
೨ ಸಾವಿರಿಂದ ೨೦ ಸಾವಿರ ಬೆಡ್ ವ್ಯವಸ್ಥೆ ಮಾಡಿದ ಮುಖ್ಯಮಂತ್ರಿ.
ಕರೋನ ಖಂಡಿತ ಜನರ ಜೀವವನ್ನೇ ಹಿಂಡುತ್ತಿದೆ. ಎಲ್ಲಿ ಕೇಳಿದರೂ ಆಕ್ಸಿಜನ್ ಇಲ್ಲ, ರೆಮೆಡಿಸಿವಿರ್ ಇಲ್ಲ , ಬೆಡ್ ಇಲ್ಲ. ಬೆಡ್ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದರೆ ಇಂಜೆಕ್ಷನ್ ಮತ್ತು ಆಕ್ಸಿಜನ್ ಕೇಂದ್ರ ಸರ್ಕಾರದ ಅಧೀನದಲ್ಲಿ ಇವೆ. ಯಾವುದು ಸರಿಯಾದ ವೇಳೆಗೆ ಸಿಗದೇ ಜನರ ಪರದಾಟ ಹೇಳತೀರದು.ನೀವೇ ಹೇಳಿದ ಹಾಗೆ ಮಾನ್ಯ ಮುಖ್ಯಮಂತ್ರಿಯವರು ರಾಜ್ಯದಲ್ಲಿ ಇದ್ದ ೨ ಸಾವಿರ ಆಕ್ಸಿಜನ್ ಬೆಡ್ ಗಳಿಂದ ೨೦ ಸಾವಿರ ಬೆಡ್ ಹೆಚ್ಚಿಗೆ ಮಾಡಿದ್ದಾರೆ. ಕಳೆದ ಹತ್ತು ದಿನಗಳನ್ನು ರಾಜ್ಯದಲ್ಲಿ ಮರಣ ಮೃದುಂಗ ನಡಿಯುತ್ತಿದೆ. ಆದರೆ ೨೦ ಸಾವಿರ ಬೆಡ್ ಯಾಕೆ ಜನರಿಗೆ ಸಿಗುತ್ತಿಲ್ಲ ಎಂದು ಕಂಡು ಹಿಡಿಯುದಕ್ಕೆ ಇಷ್ಟೊಂದು ಸಮಯ ಬೇಕಿತ್ತಾ? ಅದು ನಿಮ್ಮ ಕ್ಷೇತ್ರದಲ್ಲೇ ಎಗ್ಗಿಲ್ಲದೆ ನಡೆಯುತ್ತಿತ್ತು . ನೀವು ಜನಪ್ರತಿನಿಧಿಗಳು ಇವೆಲ್ಲವನ್ನೂ ಮೊದಲೇ ಕಂಡು ಹಿಡಿದು ಅಧಿಕಾರಿಗಳಿಗೆ ನಿಯತ್ತಾಗಿ ಕೆಲಸ ಮಾಡಲು ಒತ್ತಡ ಹಾಕುವ ಎಲ್ಲ ಅಧಿಕಾರ ನಿಮ್ಮಲ್ಲಿತ್ತು. ಮುಖ್ಯಮಂತ್ರಿಗಳು ಅತ್ಯಂತ ಶರವೇಗದಲ್ಲಿ ಕೆಲಸ ಮಾಡುತ್ತಾ ನಿಮ್ಮಲ್ಲೆರನ್ನು ಕೆಲಸ ಮಾಡಿ ಎಂದು ಹುರುದುಂಬಿಸಿದರು. ಆದರೂ ಸರಿಯಾದ ವೇಳೆಯಲ್ಲಿ ಜನರಿಗೆ ಬೆಡ್ ಸಿಗದ ಹಾಗೆ ಮಾಡಿದ ಕರಾಳ ದಂದೆಯನ್ನು ಬಯಲಿಗೆಳೆದಿದ್ದು ಸಂತೋಷ ಮತ್ತು ಜನಪರ ಕೆಲಸ. ತಡವಾದರೂ ಲೋಪಗಳನ್ನು ಸರಿ ಮಾಡಿದ್ದು ತುಂಬಾ ಒಳ್ಳೆಯ ಕೆಲಸ. ಇವಾಗ ಜನರಿಗೆ ಬೆಡ್ ಸಿಕ್ಕರೆ ಪುಣ್ಯ ನಿಮಗೂ ಖಂಡಿತ ಬರುತ್ತೆ.
ಮುಖ್ಯ ಕಾರ್ಯದರ್ಶಿ ಮಾತು! ಕೇಂದ್ರ ನಮ್ಮ ಆಕ್ಸಿಜನ್ ನಮಗೆ ಕೊಡದೆ ಹೋದರೆ ! ಪರಸ್ಥಿತಿ ಹದೆಗೆಡುತ್ತದೆ.
Amazon ads OXYGEN CONCENTRATOR
ಸದ್ಯದ ಮತ್ತೊಂದು ಮುಖ್ಯವಾದ ವಿಷಯ ನಮ್ಮ ರಾಜ್ಯದಲ್ಲಿ ಮೂಲೆ ಮೂಲೆಗಳಲ್ಲಿ ಆಕ್ಸಿಜನ್ ಇಲ್ಲದೆ ಜನ ಮರಣ ಹೊಂದುತ್ತಿದ್ದಾರೆ. ಆಕ್ಸಿಜನ್ ಪೂರೈಕೆ ಕೇಂದ್ರದ ಅಧೀನದಲ್ಲಿ ಇದೆ. ಅದಕ್ಕೆ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಸದ್ಯದ ಪರಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ಉತ್ಪಾಧನೆ ಆಗುತ್ತಿರುವ ಆಕ್ಸಿಜನ್ ನಮ್ಮ ರಾಜ್ಯಕ್ಕೆ ಕೊಟ್ಟರೆ ನಮ್ಮ ಪರಸ್ಥಿತಿ ವಿಕೋಪಕ್ಕೆ ಹೋಗವದಿಲ್ಲ. ಇಲ್ಲವಾದರೆ ಖಂಡಿತ ನಮಗೆ ಮತ್ತೆ ಹೆಣಗಳ ರಾಶಿ ನೋಡುವ ಸಮಯ ಬಂದೆ ಬರುತ್ತದೆ. ಕೇಂದ್ರ ಇದನ್ನು ಗಣನೆಗೆ ತಗೆದುಕೊಂಡು ನಮ್ಮ ರಾಜ್ಯದ ಸ್ಥಿತಿಗೆ ಸ್ಪಂದನೆ ಮಾಡಬೇಕು ತಾನೇ?
ಸದ್ಯ ನೀವು ದಯವಿಟ್ಟು ಎಲ್ಲ ಆಸ್ಪತ್ರೆಗಳಿಗೆ ಭೇಟಿ ಕೊಡಿ ಮತ್ತು ಎಷ್ಟು ಆಕ್ಸಿಜನ್ ಅಭಾವ ನಿಮ್ಮ ಕ್ಷೇತ್ರದಲ್ಲಿ ಇದೆ ಎಂದು ಮಾಹಿತಿ ಕಲೆಹಾಕಿ ದಯವಿಟ್ಟು ಇದನ್ನು ಮೀಡಿಯಾ ಮುಂದೆ ಪತ್ರಿಕಾಗೋಷ್ಠಿ ಕರೆದು ಎಲವನ್ನು ಬಿಡಿ ಬಿಡಿಯಾಗಿ ಜನರಿಗೆ ತಲುಪಿಸಬೇಕು. ಕಾರಣ ನಮ್ಮ ರಾಜ್ಯದಲ್ಲಿ ಆಕ್ಸಿಜನ್ ಇಲ್ಲದೆ ಜನ ಸಾಯುತ್ತಿದ್ದಾರೆ. ನಮ್ಮಲ್ಲೇ ಉತ್ಪಾಧನೆ ಇದ್ದರೂ ನಾವು ಎಲ್ಲವನ್ನು ನಾವೇ ಉಪಯೋಗಿಸುವ ಹಾಗಿಲ್ಲ. ಇದು ಕೇಂದ್ರದ ನಿಯಮ. ಇದಕ್ಕೆ ನಮ್ಮ ರಾಜ್ಯದ ಎಲ್ಲ ಸಂಸದರು ಕೇಂದ್ರಕ್ಕೆ ಕೇಳಬೇಕು ತಾನೇ? ಇದು ಯಾವ ಸೀಮೆಯ ನಿಯಮ? ಹೈ ಕೋರ್ಟ್ ಇದರ ವಿಷಯವಾಗಿ ಕೇಂದ್ರಕ್ಕೆ ಸರಿಯಾದ ಬಿಸಿಯನ್ನೇ ಮುಟ್ಟಿಸಿದೆ.
ಪ್ರಧಾನಿಗಳಿಗೆ ಮಾಹಿತಿ ಕೊಡಿ. ನಮ್ಮ ಜನಕ್ಕೆ ಔಷದಿ ಇಲ್ಲ!
ಮತ್ತೊಂದು ರೆಮೆಡಿಸಿವಿರ್ ಇದು ಕೇಂದ್ರದ ಅಧೀನದಲ್ಲೇ ಇದೆ. ಕೇಂದ್ರ ಕೊಟ್ಟಾಗ ಮಾತ್ರ ನಾವು ತಗೆದುಕೊಳ್ಳಬಹುದು. ಇದು ನಮ್ಮ ರಾಜ್ಯದಲ್ಲೇ ತಾಯಾರಾಗುತ್ತಿದೆ. ಆದರೂ ನೆರೆವಾಗಿ ಎಲ್ಲವನ್ನು ನಾವೇ ತೆಗೆದುಕೊಳ್ಳುವ ಹಾಗಿಲ್ಲ. ಇದರ ಕೊರೆತೆಯಿಂದ ಅನೇಕ ಜನರ ಜೀವವೇ ಹೋಗುತ್ತಿದೆ. ನಿಮಗೆ ಗೊತ್ತಿರಬೇಕು ಕಲಬುರ್ಗಿ ಸಂಸದ ಉಮೇಶ್ ಜಾಧವ ತಮ್ಮ ಕ್ಷೇತ್ರದಲ್ಲಿ ಅಭಾವ ಇದೆ ಆದರೂ ಎಷ್ಟು ನಮಗೆ ಸಿಕ್ಕಿದೆ ಅಷ್ಟಾದರೂ ಬೇಗ ಜನರಿಗೆ ತಲುಪಿಸಬೇಕು ಎಂದು ತಾವೇ ಸ್ವತಃ ಖುದ್ದಾಗಿ ಪ್ರಯಾಣಿಸಿ ಜನರಿಗೆ ಕೊಟ್ಟರು. ಅವರೇನು ಪತ್ರಿಕಾಗೋಷ್ಠಿ ಕರೆದು ಮೀಡಿಯಾ ಮುಂದೆ ಹೇಳಲಿಲ್ಲ. ಎಲ್ಲವನ್ನು ತಾವೇ ಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಕಾರಣ ಸರ್ಕಾರ ನಿಮ್ಮದೇ ಅಲ್ವೇ? ಮುಖ್ಯಮಂತ್ರಿ ರಾಜ್ಯದಲ್ಲಿ ಬೇಕಾಗಿರುವ ಸೌಕರ್ಯಗಳನ್ನು ಒದಗಿಸುತ್ತಿರುವಾಗ ನಿಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ದಂದೆಗೆ ನೀವೇ ಹೊಣೆಗಾರರಲ್ಲವೇ? ಅಲ್ಲಿನ ಶಾಸಕರು ಏನು ಮಾಡುತ್ತಿದ್ದಾರೆ?
ದಯವಿಟ್ಟು ನಿಮ್ಮ ಜನಪರ ಕಾರ್ಯಕ್ಕೆ ಧನ್ಯವಾದಗಳು. ಬೆಡ್ ಸಿಕ್ಕರೆ ಆಕ್ಸಿಜನ್ ಮತ್ತು ರೆಮಿಡಿಸಿವೆರ್ ಇಲ್ಲದೆ ಹೋದರೆ ಜನರಿಗೆ ಯಾವದೇ ಅನುಕೂಲವಾಗುವದಿಲ್ಲ ಅದಕ್ಕೆ ದಯವಿಟ್ಟು ಎಲ್ಲ ನಿಮ್ಮ ಕ್ಷೇತ್ರದ ಆಸ್ಪತ್ರೆಗೆ ಭೇಟಿಕೊಟ್ಟು ಅಭಾವ ಇರುವ ಮಾಹಿತಿ ತೆಗೆದುಕೊಂಡು ಪ್ರಧಾನಮಂತ್ರಿಗಳಿಗೆ ಕಂಪ್ಲೇಂಟ್ ಕೊಟ್ಟು ಒಂದು ಪತ್ರಿಕಾಗೋಷ್ಠಿ ದಯವಿಟ್ಟು ಕರೆದು ಜನರಿಗೆ ಹೇಳಿ ಕೇಂದ್ರ ಸರ್ಕಾರ ನಮ್ಮ ರಾಜ್ಯದಲ್ಲಿ ಉತ್ಪಾಧನೆ ಆಗುತ್ತಿರುವ ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಎಲ್ಲವನ್ನು ನಮ್ಮ ರಾಜ್ಯಕ್ಕೆ ಬಳಕೆಗೆ ಅನುಮತಿ ಯಾಕೆ ಕೊಡುತ್ತಿಲ್ಲ ಎಂದು ತಿಳಿಸಿ. ನಮಗೆ ಕಡಿಮೆ ಬೀಳುವ ಇಂತಹ ಸನ್ನಿವೇಶದಲ್ಲಿ ಬೇರೆಯರಿಗೆ ಕೊಟ್ಟರೆ ಹೇಗೆ?. ಇಲ್ಲವಾದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಎಲ್ಲ ಕ್ಷೇತ್ರದಲ್ಲಿ ಮಾಹಿತಿ ಪಡೆದುಕೊಂಡು ಜನರಿಗೆ ತಿಳಿಸಿ. ಪ್ರಧಾನಮಂತ್ರಿಯವರು ಒಳ್ಳೆಯ ಕೆಲಸವೇ ಮಾಡುತ್ತಿದ್ದಾರೆ ಅವರೇನು ಮಲತಾಯಿ ದೋರಣೆ ಮಾಡುವದಿಲ್ಲ. ಆದರೆ ಕೆಳಗಿನ ಅಧಿಕಾರಿಗಳು ತಮಗೆ ಬೇಕಾದ ರಾಜ್ಯಕ್ಕೆ ನಮ್ಮ ರಾಜ್ಯದನ್ನು ತಗೆದುಕೊಂಡು ಕೊಡುತ್ತಿದ್ದರೇ? ಅದಕ್ಕಾಗಿ ವಸ್ತುಸ್ಥಿತಿ ಪ್ರಧಾನಿಗಳಿಗೆ ಮುಟ್ಟಿಸಿ.
ಒಗ್ಗಟ್ಟು ತೋರಿಸಿ
ಮತ್ತೊಮ್ಮೆ ೨೫ ಜನ ಸಂಸದರಲ್ಲಿ ಒಂದೇ ಮನವಿ, ಎಲ್ಲ ಸಂಸದರು ಕೇಂದ್ರಕ್ಕೆ ನಮ್ಮಲ್ಲಿ ಸಾಯುತ್ತಿರುವ ಸಂಖ್ಯೆ ಕೊಟ್ಟು ಆಕ್ಸಿಜನ್ ಮತ್ತು ರೆಮೆಡಿಸಿವಿರ್ ರಾಜ್ಯದ ಜನರಿಗೆ ಕೊಡಿಸಿ ನಮ್ಮ ಜನರ ಪ್ರಾಣ ಉಳಿಸಿ. ಅದು ಮುಖ್ಯ ಅಲ್ಲವೇ? ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದವರೂ ಸಹಿತ ರಾಜಕೀಯ ಬೆರೆಸದೆ ಜನರ ಪ್ರಾಣ ಉಳಿಸುವದಕ್ಕೆ ಪ್ರಾಮುಖ್ಯತೆ ಕೊಡಲಿ.
Categories: news
