ಚಾಣಕ್ಯನ ಪ್ರಕಾರ ನಿಮಗೆ ವಿರೋಧಿಗಳಿದ್ದರೇ ಅವರನ್ನು ಸದೆಬಡಿದರೆ ಮಾತ್ರ ನಿಶ್ಚಿಂತೆಯಾಗಿ ರಾಜ್ಯಬಾರ ಮಾಡಬಹುದು. ಎರಡು ಕಡೆಯಿಂದ ತರ್ಕ ಬದ್ದ ಯೋಜೆನೆಗಳು ಇರುತ್ತವೆ. ಆದರೆ ಇಲ್ಲಿ ಗಟ್ಟಿಯಾಗಿ ಯಾರು ದಾಳಗಳು ಉರಳಿಸುತ್ತಾರೋ ಅವರು ಗೆಲ್ಲುತ್ತಾರೆ. ವಿರೋಧಿಗಳು ಒಳಗು ಇರಬಹುದು ಅಥವಾ ಹೊರಗೂ ಇರಬಹುದು! ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೋಗಿದ್ದು ಯಾವ ಕಾರಣಕ್ಕೆ? ಮಹಾಭಾರತದಲ್ಲಿ ಕೌರವರ ಮತ್ತು ಪಾಂಡವರ ನಡುವಿನ ಯುದ್ಧವಾಗಿದ್ದು ಯಾವ ಕಾರಣಕ್ಕೆ? ಹೀಗೆ ಅನೇಕ ಉಧಾಹರಣೆಗಳು ಇತಿಹಾಸದಲ್ಲಿ […]
ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘ! ಇವರೆಲ್ಲ ಶಿಸ್ತಿನ ಸೇವಕರು. ಸಂಘದ ವಿಸ್ತಾರ ಮತ್ತು ಅದರ ಕೆಲಸ ಊಹೆಗೂ ನಿಲುಕಲಾರದು. ನಾನು ಬರೆದದ್ದು ಅತಿ ಸ್ವಲ್ಪ. ಮತ್ತೊಮ್ಮೆ ಇನ್ನೊಂದು ಸರಣಿ ಮೂಲಕ ಬರುತ್ತೇನೆ. ಸ್ವಾಮಿ ವಿವೇಕಾನಂದರು ೧೮೮೩ರಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಅಮೇರಿಕಾದ ಅಣ್ಣ ತಮ್ಮಂದಿಯರೇ, ಅಕ್ಕ ತಂಗಿಯರೇ ಎಂದು ಹೇಳಿದ ಮಾತುಗಳೇ ಹೆಚ್ಚಿನ ಜನರಿಗೆ ನೆನೆಪಿದೆ ಆದರೆ ಅಂದು ನಿಜವಾಗಿ ಏನೆಲ್ಲ ನಡೆಯಿತು ಎಂದು ಸಂಪೂರ್ಣ […]
ಒಬ್ಬರು ನಾ ಬಂದ್ರೆ ನಂದೇ ಹವಾ, ಇನ್ನೊಬ್ಬರು ಇದು ಸ್ವಂತ ಬ್ರಾಂಡ್ ಕಣೋ ಹೀಗೆ ಕನ್ನಡಿಗರಿಂದ ಬೆಳೆದ ನಾಯಕರೆಲ್ಲರೂ ಕೌಂಟರ್ ಡೈಲಾಗ್ ಹೊಡೆಯುತ್ತ ಅಭಿಮಾನಿಗಳನ್ನು ರಂಜಿಸುತ್ತಾ ದುಡ್ಡನ್ನು ಮಾಡುವುದು ನಾವೆಲ್ಲಾ ನೋಡಿದ್ದೇವೆ. ದುಡ್ಡು ಮಾಡುತ್ತಾ ಅನೇಕ ಸಂದೇಶಗಳನ್ನು , ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಭಿಮಾನಿಗಳ ಋಣವನ್ನು ತೀರಿಸುವ ಸಣ್ಣ ಪ್ರಯತ್ನ ನಿರಂತರವಾಗಿ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಇವರೆಲ್ಲ ದೇವರುಗಳಲ್ಲ. ಆದರೆ ಇವರ ಬಗ್ಗೆ ಒಂದು ಹೆಮ್ಮಯ […]
ನಿಂಬೆಗೆ ಪ್ರಸಿದ್ದಿ ಪಡೆದ ಇಂಡಿಯಲ್ಲಿ ನೇರ ಪೈಪೋಟಿ ಇರುವುದು ಕಾಂಗ್ರೇಸ್ ಮತ್ತು ಬಿಜೆಪಿ ಮಧ್ಯ! ಜೆಡಿಎಸ್ ಕಳೆದ ಬಾರಿ ಉತ್ತಮ ಪೈಪೋಟಿ ಕೊಟ್ಟಿದ್ದು ನಿಜ ಆದರೇ ಅದು ವ್ಯಕ್ತಿ ಮತ್ತು ಒಂದು ಸಮುದಾಯದ ಮತಗಳ ಕ್ರೋಡೀಕರಣ. ಆದರೆ ಇದಕ್ಕಿಂತ ಮುಂಚೆ ಜೆಡಿಎಸ್ ಅಷ್ಟಕ್ಕೇ ಅಷ್ಟೇ! ಮೊಟ್ಟ ಮೊದಲ ಬಾರಿ ಅಂದರೆ ೨೦೦೮ರಲ್ಲಿ ಇಂಡಿಯಲ್ಲಿ ಬಿಜೆಪಿ ಕೀರ್ತಿ ಪತಾಕೆ ಹಾರಿಸಿದ್ದು ಡಾಕ್ಟರ್ ಸಾರ್ವಭೌಮ ಬಗಲಿ. ಸರ್ರನೆ ಬಂದು ಬಿಜೆಪಿ […]
ಸುಬ್ಬಯ್ಯ ನಾಯ್ಡು ನಾಯಕತ್ವದಲ್ಲಿ ೧೯೩೪ರಲ್ಲಿ ಸತಿ ಸುಲೋಚನಾ ಚಿತ್ರದಿಂದ ಪ್ರಾರಂಭವಾದ ಕನ್ನಡ ಚಿತ್ರೋದ್ಯೋಮ ಇಂದು ಹೊಳೆಯುತ್ತಿದೆಯಾ? ಶಾರ್ಟ್ ಆಗಿ ಕೇಳಿದರೇ ಖಂಡಿತ ಹೊಳೆಯುತ್ತಿದೆ, ಡೀಟೇಲ್ ಆಗಿ ಕೇಳಿದರೆ ಇವತ್ತು ಅಲ್ಲ ಮೊದಲಿನಿಂದಲೂ ಹೊಳೆಯುತ್ತಿತ್ತು. ವಜ್ರ ಬೂದಿ ಮುಚ್ಚಿ ಒಳಗಡೆ ಇದ್ದಾಗ ಅದರ ಹೊಳೆಪು ಕಾಣುವದಿಲ್ಲ. ಮೇಲಿನ ಬೂದಿ ಹೋದಾಗ ಮತ್ತೆ ಖಂಡಿತ ವಜ್ರ ಹೊಳೆಯುತ್ತೆ. ಹಾಗೆ ನಮ್ಮ ಸ್ಯಾಂಡಲ್ ವುಡ್ ವಜ್ರ ಇದ್ದ ಹಾಗೆ ಅದರ ಹೊಳಪು […]
ಸಂಕಿಪ್ತ ವರದಿ:ಕರೋನ ಮತ್ತು ಒಳಜಗಳಗಳಿಂದ ನಲುಗಿದ್ದ ಬಿಜೆಪಿ. ಇದರ ಲಾಭ ಕಾಂಗ್ರೇಸ್ ಪಡೆದಿತ್ತು. ಐದು ರಾಜ್ಯಗಳ ಚುನಾವಣೆ ಮತ್ತು ಭಾವನಾತ್ಮಕ ವಿಷಯದ ಜೊತೆ ಸಿದ್ದರಾಮಯ್ಯನವರ ಹೇಳಿಕೆಗಳು ಬಿಜೆಪಿಗೆ ಹೇರಳವಾದ ಆಮ್ಲಜನಕ ಕೊಟ್ಟಿದೆ. ಸಂಪುಟದಲ್ಲಿ ವಿಜಯೇಂದ್ರ ಮತ್ತು ಬಿಜೆಪಿಯ ಯುವ ಶಾಸಕರಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಬಲ್ಲರು. ಯೋಗಿಯ ಚಮತ್ಕಾರ – ೩೭ ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಎರಡೆನೆಯ ಬಾರಿ ಮತ್ತೆ ಸರ್ಕಾರ ರಚನೆ ಮಾಡಿದ್ದು […]
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಮಾನವನ ಮೂಲಭೂತ ಹಕ್ಕನ್ನೇ ಕಸಿದಿದೆ ಮತ್ತು ನಮ್ಮ ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ರಷ್ಯಾದ ಆಕ್ರಮಣ ಮತ್ತು ಜಾಗತಿಕ ಆರ್ಥಿಕತೆಯ ನಡುವಿನ ಪ್ರಮುಖ ಸಂಪರ್ಕವೆಂದರೆ ತೈಲ, ನೈಸರ್ಗಿಕ ಅನಿಲ ಮತ್ತು ಇತರ ಸರಕು ಮತ್ತು ಕೈಗಾರಿಕಾ ಬೆಲೆಗಳು. ಇದು ರಷ್ಯಾ ಮತ್ತು ಉಕ್ರೇನ್ ಪ್ರಪಂಚಕ್ಕೆ ರಫ್ತು ಮಾಡುವ ಬಹುಪಾಲು ಭಾಗವಾಗಿದೆ. ಈ ವರ್ಷದ ಆರಂಭದಲ್ಲಿ ಉಕ್ರೇನ್‌ನೊಂದಿಗಿನ ತನ್ನ ಗಡಿಯಲ್ಲಿ ರಷ್ಯಾ […]
ಜಗಮೋಹನ್ ರೆಡ್ಡಿ ಕಾಂಗ್ರೇಸ್ನಿಂದ ದೂರವಾಗಿ ಸ್ವಂತ ಪಕ್ಷ ಕಟ್ಟಿ ಆಂಧ್ರದ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಮಹಾರಾಷ್ಟ್ರದ ಶರದ್ ಪವಾರ ಕಾಂಗ್ರೆಸ್ನಿಂದ ಹೊರಹೋಗಿ ರಾಷ್ಟೀಯ ಕಾಂಗ್ರೇಸ್ ಪಕ್ಷ ಸ್ಥಾಪನೆ ಮಾಡಿದ್ದು ಕಂಡಿದ್ದೇವೆ. ಮಧ್ಯಪ್ರೆದೇಶದಲ್ಲಿ ಸಿಂಧಿಯಾ,ಸಂಗ್ಮಾ, ಕೃಷ್ಣಾ ಕರ್ನಾಟಕದಲ್ಲಿ ಹೀಗೆ ಅನೇಕ ಬಲಾಢ್ಯ ನಾಯಕರು ಕಾಂಗ್ರೆಸ್ನಿಂದ ವಿಮುಖರಾಗಿದ್ದು ಕಾಂಗ್ರೇಸ್ ಹೈಕಮಾಂಡ್ ನಡವಳಿಕೆ. ೧೯೪೭ ಸ್ವತಂತ್ರ ಸಿಕ್ಕಿದ ಮೇಲೆ ಕಾಂಗ್ರೇಸ್ ರಾಜಕೀಯ ಪಕ್ಷವಾಗಿ ಉಪಯೋಗಮಾಡಬೇಡಿ ಎಂದು ಹೇಳಿದರೂ ಅದನ್ನೇ ರಾಜಕೀಯ ಪಕ್ಷವಾಗಿ ಮಾಡಿಕೊಂಡು […]
ಸುರಕ್ಷತೆಯಲ್ಲಿ ೫ ಸ್ಟಾರ್ ರೇಟಿಂಗ್ ಪಡೆದು ಮಾರಾಟಕ್ಕೆ ಬಿಡುಗಡೆ ಮಾಡುತ್ತಿರುವ ಮಹಿಂದ್ರಾ ಯಾವಾಗಲು ಗ್ರಾಹಕರ ಸುರಕ್ಷತೆಗೆ ಅತಿ ಮಹತ್ವ ಕೊಟ್ಟಿದೆ. ಕೇಂದ್ರ ಸರ್ಕಾರ ಸುರಕ್ಷತೆಗೆ ಮಹತ್ವ ಕೊಟ್ಟ ಮೇಲೆ ಎಲ್ಲ ವಾಹನ ತಯಾರಕರು ಸುರಕ್ಷೆ ಕಡೆಗೆ ತಮ್ಮ ಹೆಜ್ಜೆಯನ್ನು ಇಟ್ಟಿದ್ದಾರೆ. ಸುರಕ್ಷತೆ ಕೊಡುವದಲ್ಲದೆ ಬೆಲೆ ಗ್ರಾಹಕರಿಗೆ ಕೈಗೆಟಕುವ ದರದಲ್ಲೇ ಇದೆ. XUV ೩೦೦, XUV ೫೦೦, ಥಾರ್ ಹೀಗೆ ಅನೇಕ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿ ಗೆದ್ದ […]
ಭಾರತ ಎಲ್ಲ ಧರ್ಮಗಳನ್ನು ಗೌರವಿಸುವ ದೇಶ ಎಂದರೆ ಜಾತ್ಯಾತೀತಿ ರಾಷ್ಟ್ರ. ಜಗತ್ತಿನ ಕೆಲವೇ ಕೆಲವು ದೇಶಗಳು ಮಾತ್ರ ಜಾತ್ಯತೀತವಾಗಿ ಗುರುತಿಸಿಕೊಂಡಿವೆ. ಭಾರತ ದೇಶ ಧರ್ಮದ ಆಧಾರದ ಮೇಲೆ ಅಖಂಡ ಭಾರತ ಹೋಳು ಮಾಡಿ ಭಾರತ ಮತ್ತು ಪಾಕಿಸ್ತಾನ ಎಂದಾದ ಮೇಲೆ ಭಾರತ ಹಿಂದೂ ರಾಷ್ಟ್ರ , ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದವು. ದೇಶ ವಿಭಜನೆ ಆದ ಮೇಲೆ ಇಲ್ಲಿನ ಇಸ್ಲಾಮೀಯರು ಪಾಕಿಸ್ತಾನಕ್ಕೆ ಹೋಗಬೇಕಿತ್ತು ಆದರೆ ನಾವು ಇಲ್ಲೇ ಇರುತ್ತೇವೆ […]