https://pagead2.googlesyndication.com/pagead/js/adsbygoogle.js ೨೪/೭ ಸುದ್ದಿ ವಾಹಿನಿಗಳು ರಾಜ್ಯದಲ್ಲಿ ಹತ್ತಿದ ನಾಯಕತ್ವ ಬದಲಾವಣೆ ಬೆಂಕಿ ಹೇಗೆ ಕವರ್ ಮಾಡಿ ತೋರಿಸಿದರೆಂದರೆ ಮಾನ್ಯ ಶ್ರೀ ಅರುಣ್ ಸಿಂಗ್ ದೆಹಲಿಯ ತಮ್ಮ ಮನೆಯಿಂದ ಹೊರಡುವ ಸಮಯದಿಂದ ಕುಮಾರ ಕೃಪಾ ಅತಿಥಿ ಗೃಹ ಸೇರುವ ತನಕ ಮಸ್ತಾಗಿ ತೋರಿಸಿದರು! ನಿಖರವಾಗಿ ಹೇಳಬೇಕಂದರೆ ಇದೊಂದು ಕ್ರಿಕೆಟ್ ಕಾಮೆಂಟರಿ ತರಹ ಇತ್ತು. ರಾಜ್ಯದಲ್ಲಿ ಕರೋನ ನಷ್ಟ ಸಾಕಷ್ಟು ಇದ್ದರೂ ಕೆಲವರಿಗೆ ಇನ್ನುಳಿದ ಬಿಜೆಪಿಯ ಸರ್ಕಾರದಲ್ಲಿ ಮಂತ್ರಿನೋ ,ಮುಖ್ಯಮಂತ್ರಿನೋ […]
By ಸುನೀತಾ ಶಿಂಧೆ, ಶಿಕ್ಷಕರು ಅನ್ನ ಹಸಿವನ್ನು ನೀಗಿಸುತ್ತದೆ, ಅಕ್ಷರಜ್ಞಾನ ಅಜ್ಞಾನವನ್ನು ತೊಲಗಿಸುತ್ತದೆ. ಅಂಥಹ ಅಜ್ಞಾವನ್ನು ತೊಲಗಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದು ಶಿಕ್ಷಕರು. ಮಕ್ಕಳ ಬೆಳವಣಿಗೆ ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದು ಮಗುವಿನ ತೂಕ ,ಎತ್ತರ, ದಪ್ಪ, ಬಣ್ಣ ಅಲ್ಲವೇ? ಆದರೆ ಇದನ್ನು ನಾವು ಸಾಮಾನ್ಯ ಬೆಳವಣಿಗೆ ಎನ್ನುವುದಿಲ್ಲ ಹಾಗಾದರೆ ನಮ್ಮ ಪ್ರಕಾರ ಸಾಮಾನ್ಯ ಬೆಳವಣಿಗೆ ಎಂದರೇನು? ಮಕ್ಕಳ ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ […]
ವ್ಯವಹಾರವನ್ನು ಪ್ರಾರಂಭಿಸುವುದು ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ (ಟಿಎಎನ್), ನಿರ್ದೇಶಕ ಗುರುತಿನ ಸಂಖ್ಯೆ (ಡಿಐಎನ್) ಅನ್ನು ಈಗ ಕಂಪನಿಯ ಸಂಯೋಜನೆಗಾಗಿ ಒಂದೇ ರೂಪದಲ್ಲಿ (ಎಸ್‌ಪಿಐಸಿ) ವಿಲೀನಗೊಳಿಸಲಾಗಿದೆ. 15 ಲಕ್ಷ ರೂ. ವರೆಗಿನ ಅಧಿಕೃತ ಬಂಡವಾಳ ಹೊಂದಿರುವ ಕಂಪನಿಗಳಿಗೆ ಸಂಯೋಜನಾ ಶುಲ್ಕವನ್ನು ತೆಗೆದುಹಾಕುವುದು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಕಂಪನಿಯ ಹೆಸರನ್ನು ಕಾಯ್ದಿರಿಸಲು ಐದು ಪುಟಗಳ ಫಾರ್ಮ್ ಮತ್ತು ಇತರ ಲಗತ್ತುಗಳನ್ನು […]
ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ. ಪ್ರಸ್ತುತ ವರ್ಷ ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ.6630/- ಕೋಟಿ ಅನುದಾನ ಲಭ್ಯವಾಗಲಿದ್ದು, ಅದರಲ್ಲಿ ರೂ.4310/- ಕೋಟಿಗಳನ್ನು ಜಲ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದು. ರಾಜ್ಯ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ […]
ಕೇಂದ್ರೀಯ ಆಡಳಿತಾಧಿಕಾರಿ ಪ್ರಫುಲ್ ಕೆ ಪಟೇಲ್ ಅವರು ಮಂಡಿಸಿದ ಹಲವಾರು ಪ್ರಸ್ತಾಪಗಳ ಬಗ್ಗೆ ಲಕ್ಷದ್ವೀಪ ದ್ವೀಪಗಳಲ್ಲಿ ಸಾರ್ವಜನಿಕರ ಕೋಪವು ತಣ್ಣಗಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ದಿನೇಶ್ವರ ಶರ್ಮಾ ಅವರ ನಿಧನದ ನಂತರ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಯುಟಿ ಆಡಳಿತಾಧಿಕಾರಿ ಪಟೇಲರಿಗೆ ಲಕ್ಷದ್ವೀಪದ ಹೆಚ್ಚುವರಿ ಉಸ್ತುವಾರಿ ನೀಡಲಾಯಿತು. ಪಟೇಲ್ ಅವರ ಪ್ರಸ್ತಾಪಗಳು ಮಾಲ್ಡೀವ್ಸ್ಗೆ ಸಮನಾಗಿ ದ್ವೀಪಗಳನ್ನು ಪ್ರವಾಸಿ ತಾಣವಾಗಿ ಉತ್ತೇಜಿಸುವುದರ ಜೊತೆಗೆ ನಿವಾಸಿಗಳ […]
ಬೇರು ಮತ್ತು ಬಳ್ಳಿ ಇಬ್ಬರೂ ಒಂದೇ ಮನೆಯ ಮಾಲೀಕನ ಆಳುಗಳು . ಬೇರು ತಾಯಿಯಾದರೆ ಬಳ್ಳಿ ಮಗಳಾಗಿದ್ದಳು. ಅವರ ಇಬ್ಬರ ಜೀವನ ಮಾಲೀಕನಿಗಾಗಿ ಮೀಸಲು. ಒಡೆಯನಿಗೆ ಇಬ್ಬರ ಮೇಲು ಅತಿ ಪ್ರೀತಿ! ಬಳ್ಳಿ ಬರುವದಕಿಂತಲೂ ಮುಂಚೆ ಬೇರು ಮಾಲೀಕನ ಮನೆಯಲ್ಲೇ ಇದ್ದವಳು. ಅವಳು ತನ್ನ ಜೀವನದ ಸಂತೋಷದ ಜೊತೆ ಒಡೆಯನ ಮನೆಗೆ ಕಾಮಧೇನಾಗಿದ್ದಳು. ಬಳ್ಳಿ ಚಿಕ್ಕವಳು, ಅವಳು ತಾಯಿಯ ಮಗ್ಗುಲಲ್ಲಿ ನಲಿದಾಡುವ ಚಿಕ್ಕ ಜೀವ. ಅದಕ್ಕೆ ಯಾವದು […]
ಮುಖ್ಯ ಕಾರ್ಯನಿರ್ವಾಹಕ ಸತ್ಯ ನಾಡೆಲ್ಲಾ ಅವರು ಕಂಪನಿಯ ಅಧ್ಯಕ್ಷರ ಪಾತ್ರವನ್ನು ವಹಿಸಲಿದ್ದಾರೆ ಎಂದು ಕಂಪನಿ ಬುಧವಾರ ತಿಳಿಸಿದೆ. ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ವರ್ಷ ಮಂಡಳಿಗೆ ಮರು ಆಯ್ಕೆಯಾದ ನಂತರ ಮೂರು ತಿಂಗಳಿನಿಂದ ಕೆಳಗಿಳಿಯುವುದಾಗಿ ಘೋಷಿಸಿದ ನಂತರ ಮೈಕ್ರೋಸಾಫ್ಟ್ ಮಂಡಳಿಯು ಸತತ ಎರಡನೇ ವರ್ಷವನ್ನು ಗುರುತಿಸಿದೆ. 53 ವರ್ಷ ವಯಸ್ಸಿನ ಶ್ರೀ ನಾಡೆಲ್ಲಾ ಅವರು 2014 ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು ಮತ್ತು ಸಾಫ್ಟ್‌ವೇರ್ […]
By Bhimashankar Teli ಬದಲಾವಣೆಯ ಪರ್ವ! ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು […]
ಶ್ರೀಕೃಷ್ಣದೇವರಾಯ ವಿಜಯಪುರದ ಸುಲ್ತಾನ,ಗೋಲ್ಕಂಡ ,ಬಹುಮನಿ ಸುಲ್ತಾನ ಮತ್ತು ಒರಿಸ್ಸಾದ ಗಜಪತಿಗಳಿಗೆ ಸೋಲಿಸಿ ಅತ್ಯಂತ ಶಕ್ತಿಯುತ ಹಿಂದು ರಾಜನಾಗಿದ್ದ. ಅವನಿಗೆ ಕನ್ನಡರಾಜ್ಯರಮಾರಮಣ,ಮೂರುರಾಯರಗಂಡ ಹೀಗೆ ಅನೇಕ ಬಿರುದುಗಳಿದ್ದವು. ದೇಶದ ಉದ್ದಗಲಕ್ಕೂ ಅವನ ಹೆಸರು ರಾರಾಜಿಸುತ್ತಿತ್ತು.ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ವಜ್ರ ವೈಡೂರ್ಯಗಳು ಬೀದಿ ಬೀದಿಯಲ್ಲಿ ಮಾರಲ್ಪಡುತ್ತಿದ್ದವು ಮತ್ತು ಅವನ ಆಳ್ವಿಕೆಯಲ್ಲಿ ಪ್ರಜೆಗಳ ಜೀವನಮಟ್ಟ ಉತ್ಕೃಷ್ಟವಾಗಿತ್ತು . ಪಂಡಿತರಿಗೆ,ಕುಸ್ತಿ ಪಟುಗಳಿಗೆ ಮತ್ತು ಆಶ್ರಯ ಬೇಡಿ ಬಂದ ವಿದ್ವಾಂಸರಿಗೆ ಮತ್ತು ಜನರಿಗೆ ಕೈ ಬಿಸಿ ಕರೆಯುತ್ತಿರುವ ರಾಜ್ಯ […]