
MBBS MD,PGDCND,ACME
Assistant Professor
J N Medical College
Belagavi, Karnataka, India
ಡಿಸೆಂಬರ್ ೨೦೧೯, ಕರೋನಾ ಎಂಬ ವೈರಾಣು ಬೆಳಕಿಗೆ ಬಂತು. ಕರೋನಾ ವೈರಸ್ ಡಿಸೀಸ್ (ಕೋವಿಡ್-೧೯) ಎಂಬುದು ಒಂದು ಸಾಂಕ್ರಾಮಿಕ ರೋಗ . ಇದು ಸಾಮಾನ್ಯವಾಗಿ SARS -COV -2 novel ಕರೋನ ವೈರಸ್ ಯಿಂದ ಬರುತ್ತದೆ , ಆದರೆ ಈಗ ನಮ್ಮ ದೇಶದಲ್ಲಿ ಈ ವೈರಸ್ double (B.1.617) ಹಾಗು triple (B.1.618) mutate ಆಗಿದೆ , ಪುನಃ ಪ್ರತಿ mutant ಮತ್ತೆ E484Q ಹಾಗು L452R ಎಂಬ ಎರಡು mutant ಗಳನ್ನು ಪಡೆದಿವೆ . ಕೋವಿಡ್- ೧೯ ರೋಗ ಹೊಂದಿದವರು ಕನಿಷ್ಠ ಅಥವಾ ಮಾಧ್ಯಮ ಲಕ್ಷಣಗಳಿಂದ ಬಳಲುತ್ತಾರೆ ಮತ್ತು ಯಾವ ಸ್ಪೆಷಲ್ ಟ್ರೀಟ್ಮೆಂಟ್ ಇಲ್ಲದೆ ಸಂಪೂರ್ಣ ಗುಣಮುಖರಾಗುತ್ತಾರೆ. ವೃದ್ಧರು ಹಾಗು ಈಗಾಗಲೇ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನೂ ಹೊಂದಿದವರು ತೀವ್ರ ಪ್ರಮಾಣದ ಲಕ್ಷಣಗಳನ್ನು ಹೊಂದುತ್ತಾರೆ . ಜ್ವರ , ಕೆಮ್ಮು ಹಾಗು ಉಸಿರಾಟದಲ್ಲಿ ತೊಂದರೆ ಇದರ ಸಾಮಾನ್ಯ ಲಕ್ಷಣಗಳು. ಈ ಲಕ್ಷಣಗಳು ಕಂಡಲ್ಲಿ ಪರೀಕ್ಷೆಗೆ ಒಳಗಾಗ ಬೇಕು ಮತ್ತು ಬೇಕಾದ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು. ಶೇ ೮೦% ರಷ್ಟು ಅಥವಾ ಬಹುತೇಕರು ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ತಾವಾಗಿಯೇ ಗುಣಮುಖರಾಗುತ್ತಾರೆ ಮತ್ತು ಶೇ ೨೦% ರಷ್ಟು ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ೩-೫% ಜನರು ಮಾತ್ರ critical ಆಗುತ್ತಾರೆ. ಬಹುತೇಕ ಜನರಿಗೆ ಈ ರೋಗದ ಬಗ್ಗೆ ಅರಿವು ಇದೆ, ಆದಾಗಿಯೂ ಕೆಲವು ವಿಷಯಗಳ ಬಗ್ಗೆ ಸಂದೇಹ ವಿರುತ್ತದೆ. ಅಂತಹ ಕೆಲವು ಪ್ರಶ್ನೆಗಳಿಗೆ ನಾವು ಇಲ್ಲಿ ಉತ್ತರಗಳನ್ನು ಪಡೆಯೋಣ
೧. ನಾವು ಕೋವಿಡ್ -೧೯ ಪಾಸಿಟಿವ್ ಅಂತ ಗೊತ್ತಾದ ಮೇಲೆ ಮೊದಲು ಮಾಡಬೇಕಾದ ಕೆಲಸ ಯಾವುದು?
ಉ. ಮೊದಲು ನಮ್ಮನು ನಾವು ಬೇರ್ಪಡಿಸಬೇಕು ಮತ್ತು ಬೇರೇ ಕೋಣೆಯೆಲ್ಲಿ ವಾಸಮಾಡಬೇಕು.
೨. ನಾವು ಯಾವಾಗ RT – PCR test ಮಾಡಬೇಕು?
ಉ. ವೈದ್ಯರ ಸಲಹೆ ಪಡೆಯಿರಿ. ಯಾವುದನ್ನೂ ಅಲಕ್ಷಿಸಬೇಡಿ. ಜ್ವರ ಬಂದ ಮೊದಲ ಕೆಲವು ದಿವಸಗಳು ಪರೀಕ್ಷೆ ಮಾಡಿದರೆ ಪಾಸಿಟಿವ್ ಬರದೇ ಇರಬಹುದು(5 days). ಅದಕ್ಕಾಗಿ ನಿರಂತರವಾಗಿ ವೈದ್ಯರ ಜೊತೆ ಸಂಪರ್ಕ ಇರಲಿ.
೩. ನಾವು CT scan ಯಾವಾಗ ಮಾಡಬೇಕು?
ಉ. ವೈದ್ಯರು ಹೇಳುವವರೆಗೆ CT – Scan ಮಾಡುವ ಅವಶ್ಯಕತೆಯಿಲ್ಲ. ಒಂದು CT – Scan ೩೦೦ X -ray ಗಳಿಗೆ ಸಮಾನವಾಗಿದೆ , ಅದು ತುಂಬಾ ಹಾನಿಕಾರಕ ಆದರಿಂದ ವೈದ್ಯರು ಹೇಳಿದರೆ ಮಾತ್ರ ನಾವು ಅದನ್ನು ಮಾಡಿಸಬೇಕು .
೪. ನಾವು ಮನೆಯೆಲ್ಲಿ ಇರುವಾಗ ಯಾವುದರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು?
ಉ. ಪ್ರಥಮವಾಗಿ ನಾವು ಆಮ್ಲಜನಕ ಎಷ್ಟಿದೆ( oxygen saturation) ಮೇಲೇ ಗಮನ ಹರಿಸಬೇಕು . ಮೊದಲು ೫ ದಿನಗಳು ಲಕ್ಷಣಗಳು ಪ್ರತಿ ೬ ಗಂಟೆಗೊಮ್ಮೆ ಬದಲಾಗುವ ಸಾಧ್ಯತೆ ಇರುತ್ತದೆ ಅದರಿಂದ ನಾವು ನಮ್ಮ saturation ಅನ್ನು ಮೊನಿಟೆರ್ ಮಾಡಬೇಕು. Saturation ೯೪% ಕೆಳಗೆ ಹೋದರೆ ಕೂಡಲೇ ನಾವು ನಮ್ಮ ವೈದ್ಯೆರಿಗೆ ತಿಳಿಸಬೇಕು. ಇದರ ಜೊತೆಗೆ ನಮ್ಮ ಜ್ವರ ಎಷ್ಟಿದೆ ಎಂದು ಕೂಡಾ ಮೊನಿಟೆರ್ ಮಾಡಬೇಕು.
೫. ನಾವು ಯಾವಾಗ oxygen ತೆಗೆದುಕೊಳ್ಳಬೇಕು?
ಉ. Oxygen saturation ೯೪% ಕೆಳಗೆ ಹೋದರೆ ಮಾತ್ರ ನಾವು oxygen ತೆಗೆದುಕೊಳ್ಳಬೇಕು, ಇದರ ಬಗ್ಗೆ ಮುಖ್ಯವಾಗಿ ವೈದ್ಯರು ನಿಶ್ಚಯ ಮಾಡುತ್ತಾರೆ.
೬. Vitamins, Zinc, Steam inhalation ನಮಗೆ ಕೋವಿಡ್ ಯಿಂದ ನಿವಾರಣೆ ಕೊಡುತ್ತವೆಯೇ?
ಉ. ಇಲ್ಲ, ಅವು ನಮ್ಮ ಇಮ್ಮ್ಯೂನಿಟಿ ಹೆಚ್ಚಿಸುತ್ತವೆ . ಬಿಸಿ ಉಗೆ(Steam inhalation) ಯಿಂದ ನಿಮಗೆ ರಿಲೀಫ್ ಸಿಕ್ಕರೆ ಅದನ್ನು ತೆಗೆದುಕೊಳ್ಳಬಹುದು ಆದರೆ ಅದರಿಂದ ಕಾಯಿಲೆ ನಿವಾರಣೆ ಆಗುವುದಿಲ್ಲ.
೭. ಯಾವ Blood ಟೆಸ್ಟ್ಗಳು ಮಾಡುತ್ತಾರೆ?
ಉ. CRP, D – Dimer, IL -೬, Serum ferritin, LDH, TLC, Platelet ಮುಂತಾದ ಟೆಸ್ಟ್ಸ್ ಮಾಡುತ್ತಾರೆ . ಮೊದಲು ನಾಲ್ಕು ಮಾರ್ಕೇರ್ಸ್ ಹೆಚ್ಚಾಗಿರುತ್ತವೆ. ಈ ಟೆಸ್ಟ್ ಗಳು ನಮಗೆ prognosis ಗೆ ಸಹಾಯ ವಾಗುತ್ತವೆ . ಇವುಗಳನ್ನು ಪದೇ ಪದೇ ಮಾಡುವ ಅವಶ್ಯಕತೆ ಇಲ್ಲ, ವೈದ್ಯರು ಹೇಳಿದರೆ ಮಾತ್ರ ಮಾಡಿಸಬೇಕು .
೮. ಯಾವ ಔಷದಿಗಳು ನಮಗೆ ಸಹಾಯ ಮಾಡುತ್ತವೆ ?
ಉ. ಜ್ವರ ಇದ್ದರೆ paracetamol ಮತ್ತು ಕೋವಿಡ್ ಖಚಿತವಾಗಿ saturation ೯೪% ಕೆಳಗೆ ಹೋದಲ್ಲಿ oxygen, steroids, anticoagulants, remesdevir (೭-೧೦) ಮತ್ತು Tocilizumab ಔಷಧಿಗಳು ಸಹಾಯಕೆಬರುತ್ತವೆ . Mild disease ಈ ಔಷಧಿಗಳು ಬೇಕಿಲ್ಲ, moderate illness ಇದಲ್ಲಿ ಇವುಗಳು ಸಹಾಯಕ್ಕೆ ಬರುತ್ತವೆ ಮತ್ತು ಕೊನೇಯ ಎರಡು ಔಷಧಿಗಳನ್ನು severe disease ಇದ್ದರೆ ಮಾತ್ರ ಕೊಡುತ್ತಾರೆ . ಇದರ ಜವಾಬ್ದಾರಿ ಯನ್ನು ವೈದ್ಯರಿಗೆ ಬಿಡಬೇಕು ಸ್ವತಃ ಯಾವುದೇ ಡಿಸಿಷನ್ ತೆಗೆದುಕೊಳ್ಳಬಾರದು.
೯. Repeat RT -PCR ಯಾವಾಗ ಮಾಡಬೇಕು?
ಉ. ರಿಪೀಟ್ RT -PCR ಮಾಡುವ ಅವಶ್ಯಕತೆ ಇಲ್ಲ. ೮ ದಿನಗಳ ಬಳಿಕ ವೈರಸ್ ಅನ್ನು ಮನುಷ್ಯನ ಗಂಟಲಿನಿಂದ culture ಮಾಡಲು ಸಾಧ್ಯವಿಲ್ಲ. RT – PCR ಟೆಸ್ಟ್ dead ವೈರಸ್ ಅನ್ನು ಕೂಡಾ detect ಮಾಡುತ್ತೆ ಮತ್ತು ಅದು positive ಬರುತ್ತೆ ಅದಕ್ಕೆ repeat ಮಾಡುವ ಅವಷ್ಯಕತೆ ಇಲ್ಲ
೧೦. ಎಷ್ಟು ದಿನ quarantine ಅಲ್ಲಿ ಇರಬೇಕು?
ಉ. Mild disease ಇರುವವರಲ್ಲಿ ಜ್ವರ ಕಡಿಮೆ ಆದಲ್ಲಿ ೧೦ ದಿನಗಳ ಬಳಿಕ quarantine ಯಿಂದ ಹೊರಗೆ ಬರಬಹುದು . Hospitalized patients (Moderate illness) ೧೪ ದಿನಗಳ ಬಳಿಕ quarantine ಯಿಂದ ಹೊರಗೆ ಬರಬಹುದು ಮತ್ತು severe illness (Ventilated) ಇದ್ದಲಿ ೨೦ ದಿನಗಳ ಬಳಿಕ quarantine ಯಿಂದ ಹೊರಗೆ ಬರಬಹುದು . Repeat PCR ಮಾಡುವ ಅವಶ್ಯಕೆತೆ ಇಲ್ಲ .
೧೧. ಕೆಲವು ಜನರಿಗೆ ಲಕ್ಷಣಗಳು ಬಹಳ ದಿನಗಳವರೆಗೆ ಕಡಿಮೆ ಆಗುವುದಿಲ್ಲ?
ಉ. ಹೌದು ಅಂಥವರಿಗೆ ಬಹಳ ದಿನ ಲಕ್ಷಣಗಳು ಇರುವವರು(Long haulers) ಎಂದು ಕರೆಯುತ್ತಾರೆ , ಅಂತವರಲ್ಲಿ test negative ಅದಮೇಲೂ ಲಕ್ಷಣಗಳು ೬ – ೧೨ ವಾರಗಳ ವರೆಗೆ ಇರುತ್ತವೆ ಆದರೆ ಅವು ಅವಶ್ಯವಾಗಿ ಕಡಿಮೆಯಾಗುತ್ತವೆ . ಹೆದರುವುದು ಬೇಡಾ.
೧೨. ನಾವು vaccine ತೆಗೆದುಕೊಳ್ಳಲೇಬೇಕಾ?
ಉ. ಹೌದು ವ್ಯಾಕ್ಸಿನ ತಗೆದುಕೊಳ್ಳಲೇಬೇಕು. ಸ್ವಾಭಾವಿಕ ರೋಗ ನಿರೋಧಕ ಶಕ್ತಿ( Natural immunity) ಮತ್ತು ಸಮಾಜದಲ್ಲಿ ಜಾಸ್ತಿ ಜನಕ್ಕೆ ರೋಗ (Herd immunity) ಬರಬೇಕು ಅಂದರೆ ಇಂತಹ ೩-೫ wave ಗಳು ಬಂದು ಹೋಗಬೇಕು ಆದರೆ ಅದು ತುಂಬಾ ಹಾನಿಕಾರಕ ಆದ್ದರಿಂದ ನಾವು acquired immunity vaccine ಮೂಲಕ ತರಬೇಕು.
೧೩. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಿಯೆಂದರು ವ್ಯಾಕ್ಸೀನ್ ತೆಗೆದುಕೊಳ್ಳಬಹುದೇ?
ಉ. ಹೀಗಿದ್ದಲ್ಲಿ ನಿಮ್ಮ ವೈದರಲ್ಲಿ ಕೇಳಿ ಸಲಹೆ ಪಡೆಯಬೇಕು . ವ್ಯಾಕ್ಸಿನ ತೆಗೆದುಕೊಂಡಲ್ಲಿ ನಿಮಗೆ ಪರಿಣಾಮಗಳು ಕಡಿಮೆ ಯಾಗುತ್ತವೆ . ಸದ್ಯದ ಪರಿಸ್ಥಿತಿಯೆಲ್ಲಿ ಯಾವುದೇ vaccine ಗೆ ಮಾನ್ಯತೆ ಸಿಕ್ಕಿಲ್ಲ .
೧೪. ಎರಡೂ ವ್ಯಾಕ್ಸಿನೇಷನ್ ಡೋಸ್ ಪಡೆದುಕೊಳ್ಳಲೇಬೇಕಾ?
ಉ. ಹೌದು. ನಾವು ಎರಡೂ ಡೋಸ್ ಗಳನ್ನು ತೆಗೆದುಕೊಳ್ಳಲೇಬೇಕು . ಮೊದಲನೇಯ ಡೋಸ್ ನಿಂದ ನಮ್ಮ immune response ಕಡಿಮೆಯಾಗುತ್ತದೆ ಮತ್ತು ಎರಡನೇಯ dose ತೆಗೆದುಕೊಂಡಲ್ಲಿ ಅದು ಉತ್ತೇಜಿಸುತ್ತದೆ . ಹಾಗಾಗಿ ನಾವು ಎರಡೂ ಡೋಸ್ಗಳನ್ನು ತೆಗೆದುಕೊಳ್ಳಲೇಬೇಕು . ಬೇರೆ ಬೇರೆ vaccine ಗಳ ಮಧ್ಯೆ ಅಂತರ ಬೇರೆ ಬೇರೆ ಇರಬಹುದು, ಆ ಪ್ರಕಾರವಾಗಿ ಅವುಗಳನ್ನು ತೆಗೆದುಕೊಳ್ಳಬೇಕು . Covishield vaccine ನ್ ಡೋಸಗಳ ಅಂತರ ೬ – ೧೨ ವಾರಗಳು ಇರಬೇಕು .
೧೫. ನಮಗೆ ವ್ಯಾಕ್ಸಿನಯಿಂದ ಕೋವಿಡ್ ಬರುತ್ತಾ?
ಉ. ಇಲ್ಲಾ, ವ್ಯಾಕ್ಸಿನಯಿಂದ ಕೋವಿಡ್ ಬರುವುದಿಲ್ಲ . ವ್ಯಾಕ್ಸಿನಯಿಂದ ನಮ್ಮ immune response stimulate ಆಗುತ್ತೆ ಆದರೆ ವೈರಸ್ ಬರಲ್ಲ
೧೬. ನಮಗೆ ಮೊದಲೆನೆಯ ಡೋಸ್ ಆದಮೇಲೆ ಕೋವಿಡ್ ಬಂದರೆ ನಾವು ಎರಡನೇಯ ಡೋಸ್ ಯಾವಾಗ ತೆಗೆದುಕೊಳ್ಳಬೇಕು?
ಉ. ೪-೮ ವಾರಗಳು ಆದಮೇಲೆ ಎರಡೆನೆಯ ಡೋಸ್ ತೆಗೆದುಕೊಳ್ಳಬೇಕು
೧೭. ವ್ಯಾಕ್ಸೀನ್ ಯಿಂದ ನಮಗೆ ಏನು ಲಾಭ?
ಉ. ವ್ಯಾಕ್ಸೀನ್ ತೆಗೆದುಕೊಂಡಲ್ಲಿ ರೋಗದ ತೀವ್ರತೆಯನ್ನು ಹಾಗೂ ಸಾವನ್ನು ತಡೆಗಟ್ಟಬಹುದು.
೧೮. ಮಹಿಳೆ ಮುಟ್ಟಿನ ಸಂದರ್ಭದಲ್ಲಿ (ಪಿರೇಡ್ಸ್/menstruation ) ವ್ಯಾಕ್ಸಿನ ತಗೆದುಕೊಳ್ಳಬಹುದಾ?
ಉ. ಅವಶ್ಯವಾಗಿ ತೆಗೆದುಕೊಳ್ಳಬಹುದು .
೧೯. ವೈರಸ್ ಗಾಳಿಯ ಲ್ಲಿ ಹರಡುತ್ತಾ?
ಉ. ವೈರಸ್ droplets ಗಳಿಂದ ಹರಡುತ್ತೆ ಆದರೆ ಸಣ್ಣ droplets ಗಳು ಒಡೆದು ವೈರಸ್ ಗಾಳಿಯೆಲ್ಲಿ ತೇಲಾಡಬಹುದು ಆದರಿಂದ ನಾವು ಒಳ್ಳೆಯ ವಾತಾವರಣದಲ್ಲಿ ಇರಬೇಕು. ಗಾಳಿ ಚನ್ನಾಗಿ ಇರಬೇಕು.
೨೦. ನಾವು ಮಾಸ್ಕನ್ನು ಮನೆಯೆಲ್ಲಿ ಹಾಕಬೇಕಾ?
ಉ. ಮನೆಯೆಲ್ಲಿ ಮಾಸ್ಕ ಹಾಕಿಕೊಳ್ಳುವುದು ತುಂಬಾ ಕಷ್ಟ, ನಾವು ಕೋವಿಡ್ ಯಿಂದ ಬಳಲುತ್ತಿದ್ದರೆ ಮಾತ್ರ ಮನೆಯೆಲ್ಲಿ ಮಾಸ್ಕ ಹಾಕಿಕೊಳ್ಳಬೇಕು.
೨೧ . ನಾವು ಯಾವ vaccine ತೆಗೆದುಕೊಳ್ಳಬೇಕು?
ಉ. ಕೊವಾಕ್ಸಿನ , ಕೋವಿಶಿಲ್ಡ್ , ಸ್ಪುಟ್ನಿಕ್ ಇದರಲ್ಲಿ ಯಾವದಾದರೂ ತಗೆದುಕೊಳ್ಳಬಹುದು.
೨೨ . Immunosuppressants ಮೇಲೆ ಇರುವ ಜನರು vaccine ತೆಗೆದುಕೊಳ್ಳಬಹುದಾ?
ಉ ಅವಶ್ಯವಾಗಿ ತೆಗೆದುಕೊಳ್ಳಬಹುದು
೨೩ . ನಾವು ಕೆಲಸದವರನ್ನು ಮಾನೆಯೆಲ್ಲಿ ಮನೆಗೆ ಕರೆಸಿಕೊಳ್ಳಬಹುದೇ?
ಉ. ಅವಶ್ಯಕವಾಗಿ ಕರಿಯಬೇಕು ಆದರೆ ಮಾಸ್ಕ ಹಾಕಿಕೊಳ್ಳಲು ಹೇಳಬೇಕು ಮತ್ತು ಆದಷ್ಟು ಅವರ ಹತ್ತಿರ ಇರಬಾರದು . ಅವರಿಗೆ ಕೋವಿಡ್ ಬಗ್ಗೆ ಅರಿವಳಿಕೆ ಕೊಟ್ಟು ಯಾವುದಾದರು symptom ಬಂದರೆ ತಪ್ಪದೆ ಹೇಳಲು ತಿಳಿಸಬೇಕು
೨೪ . ಅವಶ್ಯಕ ಸಲಹೆಗಳು ಯಾವುವು?
ಉ. ಮನೆಯ ಊಟ ಮಾಡಿ. ಸಕಾರಾತ್ಮಕ ವರ್ತನೆ(Positive attitude) ಮತ್ತು ಸಾಮಾಜಿಕ ಅಂತರ.
೨೫. ನಾವು ಏನು ಮಾಡಬಾರದು?
ಉ. ಫೇಸಬುಕ್,ವಾಟ್ಸಪ ದಲ್ಲಿ ಬಂದ ಸಂದೇಶಗಳು ಸರಿಯಾಗಿ ತಿಳಿದು ಅದರ ಮೂಲವನ್ನು ಖಚಿತಗೊಂಡ ಮೇಲೆ forward ಮಾಡಬೇಕು . Social media ಮತ್ತು TV ಸುದ್ದಿಯನ್ನು ಪದೇ ಪದೇ ನೋಡಿ ಭಯಬೀಳುವುದು ಬಿಡಬೇಕು .
Amazon Ads OXYGEN CONCENTRATOR
Thanks to Dr V Ramasubramanian (MD, FRCP(GLAS),DTM & H(LON),DGUM(LON), infectious disease specialist at Apollo hospital, Chennai.
Categories: Articles

Super
LikeLiked by 1 person