
ಟ್ರೆಕ್ಕಿಂಗ್ ಎಂದರೆ ಪ್ರಕೃತಿಯ ಮಧ್ಯೆ, ಸಾಮಾನ್ಯವಾಗಿ ಬೆಟ್ಟಗಳು, ಕಾಡುಗಳು ಅಥವಾ ಹಳ್ಳಿ ಪ್ರದೇಶಗಳ ಮೂಲಕ, ಕಾಲ್ನಡಿಗೆಯಲ್ಲಿ ಉದ್ದದ ದೂರ ಪ್ರಯಾಣಿಸುವ ಹೈking ಅಥವಾ ಅನ್ವೇಷಣಾತ್ಮಕ ಚಟುವಟಿಕೆ. ಇದು ಶಾರೀರಿಕ ಸಾಮರ್ಥ್ಯವನ್ನು ಪರೀಕ್ಷಿಸುವದೊಂದಿಗೇ, ಪ್ರಕೃತಿಯ ಸೌಂದರ್ಯವನ್ನು ಆನಂದಿಸುವ ಮನರಂಜನಾ ಪ್ರವಾಸವಾಗಿಯೂ ಪರಿಗಣಿಸಲಾಗುತ್ತದೆ.
ಟ್ರೆಕ್ಕಿಂಗ್ ಎಂದರೆ ಪರ್ವತ, ಕಾಡು ಅಥವಾ ಹಳ್ಳಿಯ ಮಾರ್ಗಗಳಲ್ಲಿ ಕಾಲ್ನಡಿಗೆಯ ಮೂಲಕ ಅನುಭವಿಸುವ ದೈಹಿಕ ಹಾಗೂ ಮನಸ್ಸಿನ ಸಾಹಸಯಾತ್ರೆ. ಇನ್ನು ಸ್ವಲ್ಪ ಇತಿಹಾಸ ಕೆದಕಿದರೆ ? ಧಾರ್ಮಿಕ ಉದ್ದೇಶದ ಟ್ರೆಕ್ಕಿಂಗ್: ಸಾವಿರಾರು ವರ್ಷಗಳಿಂದ ದೇವಾಲಯಗಳಿಗೆ ಹೋಗುವುದು, ಅದು ಗುಡ್ಡ ಹತ್ತುವ ಮೂಲಕ! ಆಧುನಿಕ ಪ್ರವಾಸೋದ್ಯಮದ ಟ್ರೆಕ್ಕಿಂಗ್: 1950–60ರ ದಶಕ (ಆಧುನಿಕ ಟ್ರೆಕ್ಕಿಂಗ್ ಶುಭಾರಂಭ), 1953ರಲ್ಲಿ ಎಡ್ಮಂಡ್ ಹಿಲರಿ ಮತ್ತು ಟೆನ್ಸಿಂಗ್ ನಾರ್ಗೇ ಮೌಂಟ್ ಎವರೆಸ್ಟ್ ಶಿಖರ ಹತ್ತಿದ ನಂತರ ಟ್ರೆಕ್ಕಿಂಗ್ ಪ್ರಚಲಿತವಾಯಿತು.ನೇಪಾಳವು 1950ರಲ್ಲಿ ಪ್ರವಾಸಿಗರಿಗೆ ದ್ವಾರ ತೆರೆದ ಬಳಿಕ, ಎವರೆಸ್ಟ್ ಬೇಸ್ ಕ್ಯಾಂಪ್ ಮತ್ತು ಅನ್ನಪೂರ್ಣ ಮಾರ್ಗಗಳು ಜನಪ್ರಿಯವಾದವು.
ಸಮಯ ಸಿಕ್ಕಾಗ ನಾವು ಹೋಗುವುದು ಬೆಂಗಳೂರಿನ ಸಮೀಪ ಇರುವ ಬನ್ನೇರುಘಟ್ಟ ಕಾಡಿಗೆ! ಚಿರತೆ, ಆನೆ, ಕರಡಿ ಮತ್ತು ಜಿಂಕೆಗಳು ಇವೆ ಆದರೆ ಅನೇಕ ಬಾರಿ ಕಾಡಿನಲ್ಲಿ ಹೋಗಿದ್ದ ನಮಗೆ ಜಿಂಕೆಗಳು ಕಾಣಿಸಿವೆ. ಅದೃಷ್ಟಕ್ಕೆ ಯಾವದೇ ಬೇರೆ ಪ್ರಾಣಿಗಳು ನೋಡಿಲ್ಲ. ನಮ್ಮದು ೬-೧೫ ಕಿಲೋ ಮೀಟರ್ ಟ್ರೆಕಿಂಗ್ ಇರುತ್ತೆ. ಟ್ರೆಕಿಂಗ್ ಹೋಗಲು ಯಾವದೇ ಪೂರ್ವ ಯೋಜನೆ ಇರುವದಿಲ್ಲ! ಎಲ್ಲವೂ ನಿರ್ಧಾರವಾಗುವುದು ಕೇವಲ ೧೫-೨೦ ನಿಮಿಷದಲ್ಲಿ. ಕನಿಷ್ಠವೆಂದರೂ ೪-೫ ಗೆಳಯರು ಹೋಗಲು ರೆಡಿ ಅದ ಮೇಲೇನೆ ೧೫-೨೦ ನಿಮಿಷದ ಯೋಜನೆ ಫ್ರೀಜ್ ಆಗುತ್ತದೆ. ಟೆಕ್ಕಿಂಗ್ ಒಂದು ಅದ್ಭುತ ಅನುಭವ! ವಾರ ಪೂರ್ಣವೆಂದರೆ ೫ ದಿವಸಗಳ ಸತತವಾಗಿ ಕೆಲಸ ಮಾಡಿದ ನಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮತ್ತೆ ರಿಫ್ರೆಶ್ ಆಗಲು ಟ್ರೆಕಿಂಗ್ ಅಥವಾ ಆಟಗಳು ಅನಿವಾರ್ಯತೆ ಇದ್ದೆ ಇದೆ. ಪ್ರತಿ ವಾರ ಹೋಗದೆ ಇದ್ದರೂ ತಿಂಗಳೊಮ್ಮೆ ಆದರೂ ಹೋಗುವ ಅಭ್ಯಾಸವಿದೆ.
ಪ್ರಕೃತಿಯ ಮಧ್ಯೆ ನಡೆದು ಹೋಗುವಾಗ ಪಕ್ಷಿಗಳ ಚಿಲಿಪಿಲಿ ಕೂಗು , ಜಿಟಿ ಜಿಟಿ ಮಳೆ , ತಂಪಾದ ವಾತಾವರಣ , ಅಲ್ಲಲ್ಲಿ ಕಲ್ಲಿನ ಗುಡ್ಡಗಳು ಮತ್ತು ಹಸಿರು ಎಲೆಗಳಿಂದ ತುಂಬಿದ ತರಹ ತರಹ ಮರಗಳು ಮನಸ್ಸಿಗೆ ಮುದ ನೀಡುವದರ ಜೊತೆಗೆ, ಇವು ಎಲ್ಲವೂ ನಮ್ಮನ್ನು ನಿತ್ಯಜೀವನದಿಂದ ದೂರವಿಟ್ಟು ಒಂದು ವಿಭಿನ್ನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನಿಶ್ಚಿಂತೆ ತುಂಬಿದ ಮನಸ್ಸು, ಗೆಳೆಯರ ಜೊತೆ ಹೆಜ್ಜೆ ಹಾಕುತ್ತಾ ಹೋಗುವ ಅನುಭವವೇ ಅನನ್ಯ. ‘ಎಲ್ಲಿ ಬಂದೆವು?’ ಎಂದು ಒಮ್ಮೆ ಆಲೋಚಿಸುವಷ್ಟು ಅದ್ಭುತವೆನಿಸುವ ಸ್ಥಳ! ಆದರೆ, ಈ ನೈಸರ್ಗಿಕ ಸೌಂದರ್ಯದ ನಡುವೆ ಕಾಡುಪ್ರಾಣಿಗಳ ಭೀತಿಯೂ ಸಹ ಇದೆ. ಅದಕ್ಕೆಂದೇ ನಾವು ಆಳವಾದ ಕಾಡುಗಳಿಗೆ ಹೋಗುವುದನ್ನು ತಪ್ಪಿಸಿ, ಅಗತ್ಯ ಮುಂಜಾಗ್ರತೆಗಳನ್ನು ತೆಗೆದುಕೊಂಡು ಸಾಗುತ್ತೇವೆ.
ಸಾಮಾನ್ಯವಾಗಿ ನಾವು ಒಂದು ಗುಡ್ಡ ಹತ್ತಿದ ನಂತರ ೧೫ ನಿಮಿಷದ ವಿಶ್ರಾಂತಿ ಪಡೆಯಲು ಒಳ್ಳೆಯ ಸ್ಥಳ ನೋಡಿ ಕುಳಿತುಕೊಂಡು ಹರಟೆ ಹೊಡೆಯುತ್ತದೆ, ಒಂದೊಂದು ಬಾರಿ ಪ್ರಾಣಾಯಾಮ ಮಾಡುತ್ತಾರೆ , ಅದು ಅವರವರ ಇಷ್ಟ. ಇಂದು ನಾವು ಅತ್ಯಂತ ಆಳವಾದ ಕಾಡಿನ ಮಧ್ಯೆ ಹೋಗಿದ್ದೆವು, ಅಲ್ಲಿ ಹೋಗಿ ಪ್ರಶಾಂತವಾದ ಸ್ಥಳ ನೋಡಿ ಎಲ್ಲರೂ ಧ್ಯಾನಸ್ಥರಾದರು. ಎಲ್ಲರೂ ಕಣ್ಣು ಮುಚ್ಚಿ ಧ್ಯಾನ ಮಾಡುವಾಗ ನಮ್ಮ ಫೋಟೋ ಯಾರೋ ಒಬ್ಬರು ಕ್ಲಿಕ್ ಸಿದರು! ಯಾರು ಕ್ಲಿಕ್ ಸಿದರು ? ಒಮ್ಮಲೇ ಶಾಕ್ ! ೫-೨=೮ ಚಿತ್ರ ಒಮ್ಮಲೇ ಮನಸ್ಸಿಗೆ ಬಂದಿರಬೇಕೆಲ್ವ? ದೆವ್ವ ಭೂತ ಅಂತ ?
ಇತ್ತೀಚಿನ ದಿನಗಳಲ್ಲಿ ಧ್ಯಾನ ಎಲ್ಲರಿಗೂ ಅತಿ ಅವಶ್ಯಕ, ಎಲ್ಲರಿಗೂ ತಿಳಿದ ವಿಷಯವೇನೆಂದರೆ ಯುವ ಪೀಳಿಗೆಗಳಲ್ಲಿ ಹೃಧಯಾಘಾತ ಹೆಚ್ಚಿಗೆ ಆಗುತ್ತಿವೆ. ಅದಕ್ಕೆಂದೇ ಭಾರತ ಸರ್ಕಾರ ಏಮ್ಸ್ ಸಂಶೋಧನೆ ಕೇಂದ್ರ ಮೂಲಕ ಮತ್ತು ರಾಜ್ಯ ಸರ್ಕಾರ ಜಯದೇವ ಸಂಸ್ಥೆ ಮೂಲಕ ಸಂಶೋಧನೆ ಮಾಡಲು ಹೇಳಿತ್ತು. ಎರಡು ಸಂಸ್ಥೆಗಳು ಅಧ್ಯಯನ ಮಾಡಿ ಯುವಕರಲ್ಲಿ ಹೃದಯಾಘಾತ ಆಗುವದಕ್ಕೆ ಅನೇಕ ಕಾರಣಗಳನ್ನು ಹೇಳಿದ್ದಾರೆ. ಅನುವಂಶೀಯಕತೆ , ಮಧ್ಯಪಾನ, ಧೂಮಪಾನ, ಒತ್ತಡ, ಟಿವಿ ಮತ್ತು ಮೊಬೈಲ್ ನೋಡುವದು. ಹೀಗೆ ಅನೇಕ ನಿಖರವಾದ ಕಾರಣ ನೀಡಿದ್ದಾರೆ. ಅದರ ಜೊತೆ ನಾವೆಲ್ಲಾ ಏನೆಲ್ಲ ಮುನ್ನೆಚ್ಚರಿಗೆ ತಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಸಮಯ ಸಿಕ್ಕಾಗ ಓದಿ! ಮುಖ್ಯವಾದ ಸಲಹೆಗಳು ಚೆನ್ನಾಗಿ ನಿದ್ರಿಸಿ , ಹೆಚ್ಚಿಗೆ ಮಕ್ಕಳಿಗೆ ಮೊಬೈಲ್ ಟಿವಿ ಕೊಡಬೇಡಿ, ಒತ್ತಡರಹಿತ ಜೀವನಕ್ಕೆ ಒತ್ತು ಕೊಡಿ ಮತ್ತು ಮಧ್ಯಪಾನ ಮಾಡಬೇಡಿ. ಇಂಥಹ ಸಂದರ್ಭದಲ್ಲಿ ಯೋಗ , ಧ್ಯಾನ ಅತಿ ಅವಶ್ಯಕ.
ಅನೇಕ ಮಠಮಾನ್ಯಗಳು ಸುಮಾರು ವರ್ಷಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ಧತ್ಗೆ ನೆಲಸಲಿ ಎಂದು ಜನರಿಗೆ ಪ್ರವಚನ, ಧ್ಯಾನದ ಬಗ್ಗೆ ತಿಳಿಹೇಳಿ ಒತ್ತಡ ಜೀವನದ ಬಗ್ಗೆ ಪಾಠ ಮಾಡಿದ್ದಾರೆ. ಇಂದಿನ ಕಾಲದಲ್ಲಿ ಪಿರಮಿಡ್ ವ್ಯಾಲಿ ಬ್ರಹ್ಮರ್ಷಿ ಡಾಕ್ಟರ್ ಪತ್ರೀಜಿ(ಕನಕಪುರ ರಸ್ತೆ) , ರವಿಶಂಕರ್ ಗುರೂಜಿ, ರಾಮದೇವ ಬಾಬಾ ಮತ್ತು ಸದ್ಗುರು ಸತತವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲರೂ ತಮ್ಮದೇ ನಂಬಿದ ಸಿದ್ದಂತಾದ ಮೇಲೆ ಪಾಠ , ಧ್ಯಾನದ ಬಗ್ಗೆ ಹೇಳುತ್ತಾರೆ ಆದರೆ ಅವರೆಲ್ಲರಿಗೂ ಇರುವ ಗುರಿ ಒಂದೇ ಎಲ್ಲ ಜನರು ನೆಮ್ಮದಿಯಿಂದ ಜೀವನವನ್ನು ಅನುಭವಿಸಲಿ ಮತ್ತು ಜೀವಿಸಲಿ! ಸಮಯ ಸಿಕ್ಕಾಗ ಯು ಟ್ಯೂಬ್ ನಲ್ಲಿ ಪತ್ರೀಜಿಯವರ ಫ್ಲ್ಯೂಟ್ ಮ್ಯೂಸಿಕ್ ಕೇಳಿಸಿಕೊಂಡು ಧ್ಯಾನಮಾಡಿ ನೋಡಿ! ಇದೆ ತರಹ ನಾವು ನಮ್ಮ ಟೆಕ್ಕಿಂಗ್ ಹೋದಾಗ ೨೦ ನಿಮಿಷ ಫ್ಲ್ಯೂಟ್ ಮ್ಯೂಸಿಕ್ ಹಾಕಿ ಧ್ಯಾನ ಮಾಡಿದೆವು! ಟೆಕ್ಕಿಂಗ್ ಜೊತೆ ಧ್ಯಾನವು ಮಾಡಿದೇವು.
೭ಕ್ಕೆ ಪ್ರಾರಂಭವಾದ ನಮ್ಮ ಟೆಕ್ಕಿಂಗ್ ಮುಗಿಯಲು ೧೦ ಘಂಟೆ ಆಗಿತ್ತು. ಆಗಾಗಲೇ ಕೆಲ ಗೆಳಯರಿಗೆ ಮನೆಯಿಂದ ಫೋನ್ ಬರಲು ಪ್ರಾರಂಭವಾಗಿದ್ದವು. ನನಗು ಮನೆಯಿಂದ ಫೋನ್ ಬಂತು. ಅದ್ರಲ್ಲಿ ವಿಶೇಷತೆ ಇಲ್ಲ. ಕಾರಣ ಎಲ್ಲರ ಮನೆ ದೋಸೆ ತೂತೆ! ಹಾಗೆ ಫೋನ್ ಮಾಡಿದ ಮಡದಿ ಕೇಳಿದ್ದು ಒಂದೇ ಮಾತು! ಟಿಫನ್ ಹೊರಗ ಅಥವಾ ಒಳಗೆ ! ಹೊರಗೆ ಎಂದರೆ “ನಿಮ್ಮದೇ ಆರಾಮ ಇದೆ, ಪ್ರತಿವಾರ ಹೊರಗಡೆ ಹೋಗತೀರಾ ಆರಾಮಾಗಿ ತಿರುಗಾಡಿ ತಿಂದು ಬರತಿರಾ” ಮನೆಗೆ ಟಿಫಿನ್ಗೆ ಬರ್ತೀನಿ ಎಂದರೆ ಅದ್ಕೊಂದು ಉತ್ತರ ಇದ್ದೆ ಇರುತ್ತೆ! ಇದರ ನಡುವೆ ಈ ಬಾರಿ ಜಿಟಿ ಜಿಟಿ ಮಳೆ! ಜಾಸ್ತಿ ಮಳೆ ಇಲ್ಲದೆ ಇರುವ ಕಾರಣ ಅದು ನಮಗೆ ಅಷ್ಟೇನು ತೊಂದರೆ ಇರಲಿ ಅದಕ್ಕಾಗಿ ಅದು ಅಹ್ಲಾದಕರವಾಗಿತ್ತು ಮರಳಿ ಬರುವಾಗ ಸಹಿತ ಮಳೆ ಇತ್ತು. ಬರುವಾಗ ಅಂದು ಸಣ್ಣ ಘಟನೆ ನಡೆಯಿತು.
ಸುಮಾರು ೨೧ವರ್ಷದ ಯುವಕ ,ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ಬೆಳಿಗ್ಗೆ ೭ ಘಂಟೆಗೆ ಸ್ನೇಹಿತೆಯ ಜೊತೆ ಕಾಡಿಗೆ ಬಂದಿದ್ದಾನೆ. ನಾವು ಹೋಗುವಾಗ ಅವರನ್ನು ನೋಡಿದ್ದೆವು , ಅವರು ಏನೋ ಹುಡುಕುತ್ತಿದ್ದರು. ಆದರೆ ನಾವು ಅವರಿಗೆ ಕೇಳಲು ಹೋಗಿರಲಿಲ್ಲ. ಬರುವಾಗ ಇನ್ನೇನು ಗುಡ್ಡ ಹತ್ತಿ ಇಳಿಯಬೇಕು ಎಂದಾಗ, ಹುಡುಗ ಕೇಳಿದ , ಸರ್ ಕೀ ಏನಾದರೂ ಸಿಕ್ಕಿದೆಯೆ ನಿಮಗೆ? ಏನು ಎಂತು ಎಂದಲ್ಲ ಕೇಳಿದಾಗ? ಹುಡುಗ ಸರ್ , ನಾವು ದೂರ ಪೊದೆಯಲ್ಲಿ ಕುಳಿತಿದ್ದಾಗ , ಜೋರಾದ ಪ್ರಾಣಿಯ ಶಬ್ದ ಬಂತು , ಜೋರಾಗಿ ಓಡಿ ಬರುವಾಗ ನನ್ನ ೩೫೦ ರಾಯಲ್ ಬೈಕ್ ಕೀ ಕಳೆದಿದೆ, ಮತ್ತೆ ನಾನು ಹುಡುಕಲು ಹೊರಟಿದ್ದೇನೆ, ಅದು ಸುರಕ್ಷಿತ ಸ್ಥಳವಾ ಎಂದು ಕೇಳಿದ?
ಅವನನ್ನು ನೋಡಿ ನಮಗೆ ಯಾಕೋ ಸಹಾಯ ಮಾಡಬೇಕೆಂದು ಅಂದುಕೊಂಡು ಎಲ್ಲರೂ ಅವನ ಜೊತೆ ಹುಡುಕಲು ಹೊರಟೆವು! ಅಲ್ಲೇ ಸ್ವಲ್ಪ ದೂರವಿತ್ತು. ಎಲ್ಲರೂ ಮರಳಿ ಹೋಗಿ , ಹುಡುಕಲು ಶುರು ಮಾಡಿದ್ದಾಗ, ನಮ್ಮ ಒಬ್ಬ ಗೆಳಯ ನಿನ್ನ ಜೊತೆ ಬಂದಿದ್ದು ನಿನ್ನ ಫ್ರೆಂಡ್ ಎಂದಾಗ? ಅಲ್ಲ ಸರ್ , ನನ್ನ ಕಸಿನ್ ! ಇಲ್ಲೇಕೆ ಕಸಿನ್ ಕರಕೊಂಡು ಬಂದಿ ಎಂದಾಗ! ಹುಡುಗ ಗಾಬರಿ !ಇರಲಿ ಬಿಡಿ, ಇದು ಎಲ್ಲರಿಗೂ ಗೊತ್ತಿದ್ದ ವಿಷಯ ಎಂದು ಎಷ್ಟೇ ಹುಡುಕಿದರು ಕೀ ಸಿಗಲೇ ಇಲ್ಲ. ಇನ್ನೊಬ್ಬ ಗೆಳಯ ಮನೆಯಿಂದ ಸ್ಪೇರ್ ಕೀ ತರಿಸಿಕೊಂಡು ಹೋಗು ಎಂದಾಗ! ಹುಡುಗ ಹೇಳಿದ್ದು ಇಲ್ಲ ಸರ್ ನಮ್ಮಪ್ಪ ತುಂಬಾ ಸ್ಟ್ರಿಕ್ಟ್ , ಇದು ಗೊತ್ತಾದರೆ ನನಗೆ ಒಂದು ತಿಂಗಳು ಹೊಡೀತಾರೆ ಮತ್ತು ಬೈತಾರೆ ಎಂದ!
ನಾವೆಲ್ಲರೂ ೪೦-೫೦ ವರ್ಷ ಆಸುಪಾಸಿನವರು , ದೊಡ್ಡ ಮಕ್ಕಳಿರುವ ಅಪ್ಪಂದಿಯರು! ಇವನ ಮಾತು ಕೇಳಿ ಒಂದು ಕಡೆ ನಗು ಬಂತು, ಮತ್ತೊಂದು ಕಡೆ ಸೀರಿಯಸ್ ಆಗಿ ಯೋಚನೆ ಮಾಡುವ ಹಾಗೆ ಮಾಡಿತು. ಮಕ್ಕಳಿಗೆ ೩೫೦ ಕ್ಲಾಸಿಕ್ ಕೊಡುವ ಮನಸ್ಸು ಇದೆ ಆದ್ರೆ ಕೀ ಕಳೆದಿದೆ ಎಂದು ಅಪ್ಪನಿಗೆ ಹೇಳುವ ಧೈರ್ಯ ಮಗನಿಗೆ ಇಲ್ಲವೆಂದರೆ ಹೇಗೆ? ದಿನಾಲೂ ಪತ್ರಿಕೆಯಲ್ಲಿ ಓದುತ್ತಿದ್ದೇವೆ, ೧೩ , ೧೨ ವರ್ಷ ಮಕ್ಕಳು ಮೊಬೈಲ್ ಕೊಡದೆ ಇದ್ದಕ್ಕೆ ನೇಣಿಗೆ ಶರಣು! ಎಲ್ಲಿ ಮಿಸ್ ಆಗುತ್ತಿದೆ ಎಂದು ತಿಳಿದುಕೊಳ್ಳುವ ವಿಷಯವೆಂದು ಮನಸ್ಸಿಗೆ ಎನಿಸಿತು. ಆದರೆ ಸಂತೋಷದ ಮತ್ತು ಆಶ್ಚರ್ಯ ವಿಷಯವೆಂದರೆ , ನಾನು ತಾಯಿಗೆ ಹೇಳುತ್ತೇನೆ , ತಾಯಿ ಬೈಯುದಿಲ್ಲ. ಹೇಗೂ ಕೀ ಸಿಗುವುದು ಕಷ್ಟ, ಅದು ಬೇರೆ ಕಾಡು , ಅದಕ್ಕೆ ಮತ್ತೆ ಒಬ್ಬನೇ ಹೋಗಿ ಹುಡಕಾಡಬೇಡ , ಅಪ್ಪ ಆಫೀಸ್ ಹೋದ ಮೇಲೆ ಸ್ಪೇರ್ ಕೀ ತಗೆದುಕೊಂಡು ಬಾ ಎಂದು ಹೇಳಿ ಹೊರಟೆವು.

ನಮ್ಮ ಶನಿವಾರದ ಟ್ರೆಕಿಂಗ್ ಜಿಟಿ ಜಿಟಿ ಮಳೆ ನಡುವೆ ಧ್ಯಾನದ ಬಗ್ಗೆ ಮತ್ತು ಮಕ್ಕಳು ತಪ್ಪು ಮಾಡಿದಾಗ ಅವರ ಮನಸ್ಥಿತಿ ಹೇಗೆ ಸ್ವಯಂ ಅಭಿಪ್ರಾಯ ಹೊಂದಿರುತ್ತದೆ ಎಂದು ತಿಳ್ದುಕೊಳ್ಳುವ ವಿಷಯಯೆಂದೆನಿಸಿತು. ಸಮಯ ಸಿಕ್ಕಾಗ ರಿಫ್ರೆಶ್ ಆಗಲು ನಮಗೆ ಟೆಕ್ಕಿಂಗ್ ಬೇಕೇ ಬೇಕು. ನೀವು ಸಹಿತ ಸಮಯ ಸಿಕ್ಕಾಗ ಹೋಗಿ ಬನ್ನಿ.
ಫೋಟೋ ಕ್ಲಿಕ್ಸಿದ್ದು ಯಾರು?
Categories: Articles

Nice article 👍
LikeLike