ಬೆಳಗಾವಿ ಲೋಕಸಭೆ ಟಿಕೆಟ್ ಅಂಗಡಿ ಕುಟುಂಬಕ್ಕೆ ಕೊಡಬೇಕಾ? ಕುಟುಂಬ ರಾಜಕಾರಣ ಎಂದರೇನು?
ದೇಶದ ಜನರು ಸತತವಾಗಿ ಎರಡು ಬಾರಿ ಲೋಕಸಭೆಗೆ ಒಂದೇ ಪಕ್ಷಕ್ಕೆ ಉದೋ ಎಂದು ವಿಶ್ವಮಟ್ಟದ ನಾಯಕನನ್ನು ತಮ್ಮ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಪ್ರಧಾನಮಂತ್ರಿ ಹೇಳುವ ಒಂದೊಂದು ಮಾತು ದೇಶದ ಜನರಿಗೆ ಕೊಡುವ ಸಂದೇಶ ಎಂದರೆ ತಪ್ಪಾಗಲಾರದು. ಇತ್ತೀಚಿಕೆ ಮೋದಿಯವರು ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನು ಹೇಗೆ ವ್ಯಾಖ್ಯಾನಿಸಬಹುದು? ಕುಟುಂಬ ರಾಜಕಾರಣ ಎಂದರೆ ರಾಜಕೀಯ ಹಿನ್ನೆಲೆಯಲ್ಲಿ ಹುಟ್ಟಿಬಂದ ಕುಡಿಗಳಿಗೆ ರಾಜಕೀಯದಿಂದ ಹೊರಗಿಡಬೇಕಾ? […]
