ಕರ್ನಾಟಕ ರಾಜಕೀಯದ ಎತ್ತರದ ನಾಯಕನ ಯುಗಾಂತ್ಯ – ಸಿದ್ದರಾಮಯ್ಯ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜನಮನ ಗೆದ್ದು, ದಶಕಗಳ ಕಾಲ ರಾಜ್ಯದ ರಾಜಕೀಯದ ದಿಕ್ಕನ್ನು ನಿರ್ಧರಿಸಿದ ನಾಯಕರು ಬಹಳ ಕಡಿಮೆ. ರಾಜ್ಯದ ರಾಜಕೀಯವನ್ನು ರೂಪಿಸಿದ ಮಹಾನ್ ನಾಯಕರ ಪಟ್ಟಿಯಲ್ಲಿ ನಿಜಲಿಂಗಪ್ಪ, ದೇವರಾಜ ಅರಸ್, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಹೆಸರುಗಳು ಸದಾ ಸ್ಮರಣೀಯ. ಈ ನಾಯಕರ ನಂತರ ಕರ್ನಾಟಕದ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ, ಜನಮನ್ನಣೆ ಗಳಿಸಿದ ಮತ್ತು ಹಿಂದುಳಿದ ವರ್ಗಗಳ ಪ್ರಬಲ […]
