತರುತ್ತಾರೆ?
ತಮ್ಮ ಇಳಿ ವಯಸ್ಸಿನಲ್ಲೂ ಬೆಂಗಳೂರಿಗೆ ನೀರು ಮತ್ತು ಮತ್ತೊಂದು ವಿಮಾನ ನಿಲ್ದಾಣ ಬೇಕು ಮನದಟ್ಟು ಮಾಡಿಕೊಡುತ್ತಿರುವ ನಾಯಕರು ನಮ್ಮ ರಾಜ್ಯದವರೇ, ಅದೇ ದೇವೇಗೌಡಜಿ. ಅದಕ್ಕೆ ನಮಗೆ ಮುಂದೆ ರಾಜ್ಯ ಪ್ರತಿನಿಧಿಸುವಂತ ನಾಯಕರ ಅವಶ್ಯಕತೆ ತುಂಬಾ ಇದೆ. ಯುವ ನಾಯಕರು ಹೊಸ ಯೋಚನೆ, ಪ್ರಬಲ ಉತ್ಸಾಹ, ತಂತ್ರಜ್ಞಾನ ಆಧಾರಿತ ನೀತಿಗಳು, ಮತ್ತು ಜನಪರ ಕಾರ್ಯಗಳಿಂದ ರಾಜಕೀಯದಲ್ಲಿ ಬದಲಾವಣೆ ತರಬಲ್ಲರು.
ಬಿ.ವೈ. ವಿಜಯೇಂದ್ರ ಅವರ ಕಾರ್ಯಪದ್ಧತಿ, ತಾಳ್ಮೆ, ಹಾಗೂ ಜನಸಂಪರ್ಕ ಕೌಶಲ್ಯವನ್ನು ಗಮನಿಸಿದರೆ, ಅವರು ರಾಜ್ಯ ರಾಜಕಾರಣದಲ್ಲಿ ಭವಿಷ್ಯದಲ್ಲಿ ಮಹತ್ತರ ಪಾತ್ರ ವಹಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮರುಬಲ ಪಡೆಯಲು, ವಿಜಯೇಂದ್ರ ಅವರ ಸಂಘಟನಾ ಶಕ್ತಿ, ಕಾರ್ಯಪದ್ಧತಿ, ಹಾಗೂ ಪ್ರಬಲ ನಾಯಕರನ್ನು ಒಗ್ಗೂಡಿಸುವ ಸಾಮರ್ಥ್ಯ ಮುಖ್ಯ. ಇಂದಿನ ಪರಸ್ಥಿತಿಯಲ್ಲಿ, ರಾಜ್ಯದ ಉತ್ಕೃಷ್ಟ ನಾಯಕತ್ವಕ್ಕಾಗಿ, ಪಕ್ಷದ ಭವಿಷ್ಯಕ್ಕಾಗಿ ವಿಜಯೇಂದ್ರ ಸೂಕ್ತ ವ್ಯಕ್ತಿ. ಅದಕ್ಕೆ ಬಿಜೆಪಿ ಹೈಕಮಾಂಡ ಅವರಿಗೆ ಮಣೆಹಾಕಿದ್ದು. ಅವರನ್ನೇ ಮುಂದುವರೆಸಿದರೆ ಪಕ್ಷಕ್ಕೆ ಅನೂಕೂಲ ಅದನ್ನೇ ಎಲ್ಲರೂ ಹೇಳಿದ್ದಾರೆ.
Categories: Articles
