Articles

ನಾವೇನು(ಜನರು) ಮಾಡಬೇಕು , ಸರ್ಕಾರ ಏನು ಮಾಡಬೇಕು? ಕುಮಾರಸ್ವಾಮಿ ಕೊಟ್ಟ ಸಲಹೆಗಳೇನು?

ಒಂದೆನೆಯ ಅಲೆ ನಮ್ಮ ದೇಶಕ್ಕ ಇಡೀ ಜಗತ್ತು ಎಚ್ಚರಿಕೆ ಸಂದೇಶ ಕೊಟ್ಟಿತ್ತು. ನಿಮ್ಮಲ್ಲಿ ಜನಸಾಂದ್ರತೆ ಹೆಚ್ಚಿಗೆ ಇದೆ. ರೋಗ ಉಲ್ಬಣ ಆದರೆ ಹತೋಟಿಗೆ ತರುವುದು ಕಷ್ಟದ ಕೆಲಸ. ಪೂರ್ವ ತಯಾರಿ ಮಾಡಿಕೊಳ್ಳಿ ಎಂದು ದೇಶದ ತಜ್ಞರು ಮತ್ತು ಹೊರದೇಶದ ತಜ್ಞರು ಎಚ್ಚರಿಗೆ ಕೊಟ್ಟಿದ್ದರು.

ಒಂದು ದಿವಸ ಜನತಾ ದಿಗ್ಬಂದನ ಮತ್ತು ೨೧ ದಿವಸ ಲಾಕ್ಡೌನ್ ಮಾಡಿ ಕರೋನ ಎದುರಿಸಲು ಏನು ಬೇಕಾಗಿದೆ ಎಲ್ಲವನ್ನು ದೇಶದಲ್ಲೇ ಕೊರೆತೆ ಆಗದ ಹಾಗೆ ಸಿದ್ಧತೆ ಮಾಡಿಕೊಂಡರು. ಸಾವು ನೋವು ಸಂಭವಿಸಿದವು ಆದರೆ ಪರಸ್ಥಿತಿ ಹತೋಟಿಯಲ್ಲಿತ್ತು.

ಲಾಕ್ಡೌನ್ ಆದ ನಂತರ ರೋಗ ಉಲ್ಬಣ ಆಯಿತು. ವಿರೋಧ ಪಕ್ಷಗಳು ಲಾಕ್ಡೌನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇವಾಗ ರೋಗ ಉಲ್ಬಣವಾಗಿದೆ ಲಾಕ್ಡೌನ್ ತಪ್ಪು ನಿರ್ಧಾರ ಎಂದರು. ಅದಕ್ಕೆ ಜನರು ಧ್ವನಿ ಗುಡಿಸಿದರು.

ಮನೆಯಲ್ಲಿ ೨೧ ದಿವಸ ಇರಬೇಕು. ಹೊರಗಡೆ ಮರಣ ಮೃದಂಗ ಇವೆಲ್ಲ ಕೇಳಿ ಕೇಳಿ ಜನರ ಮಾನಸಿಕ ಸ್ಥಿತಿ ಅಯೋಮಯವಾಗಿತ್ತು. ಇದೆಲ್ಲವನ್ನು ಗಮನಿಸಿ ದೀಪ ಹಚ್ಚಿರಿ, ಮನೆಯ ಮೇಲಿನಿಂದ ನಿಂತು ಸದ್ದು ಮಾಡಿ ಎಂದು ಮೋದಿ ಕರೆಕೊಟ್ಟರು. ಅದೆಲ್ಲವೂ ಜನರಿಗೆ ಕೊಟ್ಟ ಸಂದೇಶ ನಿಮ್ಮ ಜೊತೆ ಇದ್ದೇವೆ ಎನ್ನುವುದಾಗಿತ್ತು!

ಆದರೆ ವಿರೋಧಿಗಳು ಅವಮಾನಕರ ರೀತಿ ಆಡಿಕೊಂಡರು. ಕೇವಲ ವಿರೋಧ ಮಾಡುವ ಮನಸ್ಸಿತ್ತೆ ಹೊರೆತು ಜನರಿಗೆ ಸಹಾಯ ಮಾಡುವ ಮನಸ್ಥಿತಿ ಇರಲಿಲ್ಲ.

ಯಾವದೋ ಒಂದು ರೀತಿಯಲ್ಲಿ ಒಂದನೆಯ ಅಲೆ ಭಾರತೀಯರಲ್ಲಿ ಮಾಡಿದ ಪರಿಣಾಮ ಅಷ್ಟೊಂದು ಬಿಕರವಾಗಿರಲಿಲ್ಲ. ತೀವ್ರತೆ ಇತ್ತು ಆದರೆ ಬೇಗ ಹತೋಟಿಗೆ ಬಂದಿತ್ತು. ವಾಕ್ಸಿನೇಷನ್ ಭಾರತೀಯರಿಗೆ ಕೊಡಬೇಕು ಎಂದು ಅತ್ಯಂತ ಶರವೇಗದಲ್ಲಿ ಎರಡು ವಾಕ್ಸಿನೇಷನ್ ಭಾರತೀಯರಿಗೆ ಕೊಟ್ಟರು.

ವಾಕ್ಸಿನೇಷನ್ ಬಿಜೆಪಿ ವಾಕ್ಸಿನೇಷನ್ ಎಂದು ಜರಿದು ಎಷ್ಟೋ ವಿರೋಧ ಪಕ್ಷಗಳ ನಾಯಕರು ಇಂದು ಕದ್ದು ಮುಚ್ಚಿ ವಾಕ್ಸಿನೇಷನ ಹಾಕಿಕೊಳ್ಳುತ್ತಿದ್ದಾರೆ. ವಾಕ್ಸಿನೇಷನ್ ಅಪಾಯಕಾರಿ ಎಂದು ಭಯ ಹುಟ್ಟಿಸಿದವರು ಇವರೇ ಮತ್ತು ನಾವೆಲ್ಲರೂ ನಂಬಿ ಅದಕ್ಕೂ ವೇಗವನ್ನು ತಗ್ಗಿಸಿದೆವು.

ಎರಡನೆಯ ಅಲೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮುಂಜಾಗ್ರತೆ ತಗೆದುಕೊಳ್ಳುವಲ್ಲಿ ಎಡವಿದವು. ೧೦೦% ತಯಾರಿ ಮಾಡುವುದು ಅಸಾಧ್ಯವಾದ ಕೆಲಸವಾಗಿತ್ತು. ಆದರೆ ೩೦-೪೦% ಮಾಡಬೇಕಿತ್ತು. ಅದು ಅವರೇ ಒಪ್ಪಿಕೊಂಡಿದ್ದಾರೆ. ಇಲ್ಲಿ ಗಮನಿಸಿ ಲಾಕ್ಡೌನ್ ಮಾಡಿ ಎಂದು ಸ್ವಲ್ಪ ಜನ ಹೇಳಿದರೆ ಇನ್ನು ಸ್ವಲ್ಪ ಜನ ಬೇಡ ಎನ್ನುತ್ತಾರೆ. ಸಲಹೆ ಕೊಟ್ಟವರಿಗೆ ಹಿಗ್ಗಾಮುಗ್ಗಾ ನಿಂದಿಸುತ್ತಾರೆ! ಅದಕ್ಕೆ ಎರಡನೆಯ ಅಲೆಗೆ ಎಷ್ಟೋ ತಜ್ಞರು ಸಲಹೆ ಕೊಡುವದಕ್ಕೆ ಬಂದೆಯಿಲ್ಲ! ಸರ್ಕಾರ, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ನಾವು(ಜನರು) ಎಲ್ಲರೂ ಇದಕ್ಕೆ ಹೊಣೆ. ಇವತ್ತಿಗೂ ನಾವು ಸರ್ಕಾರವನ್ನು ನಿಂದಿಸುವದು ಬಿಟ್ಟಿಲ್ಲ.

ಸದ್ಯದ ಪರಸ್ಥಿತಿಯಲ್ಲಿ ಸರ್ಕಾರ ಮಾಡುತ್ತಿರುವ ತುರ್ತು ಕೆಲಸಗಳು:

ಬೆಂಕಿ ಬಿದ್ದಾಗ ಭಾವಿ ಅಗೆದರು ಎಂದ ಹಾಗೆ ಸರ್ಕಾರ ಎಷ್ಠೆ ವೇಗವಾಗಿ ಕೆಲಸ ಮಾಡಿದರೂ ಸದ್ಯದ ನಷ್ಟಕ್ಕೆ ಹೆಗಲು ಕೊಡುವುದು ಕಷ್ಟ. ಆದರೆ ಮುಂದಿನ ೨೫-೪೫ ದಿವಸಗಳಲ್ಲಿ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್ ಮತ್ತು ಔಷಧಿಗಳು ಸಾಮಾನ್ಯರಿಗೆ ಯಾವದೇ ತೊಂದರೆಯಿಲ್ಲದೆ ಸಿಗಬೇಕು ಎಂದು ಸರ್ಕಾರ ಪಣ ತೊಟ್ಟಿದೆ. ಇಟಲಿ ದೇಶದಿಂದ ದೊಡ್ಡ ದೊಡ್ಡ ಆಕ್ಸಿಜನ್ ಉತ್ಪಾಧನೆ ಮಾಡುವ ಉಪಕರಣಗಳನ್ನು ಖರೀದಿ ಮಾಡಿದ್ದಾರೆ. ರೋಗಿಗಳಿಗೆ ಚಿಕಿಸ್ಥೆ ಬೇಕಾದಾಗ ಎಲ್ಲ ಸೌಲಭ್ಯಗಳನ್ನು ಸಿಗುವ ಹಾಗೆ ಮಾಡುತ್ತಿರುವ ಸರ್ಕಾರ ಇದರಲ್ಲಿ ಬೇಗ ಯಶಸ್ವಿಯಾಗಬೇಕು. ಮತ್ತೆ ಎರಡನೆಯ ಅಲೆ ಮುಗಿದ ನಂತರ ಎಲ್ಲವನ್ನು ಹಾಗೆ ಅದೇ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಕಾರಣ ಮುಂದಿನ ಅಲೆಗಳಿಗೆ ಎದುರಿಸಲು.


ವಾಕ್ಸಿನೇಷನ್ ಅಲಭ್ಯತೆ ಆಗದ ಹಾಗೆ ಕ್ರಮ ತಗೆದುಕೊಳ್ಳುತಿದ್ದಾರೆ. ಬಡ ಜನರಿಗೆ ಕೊಡುತ್ತಿರುವ ಅಕ್ಕಿ ಜೊತೆಗೆ ಒಂದಿಷ್ಟು ದುಡ್ಡು ಪರಿಹಾರ ಎಂದು ಕೊಟ್ಟರೆ ತಪ್ಪೇನಿಲ್ಲ!

(ಜನರ)ನಮ್ಮ ಕೆಲಸವೇನು?


ಸರ್ಕಾರ ಹೇಳಿದ ನಿಯಮಗಳು ಪಾಲಿಸಬೇಕು. ಎಲ್ಲ ತಜ್ಞರ ಅಭಿಪ್ರಾಯ ಪಡೆದೆ ನಿರ್ಧಾರವಾಗಿರುತ್ತೆ. ಸುಖಾ ಸುಮ್ಮನೆ ಯೋಗಿ ಬೇಕಿತ್ತು, ಅವರು ಬೇಕಿತ್ತು ಎನ್ನುವುದು ತಲೆಯಿಂದ ತಗೆದುಹಾಕಿ. ಎಲ್ಲ ರಾಜ್ಯಗಳಲ್ಲಿ ಇದೆ ಹಾಡು! ಇದೆ ಸಾವು ನೋವು! ಸುರೇಶ ರೈನಾಗೆ ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಸಿಗುತ್ತಿಲ್ಲ. ಹಾಗೆ ನೋಡಿದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಅತಿ ಬೇಗನೆ ಕೆಲಯೊಂದು ಕ್ಷೇತ್ರಗಳಿಗೆ ನಿರ್ಬಂಧ ಹಾಕಿದವರು. ಜನರ ಒತ್ತಡದಿಂದಲೇ ೫೦% ಕೊಟ್ಟಿದ್ದ ಸಿನಿಮಾ ಕ್ಷೇತ್ರಕ್ಕೆ ಮತ್ತು ೧೦೦% ಕೊಟ್ಟರು. ಆಗ ಇದೆ ಜನ ಮುಖ್ಯಮಂತ್ರಿಗಳ ನಿರ್ಧಾರ ಸರಿ ಇದೆ ಎಂದು ಹೇಳುವ ಧೈರ್ಯ ಮಾಡಲಿಲ್ಲ. ಚುನಾವಣೆ ನಡೆದಿವೆ ಅದಕ್ಕೆ ಇದೂ ನಡೆಯಲಿ ಎಂದರು. ಮಾಧ್ಯಮದವರು ಚುನಾವಣೆ ಆನ್ಲೈನ್ ಮೂಲಕ ಪ್ರಚಾರ ಮಾಡಿ ಎಂದು ಯಾವದೇ ಕಾರ್ಯಕ್ರಮ ಮಾಡಲಿಲ್ಲ ಅವರೂ ಸಿಡಿ ಲೇಡಿ ಹಿಂದೆ ಇದ್ದವರಲ್ಲೆವೇ? ಕಾಂಗ್ರೇಸ್ ಮತ್ತು ವಿರೋಧ ಪಕ್ಷದವರು ಆನ್ಲೈನ್ ಪ್ರಚಾರಕ್ಕೆ ವಿರೋಧ ಮಾಡಿದರು. ಜನರು ಮಾಸ್ಕ ಮತ್ತು ಅಂತರ ಪಾಲಿಸಲೇಯಿಲ್ಲ. ಅದಕ್ಕೆ ಸದ್ಯದ ಪರಿಸ್ಥಿತಿಗೆ ನಾವೇ ಜವಾಬ್ದಾರರು. ಸದ್ಯ ನಾವು ಮಾಡಬೇಕಾದ ಕೆಲಸ “ಸ್ವಯಂ ನಿರ್ಬಂಧ “. ನೀವು ಹೊರಗಡೆ ಹೋಗದೆ ಇದ್ದರೇ ಸಂಪೂರ್ಣ ಲಾಕ್ಡೌನ್ ಯಾಕೆ ಬೇಕು?

ಎಚ್ ಡಿ ಕೆ ಕೊಟ್ಟ ಸಲಹೆಗಳೇನು?


ಮಾಜಿ ಮುಖ್ಯಮಂತ್ರಿ ಸಲಹೆ ಚೆನ್ನಾಗಿ ಇದ್ದಾರೆ ಸರ್ಕಾರ ಅಳವಡಿಸಿಕೊಳ್ಳಲಿ.

Categories: Articles

Tagged as:

Leave a Reply