Author Archives

Unknown's avatar

Janaravaani

ಸುನಿಲ್ ಶೆಟ್ಟಿ ಒಬ್ಬ ನಟರು ಹೌದು, ವ್ಯಾಪಾರಿಯು ಹೌದು! ಅವರ ಯಶಸ್ವಿನ ಗುಟ್ಟುಗಳು..

ಬೇಗನೆ ಪ್ರಾರಂಭಿಸಿ – ನಾನು ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತೇನೆ. ನಾನು ನನ್ನ ಬೆಳಿಗ್ಗೆ ನನ್ನ ಆತ್ಮಕ್ಕೆ ಒಳ್ಳೆಯದನ್ನು ಮಾಡುತ್ತೇನೆ – ಯೋಗ, ಅಮ್ಮನೊಂದಿಗೆ ಚಾಯ್, ಕುಟುಂಬದೊಂದಿಗೆ ಸಮಯ, ಮತ್ತು ನನ್ನ ನಾಯಿಗಳು! ಮನೆಯಿಂದ ಹೊರಡುವ ಸಮಯ ಬರುವವರೆಗೆ ನಾನು ಗ್ಯಾಜೆಟ್‌ಗಳು ಅಥವಾ ಪರದೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ. ಇದು ನನಗೆ ಏಕೆ ಕೆಲಸ ಮಾಡುತ್ತದೆ? ಸರಳ. ಬೆಳಿಗ್ಗೆ 8 ಗಂಟೆಗೆ, ನಾನು ಈಗಾಗಲೇ ದಿನವನ್ನು ಗೆದ್ದಿದ್ದೇನೆ […]

ಯಾರೂ ನಿರೀಕ್ಷೆ ಮಾಡದ ಜವಾಬ್ದಾರಿ, ವರಿಷ್ಠರ ನಿರ್ಧಾರ ಯಡಿಯೂರಪ್ಪನವರಿಗೆ ಮತ್ತು ಕಾರ್ಯಕರ್ತರಿಗೆ ಭರಪೂರ ಹುಮ್ಮಸ್ಸು ತುಂಬಿದೆ!

ವಯಸ್ಸಿನ ಮಿತಿ ಬಿಎಸ್ವೈಗೆ ಇಲ್ಲ! ಕೇಂದ್ರ ಸಂಸದೀಯ ಮಂಡಳಿ ಉನ್ನತ ಮಟ್ಟದ ಸಮಿತಿ. ಅದರಲ್ಲೂ ಆಳುವ ಪಕ್ಷದ ಸಂಸದೀಯ ಮಂಡಳಿಗೆ ಇನ್ನೂ ಮಹತ್ವ ಹೆಚ್ಚು! ಪಕ್ಷದ ಎಲ್ಲ ದೊಡ್ಡ ದೊಡ್ಡ ನಿರ್ಧಾರಗಳು ಇದೆ ಮಂಡಳಿ ನಿರ್ಧಾರ ಮಾಡುತ್ತೆ. ಅಂತಹ ಒಂದು ಮಂಡಳಿಯಲ್ಲಿ ಸ್ಥಾನ ಪಡೆಯೋದು ಎಲ್ಲರಿಗೂ ಅಸಾಧ್ಯ! ಇತಿಹಾಸ ತಿರುವಿ ಹಾಕಿ ನೋಡಿದರೆ ಪಕ್ಷದ ಕಟ್ಟಾಳು, ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನ ಸಿಕ್ಕಿದೆ. ಕರ್ನಾಟಕದ ಬಿಜೆಪಿ ಪಕ್ಷದಿಂದ […]

ಉತ್ಸವ ಹುಟ್ಟಿದ್ದು ಪಕ್ಷದಲ್ಲಿ ನಾನೆಷ್ಟು ಶಕ್ತಿಶಾಲಿ? ಸಾಕ್ಸಿಯಾಗಿದ್ದು ಒಗ್ಗಟ್ಟಿನ ಮಂತ್ರಕ್ಕೆ! ಚುನಾವಣೆಗೆ ದಿಕ್ಸೂಚಿನಾ?

By Bhimashankar Teli ಜನಪ್ರಿಯ ನಾಯಕರು:- ರಾಜ್ಯದಲ್ಲಿ ದೇವೇಗೌಡರು, ಯಡಿಯೂರಪ್ಪನವರು ಮತ್ತು ಸಿದ್ದರಾಮಯ್ಯನವರು ಜನಪ್ರಿಯ ನಾಯಕರು. ಈಗಿನ ಎಲ್ಲ ರಾಜಕಾರಣಿಗಳು , ಎಲ್ಲ ಪಕ್ಷದ ಕಾರ್ಯಕರ್ತರು ಇವರಿಗೆಲ್ಲ ಮರ್ಯಾದೆ ಕೊಡುವುದು ನಾವು ಕಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಇವರೆಲ್ಲ ಅಧಿಕಾರದಲ್ಲಿ ಇದ್ದಾಗ ಕೆಲವೊಂದು ಒಳ್ಳೆಯ ಕೆಲಸಗಳು ರಾಜ್ಯಕ್ಕೆ ಆಗಿವೆ. ಇವರು ಬಡವರ, ದೀನದಲಿತರ ಏಳಿಗೆಗಾಗಿ ಒಂದಿಷ್ಟು ಶ್ರಮವೂ ಹಾಕಿದ್ದಾರೆ ಮತ್ತು ದೇಶದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ತಲೆ […]

ನಮ್ಮ ಕಡತಗಳು ಯಾಕೆ ಮಾತೃಭಾಷೆಯಲ್ಲಿ ಇರಬೇಕು, ಯಾಕೆ ನಾವು ಭಾಷೆಗಾಗಿ ಹೋರಾಡಬೇಕು?

By Bhimashankar Teli ನಮ್ಮ ದೇಶದಲ್ಲಿ ಭಾಷೆಯ ಸಮಸ್ಯೆ ಎಂದಿಗಿಂತಲೂ ಇಂದು ಸ್ವಲ್ಪ ಜಾಸ್ತಿನೇ ಇದೆಯಾ? ಇದು ನಿಜವಾಗಿ ಜನರ ಸಮಸ್ಯೆನಾ ಅಥವಾ ರಾಜಕೀಯ/ನಾಯಕರ/ಪುಡಾರಿಗಳ ಒಳಆಟವಾ? ಇದಕ್ಕೆ ನೇರವಾಗಿ ಉತ್ತರ ಹೇಳದೆ ಹೋದರು ನನ್ನ ಅಭಿಪ್ರಾಯ ಖಂಡಿತ ವ್ಯಕ್ತಪಡಿಸುತ್ತೇನೆ. ಕಾರಣ ನನಗೆ ನನ್ನ ಮಾತೃಭಾಷೆ ಬಹಳ ಮುಖ್ಯ ಮತ್ತು ಬೇರೆ ಭಾಷೆಗಳಿಗೆ ಗೌರವ ಕೊಡುವ ಜಾಯಮಾನ ನನ್ನದು. ನಾಯಕರಿಗೂ ತಮ್ಮ ಭಾಷೆ ಮುಖ್ಯ ಅಂತಾನೆ ಹೋರಾಟಕ್ಕೆ ದುಮಿಕಿರುತ್ತಾರೆ. […]

ರಕ್ಷಿತ್ ಶೆಟ್ಟಿಯ “೭೭೭ ಚಾರ್ಲಿ” ಪ್ರೀಮಿಯರ್ ಷೋನಲ್ಲಿ ಜೈ ಹೊ.

ಮನುಷ್ಯತ್ವದ ಪಾಠವನ್ನು ಹೇಳಿದ ಹಾಗೆ ಚಾರ್ಲಿ ಸಿನಿಮಾದಲ್ಲಿ ಕಾಣಬಹದು. ವಿವಿಧ ನಗರಗಳಲ್ಲಿ ಚಾರ್ಲಿ ಶೋ ಜನರು ನೋಡಿ ಇದೊಂದು ಉತ್ತಮ ಚಿತ್ರ ಮತ್ತು ನಾಯಿಗಳನ್ನು ಪ್ರೀತಿಸುವವರು ನೋಡಬಹುದು ಮತ್ತು ಮನುಷ್ಯತ್ವ ಇದ್ದವರು ನೋಡಲೇಬೇಕು ಅಂತೇ! ಪ್ರಾಣಿ ಧರ್ಮನ ಜೀವನದಲ್ಲಿ ಹೇಗೆ ಭಾವನೆಗಳನ್ನು ಹುಟ್ಟಾಕುತ್ತದೆ ಎಂದು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಅನೇಕರ ಇದರ ಬಗ್ಗೆ ವಿಮರ್ಶೆ ಮಾಡಿದ್ದಾರೆ ಆದರೆ ಅದನ್ನು ಇಲ್ಲಿ ಹೇಳುವುದಕ್ಕೆ ಹೋಗುವದಿಲ್ಲ ಕಾರಣ ನಾನು ಇನ್ನು ಚಿತ್ರ […]

ಜನಪ್ರಿಯ ನಾಯಕ ವಿಜಯೇಂದ್ರರ ದಾಳಗಳು ಪ್ರಖರವಾಗಿರಲೇಬೇಕು!. ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದು ಜನಪ್ರಿಯತೆ ಮೇಲೇನೆ?

ಚಾಣಕ್ಯನ ಪ್ರಕಾರ ನಿಮಗೆ ವಿರೋಧಿಗಳಿದ್ದರೇ ಅವರನ್ನು ಸದೆಬಡಿದರೆ ಮಾತ್ರ ನಿಶ್ಚಿಂತೆಯಾಗಿ ರಾಜ್ಯಬಾರ ಮಾಡಬಹುದು. ಎರಡು ಕಡೆಯಿಂದ ತರ್ಕ ಬದ್ದ ಯೋಜೆನೆಗಳು ಇರುತ್ತವೆ. ಆದರೆ ಇಲ್ಲಿ ಗಟ್ಟಿಯಾಗಿ ಯಾರು ದಾಳಗಳು ಉರಳಿಸುತ್ತಾರೋ ಅವರು ಗೆಲ್ಲುತ್ತಾರೆ. ವಿರೋಧಿಗಳು ಒಳಗು ಇರಬಹುದು ಅಥವಾ ಹೊರಗೂ ಇರಬಹುದು! ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೋಗಿದ್ದು ಯಾವ ಕಾರಣಕ್ಕೆ? ಮಹಾಭಾರತದಲ್ಲಿ ಕೌರವರ ಮತ್ತು ಪಾಂಡವರ ನಡುವಿನ ಯುದ್ಧವಾಗಿದ್ದು ಯಾವ ಕಾರಣಕ್ಕೆ? ಹೀಗೆ ಅನೇಕ ಉಧಾಹರಣೆಗಳು ಇತಿಹಾಸದಲ್ಲಿ […]

ರಾಷ್ಟ್ರೀಯ ಸ್ವಯಂ ಸೇವಕ ಸಂಘ. ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಶಾಲೆ!

ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘ! ಇವರೆಲ್ಲ ಶಿಸ್ತಿನ ಸೇವಕರು. ಸಂಘದ ವಿಸ್ತಾರ ಮತ್ತು ಅದರ ಕೆಲಸ ಊಹೆಗೂ ನಿಲುಕಲಾರದು. ನಾನು ಬರೆದದ್ದು ಅತಿ ಸ್ವಲ್ಪ. ಮತ್ತೊಮ್ಮೆ ಇನ್ನೊಂದು ಸರಣಿ ಮೂಲಕ ಬರುತ್ತೇನೆ. ಸ್ವಾಮಿ ವಿವೇಕಾನಂದರು ೧೮೮೩ರಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಅಮೇರಿಕಾದ ಅಣ್ಣ ತಮ್ಮಂದಿಯರೇ, ಅಕ್ಕ ತಂಗಿಯರೇ ಎಂದು ಹೇಳಿದ ಮಾತುಗಳೇ ಹೆಚ್ಚಿನ ಜನರಿಗೆ ನೆನೆಪಿದೆ ಆದರೆ ಅಂದು ನಿಜವಾಗಿ ಏನೆಲ್ಲ ನಡೆಯಿತು ಎಂದು ಸಂಪೂರ್ಣ […]

ದರ್ಶನ, ಸುದೀಪ್ , ಯಶ್ ಇದರಲ್ಲಿ ಯಾರು ಗ್ರೇಟ್? ಯಾರು ಬಾಸ್ ?

ಒಬ್ಬರು ನಾ ಬಂದ್ರೆ ನಂದೇ ಹವಾ, ಇನ್ನೊಬ್ಬರು ಇದು ಸ್ವಂತ ಬ್ರಾಂಡ್ ಕಣೋ ಹೀಗೆ ಕನ್ನಡಿಗರಿಂದ ಬೆಳೆದ ನಾಯಕರೆಲ್ಲರೂ ಕೌಂಟರ್ ಡೈಲಾಗ್ ಹೊಡೆಯುತ್ತ ಅಭಿಮಾನಿಗಳನ್ನು ರಂಜಿಸುತ್ತಾ ದುಡ್ಡನ್ನು ಮಾಡುವುದು ನಾವೆಲ್ಲಾ ನೋಡಿದ್ದೇವೆ. ದುಡ್ಡು ಮಾಡುತ್ತಾ ಅನೇಕ ಸಂದೇಶಗಳನ್ನು , ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಭಿಮಾನಿಗಳ ಋಣವನ್ನು ತೀರಿಸುವ ಸಣ್ಣ ಪ್ರಯತ್ನ ನಿರಂತರವಾಗಿ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಇವರೆಲ್ಲ ದೇವರುಗಳಲ್ಲ. ಆದರೆ ಇವರ ಬಗ್ಗೆ ಒಂದು ಹೆಮ್ಮಯ […]

೨೦೨೩ರಲ್ಲಿ ದಯಾಸಾಗರ ಪಾಟೀಲ್ ಇಂಡಿಯ ಕ್ಷೇತ್ರವನ್ನು ಬಿಜೆಪಿಗೆ ಮುಡಿಗೆ ಹಾಕುವ ದಿಕ್ಕಿನತ್ತ.. ಹೈಕಮಾಂಡ್ ಅಭಯ?

ನಿಂಬೆಗೆ ಪ್ರಸಿದ್ದಿ ಪಡೆದ ಇಂಡಿಯಲ್ಲಿ ನೇರ ಪೈಪೋಟಿ ಇರುವುದು ಕಾಂಗ್ರೇಸ್ ಮತ್ತು ಬಿಜೆಪಿ ಮಧ್ಯ! ಜೆಡಿಎಸ್ ಕಳೆದ ಬಾರಿ ಉತ್ತಮ ಪೈಪೋಟಿ ಕೊಟ್ಟಿದ್ದು ನಿಜ ಆದರೇ ಅದು ವ್ಯಕ್ತಿ ಮತ್ತು ಒಂದು ಸಮುದಾಯದ ಮತಗಳ ಕ್ರೋಡೀಕರಣ. ಆದರೆ ಇದಕ್ಕಿಂತ ಮುಂಚೆ ಜೆಡಿಎಸ್ ಅಷ್ಟಕ್ಕೇ ಅಷ್ಟೇ! ಮೊಟ್ಟ ಮೊದಲ ಬಾರಿ ಅಂದರೆ ೨೦೦೮ರಲ್ಲಿ ಇಂಡಿಯಲ್ಲಿ ಬಿಜೆಪಿ ಕೀರ್ತಿ ಪತಾಕೆ ಹಾರಿಸಿದ್ದು ಡಾಕ್ಟರ್ ಸಾರ್ವಭೌಮ ಬಗಲಿ. ಸರ್ರನೆ ಬಂದು ಬಿಜೆಪಿ […]

ಕಿಚ್ಚನ ಬೆಂಕಿಯಂಥ ಟ್ವಿಟ್ ಎಲ್ಲರನ್ನೂ ಒಂದು ಗುಡಿಸಿದೆ !! ಲಕ್ಷ್ಯಕ್ಕೂ ಮೀರಿ ಲೈಕ್ಸ್!

ನಮ್ಮ ದೇಶಕ್ಕೆ ಯಾವದೇ ರಾಷ್ಟ್ರೀಯಭಾಷೆ ಇರುವದಿಲ್ಲ ಕಾರಣ ನಮಗೆಲ್ಲ ನಮ್ಮದೇ ಆದ ಮಾತೃಭಾಷೆಗಳಿವೆ. ಹಿಂದಿ ಹೆಚ್ಚಿನ ಜನ ಉಪಯೋಗಿಸುತ್ತಾರೆ ಎಂದು ಅದೊಂದು ಅಫೀಷಿಯಲ್ ಭಾಷೆ ಆಗಲಿ ಎಂದು ಎಲ್ಲ ರಾಜ್ಯಗಳು (ತಮಿಳನಾಡು ಒಪ್ಪಿಕೊಂಡಿಲ್ಲ, ಅಲ್ಲಿ ಹಿಂದಿ ಅಫೀಷಿಯಲ್ ಅಲ್ಲ. )ಒಪ್ಪಿಕೊಂಡಿದ್ದು ಒಂದು ಕಂಡೀಶನ್ ಮೇಲೆ ನಮ್ಮ ಭಾಷೆಗಳಿಗೆ ಆದ್ಯತೆ ಇರಲೇಬೇಕು! ಇದು ಒಕ್ಕೂಟದ ದೇಶ. ಇಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲ ಭಾಷೆಗಳು ನಮ್ಮ ದೇಶಕ್ಕೆ ಸೇರಿದ್ದು. […]